Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನಂ ಪರಬ್ರಹ್ಮ ಸ್ವರೂಪಂ: ಅನ್ನವನ್ನು ಗೌರವಿಸಿ, ನಿಮಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ

Chanakya Niti: ಆಚಾರ್ಯ ಚಾಣಕ್ಯರ ಪ್ರಕಾರ ಯಾರೇ ಆಗಲಿ ಯಾವಾಗಲೂ ಜ್ಞಾನಿಗಳ ಸಹವಾಸವನ್ನು ಇಟ್ಟುಕೊಳ್ಳಬೇಕು ಮತ್ತು ಅವರನ್ನು ಗೌರವಿಸಬೇಕು. ಆಚಾರ್ಯ ಚಾಣಕ್ಯ ಕೂಡ ಹೇಳುವಂತೆ ಬುದ್ಧಿವಂತ ಜನರನ್ನು ಗೌರವಿಸುವ ಮನೆಗಳಿಗೆ ಲಕ್ಷ್ಮಿ ದೇವಿಯೇ ಬರುತ್ತಾಳೆ.

ಅನ್ನಂ ಪರಬ್ರಹ್ಮ ಸ್ವರೂಪಂ: ಅನ್ನವನ್ನು ಗೌರವಿಸಿ, ನಿಮಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ
ಅನ್ನವನ್ನು ಗೌರವಿಸಿ, ಎಂದಿಗೂ ಹಣದ ಕೊರತೆ ಇರುವುದಿಲ್ಲ
Follow us
ಸಾಧು ಶ್ರೀನಾಥ್​
|

Updated on:Oct 08, 2024 | 12:07 PM

ಆಚಾರ್ಯ ಚಾಣಕ್ಯರಿಗೆ ಪುಸ್ತಕಗಳಿಗೆ ಸೀಮಿತವಾದ ವಿಷಯಗಳ ಬಗ್ಗೆ ಮಾತ್ರವಲ್ಲದೆ ಜೀವನದ ಒಳ್ಳೆಯ ಮತ್ತು ಕೆಟ್ಟ ಸನ್ನಿವೇಶಗಳ ಅನುಭವವೂ ಇತ್ತು. ಅವರು ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಚಾಣಕ್ಯ ಮಾನವ ಕಲ್ಯಾಣಕ್ಕಾಗಿ ಚಾಣಕ್ಯ ನೀತಿಯನ್ನು (Chanakya Niti) ರಚಿಸಿದ. ಅದರಲ್ಲಿ ಅವನು ರಾಜಕೀಯ, ಯುದ್ಧ ಮತ್ತು ಜನರೊಂದಿಗೆ ಸಮಾನತೆಯನ್ನು ಕಾಪಾಡಿಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ. ಅವರು ತಮ್ಮ ನೀತಿಶಾಸ್ತ್ರದಲ್ಲಿ ಮಾನವ ಜೀವನದ ಅನೇಕ ಅಂಶಗಳ ಮೇಲೆ ವಿವರವಾಗಿ ಬೆಳಕು ಚೆಲ್ಲಿದ್ದಾರೆ. ಚಾಣಕ್ಯನ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಆಚಾರ್ಯ ಚಾಣಕ್ಯ ತಮ್ಮ ನೀತಿಗಳಲ್ಲಿ ಸದ್ಗುಣಗಳನ್ನು (Respect Food) ಸಾದ್ಯಂತವಾಗಿ ವಿವರವಾಗಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಒಬ್ಬ ವ್ಯಕ್ತಿಯು ಕೆಲವು ನಿರ್ದಿಷ್ಟ ಗುಣಗಳನ್ನು ಹೊಂದಿದ್ದರೆ ಅವು ಆತನನ್ನು ಯಶಸ್ವಿನತ್ತ ಕೊಂಡೊಯ್ಯುತ್ತದೆ. ಅಂತಹ ಜನರೊಂದಿಗೆ ಲಕ್ಷ್ಮಿ ದೇವಿಯು ಸದಾ ಸಂತೋಷವಾಗಿರುತ್ತಾಳೆ.

