
ಜಂಬೂಸವಾರಿ ಬನ್ನಿ ಮಂಟಪ ತಲುಪಿದೆ. ಈ ಮೂಲಕ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ನಡೆಯಿತು. ಅರಮನೆಯಿಂದ ಬನ್ನಿಮಂಟಪದ ವರೆಗೆ ಒಟ್ಟು 2 ಗಂಟೆ ಕಾಲ ಜಂಬೂಸವಾರಿ ನಡೆದಿದ್ದು, ಜಂಬೂಸವಾರಿ ಬನ್ನಿಮಂಟಕ್ಕೆ ತಲುಪಿದ ಬಳಿಕ ಪೊಲೀಸ್ರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು.
ಜಂಬೂ ಸವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಜಂಬೂ ಸವಾರಿ ಅರಮನೆಯಿಂದ ಹೊರಟು ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಿದೆ. ಈ ಮೂಲಕ 2022ನೇ ಸಾಲಿನ ಮೈಸೂರು ದಸರಾ ಜಂಬೂಸವರಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಎರಡು ವರ್ಷ ಕರೋನಾದಿಂದ ಕಳೆಗುಂದಿದ್ದ(Mysore Dasara) ಜಂಬೂಸವಾರಿ ಈ ಭಾರಿ ಬಹಳ ವಿಜೃಂಭಣೆಯಿಂದ ನಡೆಯಿತು. ಜಂಬೂಸವಾರಿ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ರು, ಹಾಗೇ ಜಂಬೂಸವಾರಿ ಮುಂದೆ ಕಲಾ ತಂಡಗಳು ಸಹ ಮೆರಗು ನೀಡಿದವು. ಇದೆಲ್ಲವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡು, ತಾಯಿ ಚಾಮುಂಡೇಶ್ವರಿಗೆ ಕೈ ಮುಗಿದು ಪ್ರಾರ್ಥಿಸಿಕೊಂಡರು.
ಈ ಭಾರೀ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರು ದಸರಾಕ್ಕೆ ಚಾಲನೆ ನೀಡಿದರು.ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊಂತಿದ್ದಾನೆ. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ವಿರಾಜಮಾನಳಾಗಿದ್ದಾಳೆ.
ಅಭಿಮನ್ಯು ಈಗಾಗಲೇ ಎರಡು ಬಾರಿ ಅಂಬಾರಿಯನ್ನು ಹೊತ್ತಿದ್ದು, ಮೂರನೇ ಬಾರಿಗೆ ಹೊತ್ತಿದ್ದಾನೆ. ಅಭಿಮನ್ಯುವಿನೊಂದಿಗೆ ಅರ್ಜುನ ನಿಶಾನೆ ಆನೆ , ಚೈತ್ರ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಜಂಬೂ ಸವಾರಿಯಲ್ಲಿ ಸಾಗಲಿವೆ. ಟೋಟಲಿ 9 ಆನೆಗಳು ರಾಜ ಬೀದಿಗಳಲ್ಲಿ ಸಾಗಿದೆ.
ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ ವಾಗಲಿವೆ. 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸಿವೆ. ಈ ಬಾರಿ ನಟ ದಿ. ಪುನೀತ್ ರಾಜಕುಮಾರ್ ಭಾವಚಿತ್ರ ಇರುವ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.
ಎರಡು ವರ್ಷ ಕರೋನಾದಿಂದ ಕಳೆಗುಂದಿದ್ದ ಜಂಬು ಸವಾರಿಯನ್ನು ವೀಕ್ಷಿಸಲು ಜನರು ಕಿಕ್ಕಿರಿದು ಸೇರಿದ್ದಾರೆ. ಜಂಬೂ ಸವಾರಿಯನ್ನು ನೋಡಲು ದೇಶ-ವಿದೇಶದಿಂದ ಜನರು ಆಗಮಿಸಿದ್ದಾರೆ. ಯುವಕರು ಜಂಬೂ ಸವಾರಿ ನೋಡಲು ಮರವೇರಿ ಕೂತಿದ್ದಾರೆ. ಜಂಬೂ ಸವಾರಿ ವೀಕ್ಷಣೆಗೆ 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಹಾಗೂ ವಿವಿಐಪಿಗಳಿಗೆ ಅರಮನೆಯ ಮೊದಲನೇ ಮಹಡಿಯ ಪ್ರಾಂಗಣದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಯದುವೀರ್, ನ್ಯಾಯಾಧೀಶರು, ರಾಜ್ಯಪಾಲ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಮೈಸೂರು ಪಾಲಿಕೆ ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಪೊಲೀಸ್ ಆಯುಕ್ತ ಚಂದ್ರಗುಪ್ತ ಉಪಸ್ಥಿತರಿದ್ದರು.
