Narasimha Jayanti 2024: ನರಸಿಂಹ ಹಿರಣ್ಯ ಕಶ್ಯಪನನ್ನು ಹೊಸ್ತಿಲಿನಲ್ಲಿಯೇ ಏಕೆ ಕೊಂದ? ವಿಷ್ಣುವಿನ ಈ ಅವತಾರದ ಹಿನ್ನೆಲೆಯೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2024 | 4:31 PM

ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನದಂದು ಬಹಳ ಉತ್ಸಾಹದಿಂದ ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡಿ ವಿಷ್ಣುವಿನ ಅವತಾರವಾದ ನರಸಿಂಹ ದೇವರನ್ನು ಪೂಜಿಸುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು, ದುಃಖಗಳು ಮತ್ತು ರೋಗಗಳು ಪರಿಹಾರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ.

Narasimha Jayanti 2024: ನರಸಿಂಹ ಹಿರಣ್ಯ ಕಶ್ಯಪನನ್ನು ಹೊಸ್ತಿಲಿನಲ್ಲಿಯೇ ಏಕೆ ಕೊಂದ? ವಿಷ್ಣುವಿನ ಈ ಅವತಾರದ ಹಿನ್ನೆಲೆಯೇನು?
Follow us on

ಹಿಂದೂ ಧರ್ಮದಲ್ಲಿ, ನರಸಿಂಹ ಜಯಂತಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನದಂದು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಉಪವಾಸ ಮಾಡಿ ವಿಷ್ಣುವಿನ ಅವತಾರವಾದ ನರಸಿಂಹ ದೇವರನ್ನು ಪೂಜಿಸುವ ಸಂಪ್ರದಾಯವಿದೆ. ಈ ರೀತಿ ಮಾಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು, ದುಃಖಗಳು ಮತ್ತು ರೋಗಗಳು ಪರಿಹಾರವಾಗುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ.

ನರಸಿಂಹ ಜಯಂತಿಯಂದು ವಿಶೇಷ ಯೋಗ;

ಈ ಬಾರಿ ನರಸಿಂಹ ಜಯಂತಿಯಂದು ರವಿ ಯೋಗವಿದ್ದು, ಸ್ವಾತಿ ನಕ್ಷತ್ರವೂ ಬಂದಿದೆ. ಮೇ 22 ರಂದು ಬೆಳಿಗ್ಗೆ 05:46 ರಿಂದ ಮರುದಿನ ಬೆಳಿಗ್ಗೆ 05:27 ರವರೆಗೆ ರವಿ ಯೋಗ ಇರುತ್ತದೆ. ಚಿತ್ರ ನಕ್ಷತ್ರವು ಬೆಳಿಗ್ಗೆ 05:46 ರವರೆಗೆ ಇರುತ್ತದೆ. ಅದರ ನಂತರ ಸ್ವಾತಿ ನಕ್ಷತ್ರವಿದೆ, ಇದು ಮೇ 22 ರಂದು ಬೆಳಿಗ್ಗೆ 07:47 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ನರಸಿಂಹ ಜಯಂತಿಯನ್ನು ಮೇ 22 ರಂದು ಆಚರಣೆ ಮಾಡಲಾಗುತ್ತದೆ.

ಈ ರೀತಿ ಪೂಜೆ ಮಾಡಿ;

-ನರಸಿಂಹ ಜಯಂತಿಯಂದು, ಬಿಳಿಗ್ಗೆ ಮತ್ತು ಸಂಜೆ ನರಸಿಂಹ ದೇವರನ್ನು ಪೂಜಿಸುವ ಸಂಪ್ರದಾಯವಿದೆ.

-ಸಂಜೆ ಅಥವಾ ಬೆಳಿಗ್ಗೆ ಪೂಜೆ ಮಾಡುವ ಮೊದಲು, ಸ್ನಾನ ಮಾಡಿ ಮತ್ತು ಪೂಜಾ ಸ್ಥಳದಲ್ಲಿ ನರಸಿಂಹ ದೇವರ ವಿಗ್ರಹ ಅಥವಾ ಚಿತ್ರವನ್ನು ಇಟ್ಟುಕೊಳ್ಳಿ.

-ವಿಗ್ರಹವಿದ್ದರೆ ಅದಕ್ಕೆ ಪಂಚಾಮೃತದಿಂದ ಅಭಿಷೇಕ ಮಾಡಿ ತಿಲಕವನ್ನು ಹಚ್ಚಿ.

-ಈ ದಿನ ಸಾಧ್ಯವಾದರೆ, ದೇವರ ಮುಂದೆ ತುಪ್ಪದ ದೀಪ ಹಚ್ಚಿಡಿ.

-ಕೊನೆಯಲ್ಲಿ, ದೇವರಿಗೆ ನೈವೇದ್ಯವನ್ನು ಅರ್ಪಿಸಿ, ಆರತಿ ಮಾಡಿ.

ಈ ಮಂತ್ರಗಳನ್ನು ಪಠಿಸಿ

-ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ|
ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ||

-ಓಂ ಉಗ್ರ ನರಸಿಂಹಾಯ ವಿದ್ಮಹೇ|
ವಜ್ರ-ನಖಾಯ ಧೀಮಹಿ|
ತನ್ನೋ ನರಸಿಂಹಃ ಪ್ರಚೋದಯಾತ್

ಈ ಮಂತ್ರಗಳನ್ನು ಪಠಣೆ ಮಾಡುವುದರಿಂದ ಭೂತ – ಪಿಶಾಚಿಯ ಭಯ ನಿಮ್ಮನ್ನು ಕಾಡದು. ಅಕಾಲಿಕ ಮರಣದ ಭಯ, ಗುಣಪಡಿಸಲಾಗದ ರೋಗ ಮತ್ತು ದೊಡ್ಡ ವಿಪತ್ತುಗಳಿಂದ ಮುಕ್ತರಾಗುತ್ತೀರಿ. ಇದರೊಂದಿಗೆ ನಿಮ್ಮ ಜೀವನದಲ್ಲಿ ಶಾಂತಿ ಸಿಗುತ್ತದೆ.

