ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ

| Updated By: Ganapathi Sharma

Updated on: Jan 01, 2025 | 6:45 AM

ಹೊಸ ವರ್ಷದ ಮೊದಲ ದಿನ ಶುರುವಾಗಿದೆ. ಅಂದರೆ, ಇದು ಕ್ಯಾಲೆಂಡರ್ ವರ್ಷ. ಹೊಸ ಸಂಖ್ಯಾ ವರ್ಷದ ಆಚರಣೆ ಹೇಗಿರಬೇಕು? ಆಧ್ಯಾತ್ಮಿಕ ಮುನ್ನಡೆಗೆ ಪೂರಕವಾಗಿ ಹೊಸ ಸಂಖ್ಯಾ ವರ್ಷವನ್ನು ಹೇಗೆ ಆಚರಿಸಬಹುದು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.

ಇಂದು ಹೊಸ ವರ್ಷದ ಮೊದಲ ದಿನ. 2025 ಜನವರಿ 1 ಬಂದಾಗಿದೆ. ನಮಗೆ ಯುಗಾದಿಯೇ ಹೊಸ ವರ್ಷ ಆಗಿದ್ದರೂ ಕ್ಯಾಲೆಂಡರ್ ವರ್ಷವನ್ನು ಕೂಡ ನಾವು ಸಂಭ್ರಮದಿಂದ ಬರ ಮಾಡಿಕೊಳ್ಳುತ್ತೇವೆ. ಕೆಲವರು ಪಾರ್ಟಿ ಮಾಡುವ ಮೂಲಕ, ಇನ್ನು ಕೆಲವರು ಮೋಜು-ಮಸ್ತಿ ಮಾಡುವ ಮೂಲಕ, ಮತ್ತೆ ಕೆಲವರು ವಾಹನಗಳನ್ನು ಯದ್ವಾತದ್ವ ಚಲಾಯಿಸುವ ಮೂಲಕ ಈ ಸಂಖ್ಯಾ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿರುವುದನ್ನು ನಾವು ಕಾಣಬಹುದು. ಏನೇನೋ ಆಹಾರಗಳನ್ನು ಸೇವಿಸುವುದು, ಮದ್ಯ ಸೇವಿಸುವುದನ್ನು ಕೂಡ ಕಾಣುತ್ತೇವೆ. ಇದರಿಂದ, ಈ ದಿನ ಗ್ರಹಗತಿಗಳು, ಭಗವಂತನ ಅನುಗ್ರಹ ನಮಗೆ ಪೂರಕವಾಗಿದ್ದರೆ ಸಮಸ್ಯೆ ಆಗದೆ ಇರಬಹುದು. ಇಲ್ಲವಾದಲ್ಲಿ ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಈ ರೀತಿ ಮಾಡುವ ಬದಲು ಎಲ್ಲವನ್ನು ಮಿತಿಯಲ್ಲಿ ಮಾಡುವುದು ಉತ್ತಮ. ಅಲ್ಲದೆ, ಹೊಸ ವರ್ಷದ ಈ ದಿನ ಹಲವು ಉತ್ತಮ ಸಂಕಲ್ಪಗಳನ್ನು ನಾವು ಮಾಡಬಹುದು. ಅವು ಯಾವುವು? ಹೇಗೆ? ಇತ್ಯಾದಿ ವಿವರಗಳನ್ನು ಡಾ. ಬಸವರಾಜ ಗುರೂಜಿ ಇಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ವಿಡಿಯೋದಲ್ಲಿದೆ.

Published on: Jan 01, 2025 06:45 AM