ಅಪ್ಪಿತಪ್ಪಿಯೂ ಆಂಜನೇಯನ ಫೋಟೋ ಇಲ್ಲಿ ಹಾಕಬೇಡಿ, ವಾಯು ಪುತ್ರನ ಪೂಜೆ ಮಾಡುವುದಕ್ಕೆ ದಿಕ್ಕುಗಳ ಪ್ರಭಾವ, ಪಾತ್ರ ಏನು?

| Updated By: ಆಯೇಷಾ ಬಾನು

Updated on: Aug 12, 2021 | 7:07 AM

Lord Hanuman: ಭಯದಿಂದ ಮುಕ್ತಿ ಪಡೆಯಬೇಕು ಅಂದರೆ ಭೂತ, ಪ್ರೇತ, ಪಿಶಾಚಿಯಂತಹ ಅಸ್ವಾಭಾವಿಕತೆಯಿಂದ ಭಯ ಮೂಡುತ್ತಿದೆ ಎಂದಾದರೆ ಪಂಚಮುಖಿ ಆಂಜನೇಯನ ಫೋಟೋ ಹಾಕಿಬಿಡಿ ಸಾಕು. ಅಥವಾ ಪರ್ವತವನ್ನು ಎತ್ತಿ ಹಿಡಿದ ವಾಯುಪುತ್ರನ ಚಿತ್ರ ಹಾಕಿಕೊಳ್ಳಿ. ವಾಸ್ತುಶಾಸ್ತ್ರದ ಪ್ರಕಾರ ಪಂಚಮುಖಿ ಆಂಜನೇಯನ ಫೋಟೋ ಅಥವಾ ವಿಗ್ರಹ ಯಾರ ಮನೆಯಲ್ಲಿ ಇರುತ್ತದೋ ಅಲ್ಲಿ ಪ್ರಗತಿಯೆಂಬುದು ತನ್ನಿಂದತಾನೇ ವ್ಯುತ್ಪತ್ತಿಯಾಗುತ್ತಿರುತ್ತದೆ.

ಅಪ್ಪಿತಪ್ಪಿಯೂ ಆಂಜನೇಯನ ಫೋಟೋ ಇಲ್ಲಿ ಹಾಕಬೇಡಿ, ವಾಯು ಪುತ್ರನ ಪೂಜೆ ಮಾಡುವುದಕ್ಕೆ ದಿಕ್ಕುಗಳ ಪ್ರಭಾವ, ಪಾತ್ರ ಏನು?
ಅಪ್ಪಿತಪ್ಪಿಯೂ ಆಂಜನೇಯನ ಫೋಟೋ ಇಲ್ಲಿ ಹಾಕಬೇಡಿ, ವಾಯುಪುತ್ರನ ಪೂಜೆಗಾಗಿ ದಿಕ್ಕುಗಳ ಪ್ರಭಾವ, ಪಾತ್ರ ಏನು?
Follow us on

ವಾಯುಪುತ್ರ ಹನುಮಂತನ ಪೂಜೆಯ ವೇಳೆ ದಿಕ್ಕುಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವ ದಿಕ್ಕಿನಲ್ಲಿ ಆಂಜನೇಯನನ್ನು ಪೂಜಿಸಬೇಕು? ಪೂಜಾ ವಿಧಾನಗಳೇನು? ತಿಳಿದುಕೊಳ್ಳೋಣ ಬನ್ನೀ… ಮಂಗಳವಾರದ ದಿನ ಆಂಜನೇಯನ ಪೂಜೆ ಮಾಡಿದರೆ ಪರಮ ಪಾವನವಾಗಿ, ಎಲ್ಲಾ ಸಂಕಷ್ಟಗಳೂ ದೂರವಾಗುತ್ತವೆ. ಎಲ್ಲವೂ ಮಂಗಳಕರವೇ ಆಗುತ್ತದೆ. ಮಂಗಳವಾರದಂದು ಆಂಜನೇಯನ ಪೂಜೆ ಮಾಡಿದಾಗ ಆಂಜನೇಯ ಸುಪ್ರಸನ್ನನಾಗುತ್ತಾನೆ. ಹಾಗೆಯೇ ಮಂಗಳಕರ ಆಶೀರ್ವಾದ ನೀಡುತ್ತಾನೆ. ಸಂಕಟದ ಸಮಯದಲ್ಲಿ ಹನುಮಂತನ ಜಪಿಸುವುದರಿಂದ ತಕ್ಷಣವೇ ಎಲ್ಲ ಸಮಸ್ಯೆಗಳನ್ನೂ ದೂರ ಮಾಡುತ್ತಾನೆ. ಮಂಗಳವಾದಂದು ಆಂಜನೇಯನ 12 ಹೆಸರುಗಳನ್ನು ಜಪಿಸಬೇಕು.

