AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samudrika Shastra: ಕಾಲ್ಬೆರಳುಗಳ ಮೇಲೆ ಮಚ್ಚೆ ಇದೆಯೇ? ಸಾಮುದ್ರಿಕ ಶಾಸ್ತ್ರದ ಆಸಕ್ತಿದಾಯಕ ರಹಸ್ಯ ತಿಳಿಯಿರಿ

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಾಲ್ಬೆರಳುಗಳ ಮೇಲಿನ ಮಚ್ಚೆಗಳು ವ್ಯಕ್ತಿಯ ಭವಿಷ್ಯ, ವ್ಯಕ್ತಿತ್ವ, ನಿರಂತರ ಪ್ರಯಾಣ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಸೂಚನೆ ನೀಡುತ್ತವೆ. ಇಂತಹವರು ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುತ್ತಾರೆ. ಎಡ ಮತ್ತು ಬಲ ಪಾದದ ಮಚ್ಚೆಗಳು ವಿಭಿನ್ನ ಫಲಗಳನ್ನು ನೀಡುತ್ತವೆ. ಇವರು ಕುಟುಂಬ ಜೀವನದಲ್ಲಿ ಕೆಲವು ಉದ್ವಿಗ್ನತೆ ಎದುರಿಸಬಹುದು, ಆದರೆ ಸದಾ ಕ್ರಿಯಾಶೀಲರಾಗಿ ಸವಾಲುಗಳನ್ನು ಎದುರಿಸುವ ಧೈರ್ಯಶಾಲಿಗಳು.

Samudrika Shastra: ಕಾಲ್ಬೆರಳುಗಳ ಮೇಲೆ ಮಚ್ಚೆ ಇದೆಯೇ? ಸಾಮುದ್ರಿಕ ಶಾಸ್ತ್ರದ ಆಸಕ್ತಿದಾಯಕ ರಹಸ್ಯ ತಿಳಿಯಿರಿ
ಕಾಲ್ಬೆರಳುಗಳ ಮೇಲೆ ಮಚ್ಚೆ
ಅಕ್ಷತಾ ವರ್ಕಾಡಿ
|

Updated on:Aug 29, 2026 | 11:23 AM

Share

ದೇಹದ ಮೇಲಿನ ಮಚ್ಚೆಗಳು ವ್ಯಕ್ತಿಯ ಸ್ವಭಾವ, ಜೀವನಶೈಲಿ ಹಾಗೂ ಭವಿಷ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತವೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಕಾಲ್ಬೆರಳುಗಳ ಮೇಲೆ ಮಚ್ಚೆ ಇರುವುದಕ್ಕೆ ಸಮುದ್ರಿಕ್ ಶಾಸ್ತ್ರದಲ್ಲಿ ಪ್ರಮುಖ ಅರ್ಥಗಳನ್ನು ಕಲ್ಪಿಸಲಾಗಿದೆ. ಇಲ್ಲಿ ಕಾಲ್ಬೆರಳುಗಳ ಮೇಲಿನ ಮಚ್ಚೆಗಳ ವಿಶೇಷತೆ ಹಾಗೂ ಅವುಗಳ ಫಲಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ನಿರಂತರ ಪ್ರಯಾಣ ಮತ್ತು ಕಾರ್ಯನಿರತ ಜೀವನಶೈಲಿ:

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಾಲ್ಬೆರಳುಗಳ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಹೆಚ್ಚು ಕ್ರಿಯಾತ್ಮಕ ಹಾಗೂ ಒತ್ತಡದಿಂದ ಕೂಡಿದ ಜೀವನವನ್ನು ಹೊಂದಿರುತ್ತಾರೆ. ಇವರ ಹಣೆಬರಹದಲ್ಲಿ ಆಗಾಗ್ಗೆ ಪ್ರಯಾಣ ಮಾಡುವುದು ಬರೆದಿರುತ್ತದೆ. ಈ ಪ್ರಯಾಣಗಳು ಕೇವಲ ವಿಹಾರಕ್ಕೆ ಸೀಮಿತವಾಗಿರದೆ, ಕೆಲಸ, ವ್ಯವಹಾರ ಅಥವಾ ಇತರ ಪ್ರಮುಖ ಕಾರ್ಯಗಳಿಗೆ ಸಂಬಂಧಿಸಿರುತ್ತವೆ. ಅಂತಹ ಜನರು ಒಂದೇ ಸ್ಥಳದಲ್ಲಿ ದೀರ್ಘಕಾಲ ನೆಲೆಸಲು ಸಾಧ್ಯವಾಗದೆ, ನಿರಂತರವಾಗಿ ಚಲನಶೀಲರಾಗಿರುತ್ತಾರೆ.

