AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್ ಕುಮಾರ್​ಗೆ ಸಾವಿನ ಬಗ್ಗೆ ಶುರುವಾಗಿದೆ ಭಯ? ವಿಚಿತ್ರವಾಗಿ ಮಾತನಾಡಿದ ನಟ

ನಟ ಅಜಿತ್ ಕುಮಾರ್ ಅವರು ಸಾವಿನ ಅಂಚಿನ ಅನುಭವಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ನಿವೃತ್ತಿಯ ಬಗ್ಗೆ ಪ್ರಶ್ನಿಸಿದಾಗ, ಜೀವನದ ಅಮೂಲ್ಯತೆಯನ್ನು ಅರಿತುಕೊಂಡ ಅವರು ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಅವರ ಈ ಹೇಳಿಕೆಗಳು ಅನೇಕರನ್ನು ಆಲೋಚನೆಗೆ ಹಚ್ಚಿದೆ .

ಅಜಿತ್ ಕುಮಾರ್​ಗೆ ಸಾವಿನ ಬಗ್ಗೆ ಶುರುವಾಗಿದೆ ಭಯ? ವಿಚಿತ್ರವಾಗಿ ಮಾತನಾಡಿದ ನಟ
ಅಜಿತ್ ಕುಮಾರ್
ರಾಜೇಶ್ ದುಗ್ಗುಮನೆ
|

Updated on:May 02, 2025 | 7:00 AM

Share

ಕೆಲವೊಮ್ಮೆ ಸಾವನ್ನು ಹತ್ತಿರದಿಂದ ಕಂಡು ಬಂದಾಗ ಅದರ ಬಗ್ಗೆ ಭಯ ಶುರುವಾಗುತ್ತದೆ. ನಿತ್ಯ ಏಳೋದೇ ಸಮಸ್ಯೆ ಎಂದು ದೂರು ನೀಡುವವರು ಸಾವನ್ನು ಹತ್ತಿರದಿಂದ ಕಂಡು ಬಂದ ಬಳಿಕ ಬದುಕಿದ್ದೇನಲ್ಲ ಎಂದು ಸಂತೋಷಪಡುತ್ತಾರೆ. ಈಗ ನಟ ಅಜಿತ್ ಕುಮಾರ್ (Ajith Kumar) ಅವರಿಗೂ ಹೀಗೇಯೇ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. ಸಾವನ್ನು ಹತ್ತಿರದಿಂದ ಕಂಡು ಬಂದ ಅಜಿತ್ ಕುಮಾರ್ ಆಲೋಚನೆಗಳು ಸಂಪೂರ್ಣವಾಗಿ ಭಿನ್ನವಾಗಿದೆ. ಅವರು ಇತ್ತೀಚೆಗೆ ಮಾತನಾಡುವಾಗ ಸಾವಿನ ಬಗ್ಗೆ ತಮ್ಮ ಆಲೋಚನೆಗಳನ್ನು ಹೊರಹಾಕಿದ್ದಾರೆ.

ರಿಟೈರ್​ಮೆಂಟ್ ಬಗ್ಗೆ ಅವರಿಗೆ ಕೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅಜಿತ್, ‘ಅದು ನಿಮಗೆ ಗೊತ್ತೂ ಆಗುವುದಿಲ್ಲ. ಯಾವಾಗ ನಿವೃತ್ತಿ ಆಗಬೇಕು ಎಂದು ಯೋಜಿಸುವುದಿಲ್ಲ. ನನಗೆ ನಿವೃತ್ತಿ ಪಡೆಯುವಂತೆ ಒತ್ತಾಯ ಬರಹಬುದು. ನಾನು ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಜನರು ಜೀವನದ ಬಗ್ಗೆ ದೂರುತ್ತಾರೆ. ಆದರೆ, ನಿತ್ಯ ಬದುಕಿತ್ತಿರೋದು ಒಂದು ಆಶೀರ್ವಾದ’ ಎಂದಿದ್ದಾರೆ ಅಜಿತ್.

‘ನಾನು ಇಲ್ಲಿ ತಾತ್ವಿಕವಾಗಿ ಮಾತನಾಡುತ್ತಿಲ್ಲ. ನಾನು ಶಸ್ತ್ರಚಿಕಿತ್ಸೆ ಮತ್ತು ಗಾಯಗಳನ್ನು ನೋಡಿದ್ದೇನೆ. ಕ್ಯಾನ್ಸರ್‌ನಿಂದ ಬದುಕುಳಿದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ನನಗೆ ಇದ್ದಾರೆ. ಜೀವನ ಎಷ್ಟು ಅಮೂಲ್ಯವಾದುದು ಎಂದು ನಮಗೆ ತಿಳಿದಿದೆ. ನನ್ನ ಜೀವನದ ಪ್ರತಿ ಸೆಕೆಂಡ್ ಅನ್ನು ಬಳಸಿಕೊಳ್ಳಲು ನಾನು ಬಯಸುತ್ತೇನೆ. ಅದರಿಂದ ಹೆಚ್ಚಿನದ್ದನ್ನು ಪಡೆಯಲು ಬಯಸುತ್ತೇನೆ’ ಎಂದು ಅಜಿತ್ ಹೇಳಿದ್ದಾರೆ.