ಮಂಗಳವಾರದಂದು ಆಂಜನೇಯನ 12 ಹೆಸರುಗಳನ್ನು ಜಪಿಸಿ: ಹನುಮಾನ್, ಅಂಜನೀಸುತ, ವಾಯುಪುತ್ರ, ಮಹಾಬಲ, ರಾಮೇಷ್ಟ, ಫಲ್ಗುಣಸಖ, ಪಿಂಗಾಕ್ಷ, ಅಮಿತವಿಕ್ರಮ, ಉದಧಿಕ್ರಮಣ, ಸೀತಾಶೋಕ ವಿನಾಶನ, ಲಕ್ಷ್ಮಣಪ್ರಾಣದಾತಾ, ಮತ್ತು ದಶಗ್ರೀವದರ್ಪಹ

ಈ 12 ಹೆಸರುಗಳಲ್ಲಿ ಆಂಜನೇಯನನ್ನು ಜಪಿಸಿದರೆ ಆಂಜನೇಯ ಸಂಪ್ರೀತನಾಗಿ ನಮ್ಮೆಲ್ಲ ಕಷ್ಟಗಳು ಮಂಜಿನಂತೆ ಕರಗಿಬಿಡಬಲ್ಲದು. ಶ್ರೀ ಆಂಜನೇಯನ ನಾಮಸ್ಮರಣೆಯಿಂದ ಎಲ್ಲವೂ ಒಳಿತೇ ಆಗುತ್ತದೆ. ಆದರೂ ಈ ದಿಕ್ಕುಗಳಲ್ಲಿ ಹನುಮಾನ್​ ವಿಗ್ರಹ, ಚಿತ್ರ, ಪುತ್ಥಳಿ ಸ್ಥಾಪಿಸಿ ಪೂಜಿಸಿದರೆ ಹೆಚ್ಚು ಹೆಚ್ಚು ಫಲಪ್ರದವಾಗಿರುತ್ತದೆ; ಮನಸಿಗೆ ನೆಮ್ಮದಿ ಸಿಗುತ್ತದೆ.

ದಕ್ಷಿಣದ ದಿಕ್ಕಿನಲ್ಲಿ… ಆಂಜನೇಯನ ಪ್ರಭಾವ ಹೆಚ್ಚು
ವಾಸ್ತು ಪ್ರಕಾರ ಆಂಜನೇಯನ ಉಪಾಸನೆ ಮಾಡುವುದಕ್ಕೆ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ಸ್ಥಾಪಿಸಬೇಕು. ಏಕೆಂದರೆ ವಾಯುಪತ್ರನ ಪ್ರಭಾವ ಈ ದಿಕ್ಕಿನಲ್ಲಿ ಹೆಚ್ಚಾಗಿರುತ್ತದೆ. ಅಂದರೆ ದಕ್ಷಿಣದ ದಿಕ್ಕಿನಿಂದ ಬರುವ ಯಾವುದೇ ಪ್ರಮಾದ, ಸಂಕಷ್ಟಗಳನ್ನೂ ಸ್ವತಃ ಆಂಜನೇಯ ನಿವಾರಿಸಬಲ್ಲ. ದಕ್ಷಿಣಾಭಿಮುಖವಾಗಿರುವ ಆಂಜನೇಯನನ್ನು ನೋಡಿದ ತಕ್ಷಣ ಆ ಸಂಕಷ್ಟಗಳು ತನ್ನಿಂತಾನೇ ನಿವಾರಣೆಯಾಗಬಲ್ಲದು. ಇದರಿಂದ ಮನೆಯಲ್ಲಿ ಶಾಂತಿ, ಸುಖ ನೆಮ್ಮದಿ ನೆಲೆಸುತ್ತದೆ.

