Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು

| Updated By: sandhya thejappa

Updated on: Feb 28, 2022 | 1:30 PM

ಇಡೀ ದಿನ ಉಪವಾಸವಿದ್ದು ಶಿವನ ಭಜನೆ ಮಾಡುತ್ತಾ ಜಾಗರಣೆ ಮಾಡುವುದೇ ಈ ಹಬ್ಬದ ವಿಶೇಷ. ದೇವಾಯಲಗಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಲಾಗುತ್ತದೆ.

Mahashivratri 2022: ಶಿವರಾತ್ರಿಯಂದು ಜಾಗರಣೆ ಮಾಡುವ ಭಕ್ತರಿಗೆ ಇಲ್ಲಿವೆ ಕನ್ನಡ ಭಕ್ತಿಗೀತೆಗಳು
ಶಿವ
Follow us on

ಭಾರತದಲ್ಲಿ ಹಿಂದೂ ಧರ್ಮದ ಪ್ರತೀ ಹಬ್ಬಗಳನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಒಂದೊಂದು ಹಬ್ಬಕ್ಕೂ ಅದರದ್ದೇ ಆದ ಹಿನ್ನೆಲೆ ಕಥೆಯಿದೆ. ಅದೇ ರೀತಿ ಶಿವರಾತ್ರಿ (Shivratri) ಕೂಡಾ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಡೀ ದಿನ ಉಪವಾಸವಿದ್ದು ಶಿವನ ಭಜನೆ ಮಾಡುತ್ತಾ ಜಾಗರಣೆ ಮಾಡುವುದೇ ಈ ಹಬ್ಬದ ವಿಶೇಷ. ದೇವಾಯಲಗಳಲ್ಲಿ, ಮನೆಗಳಲ್ಲಿ, ಮಂದಿರಗಳಲ್ಲಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಲಾಗುತ್ತದೆ. ಜಾಗರಣೆ ಮಾಡುವಾಗ ಕನ್ನಡದ ಈ ಹಾಡುಗಳನ್ನು ಹಾಡುವ ಮೂಲಕ ಶಿವನನ್ನು ಪೂಜಿಸಬಹುದು.

* ಮಹಾಪ್ರಾಣ ದೀಪಂ:
ಈ ಹಾಡನ್ನು ಕೇಳಿದವರಿಗೆ ಈ ಹಾಡಿನ ಶಕ್ತಿ ತಿಳಿದಿರುತ್ತದೆ. ಮಹಾಪ್ರಾಣ ದೀಪಂ ಎಂಬ ಸಾಹಿತ್ಯದಿಂದ ಆರಂಭವಾಗುವ ಈ ಹಾಡು ಕಿವಿಗೆ ಬೀಳುತ್ತಿದ್ದಂತೆ ಬೇರೆ ಯಾವ ಯೋಚನೆಗಳು ಬರಲ್ಲ. ಶಿವನ ಬಳಿಯೇ ಹೋಗಿ ಬದ್ದಂತೆ ಅನುಭವ ಆಗುತ್ತದೆ. ಗಟ್ಟಿ ಧ್ವನಿಯಲ್ಲಿ ಮೊಳಗುವ ಈ ಹಾಡನ್ನು ಆಲಿಸಿದಾಗ ರೋಮಗಳು ನೆಟ್ಟಗಾಗುತ್ತವೆ. ಕನ್ನಡ ಹಾಡಿನ ಪೈಕಿ ಈ ಹಾಡು ಹೆಚ್ಚು ಪ್ರಸಿದ್ಧಿ ಪಡೆದಿದೆ.

