AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗಳಲ್ಲಿ ಗೊಂಬೆ ಇಟ್ಟು ಪೂಜಿಸುವುದು ಏಕೆ? ಇದರ ಹಿಂದಿನ ಇತಿಹಾಸವೇನು?

ಮೈಸೂರ ದಸರಾ ಹಬ್ಬದಲ್ಲಿ ಮನೆಗೆ ಮತ್ತಷ್ಟು ಮೆರಗು ನೀಡುವ ಗೊಂಬೆ ಅಲಂಕಾರ ಕಣ್ತುಂಬಿಕೊಳ್ಳುವುದೇ ಒಂದು ರೀತಿ ಚಂದ. ದಸರಾ ಗೊಂಬೆ ಕೂರಿಸುವ ಪದ್ಧತಿ 18ನೇ ಶತಮಾನದಿಂದ ಬಂದಿದೆ ಎನ್ನಲಾಗಿದೆ.

ಮನೆಗಳಲ್ಲಿ ಗೊಂಬೆ ಇಟ್ಟು ಪೂಜಿಸುವುದು ಏಕೆ? ಇದರ ಹಿಂದಿನ ಇತಿಹಾಸವೇನು?
ಗೊಂಬೆ ಹಬ್ಬ
Follow us
TV9 Web
| Updated By: ಆಯೇಷಾ ಬಾನು

Updated on: Oct 06, 2022 | 6:30 AM

ಹಿಂದೂ ಧರ್ಮದಲ್ಲಿ ವಿಗ್ರಹ ಪೂಜೆ, ಗೊಂಬೆ(Gombe Habba) ಅಲಂಕಾರಕ್ಕೆ ಅದರದೇ ಆದ ಮಹತ್ವವಿದೆ. ಅದರಲ್ಲೂ ವಿಶ್ವ ವಿಖ್ಯಾತ ಮೈಸೂರ ದಸರಾ(Mysuru Dasara 2022) ಹಬ್ಬದಲ್ಲಿ ಮನೆಗೆ ಮತ್ತಷ್ಟು ಮೆರಗು ನೀಡುವ ಗೊಂಬೆ ಅಲಂಕಾರ ಕಣ್ತುಂಬಿಕೊಳ್ಳುವುದೇ ಒಂದು ರೀತಿ ಚಂದ. ಬನ್ನಿ ನಾವಿವತ್ತು ನವರಾತ್ರಿಯಂದು ಮನೆಯಲ್ಲಿ ಗೊಂಬೆಗಳನ್ನು ಇಡುವುದೇಕೆ? ಇದರ ಹಿಂದಿನ ಇತಿಹಾಸವನ್ನು ತಿಳಿಯೋಣ.

ನವರಾತ್ರಿ ಹಬ್ಬ ಬಂತು ಎಂದರೆ ಮನೆಗಳಲ್ಲಿ ಸಂಭ್ರಮ ಹೆಚ್ಚಾಗುತ್ತೆ. 9 ದಿನ ಮಾಡುವ ಈ ಹಬ್ಬ ಮನೆಗೆ, ಜನರಿಗೆ ಒಂದು ರೀತಿಯ ಉತ್ಸಾಹ, ಸಂಭ್ರಮದಲ್ಲಿಡುತ್ತೆ. ಅದರಲ್ಲೂ ಮೈಸೂರಿನ ಭಾಗದಲ್ಲಂತೂ ಈ ಹಬ್ಬ ನೋಡುವುದೇ ಒಂದು ರೀತಿ ವಿಸ್ಮಯ. ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ವಿದೇಶದಿಂದೆಲ್ಲ ಮೈಸೂರಿಗೆ ಭೇಟಿ ನೀಡುತ್ತಾರೆ. ಇನ್ನು ಮತ್ತೊಂದೆಡೆ ಮನೆಗಳಲ್ಲಿ ಗೊಂಬೆಗಳನ್ನು ಇಡುವುದು ನವರಾತ್ರಿ ಇಲ್ಲವೇ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಗೊಂಬೆಗಳನ್ನು ಇಡುವ ಸಂಪ್ರದಾಯವಿದೆ.

18ನೇ ಶತಮಾನದಲ್ಲೇ ಆರಂಭವಾಗಿತ್ತು ಗೊಂಬೆ ತೂರಿಸುವ ಸಂಪ್ರದಾಯ

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಗೊಂಬೆ ಹಬ್ಬ ಜನಪ್ರಿಯತೆ ಪಡೆದುಕೊಂಡಿದೆ. ಇದನ್ನು ಗೊಂಬೆ ಹಬ್ಬ ಎಂದೂ ಕರೆಯುತ್ತಾರೆ. ದಸರಾ ಗೊಂಬೆ ಕೂರಿಸುವ ಪದ್ಧತಿ 18ನೇ ಶತಮಾನದಿಂದ ಬಂದಿದೆ ಎನ್ನಲಾಗಿದೆ.

