Navratri Fasting: ನವರಾತ್ರಿಯ ಉಪವಾಸದ ವೇಳೆ ಏನು ಮಾಡಬೇಕು? ಏನು ಮಾಡಬಾರದು?

ನವರಾತ್ರಿ ಉಪವಾಸದ ನಿಯಮಗಳು ಮತ್ತು ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆ ಬಗ್ಗೆ ಮಾಹಿತಿ ಇಲ್ಲಿದೆ. ನವರಾತ್ರಿಯ ವೇಳೆ ನೀವು ಏನು ಸೇವಿಸಬೇಕು? ಏನು ಸೇವಿಸಬಾರದು? ವ್ರತವನ್ನು ಹೇಗೆ ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.

Navratri Fasting: ನವರಾತ್ರಿಯ ಉಪವಾಸದ ವೇಳೆ ಏನು ಮಾಡಬೇಕು? ಏನು ಮಾಡಬಾರದು?
ನವರಾತ್ರಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 13, 2023 | 4:29 PM

ನವರಾತ್ರಿಯನ್ನು ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಅದರಲ್ಲೂ ಕರ್ನಾಟಕದಲ್ಲಿ ನಾಡಹಬ್ಬ ದಸರಾ (Dasara 2023) ಸಂಭ್ರಮ ಬೇರೆ ರಾಜ್ಯಗಳಿಗಿಂತಲೂ ವಿಭಿನ್ನವಾಗಿರುತ್ತದೆ. ಮೈಸೂರು, ಮಡಿಕೇರಿ, ಶಿವಮೊಗ್ಗ, ಮಂಗಳೂರು ದಸರಾಗಳು ವಿಶೇಷವಾದವುಗಳು. ನವರಾತ್ರಿಯಲ್ಲಿ (Navaratri Festival) 9 ದಿನಗಳ ಕಾಲ ದೇವಿಯ ಭಕ್ತರು ವ್ರತ, ಉಪವಾಸಗಳನ್ನು ಮಾಡುತ್ತಾರೆ. ಮೊದಲ ದಿನ ಕಲಶ ಸ್ಥಾಪನೆ ಮಾಡಿ, ಭಕ್ತರು ತಮ್ಮ ಕುಟುಂಬದ ಸಂಪ್ರದಾಯಗಳ ಪ್ರಕಾರ 9 ದಿನಗಳ ಉಪವಾಸ ಮಾಡುತ್ತಾರೆ. ಅಥವಾ ಇನ್ನು ಕೆಲವರು ಮೊದಲ ಮತ್ತು ಕೊನೆಯ ದಿನ ಮಾತ್ರ ಉಪವಾಸವನ್ನು ಆಚರಿಸುತ್ತಾರೆ.

ನವರಾತ್ರಿ ಉಪವಾಸದ ನಿಯಮಗಳು ಮತ್ತು ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆ ಬಗ್ಗೆ ಮಾಹಿತಿ ಇಲ್ಲಿದೆ. ನವರಾತ್ರಿಯ ವೇಳೆ ನೀವು ಉಪವಾಸವಿಲ್ಲದಿದ್ದರೂ ನವರಾತ್ರಿಯ ಸಮಯದಲ್ಲಿ ಅನುಸರಿಸಬೇಕಾದ ಸಾಮಾನ್ಯ ನಿಯಮಗಳ ಮಾಹಿತಿ ಇಲ್ಲಿದೆ.

ಅನೇಕ ಜನರು ನವರಾತ್ರಿ ಹಬ್ಬದ ಸಮಯದಲ್ಲಿ ದುರ್ಗಾ ಮಾತೆ ಮತ್ತು ಆ ದೇವಿಯ ವಿವಿಧ ರೂಪಗಳನ್ನು ಪೂಜಿಸುತ್ತಾರೆ. ಆದರೆ ಉಪವಾಸ ಮಾಡಲು ಇಷ್ಟಪಡುವುದಿಲ್ಲ ಅಥವಾ ಅವರ ಆರೋಗ್ಯದ ಸ್ಥಿತಿಯಿಂದಾಗಿ ಉಪವಾಸ ಮಾಡಲು ಸಾಧ್ಯವಾಗುವುದಿಲ್ಲ. ನೀವು ವ್ರತವನ್ನು ಪಾಲಿಸದಿದ್ದಾಗ ಅನುಸರಿಸಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: ನವರಾತ್ರಿ ಬಣ್ಣಗಳ ಹಿಂದಿನ ಅರ್ಥ; ಈ ಹಬ್ಬ ಜೀವನ ಮತ್ತು ಪ್ರೀತಿಯ ಆಚರಣೆ