ಇದನ್ನೂ ಓದಿ
Image
ಭಾರತದ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ ಎಫ್​ಎಂ ರೇಡಿಯೋ ಸ್ಟೇಷನ್ಸ್
Image
ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್; ಈ ಪರಿಸ್ಥಿತಿ ಬರಲು ಅಭಿಮಾನಿಗಳೇ ಕಾರಣ
Image
ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಬಾಲಯ್ಯ, ಅಜಿತ್ ಕುಮಾರ್, ಶೇಖರ್ ಕಪೂರ್
Image
ಅಜಿತ್ ಕಾರು ಮತ್ತೊಮ್ಮೆ ಪಲ್ಟಿ, ತಿಂಗಳಲ್ಲಿ ಎರಡನೇ ಅಪಘಾತ

‘ನನ್ನ ಸಮಯ ಬಂದಾಗ, ‘ನಾನು ಈ ಆತ್ಮಕ್ಕೆ ಜೀವ ಕೊಟ್ಟೆ ಮತ್ತು ಅವನು ಅದನ್ನು ಸರಿಯಾಗಿ ಬಳಿಸಿಕೊಂಡ’ ಎಂದು ನನಗೆ ಜೀವ ಕೊಟ್ಟ ದೇವರಿಗೆ ಅನಿಸಬೇಕು. ಸಮಯ ವ್ಯರ್ಥ ಮಾಡದೇ ಬದುಕಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್; ಈ ಪರಿಸ್ಥಿತಿ ಬರಲು ಅಭಿಮಾನಿಗಳೇ ಕಾರಣ

ಅಜಿತ್ ಅವರು 90ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ವೃತ್ತಿ ಜೀವನದಲ್ಲಿ ಏರಿಳಿತ ಇದೆ. ಇತ್ತೀಚೆಗೆ ಅವರಿಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರಿಗೆ ಇತ್ತೀಚೆಗೆ ಪದ್ಮಭೂಷಣ ಸಿಕ್ಕಿದೆ. ಅಜಿತ್​ಗೆ ಕಾರ್ ರೇಸಿಂಗ್ ಹವ್ಯಾಸ ಇದೆ. ಅನೇಕ ಬಾರಿ ರೇಸಿಂಗ್ ತರಬೇತಿ ವೇಳೆ ಸಾವಿನಿಂದ ಪಾರಾಗಿ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:59 am, Fri, 2 May 25

ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ವಿಧಾನಸೌಧದ ವಿದ್ಯುತ್ ದೀಪಾಲಂಕಾರ ನೋಡಲು ತಂಡೋಪತಂಡವಾಗಿ ಬಂದ ಜನ
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಕಾರಣವೇನು? DCM ಹೇಳಿದ್ದಿಷ್ಟು
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಶರಣಬಸವಪ್ಪ ಅಪ್ಪ ಅಂತ್ಯಕ್ರಿಯೆ
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ತಿರುಪತಿ ತಿಮ್ಮಪ್ಪನ ದಾಸೋಹಕ್ಕೆ 7 ಟನ್ ತರಕಾರಿ ಕಳುಹಿಸಿದ ಸ್ನೇಹಿತರು
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ಎಕ್ಸ್​​ಪ್ರೆಸ್​ವೇನಲ್ಲಿ ಬೈಕ್​ ಸ್ಟಂಟ್, ಎರಡೂ ಬೈಕ್​ ಮುಖಾಮುಖಿ ಡಿಕ್ಕಿ
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ರಾಜಣ್ಣ ಪರ ಸಿದ್ದರಾಮಯ್ಯ ಮನವೊಲಿಸಿದ್ರೂ ಕೇಳಿಲ್ವಂತೆ ಹೈಕಮಾಂಡ್!
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಮಕ್ಕಳನ್ನು ಕಚ್ಚಿದ್ದಕ್ಕೆ, ನಾಯಿಯ ಬೈಕ್​​ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟವಾಯ್ತು ಎಂದ ಸ್ಥಳೀಯರು: ವಿಡಿಯೋ ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ
ಅನುಮಾನಾಸ್ಪದ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳೋದೇನು ನೋಡಿ