Navratri 2023: ದಸರಾದಂದು ತ್ವಚೆಯ ಕಾಂತಿಯನ್ನು ಹೆಚ್ಚಿಸುವುದು ಹೇಗೆ? ಮನೆಯಲ್ಲಿಯೇ ತಯಾರಿಸಿ ಫೇಸ್ ಪ್ಯಾಕ್ 

Festival Skin Care: ಹಬ್ಬ ಎಂದಾಕ್ಷಣ, ಹೆಂಗಳೆಯರು ಸಾಂಪ್ರದಾಯಿಕ ಉಡುಗೆ ಹಾಗೂ ಆಭರಣ ತೊಟ್ಟು ಚೆಂದವಾಗಿ ತಯಾರಾಗುತ್ತಾರೆ.  ಸುಂದರವಾಗಿ ಅಲಂಕಾರ ಮಾಡಿಕೊಳ್ಳುವಂತೆ ಹಬ್ಬದ ದಿನ ನಿಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸಲು  ಮುಖದ ಹೊಳಪನ್ನು  ಹೆಚ್ಚಿಸುವುದು ಕೂಡ ಬಹಳ ಮುಖ್ಯ. ಅದಕ್ಕಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗುವ ಬದಲು ಮನೆಯಲ್ಲಿಯೇ ಕೆಲವು ಫೇಸ್ ಸರಳ ಪ್ಯಾಕ್ಗಳನ್ನು ಪ್ರಯತ್ನಿಸುವ ಮೂಲಕ ಕಾಂತಿಯುತ ತ್ವಚೆಯನ್ನು ಪಡೆಯಬಹುದು. 

Navratri 2023: ದಸರಾದಂದು ತ್ವಚೆಯ ಕಾಂತಿಯನ್ನು ಹೆಚ್ಚಿಸುವುದು ಹೇಗೆ? ಮನೆಯಲ್ಲಿಯೇ ತಯಾರಿಸಿ ಫೇಸ್ ಪ್ಯಾಕ್ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2023 | 5:00 PM

ಇನ್ನೇನು ಕೆಲವೇ ದಿನಗಳಲ್ಲಿ ನವರಾತ್ರಿ ಹಬ್ಬ (Navratri)  ಶುರುವಾಗಲಿದೆ. 9 ದಿನಗಳ ಕಾಲ ನಡೆಯುವ ನವದುರ್ಗೆಯರ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 15 ರಿಂದ ಅಕ್ಟೋಬರ್ 24ರ ವರೆಗೆ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬ ಎಂದಾಕ್ಷಣ ಹೆಂಗಳೆಯರು ಸಾಂಪ್ರದಾಯಿಕ ಉಡುಗೆ ಹಾಗೂ  ಆಭರಣ  ತೊಟ್ಟು  ಚೆಂದವಾಗಿ ತಯಾರಾಗುತ್ತಾರೆ. ಸುಂದರವಾಗಿ ಅಲಂಕಾರ ಮಾಡಿಕೊಳ್ಳುವಂತೆ ಹಬ್ಬದ ದಿನ ನಿಮ್ಮ ಸೌಂದರ್ಯವನ್ನು ದ್ವಿಗುಣಗೊಳಿಸಲು  ಮುಖದ ಹೊಳಪನ್ನು  ಹೆಚ್ಚಿಸುವುದು ಕೂಡ ಬಹಳ ಮುಖ್ಯ.  ಆದರೆ ಹೆಚ್ಚಿನ ಮಹಿಳೆಯರಿಗೆ  ಹಬ್ಬ ಹರಿದಿನಗಳ ಸಮಯದಲ್ಲಿ ಮನೆಗಳಲ್ಲಿ ಸಾಕಷ್ಟು ಕೆಲಸಗಳಿರುತ್ತವೆ. ದೇವರನ್ನು ಮನೆಗೆ ಸ್ವಾಗತಿಸಲು ಸಂಪೂರ್ಣ ಮನೆಯನ್ನು ಶುಚಿಗೊಳಿಸುವುದರಿಂದ ಹಿಡಿದು, ದೇವರಿಗೆ ನೈವೇದ್ಯ ಇಡಲು ರುಚಿಕರ ಭಕ್ಷ್ಯ ತಯಾರಿಸುವುದು, ಹೊಸ ಬಟ್ಟೆಗಳ  ಖರೀದಿ ಹೀಗೆ ಇದರಲ್ಲಿಯೇ ಸಮಯ ಕಳೆದು ಹೋಗುತ್ತದೆ.  ಇಂತಹ ಸಂದರ್ಭದಲ್ಲಿ ಪಾರ್ಲರ್ಗೆ ಹೋಗಿ ಫೇಸ್ ಪ್ಯಾಕ್ ಅಥವಾ ಇನ್ನಾವುದೇ ಸ್ಕಿನ್ ಕೇರ್ ಮಾಡುವಷ್ಟು ಪುರುಸೊತ್ತು ಇರೊದಿಲ್ಲ. ಹೀಗೀರುವಾಗ ಈ ಬಾರಿಯ ನವರಾತ್ರಿ ಹಬ್ಬದ  ಸಮಯದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸಲು ಬಯಸಿದರೆ ಮನೆಯಲ್ಲಿಯೇ ಸಿಗುವ ಕೆಲವೊಂದು ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್​​ಗಳನ್ನು ಪ್ರಯತ್ನಿಸಿ.

