ದೀಪಾವಳಿಯ ಹಿಂದಿನ ದಿನ ನರಕ ಚುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಕೆಲವು ಜನರು, ವಿಶೇಷವಾಗಿ ಉತ್ತರ ಪ್ರದೇಶದವರು ಈ ದಿನದಂದು ಛೋಟಿ ದೀಪಾವಳಿ ಎಂದು ಆಚರಿಸುತ್ತಾರೆ. ಇದು ಪ್ರತಿ ವರ್ಷ ಆಶ್ವಯುಜ ಬಹುಳ ಚತುರ್ದಶಿ ದಿನದಂದು ಬರುತ್ತದೆ. ನರಕ ಚತುರ್ದಶಿಯನ್ನು ಕಾಳಿ ಚೌದಾಸ್, ನರಕ ಚೌದಾಸ್, ರೂಪ ಚೌದಾಸ್, ಛೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಕ್ಯಾಲೆಂಡರ್ ಪ್ರಕಾರ, ಈ ವರ್ಷ ನರಕ ಚತುರ್ದಶಿಯನ್ನು ನವೆಂಬರ್ 11 ರ ಶನಿವಾರದಂದು ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ ನರಕ ಚತುರ್ದಶಿಗೆ ವಿಶೇಷವಾದ ಮಹತ್ವವಿದೆ. ನರಕ ಚತುರ್ದಶಿ ದಿನ ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಇದರಿಂದ ಮನೆಯಲ್ಲಿನ ದಾರಿದ್ರ್ಯ ದೂರವಾಗುತ್ತದೆ. ನಕಾರಾತ್ಮಕ ಶಕ್ತಿಯ ಪರಿಣಾಮವು ಕಡಿಮೆಯಾಗುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕತೆ ಹರಡುತ್ತದೆ. ವಾಸ್ತವವಾಗಿ ನರಕ ಚುರ್ದಶಿನಿಯನ್ನು ಆಚರಿಸುವುದರ ಹಿಂದೆ ಒಂದು ಪೌರಾಣಿಕ ಕಥೆಯಿದೆ.
ನಾವು ನರಕ ಚತುರ್ಧಶಿನಿಯನ್ನು ಏಕೆ ಆಚರಿಸುತ್ತೇವೆ?
ನರಕ ಚತುರ್ದಶಿ ಆಚರಿಸುವುದರ ಹಿಂದೆ ಅನೇಕ ಪೌರಾಣಿಕ ಕಥೆಗಳಿವೆ. ಹಿಂದೂ ನಂಬಿಕೆಯ ಪ್ರಕಾರ, ಈ ದಿನ ವಿಷ್ಣು ಶ್ರೀ ಕೃಷ್ಣನ ಅವತಾರದಲ್ಲಿ ತನ್ನ ಪತ್ನಿ ಸತ್ಯಭಾಮೆ ಜೊತೆ ಸೇರಿ ನರಕಾಸುರ ಎಂಬ ರಾಕ್ಷಸನನ್ನು ಕೊಂದನು. ತದನಂತರ, ಶ್ರೀ ಕೃಷ್ಣನು ನರಕಾಸುರನನ್ನು ಕಗ್ಗತ್ತಲೆಯಲ್ಲಿ ಬಂಧಿಯಾಗಿಸಿ, 16 ಸಾವಿರ ಮಹಿಳೆಯರನ್ನು ಮುಕ್ತಗೊಳಿಸಿದನ. ನರಕ ಚತುರ್ದಶಿಯನ್ನು ಆಚರಿಸುವ ಸಂಪ್ರದಾಯವು ಜನರು ರಾಕ್ಷಸ ಆಳ್ವಿಕೆಯ ಕಷ್ಟಗಳಿಂದ ಮುಕ್ತರಾದರು ಎಂಬ ಸಂತೋಷ ಆಚರಿಸುವ ಸಲುವಾಗಿ ಪ್ರಾರಂಭವಾಯಿತು. ಪ್ರತಿ ವರ್ಷ ದೀಪಾವಳಿಯನ್ನು ಹಿಂದಿನ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: Festivals In November 2023 – ನವೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಈ ದಿನ ದೀಪಗಳನ್ನು ಏಕೆ ಹಚ್ಚಬೇಕು?
ಛೋಟಿ ದೀಪಾವಳಿ ಅಥವಾ ನರಕ ಚತುರ್ದಶಿಯ ದಿನದಂದು ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಯಮಧರ್ಮ ರಾಜನ ಹೆಸರಿನಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಹೀಗೆ ಯಮನನ್ನು ಪೂಜಿಸುವುದರಿಂದ ಅಕಾಲಿಕ ಮರಣ ಭಯ ನಿವಾರಣೆಯಾಗುತ್ತದೆ ಮತ್ತು ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಜೀವನದ ತೊಂದರೆಗಳಿಂದ ಮುಕ್ತಿ ಪಡೆಯಲು ನಾವು ಸಂಜೆ ಯಮನ ಹೆಸರಿನ ದೀಪವನ್ನು ಬೆಳಗುತ್ತೇವೆ. ಇದಲ್ಲದೆ ಮನೆಯ ಬಾಗಿಲುಗಳ ಎರಡೂ ಬದಿಯಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ದಿನ ಮನೆಯಲ್ಲಿ ದೀಪವನ್ನು ಹಚ್ಚುವುದು ಮತ್ತು ಯಮ ಧರ್ಮ ದೇವರ ಆಶೀರ್ವಾದಕ್ಕಾಗಿ ಪೂಜೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಜನರ ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಮೇಲೆ ತಿಳಿಸಿದ ಅಂಶಗಳನ್ನು ನೀಡಲಾಗಿದೆ