List Of Ekadashi Vrat Dates 2025
ಒಂದು ವರ್ಷದಲ್ಲಿ 24 ಏಕಾದಶಿಗಳಿವೆ, ಪ್ರತಿ ತಿಂಗಳು ಎರಡು ಏಕಾದಶಿ ಉಪವಾಸಗಳನ್ನು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಈ ವ್ರತವು ಮೋಕ್ಷ ಪ್ರಾಪ್ತಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಏಕಾದಶಿ ವ್ರತವು ಈ ಜನ್ಮದಲ್ಲಿನ ಪಾಪಗಳಿಂದ ಮಾತ್ರವಲ್ಲದೆ ಕಳೆದ ಏಳು ಜನ್ಮಗಳ ಪಾಪಗಳಿಂದಲೂ ಮುಕ್ತಗೊಳಿಸುತ್ತದೆ. 2025 ರ ಏಕಾದಶಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಏಕಾದಶಿ 2025 ದಿನಾಂಕ ಪಟ್ಟಿ:
- 10ನೇ ಜನವರಿ 2025, ಶುಕ್ರವಾರ – ಪುಷ್ಯ ಪುತ್ರದಾ ಏಕಾದಶಿ
- 25 ಜನವರಿ, ಶನಿವಾರ – ಷಟ್ಟಿಲ ಏಕಾದಶಿ
- 8ನೇ ಫೆಬ್ರವರಿ, ಶನಿವಾರ – ಜಯ ಏಕಾದಶಿ
- 24 ಫೆಬ್ರವರಿ, ಸೋಮವಾರ – ವಿಜಯ ಏಕಾದಶಿ
- 10ನೇ ಮಾರ್ಚ್, ಸೋಮವಾರ – ಅಮಲಕಿ ಏಕಾದಶಿ
- 25ನೇ ಮಾರ್ಚ್ , ಮಂಗಳವಾರ – ಪಾಪಮೋಚನಿ ಏಕಾದಶಿ
- 8ನೇ ಏಪ್ರಿಲ್ , ಮಂಗಳವಾರ – ಕಾಮದ ಏಕಾದಶಿ
- 24ನೇ ಏಪ್ರಿಲ್, ಗುರುವಾರ – ವರೂಥಿನಿ ಏಕಾದಶಿ
- 8ನೇ ಮೇ, ಗುರುವಾರ – ಮೋಹಿನಿ ಏಕಾದಶಿ
- 23ನೇ ಮೇ, ಶುಕ್ರವಾರ – ಅಪರಾ ಏಕಾದಶಿ
- 6ನೇ ಜೂನ್, ಶುಕ್ರವಾರ – ನಿರ್ಜಲಾ ಏಕಾದಶಿ
- 21 ಜೂನ್ , ಶನಿವಾರ – ಯೋಗಿನಿ ಏಕಾದಶಿ
- 6ನೇ ಜುಲೈ, ಭಾನುವಾರ – ದೇವಶಯನಿ ಏಕಾದಶಿ
- 21 ಜುಲೈ , ಸೋಮವಾರ – ಕಾಮಿಕಾ ಏಕಾದಶಿ
- 5ನೇ ಆಗಸ್ಟ್ , ಮಂಗಳವಾರ – ಶ್ರಾವಣ ಪುತ್ರದಾ ಏಕಾದಶಿ
- 19 ಆಗಸ್ಟ್ , ಮಂಗಳವಾರ – ಅಜ ಏಕಾದಶಿ
- 3ನೇ ಸೆಪ್ಟೆಂಬರ್, ಬುಧವಾರ – ಪರಿವರ್ತಿನಿ ಏಕಾದಶಿ
- ಸೆಪ್ಟೆಂಬರ್ 17, ಬುಧವಾರ – ಇಂದಿರಾ ಏಕಾದಶಿ
- 3ನೇ ಅಕ್ಟೋಬರ್, ಶುಕ್ರವಾರ – ಪಾಪಾಂಕುಶ ಏಕಾದಶಿ
- 17ನೇ ಅಕ್ಟೋಬರ್, ಶುಕ್ರವಾರ – ರಾಮ ಏಕಾದಶಿ
- 2ನೇ ನವೆಂಬರ್, ಭಾನುವಾರ – ದೇವುತ್ಥಾನ ಏಕಾದಶಿ
- 15ನೇ ನವೆಂಬರ್, ಶನಿವಾರ – ಉತ್ಪನ್ನ ಏಕಾದಶಿ
- 1 ಡಿಸೆಂಬರ್ , ಸೋಮವಾರ – ಮೋಕ್ಷದ ಏಕಾದಶಿ
- 15ನೇ ಡಿಸೆಂಬರ್, ಸೋಮವಾರ – ಸಫಲ ಏಕಾದಶಿ
- 30ನೇ ಡಿಸೆಂಬರ್, ಮಂಗಳವಾರ – ಪುಷ್ಯ ಪುತ್ರದಾ ಏಕಾದಶಿ
ಇದನ್ನೂ ಓದಿ: ವೈಕುಂಠ ಏಕಾದಶಿಗೆ ಉಪವಾಸ ಮಾಡುವುದೇಕೆ? ಅದರ ಹಿಂದಿನ ಧಾರ್ಮಿಕ ಮಹತ್ವ ತಿಳಿಯಿರಿ
ಏಕಾದಶಿ ವ್ರತ ನಿಯಮಗಳು:
- ಏಕಾದಶಿಯಂದು, ವಿಷ್ಣುವಿಗೆ ಪಂಚಾಮೃತ, ಹಳದಿ ಹೂವುಗಳು, ಬಾಳೆಹಣ್ಣು, ಋತುಮಾನದ ಹಣ್ಣುಗಳು, ಸಿಹಿತಿಂಡಿಗಳು ಮತ್ತು ತುಳಸಿಯನ್ನು ಅರ್ಪಿಸಿ.
- ಏಕಾದಶಿಯಂದು ಬಡವರಿಗೆ ಅನ್ನ, ವಸ್ತ್ರ, ಧನ ದಾನ ಮಾಡಿದರೆ ಶ್ರೇಯಸ್ಕರ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ.
- ಏಕಾದಶಿ ಉಪವಾಸವನ್ನು 24 ಗಂಟೆಗಳ ಕಾಲ ಆಚರಿಸಲಾಗುತ್ತದೆ. ಏಕಾದಶಿಯಂದು ಅನ್ನದಿಂದ ಮಾಡಿದ ಯಾವುದನ್ನಾದರೂ ಸೇವಿಸಬೇಡಿ. ಮರುದಿನ ದ್ವಾದಶಿ ತಿಥಿಯಂದು ಏಕಾದಶಿ ಉಪವಾಸ ಕೊನೆಗೊಳ್ಳುತ್ತದೆ.
- ಏಕಾದಶಿಯ ಹಿಂದಿನ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ ಮತ್ತು ತಾಮಸಿಕ ಆಹಾರಗಳಿಂದ ದೂರವಿರಿ.
- ಏಕಾದಶಿ ವ್ರತದ ಕಥೆಯನ್ನು ಓದಿ ಮತ್ತು “ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ಪಠಿಸಿ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