ಮನೆಯಲ್ಲಿ ನೆಮ್ಮದಿ ಕಾಣಬೇಕೆಂದರೆ ನಿಮ್ಮ ದೇವರ ಕೋಣೆಯಲ್ಲಿ ಈ ಫೋಟೋಗಳು ಇಡಬೇಡಿ!
ಪರಮೇಶ್ವರ ಕಣ್ಣು ಮುಚ್ಚಿರುವ ವಿಗ್ರಹ ಅಥವಾ ಚಿತ್ರಪಟ ಇರಬಾರದು. ಪಾರ್ವತಿ ಸುಬ್ರಹ್ಮಣ್ಯ ಸಹಿತ ಗಣೇಶ ಹೊಂದಿರುವ ಚಿತ್ರಪಟ ಇದ್ದರೆ ಒಳ್ಳೆಯದು. ದೇವರ ಮನೆಯಲ್ಲಿ ಎರಡು ಶಂಖಗಳು ಇರಬಾರದು. ಈ ನಿಯಮ ಪಾಲಿಸಿದರೆ ನಿಮಗೆ ಒಳ್ಳೆಯದಾಗುತ್ತೆ.
ಅಪ್ಪಿ ತಪ್ಪಿ ಕೂಡ ನಿಮ್ಮ ಮನೆಯಲ್ಲಿ ಈ ದೇವರ ಫೋಟೋ ಅಥವಾ ವಿಗ್ರಹಗಳು ಇದ್ದರೆ ಈಗಲೇ ತೆಗೆದುಬಿಡಿ, ಏಕೆಂದರೆ ಇದರಿಂದ ಅಪಾಯ ತಪ್ಪಿದ್ದಲ್ಲ. ಇನ್ನು, ದುಡ್ಡಿನ ವಿಚಾರದಲ್ಲಿ ತೊಂದರೆ ಆಗುತ್ತಿದ್ದರೆ ಈ ಫೋಟೋಗಳನ್ನು ತೆಗೆಯಿರಿ. ಅವು ಯಾವುವು ಅಂತ ಈ ಲೇಖನದಲ್ಲಿ ತಿಳಿದು ಕೊಳ್ಳೋಣ. ಮನೆಯಲ್ಲಿ ಶಾಂತಿ ನೆಮ್ಮದಿ ಇರಬೇಕು ಅಂದರೆ ಸಕಾರಾತ್ಮಕ ಶಕ್ತಿಗಳ ವಾಸ ಇರಲೇಬೇಕು ಮತ್ತು ಭಕ್ತಿಯಿಂದ ದೇವರಾಧನೆ ಮಾಡಬೇಕು.
ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ ಸಾಮಾನ್ಯವಾಗಿ ನಾವು ಪೂಜಾ ಮಂದಿರದಲ್ಲಿ ದೇವರ ವಿಗ್ರಹ ಅಥವಾ ದೇವರ ಫೋಟೋಗಳನ್ನು ಇಡುತ್ತೇವೆ. ನಮಗೆ ತಿಳಿಯದೆ ಕೆಲವು ದೇವರ ವಿಗ್ರಹಗಳನ್ನು ಇಟ್ಟಿರುತ್ತೇವೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ಕಿರಿಕಿರಿ ಉಂಟಾಗುತ್ತದೆ, ಅಶಾಂತಿ ಉಂಟಾಗುತ್ತದೆ. ಇದನ್ನೆಲ್ಲ ತಡೆಗಟ್ಟಲು ನಾವು ಹೇಳಿದ ರೀತಿ ಪರಿಹಾರ ಕಂಡುಕೊಂಡು ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಿರಿ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಲ ಭೈರವನ ವಿಗ್ರಹ ಇರಲೇಬಾರದು. ಕಾಲ ಭೈರವನು ಶಿವನ ಒಂದು ರೂಪವಾದರೂ ಸಹಾ ಆತನು