Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಿಗ್ರಹಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ. ಅಲ್ಲದೆ, ದೇವರು ಮತ್ತು ದೇವತೆಗಳ ಆರಾಧನೆಯನ್ನು ಸಹ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿ ವಿಗ್ರಹವನ್ನು ಇಡಲು ಒಂದು ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದೆ.

Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?
ಸಂಪತ್ತಿನ ದೇವತೆ ಲಕ್ಷ್ಮಿ
Follow us
TV9 Web
| Updated By: ಆಯೇಷಾ ಬಾನು

Updated on: Jun 23, 2022 | 6:30 AM

ಹಿಂದೂ ಧರ್ಮದಲ್ಲಿ, ದೇವರು ಮತ್ತು ದೇವತೆಗಳ ಪೂಜೆಗಾಗಿ ಮನೆಯಲ್ಲೇ ಪುಟ್ಟದೊಂದು ದೇವರ ಮನೆ ನಿರ್ಮಿಸಲಾಗಿರುತ್ತದೆ. ಮತ್ತು ಆ ದೇವರ ಮನೆಯಲ್ಲಿ ದೇವರ ವಿಗ್ರಹಗಳು(Lord Idol), ಪೂಜೆ ಸಾಮಾನು ಸೇರಿದಂತೆ ದೇವರಿಗೆ ಸಂಬಂಧ ಪಟ್ಟ ವಸ್ತುಗಳನ್ನು ಇಡಲಾಗುತ್ತೆ. ಮನೆಯಲ್ಲಿ ಇರಿಸಲಾಗಿರುವ ಈ ದೇವತೆಗಳ ವಿಗ್ರಹಗಳು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ನೀಡುತ್ತವೆ. ಆದರೆ ದೇವರ ಮನೆಯಲ್ಲಿ ವಿಗ್ರಹಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ವಿಶೇಷ ಲಾಭಗಳನ್ನು ಪಡೆಯಬಹುದು ಎಂದು ವಾಸ್ತು ತಜ್ಞರು(Vastu Tips) ಅಭಿಪ್ರಾಯಪಟ್ಟಿದ್ದಾರೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಿಗ್ರಹಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ. ಅಲ್ಲದೆ, ದೇವರು ಮತ್ತು ದೇವತೆಗಳ ಆರಾಧನೆಯನ್ನು ಸಹ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ರತಿ ವಿಗ್ರಹವನ್ನು ಇಡಲು ಒಂದು ನಿರ್ದಿಷ್ಟ ದಿಕ್ಕನ್ನು ನಿಗದಿಪಡಿಸಲಾಗಿದೆ. ಹಾಗಾದ್ರೆ ಬನ್ನಿ ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಉತ್ತಮ ಎಂದು ತಿಳಿಯೋಣ. ಇದನ್ನೂ ಓದಿ: Banana plant: ಮನೆಯಲ್ಲಿ ಬಾಳೆ ಗಿಡ ಬೆಳೆಸಲು ಆಲೋಚಿಸುತ್ತಿದ್ದೀರಾ? ಮೊದಲು ಈ ವಾಸ್ತು ನಿಯಮಗಳನ್ನು ಪಾಲಿಸಿ

ಗಣೇಶನ ವಿಗ್ರಹ ಯಾವ ದಿಕ್ಕಿನಲ್ಲಿಟ್ಟರೆ ಉತ್ತಮ ಹಿಂದೂ ಧರ್ಮದಲ್ಲಿ, ಯಾವುದೇ ಮಂಗಳಕರ ಕೆಲಸವನ್ನು ಆರಂಭಿಸುವ ಮುನ್ನ ಗಣೇಶ ಪೂಜೆಯೊಂದಿಗೆ ಪ್ರಾರಂಭಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗಣೇಶನ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಗಣೇಶನ ವಿಗ್ರಹವನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ರೀತಿ, ಗಣೇಶನ ಸಿಂಧೂರ ಚಿತ್ರವನ್ನು ಹಾಕುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಲಕ್ಷ್ಮಿ ದೇವತೆಗೆ ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ ನಿಮ್ಮ ದೇವರ ಮನೆಯಲ್ಲಿ ಲಕ್ಷ್ಮಿ ಮತ್ತು ಗಣೇಶನಿಟ್ಟು ಪೂಜಿಸುವುದಕ್ಕಿಂತ ಆ ವಿಗ್ರಹಗಳನ್ನು ಸರಿಯಾದ ದಿಕ್ಕಿನಲ್ಲಿಟ್ಟು ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ. ದೇವರ ಮನೆಯಲ್ಲಿ ಇರಿಸಲಾಗಿರುವ ಲಕ್ಷ್ಮಿ ದೇವಿಯ ವಿಗ್ರಹವನ್ನು ಗಣೇಶನ ವಿಗ್ರಹದ ಬಲಭಾಗದಲ್ಲಿ ಇಡಬೇಕು. ಲಕ್ಷ್ಮಿಯು ಭಗವಾನ್ ಗಣೇಶನ ತಾಯಿ ಸ್ವರೂಪ. ಹೀಗಾಗಿ ತಾಯಿಯನ್ನು ಬಲಭಾಗದಲ್ಲಿ ಸ್ಥಾಪಿಸಬೇಕು.

ಶಿವಲಿಂಗಕ್ಕೆ ಯಾವ ದಿಕ್ಕು ಉತ್ತಮ ಕೆಲವರು ಮನೆಯಲ್ಲಿ ಚಿಕ್ಕ ಶಿವಲಿಂಗವನ್ನು ಇಟ್ಟುಕೊಂಡು ಪೂಜಿಸುತ್ತಾರೆ. ಅಂತಹವರು ಶಿವಲಿಂಗದ ಸರಿಯಾದ ದಿಕ್ಕನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮನೆಯ ದೇವರ ಗುಡಿಯಲ್ಲಿ ಇರಿಸಲಾಗಿರುವ ಶಿವಲಿಂಗವು ಉತ್ತರಕ್ಕೆ ಮುಖ ಮಾಡಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ.

ಮತ್ತಷ್ಟು ಅಧ್ಯಾತ್ಮಿಕ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?