Holi 2024: ಹಣದ ಕೊರತೆ ಇದ್ಯಾ? ಹಾಗಾದರೆ ಹೋಳಿ ಹಬ್ಬದಂದು ಈ ವಸ್ತುಗಳನ್ನು ಮನೆಗೆ ತನ್ನಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 01, 2024 | 2:20 PM

ನಂಬಿಕೆಗಳ ಪ್ರಕಾರ ಹೋಳಿ ಹಬ್ಬದಂದು ಮನೆಗೆ ಕೆಲವು ವಸ್ತುಗಳನ್ನು ತರುವುದರಿಂದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ, ಆಶೀರ್ವಾದ ನೀಡುವ ಮೂಲಕ ಹರಸುತ್ತಾಳೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಹೋಳಿಯ ದಿನ ಲಕ್ಷ್ಮೀ ದೇವಿಗೆ ಇಷ್ಟವಾದ ಕೆಲವು ವಸ್ತುಗಳನ್ನು ಖರೀದಿಸಿ ಮನೆಗೆ ತರಲಾಗುತ್ತದೆ. ಇದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಎಂದಿಗೂ ಹಣದ ಕೊರತೆ ಬರುವುದಿಲ್ಲ. ಹಾಗಾದರೆ ಆ ವಸ್ತುಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ.

Holi 2024: ಹಣದ ಕೊರತೆ ಇದ್ಯಾ? ಹಾಗಾದರೆ ಹೋಳಿ ಹಬ್ಬದಂದು ಈ ವಸ್ತುಗಳನ್ನು ಮನೆಗೆ ತನ್ನಿ
ಸಾಂದರ್ಭಿಕ ಚಿತ್ರ
Follow us on

ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಹೋಳಿ (Holi 2024) ಹಬ್ಬವನ್ನು ಸಂತೋಷ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಚ್ಚಾಗಿ ಈ ಹಬ್ಬವು ಮಾರ್ಚ್ ತಿಂಗಳಿನಲ್ಲಿಯೇ ಬರುತ್ತದೆ. ಹೋಳಿ ಹಬ್ಬ, ಕಾಮಣ್ಣನ ದಹನ ಅಥವಾ ಹೋಲಿಕಾ ದಹನದ ಬಳಿಕ ಬಣ್ಣಗಳಿಂದ ತುಂಬಿದ ಹೋಳಿ ಹಬ್ಬ, ಹೀಗೆ ಈ ಹಬ್ಬವನ್ನು ಆಚರಣೆ ಮಾಡಲು ಜನರು ಇಡೀ ವರ್ಷ ಕಾಯುತ್ತಾರೆ. ಇನ್ನು, ಕೆಲವು ನಂಬಿಕೆಗಳ ಪ್ರಕಾರ ಹೋಳಿ ಹಬ್ಬದಂದು ಮನೆಗೆ ಕೆಲವು ವಸ್ತುಗಳನ್ನು ತರುವುದರಿಂದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ, ಆಶೀರ್ವಾದ ನೀಡುವ ಮೂಲಕ ಹರಸುತ್ತಾಳೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಹೋಳಿಯ ದಿನ ಲಕ್ಷ್ಮೀ ದೇವಿಗೆ ಇಷ್ಟವಾದ ಕೆಲವು ವಸ್ತುಗಳನ್ನು ಖರೀದಿಸಿ ಮನೆಗೆ ತರಲಾಗುತ್ತದೆ. ಇದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಎಂದಿಗೂ ಹಣದ ಕೊರತೆ ಬರುವುದಿಲ್ಲ. ಹಾಗಾದರೆ ಆ ವಸ್ತುಗಳು ಯಾವವು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮನೆಗೆ ಬಿದಿರಿನ ಗಿಡವನ್ನು ತನ್ನಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೋಳಿ ಹಬ್ಬದಂದು ಬಿದಿರಿನ ಸಸ್ಯಗಳನ್ನು ಮನೆಗೆ ತರಬಹುದು. ಈ ಗಿಡವು ಮಂಗಳಕರವಾಗಿದ್ದು ಹಾಗಾಗಿ ಇದನ್ನು ಮನೆಗೆ ತರುವುದರಿಂದ ಲಕ್ಷ್ಮೀ ದೇವಿಯು ಸಂತೋಷಪಡುತ್ತಾಳೆ ಮತ್ತು ಮನೆಯಲ್ಲಿ ಹಣದ ಕೊರತೆಯನ್ನು ನೀಗಿಸಿ, ಶಾಂತಿಯ ವಾತಾವರಣವನ್ನು ಸೃಷ್ಠಿಸುತ್ತಾಳೆ ಎಂದು ನಂಬಲಾಗಿದೆ.

