ಮಹಾಶಿವರಾತ್ರಿ ವೇಳೆ ಭಕ್ತರು ನಿದ್ದೆ ಮಾಡುವುದಿಲ್ಲ! ಕಾರಣ ತಿಳಿದರೆ ನೀವೂ ಅಂದು ನಿದ್ದೆ ಮಾಡುವುದಿಲ್ಲ

ಮಹಾಶಿವರಾತ್ರಿಯು ಭಗವಾನ್ ಶಿವನ ಮಹಾನ್ ರಾತ್ರಿಯಾಗಿದೆ. ಹಿಂದೂ ಸಮುದಾಯದವರು ಇದನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಮಹಾಶಿವರಾತ್ರಿಯ ಸಮಯದಲ್ಲಿ ಭಕ್ತರು ನಿದ್ದೆ ಮಾಡುವುದಿಲ್ಲ, ಮಹಾಶಿವರಾತ್ರಿಯ ರಾತ್ರಿ ಭಕ್ತರು ಮಲಗಬಾರದು -ಏಕೆ ಎಂದು ತಿಳಿಯಲು ಮುಂದೆ ಓದಿ.

ಮಹಾಶಿವರಾತ್ರಿ ವೇಳೆ ಭಕ್ತರು ನಿದ್ದೆ ಮಾಡುವುದಿಲ್ಲ! ಕಾರಣ ತಿಳಿದರೆ ನೀವೂ ಅಂದು ನಿದ್ದೆ ಮಾಡುವುದಿಲ್ಲ
ಮಹಾಶಿವರಾತ್ರಿ ವೇಳೆ ಭಕ್ತರು ನಿದ್ದೆ ಮಾಡುವುದಿಲ್ಲ ಯಾಕೆ ಗೊತ್ತಾ?
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Mar 05, 2024 | 11:24 AM

ಮಹಾಶಿವರಾತ್ರಿ (ಮಾರ್ಚ್​ 8​, 2024 -ಶುಕ್ರವಾರ): ಮಹಾಶಿವರಾತ್ರಿಯನ್ನು (Mahashivratri) ಇಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಕ್ತರು (Devotees) ರಾತ್ರಿಯಿಡೀ ಉಪವಾಸವಿದ್ದು ಶಿವನ (Lord Shiva) ಆಶೀರ್ವಾದ ಪಡೆಯಲು (blessings) ದೇವರ ಸ್ತುತಿ ಮಾಡುತ್ತಾರೆ. ದೇವಾಲಯಗಳನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ಇಂತಹ ಮಹಾಶಿವರಾತ್ರಿಯು ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಶಿವರಾತ್ರಿ ಎಂದರೆ ಪ್ರತಿ ತಿಂಗಳ 14 ನೇ ದಿನ ಬರುತ್ತದೆ ಅಂದರೆ ಅಮವಾಸ್ಯೆಯ ಮೊದಲ ದಿನ (Spiritual).

ಒಂದು ವರ್ಷದಲ್ಲಿ 12 ರಿಂದ 13 ಶಿವರಾತ್ರಿಗಳು ಇರುತ್ತವೆ. ಅವುಗಳ ಪೈಕಿ ಮಾಘ ಮಾಸದಲ್ಲಿ ಕಾಣಿಸಿಕೊಳ್ಳುವ ಮಹಾಶಿವರಾತ್ರಿ ಅತ್ಯಂತ ಪ್ರಮುಖ ಮತ್ತು ವಿಶೇಷವಾಗಿದೆ. ಮಹಾಶಿವರಾತ್ರಿಯನ್ನು ಶಿವನ ಮಹಾ ರಾತ್ರಿ ಎಂದೂ ಕರೆಯುತ್ತಾರೆ. ಏಕೆಂದರೆ ಇದು ಶಿವ ಮತ್ತು ಪಾರ್ವತಿ ದೇವಿಯ ಪವಿತ್ರ ಸಂಗಮವನ್ನು ಸೂಚಿಸುವ ಕಾಲ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಿವನ ಆಶೀರ್ವಾದವನ್ನು ಪಡೆಯುವುದಕ್ಕೆ ಭಕ್ತರು ಶಿವರಾತ್ರಿ ಆಚರಣೆ ಮಾಡುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಸೂಕ್ಷ್ಮ ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು. ಮುಖ್ಯವಾಗಿ ಮಹಾಶಿವರಾತ್ರಿ ಮಹಾನ್ ರಾತ್ರಿಯಲ್ಲಿ ಮಲಗಬಾರದು. ಕಾರಣಗಳು ಇಲ್ಲಿವೆ.

ಮಹಾಶಿವರಾತ್ರಿ 2024: ಶಿವನ ಮಹಾ ರಾತ್ರಿಯಲ್ಲಿ ನಾವೇಕೆ ಮಲಗಬಾರದು?

ಪೂರ್ಣ ಸಮರ್ಪಣೆಯೊಂದಿಗೆ ಶಿವನನ್ನು ಅನುಸರಿಸುವವನು ಮಹಾಶಿವರಾತ್ರಿಯ ರಾತ್ರಿಯಲ್ಲಿ ಸಾಧನೆ ಮಾಡಬೇಕು, ಧ್ಯಾನವನ್ನು ಅಭ್ಯಾಸ ಮಾಡಬೇಕು. ಮತ್ತು ಆತ್ಮದಲ್ಲಿ ನೆಮ್ಮದಿ ಮತ್ತು ಶಾಂತತೆಯ ಭಾವನೆಯನ್ನು ಅನುಭವಿಸಬೇಕು.

