Deepavali 2023: ದೀಪಾವಳಿಗೆ ಮನೆ ಶುಚಿಗೊಳಿಸುವಾಗ ಈ ವಸ್ತುಗಳನ್ನು ಹೊರಗೆ ಎಸೆಯಬೇಡಿ

|

Updated on: Nov 04, 2023 | 6:56 PM

ದೀಪಾವಳಿಯಂದು ಶುಚಿಗೊಳಿಸುವಾಗ, ಅನೇಕ ಹಳೆಯ ವಸ್ತುಗಳು ಅಥವಾ ಬೇಡವಾದ ವಸ್ತುವನ್ನು ಬಿಸಾಡುವುದುಂಟು. ಆದರೆ ದೀಪಾವಳಿಗೆ ಮನೆ ಶುಚಿಗೊಳಿಸುವಾಗ ಬೇಡ ಎಂದು ಕೆಲ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯುವುದು ಅಶುಭ ಎಂದು ಪರಿಗಣಿಸಲಾಗಿದೆ.

Deepavali 2023: ದೀಪಾವಳಿಗೆ ಮನೆ ಶುಚಿಗೊಳಿಸುವಾಗ ಈ ವಸ್ತುಗಳನ್ನು ಹೊರಗೆ ಎಸೆಯಬೇಡಿ
Deepavali 2023
Image Credit source: Pinterest
Follow us on

ಹಬ್ಬ ಸಮೀಪಿಸುತ್ತಿದ್ದಂತೆ ಮನೆಯ ಮಹಿಳೆಯರು ಮನೆ ಶುಚಿಗೊಳಿಸುವ ಕೆಲಸದಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಮನೆಯ ಪ್ರತೀ ಮೂಲೆ ಮೂಲೆಯನ್ನು ಗುಡಿಸಿ, ಒರೆಸಿ ಫಳ ಫಳ ಹೊಳೆಯುವಂತೆ ಮಾಡುತ್ತಾರೆ. ದೀಪಾವಳಿಯಂದು ವಿಶೇಷ ಶುಚಿಗೊಳಿಸಿದರೆ ಆ ಮನೆಗೆ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಮತ್ತು ಆಕೆಯ ಆಶೀರ್ವಾದ ಸದಾ ಕುಟುಂಬದ ಮೇಲಿರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಆದರೆ ದೀಪಾವಳಿಯಂದು ಶುಚಿಗೊಳಿಸುವಾಗ, ಅನೇಕ ಹಳೆಯ ವಸ್ತುಗಳು ಅಥವಾ ಬೇಡವಾದ ವಸ್ತುವನ್ನು ಬಿಸಾಡುವುದುಂಟು. ಆದರೆ ದೀಪಾವಳಿಗೆ ಮನೆ ಶುಚಿಗೊಳಿಸುವಾಗ ಬೇಡ ಎಂದು ಕೆಲ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯುವುದು ಅಶುಭ ಎಂದು ಪರಿಗಣಿಸಲಾಗಿದೆ. ಈ ಕೆಲ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯುವುದರಿಂದ ಲಕ್ಷ್ಮಿ ದೇವಿ ಕೋಪಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ.

ದೀಪಾವಳಿಯ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವಾಗ ಯಾವ ಪ್ರಮುಖ ವಸ್ತುಗಳನ್ನು ಹೊರಗೆ ಎಸೆಯಬಾರದು?

ಪೊರಕೆ:

ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯು ಲಕ್ಷ್ಮಿ ದೇವಿಗೆ ನೇರವಾಗಿ ಸಂಬಂಧಿಸಿದೆ, ಧನತ್ರಯೋದಶಿಯ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದರ ಜೊತೆಗೆ, ಪೊರಕೆಯನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮನೆ ಶುಚಿಗೊಳಿಸುವಾಗ, ಶುಕ್ರವಾರ ಮತ್ತು ಗುರುವಾರದಂದು ಹಳೆಯ ಪೊರಕೆಗಳನ್ನು ಮನೆಯಿಂದ ಹೊರಗೆ ಎಸೆಯಬಾರದು ಎಂಬುದನ್ನು ನೆನಪಿನಲ್ಲಿಡಿ. ಗುರುವಾರ ಮತ್ತು ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನವೆಂದು ಪರಿಗಣಿಸಲಾಗುತ್ತದೆ.