ಬೆಳ್ಳಿಯ ನಾಣ್ಯಗಳು ಶುಭ ಸೂಚಕವಾಗಿದೆ

ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ದೀಪಾವಳಿಯಂದು ಬೆಳ್ಳಿಯ ನಾಣ್ಯವನ್ನು ಮನೆಗೆ ತರುವಂತೆಯೇ, ಹೋಳಿ ದಿನದಂದು ಬೆಳ್ಳಿಯ ನಾಣ್ಯವನ್ನು ಮನೆಗೆ ತರುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಿ, ಆರ್ಥಿಕ ನಷ್ಟವನ್ನು ತಡೆಯುತ್ತದೆ. ಹಾಗಾಗಿ ಈ ನಾಣ್ಯವನ್ನು ಕೆಲವು ಅಕ್ಕಿ ಕಾಳುಗಳೊಂದಿಗೆ ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿ ಇರಿಸಿ. ಈ ರೀತಿ ಮಾಡುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ಲೋಹದ ಆಮೆಯನ್ನು ಖರೀದಿಸಿ

ನಂಬಿಕೆಯ ಪ್ರಕಾರ, ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಹೋಳಿ ಹಬ್ಬದ ದಿನ ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ಹೊಂದಿರುವ ಲೋಹದ ಆಮೆಯನ್ನು ಮನೆಗೆ ತನ್ನಿ, ಲಕ್ಷ್ಮೀ ದೇವಿ ಇದರಿಂದ ಸಂತುಷ್ಟಳಾಗುತ್ತಾಳೆ ಜೊತೆಗೆ ಮನೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂದು ನಂಬಲಾಗಿದೆ. ಅದಲ್ಲದೆ ಇದನ್ನು ತರುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿಯು ದ್ವಿಗುಣ ಗೊಳ್ಳುತ್ತದೆ.

ಇದನ್ನೂ ಓದಿ: ಮಹಾಶಿವರಾತ್ರಿಯನ್ನು ಆಚರಿಸುವುದೇಕೆ? ಇದರ ಹಿಂದಿರುವ ಕಾರಣವೇನು?

ಮನೆಯ ಬಾಗಿಲಿಗೆ ತೋರಣ ಕಟ್ಟಿರಿ

ನಂಬಿಕೆಯ ಪ್ರಕಾರ, ಹೋಳಿ ಹಬ್ಬದ ಸಮಯದಲ್ಲಿ ದೇವರಿಗೆ ಹಚ್ಚಿದ ಭಸ್ಮವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಅದನ್ನು ನೀರಿನ ಜೊತೆಗೆ ಬೆರೆಸಿ ಮನೆಯ ಎಲ್ಲಾ ಭಾಗಗಳಿಗೆ ಸಿಂಪಡಿಸುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ಹೋಳಿ ಹಬ್ಬದ ದಿನದಂದು, ಮನೆಯ ಮುಖ್ಯ ದ್ವಾರದಲ್ಲಿ ಮಾವಿನಹಣ್ಣು ಅಥವಾ ಅಶೋಕ ಎಲೆ ಅಥವಾ ತಳಿರು ತೋರಣಗಳನ್ನು ಕಟ್ಟಿ ಮನೆಯ ಬಾಗಿಲನ್ನು ಅಲಂಕರಿಸಿ. ಇದರಿಂದ ಲಕ್ಷ್ಮೀ ದೇವಿಯು ಆ ಮನೆಯಲ್ಲಿ ನೆಲೆಸುತ್ತಾಳೆ. ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಆಶೀರ್ವಾದವಾಗಿ ನೀಡುತ್ತಾಳೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