ಹಿರಿಯರ ಪ್ರಕಾರ ಮಹಾಶಿವರಾತ್ರಿಯಂದು ಏಕೆ ಮಲಗಬಾರದು ಎಂಬುದು ಇಲ್ಲಿದೆ:

ಮಹಾಶಿವರಾತ್ರಿಯ ಸಮಯದಲ್ಲಿ ಮಾನವನ ದೇಹದೊಳಗೆ ಅಂತಃ ಶಕ್ತಿಗಳು ಸ್ವಾಭಾವಿಕವಾಗಿ ಜಾಗೃತಗೊಂಡು, ವೃದ್ಧಿಸುತ್ತವೆ.

ಶಿವರಾತ್ರಿಯ ವೇಳೆ ಬೆನ್ನುಮೂಳೆಯನ್ನು ನೇರವಾಗಿ ಲಂಬವಾಗಿ ಇಟ್ಟುಕೊಳ್ಳುವುದರಿಂದ ಮಾತ್ರ ಈ ಅತಿರಂಜಿತ ಶಕ್ತಿಯನ್ನು ಬಳಸಿಕೊಳ್ಳಬಹುದು. ಇದರಿಂದ ಅತೀಂದ್ರಿಯ ಶಕ್ತಿಗಳು ದೇಹದೊಳಕ್ಕೆ ಆವಾಹನೆಯಾಗುತ್ತವೆ.

ಮಾನವರು ಮಾತ್ರ ಲಂಬವಾದ ಬೆನ್ನುಮೂಳೆಯ ಆ ಉನ್ನತ ಸ್ತರಕ್ಕೆ ವಿಕಸನಗೊಳ್ಳುತ್ತಾರೆ.

Also Read: ಈ ಬಾರಿ ಮಹಾ ಶಿವರಾತ್ರಿ ಮಾರ್ಚ್ 8 ಅಥವಾ 9? ಶಿವ ಪೂಜೆಯ ಮಂಗಳಕರ ಸಮಯ ತಿಳಿಯಿರಿ

ಮಹಾಶಿವರಾತ್ರಿಯಂದು ಬೆನ್ನುಮೂಳೆಯನ್ನು ನೇರವಾಗಿ ಮತ್ತು ಲಂಬವಾಗಿ ಇರಿಸುವುದರಿಂದ ದೈಹಿಕವಾಗಿ ಅಪಾರ ಪ್ರಯೋಜನಗಳಿವೆ.

ಲಂಬವಾದ ಬೆನ್ನೆಲುಬಿನ ಭಂಗಿಯೊಂದಿಗೆ ರಾತ್ರಿಯಿಡೀ ಎಚ್ಚರವಾಗಿರುವುದು ಧಾರ್ಮಿಕ ಪಥದಲ್ಲಿರುವ ಯೋಗಿಗಳಿಗೆ ಮಾತ್ರವಲ್ಲದೆ, ಇತರರಿಗೂ ಅನೇಕ ಪ್ರಯೋಜನಗಳಿಗೆ ಕಾರಣವಾಗಬಹುದು.

ಭಗವಾನ್ ಶಿವನು 3 ನೇ ಕಣ್ಣನ್ನು ಹೊಂದಿದ್ದಾನೆ. ಅದು ಎಲ್ಲಾ ವಾಸ್ತವಗಳಿಗೆ ಮತ್ತು ಸತ್ಯಗಳಿಗೆ ಆಧಾರವಾಗಿದೆ. ಇದು ಭೌತಿಕತೆಯನ್ನು ಮೀರಿದ ಸಂಗತಿಯಾಗಿದೆ. ಅಲೌಕಿಕ ಆಯಾಮದ ಗ್ರಹಿಕೆಯನ್ನು ಒದಗಿಸುತ್ತದೆ.

Also Read: Maha Shivratri 2024 – ಈ ಬಾರಿ ಮಹಾಶಿವರಾತ್ರಿಯ ದಿನ ಬಡವರಿಗೆ ಈ ನಾಲ್ಕು ವಸ್ತು ದಾನ ಮಾಡಿ

ಮಹಾಶಿವರಾತ್ರಿಯು ನಿಮ್ಮೊಳಗಿನ ಮತ್ತು ನಿಮ್ಮ ಸುತ್ತಮುತ್ತಲ ಜಗತ್ತಿನ ಬಗ್ಗೆ ನಿಮ್ಮ 3ನೇ ಕಣ್ಣನ್ನು ತೆರೆಸುವ ಮಾರ್ಗದಲ್ಲಿ ನಿಮ್ಮನ್ನು ಕರೆದೊಯ್ಯುತ್ತದೆ. ಅದಕ್ಕೇ ಶಿವರಾತ್ರಿ ದಿನ ನಿದ್ದೆ ಮಾಡದೆ ಜಾಗೃತವಾಸ್ಥೆಯಲ್ಲಿ ಇರಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:59 pm, Sat, 2 March 24