ಗೊಂಬೆ ಹಬ್ಬ ಮೊದಲು ಆರಂಭವಾದದ್ದು ಮೈಸೂರಲ್ಲಿ

ದಸರಾ ಹಬ್ಬದಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವ ಪದ್ಧತಿಯು ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲಿಗೆ ಆರಂಭವಾಯಿತು ಎನ್ನಲಾಗುತ್ತದೆ. ಮೈಸೂರು ದಸರಾ ಎಂದು ಜಗತ್ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು ಎಂಬ ಮಾತಿದೆ.

ಗೊಂಬೆಗಳನ್ನು ಇಡುವುದರ ಮಹತ್ವವೇನು?

ಸಮಸ್ತ ಸೃಷ್ಟಿ ಒಂದೇ ವಸ್ತುವಿನಿಂದ ಆಗಿದೆ ಎಂದು ಮಹತ್ವವನ್ನು ಸಾರುವುದೇ ದಸರಾ ಸಮಯದಲ್ಲಿ ಬೊಂಬೆ ಇಡುವುದರ ಸಂಕೇತ. ಬೊಂಬೆಗಳನ್ನು ಕೂರಿಸುವುದರಲ್ಲಿ ದೇವತೆಗಳಿಂದ ಹಿಡಿದು ಸಾಧು-ಸಂತರು, ಸತ್ಪುರುಷರು, ಸಾಮಾನ್ಯ ಮನುಷ್ಯರು, ಜನರ ಜೀವನಶೈಲಿ, ಹಳ್ಳಿ ಬದುಕು, ವ್ಯಾಪಾರ, ಕೃಷಿ, ಕ್ರೀಡೆ, ಉದ್ಯೋಗ ಪಶು-ಪಕ್ಷಿಗಳು ಹೀಗೆ ಸಕಲವೂ ದೇವರ ಅನುಗ್ರಹವಾಗಿದ್ದು, ಯಾವುದನ್ನೂ ತುಚ್ಛವಾಗಿ ನೋಡಬಾರದು, ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಮುಖ್ಯವೇ ಎಂದು ಬೊಂಬೆಗಳು ಸಂದೇಶ ಸಾರುತ್ತವೆ. ಬೊಂಬೆಗಳನ್ನು ಮನೆಗಳಲ್ಲಿ ಇಟ್ಟ ಬಳಿಕ ಪ್ರತಿ ನಿತ್ಯ ಅದಕ್ಕೆ ಪೂಜೆ ಮಾಡಬೇಕು. ನೈವೇದ್ಯ ಮಾಡಿ ಸಂಜೆ ವೇಳೆ ಆರತಿ ಮಾಡಬೇಕು. ಸುತ್ತಮುತ್ತಲಿನ ಜನರನ್ನು ಕರೆದು ಅರಿಶಿನ ಕುಂಕುಮ, ಪ್ರಸಾದ ವಿನಿಯೋಗ ಮಾಡುವ ಪದ್ಧತಿಯೂ ಇದೆ.

ಮನೆಗಳಲ್ಲಿ ಇಟ್ಟ ಬೊಂಬೆಗಳನ್ನು ನೋಡಲು ಜನರು ಪರಸ್ಪರ ಭೇಟಿ ಮಾಡುವುದು ಸಾಮಾನ್ಯ. ಇದರೊಂದಿಗೆ ಸಂಬಂಧಿಗಳು, ಸ್ನೇಹಿತರು, ಪರಿಚಯಸ್ಥರು, ಇಷ್ಟವಾದರು ಒಂದೆಡೆ ಸೇರಲು ಒಂದು ಸಂದರ್ಭ ಸೃಷ್ಟಿಯಾಗುತ್ತದೆ. ಗೊಂಬೆಗಳು ನಮ್ಮ ಜೀವನಕ್ಕೆ ಹಲವು ಪಾಠಗಳನ್ನು ಹೇಳಿಕೊಡುತ್ತವೆ. ದೇವರ ದೃಷ್ಟಿಯಲ್ಲಿ ನಾವೂ ಬೊಂಬೆಗಳೇ, ಅವನ ಆದೇಶದಂತೆ, ಅವರ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತದೆ ಎನ್ನುವುದನ್ನು ಇದು ಸಾರುತ್ತೆ.

ದಸರಾ ಹಬ್ಬಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಅಮೃತಸರ ಬಳಿ ಪಾಕಿಸ್ತಾನದ ಛಿದ್ರಗೊಂಡ ಡ್ರೋಣ್ ಪತ್ತೆ, ಪರಿಶೀಲನೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