Vastu Tips: ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ ಪೇಂಟಿಂಗ್ ಹಾಕುವುದರಿಂದ ನಿಮಗೆ ಸಿಗುತ್ತೆ ಅನೇಕ ಲಾಭ, ಈ ಚಿತ್ರದ ಮಹತ್ವವೇನು ಗೊತ್ತಾ?

| Updated By: ಆಯೇಷಾ ಬಾನು

Updated on: Jun 29, 2022 | 7:00 AM

ವಾಸ್ತು ಶಾಸ್ತ್ರದಲ್ಲಿ, ಮನೆ ಅಥವಾ ಕಚೇರಿಯಲ್ಲಿ ಏಳು ಕುದುರೆಗಳ ಚಿತ್ರವನ್ನು ಹಾಕುವ ಮಹತ್ವ ಮತ್ತು ಸರಿಯಾದ ವಿಧಾನವನ್ನು ಹೇಳಲಾಗಿದೆ. ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯಲು, ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲವು ಕ್ರಮಗಳನ್ನು ಅಳವಡಿಸಿಕೊಂಡರೆ, ಅದು ನಮ್ಮ ಜೀವನದಲ್ಲಿ ಗಮನಾರ್ಹ ಧನಾತ್ಮಕ ಬದಲಾವಣೆಗಳನ್ನು ತರಬಹುದು.

Vastu Tips: ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ ಪೇಂಟಿಂಗ್ ಹಾಕುವುದರಿಂದ ನಿಮಗೆ ಸಿಗುತ್ತೆ ಅನೇಕ ಲಾಭ, ಈ ಚಿತ್ರದ ಮಹತ್ವವೇನು ಗೊತ್ತಾ?
ಓಡುತ್ತಿರುವ ಏಳು ಕುದುರೆಗಳ ವರ್ಣಚಿತ್ರ
Follow us on

ಸಾಮಾನ್ಯವಾಗಿ ದೊಡ್ಡ ದೊಡ್ಡ ಮನೆಗಳಲ್ಲಿ ಪೇಂಟಿಂಗ್, ವಿಗ್ರಹಗಳನ್ನು ಇಡುತ್ತಾರೆ. ಏಕಂದ್ರೆ ಮನೆಯ ಚಂದ ಹೆಚ್ಚಿಸಲು. ಆದ್ರೆ ಮನೆಯ ಅಂದಕ್ಕೆ ಇಡುವ ವಸ್ತುಗಳು ಎಲ್ಲೆಲ್ಲಿ ಇಟ್ಟರೆ ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತೆ ಎಂಬ ಬಗ್ಗೆ ವಾಸ್ತು ಶಾಸ್ತ್ರ ವಿವರಿಸುತ್ತೆ, ವಾಸ್ತು ಶಾಸ್ತ್ರದ(Vastu Shastra) ಪ್ರಕಾರ ವಸ್ತುಗಳನ್ನು ಜೋಡಿಸುವುದರಿಂದ ಅನೇಕ ಲಾಭಗಳಿವೆ. ನಾವಿಂದು ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ ವರ್ಣಚಿತ್ರ(Seven Horses Painting) ನಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಹಿಂದೂ ಧರ್ಮದಲ್ಲಿ ಸಂಖ್ಯೆ 7ಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಮಳೆಬಿಲ್ಲಿಗೆ 7 ಬಣ್ಣಗಳು, ವಧು ವರರು ಏಳು ಹೆಜ್ಜೆ ಇಟ್ಟು ಪ್ರತಿಜ್ಞೆ ಮಾಡುತ್ತಾರೆ, ನಮ್ಮಲ್ಲಿ ಸಪ್ತರ್ಶಿಗಳಿಗೆ ಅತಿ ಮುಖ್ಯವಾದವರು ಎನಿಸಿದ್ದರು, ಸೂರ್ಯದೇವ ಏಳು ಕುದುರೆಗಳ ರಥವನ್ನು ಓಡಿಸುತ್ತಾನೆ. ಹೀಗಾಗಿ ಸಂಖ್ಯೆ 7ಕ್ಕೆ ವಿಶೇಷ ಮಹತ್ವವಿದೆ. ಹಾಗೂ ಇದೊಂದು ಶುಭ ಸಂಖ್ಯೆ. ಆದ್ದರಿಂದ ಏಳು ಓಡುವ ಕುದುರೆಗಳ ವರ್ಣಚಿತ್ರ ಅನೇಕ ಲಾಭಗಳನ್ನು ತರುತ್ತದೆ ಎನ್ನಲಾಗಿದೆ.

