Patidar Gujaratis: ನವರಾತ್ರಿಯ ಅಂಗವಾಗಿ ಕೋಲಾರದಲ್ಲಿ ಕಳೆಗಟ್ಟಿದೆ ಗುಜರಾತಿಗಳ ದಸರಾ ಸಂಭ್ರಮ!

Kutch Kadva Patidar Gujaratis: ಸಮುದಾಯದ ಎಲ್ಲರೂ ಒಂದೆಡೆ ಸೇರಿ ದುರ್ಗಾಪೂಜೆ ಮಾಡಿ ನಂತರ ರಾತ್ರಿ ಎಂಟು ಗಂಟೆಯಿಂದ ಹತ್ತು ಗಂಟೆಯವರೆಗೆ ವಯಸ್ಸು ಮತ್ತು ಲಿಂಗ ಭೇದವನ್ನ ಮರೆತು ದಾಂಡಿಯಾ ನೃತ್ಯ ಮಾಡುತ್ತಾ ದೇವತೆಯ ಸ್ತುತಿ ಮಾಡ್ತಾರೆ. ಕೊನೆಯ ದಿನದಂದು ಅನ್ನ ಸಂತರ್ಪಣೆ ಮತ್ತು ತಮ್ಮದೇ ಸಮುದಾಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನ ನೀಡುವ ಮೂಲಕ ನವರಾತ್ರಿಗೆ ಗುಡ್ ಬೈ ಹೇಳ್ತಾರೆ.

Patidar Gujaratis: ನವರಾತ್ರಿಯ ಅಂಗವಾಗಿ ಕೋಲಾರದಲ್ಲಿ ಕಳೆಗಟ್ಟಿದೆ ಗುಜರಾತಿಗಳ ದಸರಾ ಸಂಭ್ರಮ!
ನವರಾತ್ರಿಯ ಅಂಗವಾಗಿ ಕೋಲಾರದಲ್ಲಿ ಕಳೆಗಟ್ಟಿದೆ ಗುಜರಾತಿಗಳ ದಸರಾ ಸಂಭ್ರಮ!
Follow us
| Updated By: ಸಾಧು ಶ್ರೀನಾಥ್​

Updated on: Oct 05, 2022 | 4:07 PM

ಒಂದೊಂದು ಸಮುದಾಯದಲ್ಲಿ ಒಂದೊಂದು ಪದ್ದತಿ ಇರುತ್ತೆ. ದಸರಾ ಹಬ್ಬವನ್ನ ಗುಜರಾತಿನ ಪಟೇಲ್ ಅಥವಾ ಪಾಟೀದಾರ್​​ ಸಮುದಾಯದವರು ವಿಶಿಷ್ಟವಾಗಿ ಆಚರಣೆ ಮಾಡ್ತಾರೆ. ಅದೇ ರೀತಿ ನಮ್ಮ ರಾಜ್ಯದ ವಲಸಿಗ ಪಟೇಲ್​ ಸಮುದಾಯದವರು ಗಡಿನಾಡು ಕೋಲಾರದಲ್ಲಿ 9 ದಿನಗಳ ಕಾಲ ಮಾಡುವ ವಿಶೇಷ ಪೂಜಾ, ವಿಧಿ ವಿಧಾನ ಹಾಗೂ ಮನರಂಜನೆ ಗಮನ ಸೆಳೆಯುತ್ತದೆ.

ಕೋಲಾರದಲ್ಲಿ ಹತ್ತಾರು ವರ್ಷಗಳಿಂದ ನೆಲೆಸಿವೆ ಗುಜರಾತಿ ಮೂಲದ ಕುಟುಂಬಗಳು..!

ಕೋಲಾರ ಜಿಲ್ಲೆಯಲ್ಲಿ ಕಳೆದ 20-30 ವರ್ಷಗಳಿಂದ ಗುಜರಾತಿ ಮೂಲದ ಕುಟುಂಬಗಳು ಇಲ್ಲೇ ನೆಲೆಸಿವೆ. ಅದರಲ್ಲೂ ಗುಜರಾತ್​ ಮೂಲದ ಕಛ್ ಕಡವಾ ಪಾಟೀದಾರ್​ ಸಮುದಾಯ ಇಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡ್ತಾರೆ. ದುರ್ಗಾ ಮಾತೆಯ 9 ಅವತಾರಗಳ ದೇವತೆಗಳನ್ನು 9 ದಿನಗಳ ಕಾಲ ಶ್ರದ್ದಾ-ಭಕ್ತಿಯಿಂದ ಆಚರಣೆ ಮಾಡ್ತಾರೆ.

ದಸರಾ ಹಬ್ಬದ ಮೊದಲ ದಿನದಿಂದಲೇ ಗರ್ಬಾ ರಾಸ್ ಮತ್ತು ದಾಂಡಿಯಾ ಡ್ಯಾನ್ಸ್ ಶುರುವಾಗುತ್ತೆ. ಗರ್ಬಾದ ದೀಪವನ್ನು ಮನೆ ದೇವರ ಫೋಟೋ ಬಳಿಯಿಟ್ಟು 9 ದಿನಗಳ ಕಾಲ ಪೂಜೆ ಮಾಡುತ್ತಾರೆ. ದೀಪವನ್ನು ಪ್ರತಿ ದಿನದ ದಾಂಡಿಯಾ ಡ್ಯಾನ್ಸ್, ಅಂದರೆ ಕೋಲಾಟವನ್ನು ಶುರು ಮಾಡುವ ಮುನ್ನ ಪೂಜಿಸಿ ಭಜನೆ ಮಾಡಲಾಗುತ್ತೆ. ಈ ಒಂಬತ್ತು ದಿನಗಳ ಕಾಲವೂ ಮನೆಯ ಗೃಹಿಣಿಯರು ಒಂದು ಹೊತ್ತು ಉಪವಾಸವನ್ನೂ ಮಾಡ್ತಾರೆ. ಒಂಬತ್ತನೆಯ ದಿನದಂದು ಗರ್ಬಾದ ದೀಪವನ್ನ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಕರ್ನಾಟಕದಲ್ಲೂ ಗುಜರಾತಿ ಸಂಸ್ಕೃತಿ ಸಂಭ್ರಮ ಮನೆ ಮಾಡುತ್ತದೆ..!