ತಾಂತ್ರಿಕತೆ ಯವನು. ಹಾಗಾಗಿ ಕಾಲ ಭೈರವನ ವಿಗ್ರಹ ಮನೆಯಲ್ಲಿ ಇರಬಾರದು. ಹಾಗೆಯೇ ನಟರಾಜನ ವಿಗ್ರಹವನ್ನು ಪೂಜಿಸಬಾರದು. ನಟರಾಜ ಶಿವ ರೂಪ. ಆದರೆ ಅವನು ತಾಂಡವ ಆಡುತ್ತಿರುವುದರಿಂದ ಮನೆಯಲ್ಲಿ ಸದಾ ಕೋಪ ಮನಸ್ತಾಪಗಳು ಉಂಟಾಗುತ್ತದೆ. ಹಾಗೆಯೇ ಮನೆಯಲ್ಲಿ ಶನಿ ದೇವರ, ರಾಹು ಮತ್ತು ಕೇತು ದೇವರ ವಿಗ್ರಹ ಇಡಬಾರದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲ್ ಕ್ಲಿಕ್ ಮಾಡಿ
ಇವರು ನ್ಯಾಯಪರ ದೇವರುಗಳು. ಆದರೂ ಮನೆಯಲ್ಲಿ ಸಂಬಂಧಗಳಲ್ಲಿ ಬಿರುಕು ಬೀರುವ ಸಾಧ್ಯತೆ ಇರುತ್ತದೆ. ಹಾಗೆಯೇ ದುರ್ಗಾ ದೇವಿಯ ಉಗ್ರ ರೂಪ ಸಂಹಾರದ ರೂಪ ಇರುವ ಚಿತ್ರಪಟ ಮನೆಯಲ್ಲಿ ಇರಬಾರದು. ಇದರಿಂದ ಸ್ತ್ರೀಯರ ಹಠ ಹೆಚ್ಚಾಗುತ್ತದೆ. ಕೋಪದಿಂದ ತಾಪಗಳು ಬಂದು ಮನೆಯಲ್ಲಿ ಅಶಾಂತಿ ಮೂಡುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಸಹಾ ವಿಘ್ನೇಶ್ವರನ ಸೌಮ್ಯ ರೂಪದ ವಿಗ್ರಹ ಇರುತ್ತದೆ. ಆದರೆ ಮನೆಯಲ್ಲಿ ವಿಘ್ನೇಶ್ವರನ ಮೂರು ಚಿತ್ರಪಟ ಆಗಲಿ, ವಿಗ್ರಹಗಳಾಗಲಿ ಇರಬಾರದು. ಹೀಗಿದ್ದರೆ ಅಂದುಕೊಂಡ ಕಾರ್ಯಗಳು ಆಗುವುದಿಲ್ಲ.
ಪರಮೇಶ್ವರ ಕಣ್ಣು ಮುಚ್ಚಿರುವ ವಿಗ್ರಹ ಅಥವಾ ಚಿತ್ರಪಟ ಇರಬಾರದು. ಪಾರ್ವತಿ ಸುಬ್ರಹ್ಮಣ್ಯ ಸಹಿತ ಗಣೇಶ ಹೊಂದಿರುವ ಚಿತ್ರಪಟ ಇದ್ದರೆ ಒಳ್ಳೆಯದು. ದೇವರ ಮನೆಯಲ್ಲಿ ಎರಡು ಶಂಖಗಳು ಇರಬಾರದು. ಬಹಳ ಎತ್ತರದ ಎರಡು ವಿಗ್ರಹ ಇರಬಾರದು. ಈ ರೀತಿಯ ನಿಯಮಗಳನ್ನು ಪಾಲಿಸಿದರೆ ನಿಮಗೆ ನಿಜವಾಗಲೂ ಒಳ್ಳೆಯದಾಗುತ್ತೆ. ಇಲ್ಲದಿದ್ದರೆ ನಾವೇ ನಮ್ಮ ಮನೆಯ ನೆಮ್ಮದಿ ಹಾಳು ಮಾಡಿದಂತೆ ಆಗುತ್ತದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