* ಶಿವ ಶಿವ ಎಂದರೆ ಭಯವಿಲ್ಲ:
ಎಸ್ ಪಿ ಬಾಲಸುಬ್ರಮಣ್ಯಂ ಅವರ ಕಂಠವೇ ಕರ್ನಾಟಕ ಪಾಲಿಗೆ ಉಡುಗೊರೆ. ಅವರ ಧ್ವನಿಯಲ್ಲಿ ಮೂಡಿಬರುವ ಹಾಡುಗಳೆಲ್ಲವೂ ಜನಪ್ರಿಯತೆ ಪಡೆದಿವೆ. ಅದರಲ್ಲಿ ಕೆಲವೊಂದು ಸೂಪರ್ ಹಿಟ್ ಆಗಿವೆ. ಈ ಸಾಲಿಗೆ ಶಿವ ಶಿವ ಎಂದರೆ ಭಯವಿಲ್ಲ ಎಂಬ ಹಾಡು ಸೇರುತ್ತದೆ. ಶಿವನ ಸ್ಮರಿಸುವ ಭಕ್ತರಿಗೆ ಈ ಹಾಡು ಸೂಕ್ತವಾಗಿದೆ. ಸದ್ಯ ಶಿವರಾತ್ರಿ ಸಮೀಪಿಸುತ್ತಿರುವ ಕಾರಣ ಜಾಗರಣೆ ವೇಳೆ ಈ ಹಾಡನ್ನು ಹೇಳಬಹುದು.

* ಪಾಹಿ ಮಹೇಶ:
ಬ್ರಹ್ಮಾಂಡ ಒಡೆಯನಾದ ಶಿವನಿಗೆ ಸಮರ್ಪಿತವಾದ ಮತ್ತೊಂದು ಹಾಡೆಂದರೆ ಪಾಹಿ ಮಹೇಶ. ಈ ಹಾಡನ್ನು ಶಿವರಾತ್ರಿ ದಿನದಂದು ಶಿವನನ್ನು ಸ್ಮರಿಸುತ್ತಾ ಹೇಳಬಹುದು.

* ಕೈಲಾಸ ಗಿರಿವಾಸ:
ಜಾಗರಣೆಯಲ್ಲಿ ಶಿವನ ಸ್ಮರಿಸುತ್ತಾ ಎಲ್ಲರೂ ಕೂಡಿ ಭಜನೆ ಮಾಡುತ್ತಾರೆ. ಭಜನೆ ವೇಳೆ ಶಿವನ ಯಾವ ಹಾಡುಗಳು ಹೇಳಬೇಕು ಎಂಬ ಗೊಂದಲವೂ ಇರುತ್ತೆ. ಶಿವನಿಗೆ ಸಮರ್ಪಿತವಾದ ಇನ್ನೊಂದು ಹಾಡೆಂದರೆ ಕೈಲಾಸ ಗಿರಿವಾಸ. ಈ ಹಾಡು ಹೇಳುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಬಹುದು.

* ಜಯ ಜಯ ಸಾಂಬಾಸಧಶಿವ
ಎಸ್ ಜಾನಕಿ ಹಾಡಿರುವ ಜಯ ಜಯ ಸಾಂಬಾಸಧಶಿವ ಹಾಡು ಭಕ್ತಿ ಪ್ರಧಾನದಿಂದ ಕೂಡಿದೆ. ಭಜನೆಗೆ ಈ ಹಾಡು ಸೂಕ್ತವಾಗಿದೆ.

ಇದನ್ನೂ ಓದಿ

Maha Shivaratri 2022: ಶಿವರಾತ್ರಿ ಉಪವಾಸಕ್ಕೆ ಕೊಪ್ಪಳದಲ್ಲಿ ಹಣ್ಣಿನ ಮೇಳ! ರೈತರಿಗೂ ಸಂಭ್ರಮ, ಶಿವ ಭಕ್ತರಿಗೂ ಆನಂದ!

Shivratri 2022; ಶಿವರಾತ್ರಿಯಂದು ಭೇಟಿ ನೀಡಲು ಸೂಕ್ತವಾದ ಬೆಂಗಳೂರಿನ ಶಿವನ ದೇವಸ್ಥಾನಗಳು

Published On - 12:15 pm, Mon, 28 February 22