Kannada News Spiritual January Festival Calendar 2026: Important Festival List Of January month
January Festival List 2026: ಜನವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ತಿಂಗಳು ಕೂಡಾ ಒಂದಲ್ಲಾ ಒಂದು ವ್ರತಾಚರಣೆ ಅಥವಾ ಹಬ್ಬಗಳು ಇದ್ದೇ ಇರುತ್ತವೆ. 2026 ರ ಮೊದಲ ತಿಂಗಳಾದ ಜನವರಿ ತಿಂಗಳಲ್ಲಿ ಹತ್ತು ಹಲವು ಹಬ್ಬ ವ್ರತಾಚರಣೆಗಳಿವೆ. ಹಾಗಾದ್ರೆ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.
2026ರ ಮೊದಲ ತಿಂಗಳಾದ ಜನವರಿಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಎಲ್ಲರೂ ತಿಂಗಳನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಆದರೆ ಈ ತಿಂಗಳಲ್ಲಿ ಹಲವಾರು ಹಬ್ಬಗಳು (festivals) ಆಚರಣೆಗಳಿವೆ. ಮೊದಲ ತಿಂಗಳಾದ ಜನವರಿಯಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.
ಜನವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:
ಜನವರಿ 01 : ಮುಕ್ಕೋಟಿ ದ್ವಾದಶಿ
ಜನವರಿ 01 : ಪ್ರದೋಷ
ಜನವರಿ 03 : ಹುಣ್ಣಿಮೆ
ಜನವರಿ 04 : ಧನುರ್ವೈಧೃತಿಯೋಗ
ಜನವರಿ 04 : ಪುಷ್ಯ ಕೃಷ್ಣ ಪಕ್ಷ ಆರಂಭ
ಜನವರಿ 06 : ಸಂಕಷ್ಟಹರ ಚತುರ್ಥಿ
ಜನವರಿ 11 : ಮಹಾನಕ್ಷತ್ರ ಉತ್ತರಾಷಾಢಾ
ಜನವರಿ 14 : ಮಕರ ಸಂಕ್ರಮಣ
ಜನವರಿ 14 : ಸರ್ವೈಕಾದಶಿ ಷಟ್ತಿಲಾ
ಜನವರಿ 16 : ಮಾಸ ಶಿವರಾತ್ರಿ
ಜನವರಿ 16 : ಪ್ರದೋಷ
ಜನವರಿ 18 : ಮೌನಿ ಅಮಾವಾಸ್ಯೆ
ಜನವರಿ 18 : ಪುರಂದರದಾಸರ ಆರಾಧನೆ
ಜನವರಿ 19 : ಮಾಘ ಶುಕ್ಲ ಪಕ್ಷ
ಜನವರಿ 21 : ಕಲ್ಕಿ ಜಯಂತಿ
ಜನವರಿ 21 : ಶಬನ್ ಪ್ರಾರಂಭ
ಜನವರಿ 23 : ವಸಂತ ಪಂಚಮಿ
ಜನವರಿ 24 : ಮಹಾನಕ್ಷತ್ರ ಶ್ರವಣ
ಜನವರಿ 25 : ರಥ ಸಪ್ತಮಿ
ಜನವರಿ 26 : ಭೀಷ್ಮಾಷ್ಟಮಿ
ಜನವರಿ 27 : ಮಧ್ವ ಜಯಂತಿ
ಜನವರಿ 29 : ಸರ್ವೈಕಾದಶಿ ಜಯಾ
ಜನವರಿ 30 : ಶ್ರೀ ವಾದಿರಾಜ ಜಯಂತಿ
ಜನವರಿ 30 : ಪ್ರದೋಷ
ಜನವರಿ 30 : ಭೀಷ್ಮಾದ್ವಾದಶಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