January Month Festivals 2025: ವರ್ಷದ ಮೊದಲ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

| Updated By: Digi Tech Desk

Updated on: Jan 02, 2025 | 4:20 PM

ಭಾರತದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು, ವ್ರತಾಚರಣೆಗಳು ನಡೆಯುತ್ತಲೇ ಇರುತ್ತವೆ. ಪ್ರತಿಯೊಂದು ತಿಂಗಳಿನಲ್ಲೂ ಕೂಡಾ ಒಂದಲ್ಲಾ ಒಂದು ವಿಶೇಷ ಹಬ್ಬಗಳು ಇದ್ದೇ ಇರುತ್ತದೆ. ಇನ್ನೇನೂ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದ್ದು, ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ, ಯಾವೆಲ್ಲಾ ವ್ರತಾಚರಣೆಗಳಿವೆ ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

January Month Festivals 2025: ವರ್ಷದ ಮೊದಲ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಶಬರಿ ಮಲೆ ಅಯ್ಯಪ್ಪ
Follow us on

ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು ಚೈತ್ರ ಮಾಸದ ಮೊದಲ ದಿನವಾದ ಯುಗಾದಿಯಿಂದ ಪ್ರಾರಂಭವಾದರೆ ಇಂಗ್ಲೀಷ್‌ ಕ್ಯಾಲೆಂಡರ್‌ ಪ್ರಕಾರ ಜನವರಿ ತಿಂಗಳನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ವರ್ಷದ ಈ ತಿಂಗಳಿನಲ್ಲಿ ಹಲವು ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಭಾರತದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ವಿಶೇಷ ಹಬ್ಬ ಇದ್ದೇ ಇರುತ್ತದೆ. ಹಾಗಾದರೆ ವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ…

ಜನವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:

1. ಜನವರಿ 3, 2025- ವಿನಾಯಕ ಚತುರ್ಥಿ

2. ಜನವರಿ 5, 2025- ಸ್ಕಂದ ಷಷ್ಠಿ

3. ಜನವರಿ 6, 2025- ಗುರು ಗೋಬಿಂದ್‌ ಸಿಂಗ್‌ ಜಯಂತಿ

4. ಜನವರಿ 10, 2025- ಸರ್ವೈಕಾದಶಿ

5. ಜನವರಿ 11, 2025- ಶನಿಪ್ರದೋಷ

6. ಜನವರಿ 13, 2025- ಪೌರ್ಣಮಿ

7. ಜನವರಿ 13, 2025- ಲೋಹ್ರಿ

8. ಜನವರಿ 14, 2025- ಮಕರ ಸಂಕ್ರಮಣ, ಪೊಂಗಲ್‌

9. ಜನವರಿ 15, 2025- ಸಂಕ್ರಾತಿ ಹಬ್ಬ

10. ಜನವರಿ 17, 2025- ಸಂಕಷ್ಟ ಚತುರ್ಥಿ

11. ಜನವರಿ 25, 2025- ಶಟ್ಟಿಲ ಏಕಾದಶಿ

12. ಜನವರಿ 27, 2025- ಮಾಸ ಶಿವರಾತ್ರಿ

13. ಜನವರಿ 27, 2025- ಸೋಮ ಪ್ರದೋಷ

14. ಜನವರಿ 29, 2025- ಮಾಘ ಅಮಾವಾಸ್ಯೆ

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:19 am, Mon, 30 December 24