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಿಟ್ಟುಬಿಡಿ:

ನವರಾತ್ರಿಯ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಅಣಬೆಗಳಂತಹ ಕೆಲವು ಇತರ ತರಕಾರಿಗಳನ್ನು ಸೇವಿಸಬೇಡಿ. ಹಬ್ಬದ ಸಮಯದಲ್ಲಿ, ನಿಮ್ಮಲ್ಲಿ ಭಕ್ತಿಯನ್ನು ತುಂಬುವ ಮತ್ತು ನಿಮ್ಮ ವ್ಯವಸ್ಥೆಯನ್ನು ನಿರ್ವಿಷಗೊಳಿಸುವ ಸಾತ್ವಿಕ ಆಹಾರವನ್ನು ಸೇವಿಸಿ.

ಕ್ಷೌರ ಮಾಡಬೇಡಿ ಅಥವಾ ಉಗುರುಗಳನ್ನು ಕತ್ತರಿಸಬೇಡಿ:

ನವರಾತ್ರಿ ಒಂದು ಮಂಗಳಕರ ಸಂದರ್ಭವಾಗಿದೆ. ಈ ಸಮಯದಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕ್ಷೌರ ಮಾಡುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಇದು ದುರದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಮದ್ಯ ಮತ್ತು ಮಾಂಸಾಹಾರ ಸೇವಿಸಬೇಡಿ:

ನವರಾತ್ರಿಯ ಸಮಯದಲ್ಲಿ ಆಲ್ಕೋಹಾಲ್ ಮತ್ತು ಮಾಂಸಾಹಾರಿ ಆಹಾರಗಳನ್ನು ಸೇವಿಸುವಂತಿಲ್ಲ. ಏಕೆಂದರೆ ಅವುಗಳು ತಾಮಸಿಕ ಆಹಾರಗಳ ವರ್ಗಕ್ಕೆ ಬರುತ್ತವೆ.

ಗಾಸಿಪ್ ಮಾಡಬೇಡಿ:

ನವರಾತ್ರಿಯ ಸಮಯದಲ್ಲಿ ಆಹಾರ ಮತ್ತು ಸುತ್ತಮುತ್ತಲಿನ ಪರಿಶುದ್ಧತೆ ಮಾತ್ರವಲ್ಲ, ಆಲೋಚನೆಗಳ ವಿಷಯಗಳ ಶುದ್ಧತೆಯೂ ಮುಖ್ಯವಾಗಿದೆ. ಇತರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಮತ್ತು ಯೋಚಿಸುವುದು ಮತ್ತು ಗಾಸಿಪ್ ಮಾಡುವುದನ್ನು ಬಿಟ್ಟುಬಿಡಿ.

ಉಪವಾಸ ಮಾಡುವವರಿಗೆ ನವರಾತ್ರಿ ನಿಯಮಗಳು:

1. ಸಾತ್ವಿಕ ಆಹಾರಗಳನ್ನು ಸೇವಿಸಿ:

ನವರಾತ್ರಿಯ ಸಮಯದಲ್ಲಿ, ಗೋಧಿ, ಅಕ್ಕಿ, ಸಂಸ್ಕರಿಸಿದ ಉಪ್ಪು ಮತ್ತು ಬದನೆ, ಬೆಂಡೆಕಾಯಿ, ಅಣಬೆಗಳಂತಹ ಹೆಚ್ಚಿನ ತರಕಾರಿಗಳನ್ನು ತಿನ್ನುವುದಿಲ್ಲ. ವ್ರತ ಸ್ನೇಹಿ ಧಾನ್ಯಗಳಾದ ರಾಗಿ, ಸಮಕ್ ಚಾವಲ್, ಸಿಂಗಾರ ಅಟ್ಟ, ಸಾಬುದಾನ, ಫರಾಲಿ ಹಿಟ್ಟು, ಅಮರಂಥ್ ಮತ್ತು ಬಾಳೆಹಣ್ಣು, ಸೇಬು, ಕಿತ್ತಳೆ ಇತ್ಯಾದಿ ಹಣ್ಣುಗಳನ್ನು ಸೇವಿಸಬಹುದು.