ಈ ಜಾಗ ಮತ್ತು ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಆಂಜನೇಯನ ಫೋಟೋ ಹಾಕಬೇಡಿ:
ಆಂಜನೇಯ ಸ್ವಾಮಿ ಬಾಲ ಬ್ರಹ್ಮಚಾರಿ ಎಂಬುದು ಎಲ್ಲರಿಗೂ ಸರ್ವವಿಧಿತವಾಗಿ ತಿಳಿದಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಆಂಜನೇಯನ ಫೋಟೋವನ್ನು ಮಲಗುವ ಕೋಣೆಯಲ್ಲಿ ಹಾಕಬೇಡಿ. ಅಖಂಡ ಬ್ರಹ್ಮಚಾರಿ ಆಂಜನೇಯ ಸ್ವಾಮಿಯ ಫೋಟೋ ಹಾಕುವ ಬದಲು ರಾಧಾ-ಕೃಷ್ಣನ ಫೋಟೋ ಹಾಕಿಕೊಳ್ಳಿ.

ಭಯದಿಂದ ಮುಕ್ತಿ ಪಡೆಯಬೇಕೆಂದರೆ
ಭಯದಿಂದ ಮುಕ್ತಿ ಪಡೆಯಬೇಕು ಅಂದರೆ ಭೂತ, ಪ್ರೇತ, ಪಿಶಾಚಿಯಂತಹ ಅಸ್ವಾಭಾವಿಕತೆಯಿಂದ ಭಯ ಮೂಡುತ್ತಿದೆ ಎಂದಾದರೆ ಪಂಚಮುಖಿ ಆಂಜನೇಯನ (panchmukhi hanuman) ಫೋಟೋ ಹಾಕಿಬಿಡಿ ಸಾಕು. ಅಥವಾ ಪರ್ವತವನ್ನು ಎತ್ತಿ ಹಿಡಿದ ವಾಯುಪುತ್ರನ ಚಿತ್ರ ಹಾಕಿಕೊಳ್ಳಿ. ವಾಸ್ತುಶಾಸ್ತ್ರದ ಪ್ರಕಾರ ಪಂಚಮುಖಿ ಆಂಜನೇಯನ ಫೋಟೋ ಅಥವಾ ವಿಗ್ರಹ ಯಾರ ಮನೆಯಲ್ಲಿ ಇರುತ್ತದೋ ಅಲ್ಲಿ ಪ್ರಗತಿಯೆಂಬುದು ತನ್ನಿಂದತಾನೇ ವ್ಯುತ್ಪತ್ತಿಯಾಗುತ್ತಿರುತ್ತದೆ.

ಗಾಳಿಯಲ್ಲಿ ಹಾರುವ ಆಂಜನೇಯನ ಫೋಟೋ ಎಲ್ಲಿ ಹಾಕಬೇಕು? 
ಇನ್ನು ವಾಯುಪುತ್ರ ಆಂಜನೇಯ ಗಾಳಿಯಲ್ಲಿ ಹಾರುತ್ತಿರುವ ಫೋಟೋ ಎಲ್ಲಿ ಹಾಕಬೇಕು? ಅಂದರೆ… ನಿಮ್ಮ ಅಭಿವರ್ಧನೆ ಎಲ್ಲಿ ವೇಗವಾಗಿ ಆಗುತ್ತಿರುತ್ತದೋ ಅಲ್ಲಿ ಅವಶ್ಯಕವಾಗಿ ಹಾರುವ ಆಂಜನೇಯನ ಫೋಟೋ ಹಾಕಿಕೊಳ್ಳಿ. ಹನುಮಾನ್​ ಕೃಪೆಯಿಂದ ನಿಮ್ಮಲ್ಲಿ ಉತ್ಸಾಹ ಮತ್ತು ಸಾಹಸ ಇಮ್ಮಡಿಸುತ್ತದೆ. ಪ್ರತಿದಿನ ಸಾಫಲ್ಯತೆಯನ್ನು ಕಾಣುತ್ತಾ ಸಾಗುವಿರಿ…

(know the right direction of lord hanuman anjaneya photo for worship and blessings)