‘ಈ ಮಟ್ಟಕ್ಕೆ ಬರಲು ನಾನೊಬ್ಬನೇ ಕಾರಣ ಅಲ್ಲ’; ಹಲವರಿಗೆ ಕ್ರೆಡಿಟ್ ಕೊಟ್ಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು ತಮ್ಮ ಯಶಸ್ಸಿಗೆ ತಮ್ಮ ಕುಟುಂಬ, ನಿರ್ದೇಶಕರು, ತಂಡ ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪುಷ್ಪ ಚಿತ್ರದ ಯಶಸ್ಸಿನಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. ಅವರ ತಾತ, ತಂದೆ ಮತ್ತು ಚಿರಂಜೀವಿ ಅವರ ಸಿನಿಮಾ ಹಿನ್ನೆಲೆಯಿಂದ ಅವರಿಗೆ ಸಿಕ್ಕ ಬೆಂಬಲವನ್ನು ಅವರು ಎತ್ತಿ ಹಿಡಿದಿದ್ದಾರೆ.

ನಟ ಅಲ್ಲು ಅರ್ಜುನ್ (Allu Arjun) ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೆಳೆದುಕೊಂಡಿದ್ದಾರೆ. ‘ಪುಷ್ಪ’ ರಿಲೀಸ್ಗೂ ಮೊದಲೇ ಅವರ ಬಗ್ಗೆ ಉತ್ತರ ಭಾರತದವರಿಗೆ ತಿಳಿದಿತ್ತು. ಇದಕ್ಕೆ ಕಾರಣ ಅವರ ಅನೇಕ ತೆಲುಗು ಸಿನಿಮಾಗಳು ಡಬ್ ಆಗಿ ಹಿಂದಿಯಲ್ಲಿ ರಿಲೀಸ್ ಆಗಿವೆ. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಲ್ಲು ಅರ್ಜುನ್ ಚಿತ್ರಗಳನ್ನು ವೀಕ್ಷಿಸಲಾಗುತ್ತದೆ. ‘ಪುಷ್ಪ 2’ ಬಂದ ಬಳಿಕ ಅವರು ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅಲ್ಲು ಅರ್ಜುನ್ ಅವರು ಈ ಹಂತಕ್ಕೆ ಬರಲು ಕಾರಣ ಅನೇಕರಿದ್ದಾರೆ. ಅವರೆಲ್ಲರಿಗೂ ಅಲ್ಲು ಅರ್ಜುನ್ ಅವರು ಕ್ರೆಡಿಟ್ ಕೊಟ್ಟಿದ್ದಾರೆ.
ಅಲ್ಲು ಅರ್ಜುನ್ ಅವರು ನ್ಯೂಸ್9 ಗ್ಲೋಬಲ್ ಸಮ್ಮಿತ್ನಲ್ಲಿ ಮಾತನಾಡಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಹಲವು ವಿಚಾರಗಳ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು. ಇದು ವಿನಮ್ರವಾಗಿ ನಡೆದುಕೊಳ್ಳುವಂತೆ ಮಾಡಿತು ಎಂದಿದ್ದಾರೆ ಅಲ್ಲು ಅರ್ಜುನ್.
‘ಇಡೀ ಕುಟುಂಬದಿಂದ ನನಗೆ ಬೆಂಬಲ ಸಿಕ್ಕಿದೆ. ನಾನು ನಿಜಕ್ಕೂ ಅದೃಷ್ಟವಂತ. ಉತ್ತರದ ಅನೇಕರಿಗೆ ನನ್ನ ಕುಟುಂಬದ ಬಗ್ಗೆ ತಿಳಿದಿಲ್ಲ. ಆದರೆ, ದಕ್ಷಿಣ ಹಾಗೂ ತೆಲುಗು ರಾಜ್ಯದವರಿಗೆ ನನ್ನ ತಾತ ಅಲ್ಲು ರಾಮಲಿಂಗಯ್ಯ ಗೊತ್ತಿದೆ. ಅವರು 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ನಿಜಕ್ಕೂ ದೊಡ್ಡ ಸಂಖ್ಯೆ. ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಎಂಬ ಖ್ಯಾತಿ ಅವರಿಗೆ ಇದೆ’ ಎಂದು ಅಲ್ಲು ಅರ್ಜುನ್ ಹೆಮ್ಮೆಯಿಂದ ಹೇಳಿದರು.
‘ತಂದೆಯ ಬಗ್ಗೆ, ಚಿರಂಜೀವಿ ಬಗ್ಗೆಯೂ ಅಲ್ಲು ಅರವಿಂದ್ ಹಮ್ಮೆ ಹೊರಹಾಕಿದ್ದಾರೆ. ‘ನನ್ನ ತಂದೆ ಅಲ್ಲು ಅರವಿಂದ್ ದೊಡ್ಡ ನಿರ್ಮಾಪಕರು. ಅವರು 70 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನನ್ನ ಅಂಕಲ್ ಚಿರಂಜೀವಿ ಅವರು ನನಗೆ ದೊಡ್ಡ ಸ್ಫೂರ್ತಿ’ ಎಂದು ಹೇಳಿದ್ದಾರೆ. ಈ ಮೂಲಕ ಅವರಿಗೂ ಕ್ರೆಡಿಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಮರು ಬಿಡುಗಡೆ
‘ಇಷ್ಟೆಲ್ಲ ಸ್ಟಾರ್ಗಳು ಮನೆಯಲ್ಲಿ ಇರುವಾಗ ಅದು ನನ್ನನ್ನು ವಿನಮ್ರವಾಗಿ ನಡೆದುಕೊಳ್ಳುವಂತೆ ಮಾಡಿತು. ನಾನು ಕುಟುಂಬಕ್ಕೆ ಇದರ ಕ್ರೆಡಿಟ್ ಕೊಡುತ್ತೇನೆ. ನಾನೇ ಬೆಳೆದು ನಿಂತವನಲ್ಲ. ನಾನು ಎಲ್ಲರಿಂದ ಆದವನು. ನನ್ನ ನಿರ್ದೇಶಕರು, ತಂತ್ರಜ್ಞರು, ಕುಟುಂಬದವರು, ಅಭಿಮಾನಿಗಳು ಹಾಗೂ ಎಲ್ಲರೂ. ನಾನು ಬೆಳೆಯಲು ಎಷ್ಟು ಸಹಾಯಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








