
ಸಪ್ತಶೃಂಗಿ ದೇವಿ(Saptashrungi Temple): ಈ ದೇವಸ್ಥಾನವು ನಾಸಿಕ್‌ನಲ್ಲಿದೆ. ಸಪ್ತಶೃಂಗಿ ತಾಯಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಸಪ್ತಶೃಂಗಿ ಎಂದರೆ ಏಳು ಪರ್ವತ ಶಿಖರಗಳಲ್ಲಿ ನೆಲೆಸಿರುವವಳೆಂದರ್ಥ. 51 ಶಕ್ತಿಪೀಠಗಳಲ್ಲಿ ಸಪ್ತಶೃಂಗಿ ದೇವಿ ದೇವಾಲಯವೂ ಒಂದು.

ಕಾಮಾಕ್ಯ ದೇವಾಲಯ(Kamakhya Temple): ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಗುವಾಹಟಿ ಬಳಿಯ ನೀಲಾಚಲ ಎಂಬ ಬೆಟ್ಟಗಳಲ್ಲಿ 20 ದೇವಾಲಯಗಳಿವೆ. ಅವುಗಳಲ್ಲಿ ಒಂದು ಕಾಮಾಕ್ಯ ದೇವಿಯ ದೇವಾಲಯ. ಈ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಎರಡು ಕೋಣೆಗಳಿವೆ, ಮೂರು ಮಂಟಪಗಳು ಮತ್ತು ಗರ್ಭಗುಡಿ ಇದೆ, ತಾಯಿ ಸತಿಯ ಯೋನಿಯು ಗರ್ಭಗುಡಿಯಲ್ಲಿ ಬಿದ್ದಿದೆ ಎಂದು ನಂಬಲಾಗಿದೆ.

ಮಾನಸಾ ದೇವಿ ದೇವಸ್ಥಾನ(Manasa Devi Temple): ಈ ದೇವಸ್ಥಾನವು ಹರಿದ್ವಾರದಲ್ಲಿದೆ. ಭಾರತದ ಅತ್ಯಂತ ಪವಿತ್ರವಾದ ದೇವಸ್ಥಾನಗಳಲ್ಲಿ ಇದೂ ಒಂದು. ಈ ದೇವಾಲಯವು ಭಿಲ್ವಾ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಮಾನಸಾ ದೇವಿಯ ಮುಂದೆ ಏನೇ ಪ್ರಾರ್ಥನೆ ಸಲ್ಲಿಸಿದರೂ ತಾಯಿ ನೆರವೇರಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದೇವಾಲಯದ ಸಮೀಪದಲ್ಲಿ ಚಂಡಿ ದೇವಿಯ ದೇವಾಲಯವೂ ಇದೆ.

ನೈನಾ ದೇವಿ ದೇವಸ್ಥಾನ(Naina Devi Temple): ಈ ದೇವಸ್ಥಾನವು ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿದೆ. ನೈನಿ ಸರೋವರದ ಉತ್ತರದ ಅಂಚಿನಲ್ಲಿದೆ. ನವರಾತ್ರಿ ಮತ್ತು ಶ್ರಾವಣ ಅಷ್ಟಮಿಯಂದು ಇಲ್ಲಿ ಭಕ್ತರ ದೊಡ್ಡ ಸರತಿ ಸಾಲು ಇರುತ್ತದೆ. ಇಲ್ಲಿ ಭಕ್ತರು ರಸ್ತೆ ಅಥವಾ ಕೇಬಲ್ ಕಾರ್ ಸೌಲಭ್ಯದ ಮೂಲಕ ಹೋಗಬಹುದು. ಇದು ಕೂಡ 52 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

ವೈಷ್ಣೋ ದೇವಿ ದೇವಾಲಯ(Vaishno Devi temple): ವೈಷ್ಣೋ ದೇವಿ ಸ್ಥಳವು ಉತ್ತರ ಭಾರತದ ಅತ್ಯಂತ ಪೂಜ್ಯ ಮತ್ತು ಪವಿತ್ರ ತಾಣಗಳಲ್ಲಿ ಒಂದು. ಇದು ದುರ್ಗಾ ಮಾತೆಯ ಅತ್ಯಂತ ಪ್ರಸಿದ್ಧ ದೇವಾಲಯವೆಂದು ಪರಿಗಣಿಸಲಾಗಿದೆ. ಜಮ್ಮುವಿನ ತ್ರಿಕೂಟ ಪರ್ವತಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
Published On - 7:15 am, Sat, 11 December 21