ಕಠಿಣ ಪರಿಶ್ರಮ ಮತ್ತು ಆರ್ಥಿಕ ಸ್ಥಿತಿ:

ಕಾಲ್ಬೆರಳುಗಳ ಮೇಲಿನ ಮಚ್ಚೆಗಳು ವ್ಯಕ್ತಿಯ ಆರ್ಥಿಕ ಜೀವನದ ಮೇೆಯೂ ಪ್ರಭಾವ ಬೀರುತ್ತವೆ. ನಂಬಿಕೆಯ ಪ್ರಕಾರ, ಇಂತಹ ಲಕ್ಷಣವಿರುವವರು ಹಣ ಗಳಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಜೀವನದಲ್ಲಿ ಸಂಪತ್ತು ಅಥವಾ ಯಶಸ್ಸು ಸುಲಭವಾಗಿ ದಕ್ಕುವುದಿಲ್ಲ. ಆದರೆ, ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಬಳಿಕ ಇವರ ಆರ್ಥಿಕ ಸ್ಥಿತಿಯು ಕ್ರಮೇಣ ಸುಧಾರಣೆಯನ್ನು ಕಾಣುತ್ತದೆ.

ಎಡ ಮತ್ತು ಬಲ ಪಾದದ ಮಚ್ಚೆಗಳ ಫಲಗಳಲ್ಲಿ ವ್ಯತ್ಯಾಸ:

ಎಡ ಪಾದದ ಬೆರಳುಗಳ ಮೇಲೆ ಮಚ್ಚೆ ಇದ್ದರೆ, ಆ ವ್ಯಕ್ತಿಯು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು ಮತ್ತು ಹಣ ಗಳಿಸುವ ಮಾರ್ಗದಲ್ಲಿ ಅನೇಕ ಅಡೆತಡೆಗಳು ಎದುರಾಗಬಹುದು ಎಂದು ನಂಬಲಾಗಿದೆ. ಹಾಗೆಯೇ ಬಲ ಪಾದದ ಬೆರಳುಗಳ ಮೇಲಿನ ಮಚ್ಚೆಯನ್ನು ಹೆಚ್ಚು ಶುಭ ಹಾಗೂ ಅನುಕೂಲಕರವೆಂದು ಪರಿಗಣಿಸಲಾಗಿದ್ದು, ಇದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ: ಮೊದಲ ಭೇಟಿಯಲ್ಲೇ ಎಲ್ಲರನ್ನೂ ಸೆಳೆಯುವ ಶಕ್ತಿ ಈ 3 ರಾಶಿಯವರಿಗಿದೆ; ಇವರ ಮೋಡಿಗೆ ಬೀಳದವರಿಲ್ಲ!

ಕುಟುಂಬ ಜೀವನದಲ್ಲಿ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯ:

ಕಾಲ್ಬೆರಳುಗಳ ಮೇಲಿನ ಮಚ್ಚೆಗಳು ಮದುವೆ ಮತ್ತು ಕೌಟುಂಬಿಕ ಸಂಬಂಧಗಳ ಮೇಲೆಯೂ ಪರಿಣಾಮ ಬೀರುತ್ತವೆ. ಸಾಮುದ್ರಿಕ ಶಾಸ್ತ್ರದ ನಂಬಿಕೆಯ ಪ್ರಕಾರ, ಇಂತಹ ವ್ಯಕ್ತಿಗಳು ಕುಟುಂಬ ಜೀವನದಲ್ಲಿ ಅಥವಾ ವೈವಾಹಿಕ ಸಂಬಂಧಗಳಲ್ಲಿ ಮಾನಸಿಕ ಒತ್ತಡ ಹಾಗೂ ಭಿನ್ನಾಭಿಪ್ರಾಯಗಳನ್ನು ಎದುರಿಸಬೇಕಾಗಬಹುದು. ಸಣ್ಣಪುಟ್ಟ ವಿಚಾರಗಳಿಗೂ ಗಂಡ-ಹೆಂಡತಿ ನಡುವೆ ತಪ್ಪು ತಿಳುವಳಿಕೆ ಅಥವಾ ವಾದಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಲ್ಬೆರಳುಗಳ ಮೇಲಿನ ಮಚ್ಚೆಗಳು ಸುಲಭವಾದ ಜೀವನದ ಸೂಚನೆಯಲ್ಲದಿದ್ದರೂ, ಅವು ವ್ಯಕ್ತಿಯನ್ನು ಸದಾ ಕಠಿಣ ಪರಿಶ್ರಮಿ, ಕ್ರಿಯಾಶೀಲ ಹಾಗೂ ಜೀವನದ ಸವಾಲುಗಳನ್ನು ಎದುರಿಸುವ ಧೈರ್ಯಶಾಲಿಯನ್ನಾಗಿ ಮಾಡುತ್ತದೆ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ವಿವರಿಸಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:21 am, Sat, 29 August 26

Follow Us