ಪುರಾಣದಲ್ಲಿ ಹೇಳಿರುವುದೇನು?

ದಂತಕಥೆಯ ಪ್ರಕಾರ, ವಿಷ್ಣು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ನರಸಿಂಹನ ಅವತಾರ ತಾಳಿದನು ಎಂಬ ನಂಬಿಕೆ ಇದೆ. ನರಸಿಂಹನ ಅವತಾರದಲ್ಲಿ, ಅರ್ಧ ದೇಹ ಮಾನವನದ್ದು ಉಳಿದ ಅರ್ಧ ಸಿಂಹದ ರೂಪವಾಗಿತ್ತು ಇದಕ್ಕೆ ಕಾರಣ. ಪ್ರಹ್ಲಾದನ ತಂದೆ ಹಿರಣ್ಯಕಶ್ಯಪು ಪಡೆದಂತಹ ವರ. ಆತ ತನ್ನ ಮರಣ ಯಾವುದೇ ಪ್ರಾಣಿ, ಪಕ್ಷಿ, ಮನುಷ್ಯ, ದೇವತೆ, ದೈತ್ಯ ನಾಗಾದಿಗಳಿಂದಲೂ ನನಗೆ ಮರಣವು ಪ್ರಾಪ್ತವಾಗಬಾರದು. ಒಳಗಾಗಲೀ ಹೊರಗಾಗಲಿ, ಹಗಲು- ರಾತ್ರಿಗಳಲ್ಲಾಗಲಿ, ಯಾವುದೇ ಶಸ್ತ್ರ ಅಸ್ತ್ರಗಳಿಂದಾಗಲಿ, ಭೂಮಿಯಾಕಾಶಾದಿಗಳಲ್ಲಿ ನನಗೆ ಮರಣ ಉಂಟಾಗದಿರಲಿ. ಯಾವುದೇ ಎದುರಾಳಿಗಳಿಲ್ಲದೆ ಏಕಚ್ಛತ್ರಾಧಿಪತಿಯಾಗಿ ಮೆರೆಯುವಂತೆ ವರವನ್ನು ಕರುಣಿಸು ಎಂದು ಬ್ರಹ್ಮದೇವನಲ್ಲಿ ಬೇಡಿದ್ದನು. ಹಾಗಾಗಿ ಶ್ರೀ ಹರಿಯು ನರಸಿಂಹನ ವಿಶಿಷ್ಟ ರೂಪ ಪಡೆದುಕೊಂಡು ಮಧ್ಯಾಹ್ನದ ಸಮಯದಲ್ಲಿ ಕಂಬವನ್ನು ಒಡೆದು ಪ್ರತ್ಯಕ್ಷನಾಗಿ ಹಿರಣ್ಯಕಶ್ಯಪನನ್ನು ಮನೆಯ ಹೊಸ್ತಿಲಲ್ಲಿ, ತೊಡೆಯ ಮೇಲೆ ಮಲಗಿಸಿ ತನ್ನ ಎರಡೂ ಕೈಗಳಲ್ಲಿರುವ ಉಗುರುಗಳಿಂದ ದೇಹವನ್ನು ಇಬ್ಬಾಗ ಮಾಡಿದನು. ಈ ಕಾರಣಕ್ಕಾಗಿ, ಶ್ರೀ ಹರಿ ನರಸಿಂಹನ ಅತ್ಯಂತ ವಿಶಿಷ್ಟ ರೂಪವನ್ನು ತೆಗೆದುಕೊಂಡಿದ್ದನು.

ಇದನ್ನೂ ಓದಿ; ಮಹಿಳೆಯರು ಸೀರೆಯ ಸೆರಗಿನಲ್ಲಿ ಪ್ರಸಾದ, ಮಂತ್ರಾಕ್ಷತೆ ತೆಗೆದುಕೊಳ್ಳುವುದೇಕೆ? ಇದರ ಹಿನ್ನಲೆಯೇನು?

ನರಸಿಂಹ ಜಯಂತಿಯ ಮಹತ್ವ

ಈ ದಿನ ನರಸಿಂಹ ದೇವರನ್ನು ಪೂಜಿಸುವುದರಿಂದ ಭಕ್ತರಲ್ಲಿನ ಭಯ ದೂರವಾಗುತ್ತದೆ ಎಂದು ನಂಬಲಾಗಿದೆ. ಭಗವಾನ್ ನರಸಿಂಹನ ಕೃಪೆಯಿಂದ, ಜೀವನದಲ್ಲಿರುವ ತೊಂದರೆಗಳು ದೂರವಾಗುತ್ತದೆ. ಆತ ಬೇಡಿ ಬಂದ ಭಕ್ತರನ್ನು ರಕ್ಷಿಸುತ್ತಾನೆ. ಇದಲ್ಲದೆ, ನರಸಿಂಹ ಜಯಂತಿಯಂದು ಉಪವಾಸ ಮತ್ತು ನರಸಿಂಹ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ಸದಾಕಾಲ ಇರುತ್ತದೆ. ಗ್ರಹ ದೋಷಗಳಿಂದ ಪರಿಹಾರ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