ಕುದುರೆ ಶಕ್ತಿ ಮತ್ತು ಯಶಸ್ಸಿನ ಸಂಕೇತ
ವಾಸ್ತು ಶಾಸ್ತ್ರದಲ್ಲಿ, ಮನೆ ಅಥವಾ ಕಚೇರಿಯಲ್ಲಿ ಏಳು ಕುದುರೆಗಳ ಚಿತ್ರವನ್ನು ಹಾಕುವ ಮಹತ್ವ ಮತ್ತು ಸರಿಯಾದ ವಿಧಾನವನ್ನು ಹೇಳಲಾಗಿದೆ. ಜೀವನದಲ್ಲಿ ಯಶಸ್ಸು ಮತ್ತು ಪ್ರಗತಿಯನ್ನು ಪಡೆಯಲು, ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲವು ಕ್ರಮಗಳನ್ನು ಅಳವಡಿಸಿಕೊಂಡರೆ, ಅದು ನಮ್ಮ ಜೀವನದಲ್ಲಿ ಗಮನಾರ್ಹ ಧನಾತ್ಮಕ ಬದಲಾವಣೆಗಳನ್ನು ತರಬಹುದು. ನಿಮ್ಮ ವೃತ್ತಿಜೀವನದ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಎಲ್ಲವನ್ನೂ ಮಾಡಿದರೂ ನೀವು ಒಂದೇ ಸ್ಥಳದಲ್ಲಿ ಸ್ಥಿರವಾಗಿಲ್ಲ ಎಂದು ನೀವು ಭಾವಿಸಿದರೆ ಅಥವಾ ಜೀವನದಲ್ಲಿ ಮುಂದುವರಿಯಲು ನಿಮಗೆ ಪ್ರೇರಣೆ ಬೇಕಾದರೆ, ಖಂಡಿತವಾಗಿಯೂ ಮನೆಯಲ್ಲಿ ಓಡುವ ಕುದುರೆಗಳ ಚಿತ್ರವನ್ನು ಹಾಕಿ. ಕುದುರೆ ಶಕ್ತಿ ಮತ್ತು ಯಶಸ್ಸಿನ ಸಂಕೇತವಾಗಿದೆ. ಕುದುರೆಯ ಚಿತ್ರವನ್ನು ನೋಡಿದಾಗ, ಸೋಮಾರಿತನವು ಹೋಗುತ್ತದೆ. ಶಾಂತಿ, ಯಶಸ್ಸು ಮತ್ತು ಅಭಿಮೃದ್ಧಿ ಸಿಗುತ್ತದೆ. ಆದರೆ ಚಿತ್ರದಲ್ಲಿ ಕುದುರೆ ಓಡುತ್ತಿರಬೇಕು. ಇದನ್ನೂ ಓದಿ: Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?

ಸಪ್ತ ಕುದುರೆಗಳ ಚಿತ್ರದಿಂದಾಗುವ ಲಾಭಗಳು
ಓಡುವ ಕುದುರೆಗಳು ವೇಗದ ಪ್ರತೀಕ. ಹೀಗಾಗಿ ಬದುಕಿನಲ್ಲಿ ಯಶಸ್ಸು ಬೇಕೆಂದರೆ ವೇಗ ಹೆಚ್ಚಿರಬೇಕು. ಈ ಪೇಂಟಿಂಗ್ ಮನೆಯಲ್ಲಿ ಹಾಕುವುದರಿಂದ ಮಾಡುವ ಕೆಲಸಗಳ ವೇಗ ಹೆಚ್ಚಲಿದೆ. ಕುದುರೆಗಳು ಯಶಸ್ಸಿನ ಸೂಚಕ ಕೂಡಾ. ಹಾಗಾಗಿ, ಈ ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ದರೆ ಯಶಸ್ಸು ನಿಮ್ಮ ಹಾದಿಯಲ್ಲಿ ಬರುತ್ತದೆ. ಈ ಪೇಂಟಿಂಗ್ ವ್ಯಕ್ತಿಯ ಬದುಕಿನಲ್ಲಿ ಆರ್ಥಿಕ ಭದ್ರತೆ ತಂದುಕೊಡುತ್ತದೆ.

ಎಲ್ಲಿ ಹಾಕಬೇಕು?
ಈ ಅದೃಷ್ಟ ತರುವ ಪೇಂಟಿಂಗ್‍ನ್ನು ಯಾವಾಗಲೂ ಮನೆಯ ಪೂರ್ವ ಇಲ್ಲವೇ ಉತ್ತರ ದಿಕ್ಕಿನ ಗೋಡೆಗೆ ಹಾಕಬೇಕು. ಇದರಿಂದ ವೃತ್ತಿಯಲ್ಲಿ ಭಡ್ತಿ ಜೊತೆಗೆ ಸಂಪತ್ತು ಸಿಗಲಿದೆ. ಇದೇ ಪೇಂಟಿಂಗನ್ನು ದಕ್ಷಿಣ ಗೋಡೆಯಲ್ಲಿ ಹಾಕಿದರೆ ಹೆಸರು, ಕೀರ್ತಿ ದೊರೆಯುತ್ತದೆ ಎನ್ನಲಾಗಿದೆ.