ಗುಜರಾತಿನಿಂದ ಕರ್ನಾಟಕಕ್ಕೆ ವಲಸೆ ಬಂದು ತಮ್ಮ ಜೀವನ ಕಟ್ಟಿಕೊಂಡಿರುವ ಪಾಟೀದಾರ್​​ ಸಮುದಾಯದವರು ಇಲ್ಲೇ ಕರ್ನಾಟಕದಲ್ಲೇ ಕನ್ನಡಿಗರಾಗಿ ಬದುಕುತ್ತಾ ಇಂದಿಗೂ ತಮ್ಮ ಸಂಪ್ರದಾಯವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ದಸರಾ ಹಬ್ಬದ ಸಮಯದಲ್ಲಿ ಮಾತ್ರ ಕೋಲಾರ ಜಿಲ್ಲೆಯಲ್ಲಿರುವ ಗುಜರಾತಿ ಕುಟುಂಬಗಳು ಒಂದು ಕಡೆ ಸೇರ್ತಾರೆ. ಇಡೀ ಜಿಲ್ಲೆಯಲ್ಲಿನ 47 ಕುಟುಂಬಗಳ ಸುಮಾರು 300 ಕ್ಕೂ ಹೆಚ್ಚು ಮಂದಿ ಬಂಗಾರಪೇಟೆಯಲ್ಲಿನ ಕೋಲಾರ್ ಕಛ್ ಕಡವಾ ಪಾಟೀದಾರ್​ ಸಮಾಜದವರು ಏರ್ಪಾಡು ಮಾಡೋ ಈ ಎಲ್ಲ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸ್ತಾರೆ. (ವರದಿ: ರಾಜೇಂದ್ರ ಸಿಂಹ)

ಕಲರ್​ಫುಲ್​ ದಾಂಡ್ಯಾ ನೃತ್ಯ ನೋಡೋದಕ್ಕೆ ಚೆಂದ..!

ಪ್ರತಿ ನಿತ್ಯವೂ ಸಮುದಾಯದ ಎಲ್ಲರೂ ಒಂದೆಡೆ ಸೇರಿ ದುರ್ಗಾಪೂಜೆ ಮಾಡಿ ನಂತರ ರಾತ್ರಿ ಎಂಟು ಗಂಟೆಯಿಂದ ಹತ್ತು ಗಂಟೆಯವರೆಗೆ ವಯಸ್ಸು ಮತ್ತು ಲಿಂಗ ಭೇದವನ್ನ ಮರೆತು ದಾಂಡಿಯಾ ನೃತ್ಯ ಮಾಡುತ್ತಾ ದೇವತೆಯ ಸ್ತುತಿ ಮಾಡ್ತಾರೆ. ಕೊನೆಯ ದಿನದಂದು ಅನ್ನ ಸಂತರ್ಪಣೆ ಮತ್ತು ತಮ್ಮದೇ ಸಮುದಾಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನ ನೀಡುವ ಮೂಲಕ ನವರಾತ್ರಿಗೆ ಗುಡ್ ಬೈ ಹೇಳ್ತಾರೆ.

ಗುಜರಾತಿಗಳ ಜೊತೆಗೆ ಕರ್ನಾಟಕದ ಜನರು ಸೇರುತ್ತಾರೆ..!

ಗುಜರಾತಿಗಳು ಆಯೋಜನೆ ಮಾಡುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕೇವಲ ಗುಜರಾತಿ ಕುಟುಂಬದವರು ಮಾತ್ರ ಭಾಗವಹಿಸೋದಿಲ್ಲ. ಸ್ಥಳೀಯರು ಕೂಡಾ ನೂರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ನಿತ್ಯ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಭಾಗವಹಿಸಿ ಕಾರ್ಯಕ್ರಮವನ್ನು ಎಂಜಾಯ್​ ಮಾಡುತ್ತಾರೆ. ವ್ಯಾವಹಾರಿಕವಾಗಿ ಇಲ್ಲಿನ ಸ್ಥಳೀಯ ಜನರನ್ನ ಮತ್ತು ಬದುಕನ್ನು ಆಶ್ರಯಿಸಿದ್ದರೂ ಕೂಡಾ ತಮ್ಮದೇ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನ ಆಚರಿಸುವ ಗುಜರಾತಿಗಳ ಪದ್ದತಿಯು ವಿಶೇಷ ಹಾಗೂ ವಿಭಿನ್ನ. ಅದರಲ್ಲೂ ಇದು ಈ ಭಾಗದ ಜನರಿಗಂತೂ ನೋಡುವುದಕ್ಕೇ ಖುಷಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ತಾಜಾ ಸುದ್ದಿ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