ಇದನ್ನೂ ಓದಿ: ನವರಾತ್ರಿಗೆ ಮಧುಮೇಹಿಗಳು ಉಪವಾಸ ಮಾಡಬಹುದೇ?

2. ಬೆಳಿಗ್ಗೆ ಮತ್ತು ಸಂಜೆ ಆರತಿ ಮಾಡಿ:

ನವರಾತ್ರಿಯ ಸಮಯದಲ್ಲಿ ಅಖಂಡ ದೀಪವನ್ನು ಬೆಳಗಿಸಬೇಕು. ಆದರೆ ಅದು ಸಾಧ್ಯವಾಗದಿದ್ದರೆ, ದುರ್ಗಾ ದೇವಿ ಮತ್ತು ಅವಳ ವಿಭಿನ್ನ ಅವತಾರಗಳಿಗೆ ಬೆಳಿಗ್ಗೆ ಮತ್ತು ಸಂಜೆ ಆರತಿಯನ್ನು ಮಾಡಬಹುದು. ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಇವು ಆದಿ ಶಕ್ತಿಯ 9 ರೂಪಗಳು.

3. ಕಲಶ ಸ್ಥಾಪನೆ:

ನವರಾತ್ರಿಯ ಮೊದಲ ದಿನ ಕಲಶ ಸ್ಥಾಪನೆ ಅಥವಾ ಘಟಸ್ಥಾಪನೆ ಮಾಡಲಾಗುತ್ತದೆ. ಇದು ಹಬ್ಬದ ಮಹತ್ವದ ಆಚರಣೆಗಳಲ್ಲಿ ಒಂದಾಗಿದೆ.

4. ದುರ್ಗೆಗೆ ಕೆಂಪು ಹೂವುಗಳು ಮತ್ತು ಕೆಂಪು ಬಟ್ಟೆಗಳು:

ನವರಾತ್ರಿಯ ಸಮಯದಲ್ಲಿ ದುರ್ಗೆಯ ವಿವಿಧ ಅವತಾರಗಳನ್ನು ಪ್ರತಿ ದಿನ ಪೂಜಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ಸೂಚಿಸಲಾದ ದುರ್ಗೆಯ ಎಲ್ಲಾ ಅವತಾರಗಳಿಗೆ ಕೆಂಪು ಬಟ್ಟೆಗಳನ್ನು ಹಾಕಬೇಕು ಮತ್ತು ಕೆಂಪು ಹೂವುಗಳನ್ನು ಅರ್ಪಿಸಬೇಕು.

ನವರಾತ್ರಿಯಲ್ಲಿ ಯಾವ ಆಹಾರ ಸೇವಿಸಬೇಕು?:

ಆಲೂಗಡ್ಡೆ, ಸಿಹಿ ಗೆಣಸು, ಸೋರೆಕಾಯಿ, ಕುಂಬಳಕಾಯಿ, ಪಾಲಕ್ ಸೊಪ್ಪು, ಸೌತೆಕಾಯಿ ಮತ್ತು ಕ್ಯಾರೆಟ್ ಸೇವಿಸಬೇಕು.

ನವರಾತ್ರಿಯಲ್ಲಿ ಯಾವ ಆಹಾರ ಸೇವಿಸಬಾರದು?:

ಈರುಳ್ಳಿ, ಬೆಳ್ಳುಳ್ಳಿ, ಬೆಂಡೆಕಾಯಿ, ಬದನೆ, ಅಣಬೆ, ಗೋಧಿ, ಅಕ್ಕಿ, ರವೆ, ಮೈದಾ ಹಿಟ್ಟು, ಜೋಳದ ಹಿಟ್ಟು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಉಪವಾಸದ ಸಮಯದಲ್ಲಿ ಜನರು ಸೇವಿಸಬಾರದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