
ವಿಶ್ವಪ್ರಸಿದ್ಧ ಐಷಾರಾಮಿ ವಾಚ್ ಬ್ರ್ಯಾಂಡ್ ಆದ ‘ಜೇಕಬ್ ಆ್ಯಂಡ್ ಕೋ’ (Jacob & Co) ತನ್ನ ಜನಪ್ರಿಯ ‘ರಾಮ್ ಜನ್ಮಭೂಮಿ’ ವಾಚಿನ ಭರ್ಜರಿ ಯಶಸ್ಸಿನ ಬಳಿಕ, ಇದೀಗ ಮತ್ತೊಂದು ಅತ್ಯಾಕರ್ಷಕ ವಾಚ್ ಅನ್ನು ಪರಿಚಯಿಸಿದೆ. ಪ್ರಭು ಶ್ರೀರಾಮ, ಹನುಮಂತ ಮತ್ತು ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮಮಂದಿರದ ವಿನ್ಯಾಸವನ್ನು ಒಳಗೊಂಡಿರುವ ಈ ಹೊಸ ವಾಚ್ ವಾಚ್ ಪ್ರಿಯರ ಗಮನ ಸೆಳೆದಿದೆ.
ಪ್ರತಿಷ್ಠಿತ ‘ಜೇಕಬ್ ಆ್ಯಂಡ್ ಕೋ ಆಸ್ಟ್ರೋನಾಮಿಯಾ ಸೋಲಾರ್’ (Astronomia Solar) ಮಾದರಿಯನ್ನು ಆಧರಿಸಿರುವ ಈ ‘ಶ್ರೀ ರಾಮಚಂದ್ರ’ (Shri Ramchandra) ಎಡಿಷನ್ ವಾಚ್, ಜಗತ್ತಿನಲ್ಲಿ ಕೇವಲ ಮೂರು ಪೀಸ್‌ಗಳಿಗೆ ಮಾತ್ರ ಸೀಮಿತವಾಗಿದೆ. ಅತ್ಯಂತ ಸೀಮಿತ ಸಂಖ್ಯೆಯಲ್ಲಿ ತಯಾರಾಗಿರುವ ಈ ವಾಚ್, ಆಧ್ಯಾತ್ಮಿಕ ಮೌಲ್ಯ ಮತ್ತು ಉನ್ನತ ವಾಚ್‌ಮೇಕಿಂಗ್ ಕಲೆಯ ವಿಶಿಷ್ಟ ಸಂಗಮವಾಗಿದೆ.
ಈ ವಾಚ್‌ನಲ್ಲಿ ದೇವತೆಗಳನ್ನು ಸುಂದರವಾದ ಶಿಲ್ಪಗಳ (figurines) ರೂಪದಲ್ಲಿ ಅಳವಡಿಸಲಾಗಿದೆ. ವಾಚ್‌ನ 6 ಗಂಟೆಯ ಸ್ಥಾನದಲ್ಲಿ ಭಗವಾನ್ ಶ್ರೀರಾಮ ಹಾಗೂ 9 ಗಂಟೆಯ ಸ್ಥಾನದಲ್ಲಿ ಹನುಮಂತನು ಆಸೀನನಾಗಿದ್ದಾನೆ. ಇವರಿಬ್ಬರ ಮಧ್ಯೆ ತನ್ನದೇ ಅಕ್ಷದ ಮೇಲೆ ತಿರುಗುವ ನೀಲಿ ಬಣ್ಣದ ಲೇಪಿತ ಭೂಮಿ (Earth) ಇದೆ. ಇದು ಪ್ರತಿ ನಿಮಿಷಕ್ಕೆ ಒಂದು ಸುತ್ತು ಪೂರ್ಣಗೊಳಿಸುವ ಮೂಲಕ ರನ್ನಿಂಗ್ ಸೆಕೆಂಡ್‌ಗಳಂತೆ ಕಾರ್ಯನಿರ್ವಹಿಸುತ್ತದೆ.