ಹಬ್ಬದ ಸಮಯದಲ್ಲಿ ಮುಖದ ಹೊಳಪನ್ನು ಹೆಚ್ಚಿಸಲು ಈ ಕೆಲವು ಫೇಸ್ ಪ್ಯಾಕ್​​ಗಳನ್ನು ಪ್ರಯತ್ನಿಸಿ

ಕಡ್ಲೆ ಹಿಟ್ಟು ಮತ್ತು ಅರಶಿನ ಫೇಸ್ ಪ್ಯಾಕ್:

ಕಡ್ಲೆ ಹಿಟ್ಟನ್ನು ಚರ್ಮಕ್ಕೆ ಅತ್ಯುತ್ತಮ ನೈಸರ್ಗಿಕ ಸ್ಕ್ರಬ್ ಎಂದು ಪರಿಗಣಿಸಲಾಗಿದೆ. ಹಾಗೂ ಅರಶಿನ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಮುಖದ ಕಪ್ಪುಕಲೆಗಳನ್ನು ತೆಗೆದುಹಾಕಲು ತುಂಬಾ ಸಹಕಾರಿಯಾಗಿದೆ. ಈ ಅದ್ಭುತ ಫೇಸ್ ಪ್ಯಾಕ್ ತಯಾರಿಸಲು ಎರಡು ಚಮಚ ಕಡ್ಲೆ ಹಿಟ್ಟಿಗೆ ಒಂದು ಚಮಚ ಅರಶಿನ ಪುಡಿಯನ್ನು ಹಾಕಿ ಹಾಗೂ ಈ ಮಿಶ್ರಣಕ್ಕೆ  ಹಾಲು ಅಥವಾ ಕೆಲವು ಹನಿ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು, ತಯಾರಾದ ಪ್ಯಾಕ್ನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್:

ಮುಖದ ಹೊಳಪನ್ನು ಹೆಚ್ಚಿಸಲು ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್  ನಿಮಗೆ ತುಂಬಾ ಸಹಕಾರಿ. ಇದಕ್ಕಾಗಿ ಒಂದು ಚಮಚ ಅಕ್ಕಿ ಹಿಟ್ಟು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನು ತುಪ್ಪ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಮತ್ತು ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಈ ಪ್ಯಾಕ್ ಒಣಗುತ್ತಾ ಬಂದಂತೆ ಮುಖಕ್ಕೆ ಮೃದುವಾಗಿ ಮಸಾಜ್ ಮಾಡುತ್ತಾ ಪ್ಯಾಕ್ ತೆಗೆಯಿರಿ. ಈ ರೀತಿ ಮಸಾಜ್ ಮಾಡುವುದರಿಂದ ಮುಖದಲ್ಲಿನ ಸತ್ತ ಚರ್ಮವನ್ನು ತೆಗೆದುಹಾಕಬಹುದಲ್ಲದೆ,  ಇದರಿಂದ ಚರ್ಮವು ಮೃದುವಾಗುತ್ತದೆ ಮತ್ತು ಕಾಂತಿಯುತವಾಗಿ ಕಂಗೊಳಿಸುತ್ತದೆ.

ಇದನ್ನೂ ಓದಿ: ನವರಾತ್ರಿಯ ಉಪವಾಸದ ವೇಳೆ ಏನು ಮಾಡಬೇಕು? ಏನು ಮಾಡಬಾರದು?

ಬಿಳಿ ಎಳ್ಳಿನ ಫೇಸ್ ಪ್ಯಾಕ್:

ಬಿಳಿ ಎಳ್ಳನ್ನು ರಾತ್ರಿಯಿಡೀ ನೆನೆಸಿಟ್ಟು, ಅದನ್ನು ಬೆಳಗ್ಗೆ ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಈ ಪೇಸ್ಟ್ಗೆ ಸ್ವಲ್ಪ ಅರಶಿನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಎಳ್ಳಿನ ಫೇಸ್ ಪ್ಯಾಕ್ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಶುಷ್ಕತೆ ನಿವಾರಣೆಯಾಗುತ್ತದೆ. ಮತ್ತು ಇದು ತ್ವಚೆಯನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.

ನಿಂಬೆ ಮತ್ತು ಟೊಮೆಟೊ ಫೇಸ್ ಪ್ಯಾಕ್:

ನಿಂಬೆ ಮತ್ತು ಟೊಮೆಟೊ ಎರಡರಲ್ಲೂ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಮುಖದಲ್ಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಈ ಪ್ಯಾಕ್ ಮಾಡಲು ಟೊಮೆಟೊ ತಿರುಳುಗಳನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಬಾಳೆ ಹಣ್ಣು ಹಾಗೂ ಜೇನುತುಪ್ಪ ಫೇಸ್ ಪ್ಯಾಕ್:

ಈ ಫೇಸ್ ಪ್ಯಾಕ್ ಮುಖದ ಕಲೆಗಳನ್ನು ತೆಗೆದುಹಾಕಿ ತ್ವಚೆಯು ಹೊಳೆಯುವಂತೆ ಕಾಣಲು ಸಹಕಾರಿಯಾಗಿದೆ. ಈ ಫೇಸ್ ಪ್ಯಾಕ್ ತಯಾರಿಸಲು ಅರ್ಧ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ, ಸ್ವಲ್ಪ ಸಮಯದ ಬಳಿಕ ಮುಖವನ್ನು ತೊಳೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