ಅಭಿಮನ್ಯು ಈಗಾಗಲೇ ಎರಡು ಬಾರಿ ಅಂಬಾರಿಯನ್ನು ಹೊತ್ತಿದ್ದು, ಈಗ ಮೂರನೇ ಬಾರಿಗೆ ಹೊತ್ತಿದ್ದಾನೆ. ರಾಜಬೀದಿಯಲ್ಲಿ ಅಭಿಮನ್ಯು ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಅರ್ಜುನ ನಿಶಾನೆ ಆನೆ, ಚೈತ್ರ ಮತ್ತು ಕಾವೇರಿ ಕುಮ್ಕಿ ಅಭಿಮನ್ಯುವಿನೊಂದಿಗೆ ಸಾಗುತ್ತಿದ್ದಾರೆ. ಟೋಟಲಿ 9 ಆನೆಗಳು ರಾಜ ಬೀದಿಗಳಲ್ಲಿ ಸಾಗುತ್ತಿದೆ. ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ.
ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅರಮನೆಯಿಂದ ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, RMC, ತಿಲಕ್ ನಗರ ರಸ್ತೆ ಮೂಲಕ ಬನ್ನಿ ಮಂಟಪ ತಲುಪಲಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಬನ್ನಿಮಂಟಪದಲ್ಲಿ ಪಂಜಿನ ಕವಾಯತಿಗೆ ಸಕಲ ಸಿದ್ಧತೆ ಮಾಡಲಾಗಿದೆ. ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ಸಹಸ್ರಾರು ಜನ ಪಂಜಿನ ಕವಾಯತು ಕಣ್ತುಂಬಿಕೊಳ್ಳಲಿದ್ದಾರೆ. ಪಂಜಿನ ಕವಾಯತು ನಂತರ ಮೈಸೂರು ದಸರಾಗೆ ತೆರೆ.
ಈ ಭಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸುವ 47 ಸ್ತಬ್ಧಚಿತ್ರಗಳು ಭಾಗಿಯಾಗಿವೆ. ಈಗಾಗಲೇ ಸ್ತಬ್ಧಚಿತ್ರ ಪ್ರದರ್ಶನ ಮೆರವಣಿಗೆ ಪ್ರಾರಂಭವಾಗಿದ್ದು, ವಿಶೇಷವಾಗಿ ನಟ ದಿ. ಪುನೀತ್ ರಾಜಕುಮಾರ್ ಭಾವಚಿತ್ರ ಇರುವ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ. ಜಂಬೂ ಸವಾರಿ ನೋಡಲು ಅರಮನೆಗೆ ಸಾಕಷ್ಟು ಜನರು ಆಗಮಿಸುತ್ತಿದ್ದು, ಜಂಬೂ ಸವಾರಿಯನ್ನು ಕಣ್ಣು ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಸ್ತಬ್ಧಚಿತ್ರಗಳ ಉಪಸಮಿತಿ
ಇಲಾಖಾವಾರು ಸ್ತಬ್ಧಚಿತ್ರಗಳ ಪಟ್ಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಮಧ್ಯಾಹ್ನ 12.30ಕ್ಕೆ ಭೋಜನ ಮುಗಿಸಿ ನಂದಿ ಧ್ವಜ ಪೂಜೆಯಲ್ಲಿ ಭಾಗಿಯಾಗಿದ್ದಾರೆ. 2.36 ರಿಂದ 02:50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ನಡೆದಿದೆ. ಸಿಎಂ ಬೊಮ್ಮಾಯಿ ನಂದಿ ಧ್ವಜ ಕಂಬಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಜನತೆಗೆ ಚಾಮುಂಡೇಶ್ವರಿ ಸುಖ-ಶಾಂತಿ, ಸಮೃದ್ಧಿ ನೀಡಲಿ. ನಾಡಿನ ಜನತೆಗೆ ಮತ್ತೊಮ್ಮೆ ದಸರಾ ಹಬ್ಬದ ಶುಭಾಶಯಗಳು. ದಸರಾ ಮಹೋತ್ಸವನ್ನ ಯಶಸ್ವಿಯಾಗಿ ನಡೆಸಿದ್ದಕ್ಕೆ ಮೈಸೂರಿನ ಜಿಲ್ಲಾ ಉಸ್ತುವಾರಿ, ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Published On - 2:37 pm, Wed, 5 October 22