ಹಿಂದೂ ಧರ್ಮದ ಪವಿತ್ರ ಸಂಕೇತವಾದ ಕೇಸರಿ ಬಣ್ಣಕ್ಕೆ ಇಲ್ಲಿ ವಿಶೇಷ ಗೌರವ ನೀಡಲಾಗಿದೆ. ಗಂಟೆ ಮತ್ತು ನಿಮಿಷಗಳನ್ನು ಪ್ರದರ್ಶಿಸಲು ರೋಸ್ ಗೋಲ್ಡ್ ಮುಳ್ಳುಗಳು, ಇವು ಕಿತ್ತಳೆ ಬಣ್ಣದ ಫೈರ್ ಓಪಾಲ್ ಡಯಲ್ ಮೇಲೆ ಇರುತ್ತವೆ. ಡಿಸ್ಪ್ಲೇಯ ಮಧ್ಯಭಾಗದಲ್ಲಿ ಸೂರ್ಯನನ್ನು ಪ್ರತಿನಿಧಿಸುವ ಜೇಕಬ್-ಕಟ್ ಕಿತ್ತಳೆ ಬಣ್ಣದ ಕ್ಯೂಬಿಕ್ ಜಿರೋಕಾನ್ ಕಲ್ಲನ್ನು ಅಳವಡಿಸಲಾಗಿದೆ. ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯೊಂದಿಗೆ ಈ ಎಲ್ಲಾ ಅಂಶಗಳನ್ನು ಮಂಡಲ ಮಾದರಿಯನ್ನು ಹೊಂದಿರುವ ನೀಲಿ ನಿಯೋಲೈಟ್ (neoralithe) ಬೇಸ್ ಮೇಲೆ ಸುಂದರವಾಗಿ ಜೋಡಿಸಲಾಗಿದೆ.
ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?
ಈ ಐಷಾರಾಮಿ ವಾಚ್ ಜೇಕಬ್ ಅಂಡ್ ಕೋ, ನ ವಿಶಿಷ್ಟ ಇನ್-ಹೌಸ್ ಮ್ಯಾನುಯಲ್-ವೈಂಡಿಂಗ್ ಕ್ಯಾಲಿಬರ್ JCAM42 ಯಂತ್ರದಿಂದ ಚಲಿಸುತ್ತದೆ. ಇದು ಒಟ್ಟು 295 ಬಿಡಿಭಾಗಗಳನ್ನು ಹೊಂದಿದ್ದು, 48 ಗಂಟೆಗಳ ಪವರ್ ರಿಸರ್ವ್ ನೀಡುತ್ತದೆ. ರೋಸ್ ಗೋಲ್ಡ್ ಕೇಸ್‌ಬ್ಯಾಕ್‌ನಲ್ಲಿರುವ ಎರಡು ಬೌ (bows) ಗಳ ಸಹಾಯದಿಂದ ಇದನ್ನು ವೈಂಡ್ ಮತ್ತು ಸೆಟ್ ಮಾಡಬಹುದು. ಅಲ್ಲದೆ, ಇದರ ಹಿಂಭಾಗದಲ್ಲಿ ವಿಶೇಷವಾಗಿ ತಯಾರಿಸಿದ ‘ಜೈ ಶ್ರೀ ರಾಮ’ ಪ್ಲೇಟ್ ಅನ್ನು ಕೂಡ ಅಳವಡಿಸಲಾಗಿದೆ.
‘ಜೇಕಬ್ ಅಂಡ್ ಕೋ’ (Jacob & Co) ಸಂಸ್ಥೆಯ ಅತ್ಯಂತ ಅಪರೂಪದ ‘ಶ್ರೀ ರಾಮಚಂದ್ರ’ (Shri Ramchandra Edition) ವಾಚಿನ ಅಧಿಕೃತ ಬೆಲೆ ಅಂದಾಜು 4.25 ಕೋಟಿ ರೂ. ($510,000) ಆಗಿದ್ದು, ಇದು ಜಗತ್ತಿನಾದ್ಯಂತ ಕೇವಲ ಮೂರು ಪೀಸ್‌ಗಳಿಗೆ (3 Pieces) ಮಾತ್ರ ಸೀಮಿತವಾಗಿದೆ. ಇನ್ನು ಇದರ ಹಿಂದಿನ ಯಶಸ್ವಿ ಆವೃತ್ತಿಯಾದ ‘ರಾಮ್ ಜನ್ಮಭೂಮಿ’ (Epic X Ram Janmabhoomi) ಸರಣಿಯ ವಾಚ್‌ಗಳ ಬೆಲೆಯು ಅವುಗಳ ಮೆಟೀರಿಯಲ್‌ಗೆ ಅನುಗುಣವಾಗಿ 35.88 ಲಕ್ಷಗಳಿಂದ (ಟೈಟೇನಿಯಮ್ ಮಾದರಿ) 01.08 ಕೋಟಿವರೆಗೆ (18K ರೋಸ್ ಗೋಲ್ಡ್ ಮಾದರಿ) ಇರುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:36 am, Sun, 25 October 26