ಆಹಾರವನ್ನು ಗೌರವಿಸುವುದು ಆಚಾರ್ಯ ಚಾಣಕ್ಯರ ಪ್ರಕಾರ ಆಹಾರವನ್ನು ಸದಾ ಗೌರವಿಸುವ ಮನೆಗಳಲ್ಲಿ, ಯಾವುದಕ್ಕೂ ಯಾವುದೇ ಕೊರತೆ ಇರುವುದಿಲ್ಲ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಅಂತಹ ಮನೆಗಳು ಸದಾ ಸಮೃದ್ಧಿಯಾಗಿರುತ್ತವೆ. ಅನ್ನಮ್ ಪರಬ್ರಹ್ಮ ಸ್ವರೂಪಂ -Annam Parabrahma Swaroopam. ಆಹಾರವನ್ನು ಗೌರವಿಸದ ಅಥವಾ ಆಹಾರವನ್ನು ವ್ಯರ್ಥ ಮಾಡುವ ಮನೆಗಳಲ್ಲಿ ತಾಯಿ ಲಕ್ಷ್ಮಿ ಮತ್ತು ಅನ್ನಪೂರ್ಣ ಎಂದಿಗೂ ವಾಸಿಸುವುದಿಲ್ಲ.

ಬುದ್ಧಿವಂತ ಜನರಿಗೆ ಗೌರವ ಕೊಡುವುದೆಂದರೆ… ಆಚಾರ್ಯ ಚಾಣಕ್ಯರ ಪ್ರಕಾರ ಯಾರೇ ಆಗಲಿ ಯಾವಾಗಲೂ ಜ್ಞಾನಿಗಳ ಸಹವಾಸವನ್ನು ಇಟ್ಟುಕೊಳ್ಳಬೇಕು ಮತ್ತು ಅವರನ್ನು ಗೌರವಿಸಬೇಕು. ಆಚಾರ್ಯ ಚಾಣಕ್ಯ ಕೂಡ ಹೇಳುವಂತೆ ಬುದ್ಧಿವಂತ ಜನರನ್ನು ಗೌರವಿಸುವ ಮನೆಗಳಿಗೆ ಲಕ್ಷ್ಮಿ ದೇವಿಯೇ ಬರುತ್ತಾಳೆ. ಮೂರ್ಖ ಜನರು ನಿಮಗೆ ಸಮಸ್ಯೆಗಳನ್ನು ಸೃಷ್ಟಿಸಬಹುದು.

Also Read: ಚಾಣಕ್ಯನ ಈ ನೀತಿಗಳು ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು, ಜೀವನದಲ್ಲಿ ಇವುಗಳನ್ನು ಪಾಲಿಸಿ

ಈ ಅಭ್ಯಾಸ ತಪ್ಪು ಆಚಾರ್ಯ ಚಾಣಕ್ಯರ ಪ್ರಕಾರ ಕೆಲವರು ತಮ್ಮ ಧ್ಯೇಯೋದ್ದೇಶಗಳನ್ನು ಇತರರಿಗೆ ಹೇಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ತಮ್ಮ ಗುರಿಯ ಬಗ್ಗೆ ಎಲ್ಲರ ಮುಂದೆ ಹೇಳುವ ವ್ಯಕ್ತಿಗೆ ಯಶಸ್ಸು ಸಿಗುವುದು ಕಷ್ಟ.

ಎಂದಿಗೂ ಸೋಲು ಒಪ್ಪುವುದಿಲ್ಲ ಒಬ್ಬ ವ್ಯಕ್ತಿಯು ತನ್ನ ಅದೃಷ್ಟವನ್ನು ಮಾತ್ರ ಅವಲಂಬಿಸಬಾರದು, ಏಕೆಂದರೆ ಯಾರೇ ಆಗಲಿ ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಮಾತ್ರ ತಮ್ಮ ಭಾಗ್ಯವನ್ನು ಸಾಧಿಸಿಕೊಳ್ಳುತ್ತಾನೆ. ಆದ್ದರಿಂದಲೇ ಆಚಾರ್ಯ ಚಾಣಕ್ಯರು ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಎಂದಿಗೂ ಸೋಲನ್ನು ಒಪ್ಪಬಾರದು ಎನ್ನುತ್ತಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:29 am, Sat, 2 March 24

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