ನವಿಲು ಗರಿ:

ದೀಪಾವಳಿ ಶುಚಿಗೊಳಿಸುವ ಸಮಯದಲ್ಲಿ ಹಳೆಯ ನವಿಲು ಗರಿ ಸಿಕ್ಕಿದರೆ ಬೇಡವೆಂದು ಹೊರಗೆಸೆಯಬೇಡಿ. ನವಿಲು ಗರಿಯು ಕೃಷ್ಣನಿಗೆ ಬಹಳ ಪ್ರಿಯವಾಗಿದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಲಕ್ಷ್ಮಿ ದೇವಿ ಮತ್ತು ಶ್ರೀಕೃಷ್ಣನ ಆಶೀರ್ವಾದ ಸದಾ ನಿಮ್ಮೊಂದಿರಿಗುತ್ತದೆ ಎಂದು ನಂಬಲಾಗಿದೆ. ತಪ್ಪಾಗಿಯೂ ನವಿಲು ಗರಿಗಳನ್ನು ಹೊರಗೆ ಅಥವಾ ಕಸದಲ್ಲಿ ಬಿಸಾಡಬೇಡಿ, ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ವಾಸ್ತು ದೋಷಗಳೂ ದೂರವಾಗುತ್ತವೆ.

ಇದನ್ನೂ ಓದಿ: ಧನತ್ರಯೋದಶಿಯ ಈ ಶುಭ ಮುಹೂರ್ತದಲ್ಲಿ ಚಿನ್ನ, ಬೆಳ್ಳಿ ಅಥವಾ ಯಾವುದೇ ಗೃಹೋಪಯೋಗಿ ವಸ್ತು ಖರೀದಿಸುವುದು ಮಂಗಳಕರ

ಹಳೆಯ ನಾಣ್ಯಗಳು:

ಆಗಾಗ್ಗೆ ಹಳೆಯ ನಾಣ್ಯಗಳನ್ನು ಸ್ವಚ್ಛಗೊಳಿಸುವಾಗ ಸುತ್ತಲೂ ಬಿದ್ದಿರುವುದನ್ನು ಕಾಣುತ್ತೇವೆ, ಆದರೆ ಹಳೆಯ ನಾಣ್ಯಗಳು ಬಳಕೆಯಲ್ಲಿರದ ಕಾರಣ ಎಸೆಯುವುದುಂಟು. ದೀಪಾವಳಿಯಂದು ಲಕ್ಷ್ಮಿ ದೇವಿಯ ಪೂಜೆಯಲ್ಲಿ ನಾಣ್ಯಗಳನ್ನು ಬಳಸಲಾಗುತ್ತದೆ. ಇವುಗಳನ್ನು ನಿಷ್ಪ್ರಯೋಜಕವೆಂದು ಪರಿಗಣಿಸಿ ಎಸೆದರೆ, ಇದು ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡಬಹುದು ಎಂದು ನಂಬಲಾಗಿದೆ.

ಕೆಂಪು ಬಟ್ಟೆ:

ಯಾವುದೇ ಹಳೆಯ ಕೆಂಪು ಬಟ್ಟೆ ಕಂಡುಬಂದರೆ, ಅದನ್ನು ಎಸೆಯದೆ ಸುರಕ್ಷಿತವಾಗಿ ಇರಿಸಿ. ಕೆಂಪು ಬಣ್ಣವನ್ನು ಅದೃಷ್ಟ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೀಪಾವಳಿ ಪೂಜೆಯ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಕೆಂಪು ಬಟ್ಟೆಯಲ್ಲಿ ಮಾತ್ರ ಧರಿಸಬೇಕು. ಇದರೊಂದಿಗೆ, ದೇವಿಯ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.

ಆಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: