AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜಿತ್ ಕಾರು ಮತ್ತೊಮ್ಮೆ ಪಲ್ಟಿ, ತಿಂಗಳಲ್ಲಿ ಎರಡನೇ ಅಪಘಾತ

Ajith Kumar: ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಸಿನಿಮಾಗಳ ಜೊತೆಗೆ ತಮ್ಮ ಕಾರು ರೇಸಿಂಗ್ ಹವ್ಯಾಸದಿಂದಲೂ ಬಹಳ ಜನಪ್ರಿಯ. ಕಾರು ರೇಸಿಂಗ್​ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಅಜಿತ್, ವೃತ್ತಿಪರ ಕಾರ್ ರೇಸಿಂಗ್ ಮಾಡುತ್ತಾರೆ. ಕೆಲ ವಾರಗಳ ಹಿಂದೆ ಕಾರು ರೇಸಿಂಗ್ ಟ್ರ್ಯಾಕ್​ನಲ್ಲಿ ಅಪಘಾತಕ್ಕೆ ಈಡಾಗಿದ್ದ ಅಜಿತ್, ಇದೀಗ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ರೇಸ್ ಟ್ರ್ಯಾಕ್​ನಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ.

ಅಜಿತ್ ಕಾರು ಮತ್ತೊಮ್ಮೆ ಪಲ್ಟಿ, ತಿಂಗಳಲ್ಲಿ ಎರಡನೇ ಅಪಘಾತ
Ajith Kumar
ಮಂಜುನಾಥ ಸಿ.
|

Updated on: Feb 23, 2025 | 3:39 PM

Share

ತಮಿಳಿನ ಸೂಪರ್ ಸ್ಟಾರ್ ನಟ ಅಜಿತ್, ಕಾರು ರೇಸಿಂಗ್​ನಲ್ಲಿ ಅತಿಯಾದ ಆಸಕ್ತಿ ಹೊಂದಿದ್ದಾರೆ. ವಿದೇಶಗಳಲ್ಲಿ ವೃತ್ತಿಪರ ರೇಸಿಂಗ್​ನಲ್ಲಿ ಸಹ ಅಜಿತ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಲ ವಾರಗಳ ಹಿಂದಷ್ಟೆ ರೇಸ್ ಟ್ರ್ಯಾಕ್​ನಲ್ಲಿ ಅಜಿತ್ ಅವರ ಕಾರು ಅಪಘಾತಕ್ಕೆ ಈಡಾಗಿತ್ತು, ಆದರೆ ಅಜಿತ್​ಗೆ ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ. ಇದೀಗ ಅಜಿತ್​ ಅವರ ಕಾರು ಮತ್ತೊಮ್ಮೆ ಅಪಘಾತಕ್ಕೆ ಈಡಾಗಿದೆ. ಸ್ಪೇಸ್​ನ ರೇಸ್ ಇವೆಂಟ್​ ಒಂದರಲ್ಲಿ ಭಾಗಿಯಾಗಿದ್ದಾಗ ಈ ಅವಘಡ ನಡೆದಿದ್ದು, ಅಜಿತ್ ಅವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿ ಎರಡು ಬಾರಿ ಪಲ್ಟಿಯಾಗಿದೆ. ಆದರೆ ಅಜಿತ್​ಗೆ ಯಾವುದೇ ಗಾಯಗಳಾಗಿಲ್ಲ. ಅವರು ಸುರಕ್ಷಿತವಾಗಿದ್ದಾರೆ.

ಅಜಿತ್ ಅವರ ಮ್ಯಾನೇಜರ್ ಹಂಚಿಕೊಂಡಿರುವ ವಿಡಿಯೋ ಸಹಿತ ಮಾಹಿತಿಯಂತೆ, ಅಜಿತ್ ಸ್ಪೇನ್​ನ ವ್ಯಾಲೆನ್ಸಿಯಾ ರೇಸಿಂಗ್​ ಇವೆಂಟ್​ನಲ್ಲಿ ಭಾಗಿ ಆಗಿದ್ದರು. ಐದನೇ ಸುತ್ತಿನ ವರೆಗೆ ಅದ್ಭುತವಾಗಿ ಕಾರು ಓಡಿಸಿದ ಅಜಿತ್ 14ನೇ ಸ್ಥಾನದಲ್ಲಿದ್ದರು. ಆದರೆ ಆರನೇ ರೌಂಡ್​ನಲ್ಲಿ ಎರಡು ಬಾರಿ ಅವರ ಕಾರು ಅಪಘಾತಕ್ಕೆ ಈಡಾಯಿತು. ಅಜಿತ್​ರ ಮ್ಯಾನೇಜರ್ ಹೇಳಿರುವಂತೆ ಅಜಿತ್​ ಅವರದ್ದು ಈ ಅಪಘಾತದಲ್ಲಿ ತಪ್ಪಿಲ್ಲ, ಬದಲಿಗೆ ಬೇರೆ ವಾಹನಗಳಿಂದಾಗಿ ಅಜಿತ್ ಅವರ ಕಾರು ಅಪಘಾತಕ್ಕೆ ಈಡಾಯಿತಂತೆ.

ಮೊದಲೇ ಬಾರಿ ಅಪಘಾತವಾದಾಗ ಅಜಿತ್ ಸಾವರಿಸಿಕೊಂಡು ರೇಸ್​ ಪಿಟ್​ನಲ್ಲಿ ಮುಂದುವರೆದರು. ಆದರೆ ಎರಡನೇ ಬಾರಿ ಅಪಘಾತವಾದಾಗ ಅಜಿತ್ ಅವರ ಕಾರು ಟಾಪಲ್ (ಪಲ್ಟಿ) ಆಯಿತು, ಎರಡು ಬಾರಿ ಕಾರು ಉರುಳಿ ಬಿದ್ದಿತು ಆದರೆ ಅಜಿತ್ ಅವರ ಸಾವಧಾನದಿಂದಾಗಿ ಅವರಿಗೆ ಯಾವುದೇ ಗಾಯಗಳು ಆಗಿಲ್ಲ. ಎಲ್ಲರ ಪ್ರಾರ್ಥನೆಗಳಿಂದ ಅವರಿಗೆ ಯಾವುದೇ ಒಂದು ಸಣ್ಣ ಗಾಯವೂ ಆಗದೆ ಆರಾಮವಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು ಕೋಟಿ?

ಕೆಲ ವಾರಗಳ ಹಿಂದೆ ಪೋರ್ಚುಗಲ್​ನಲ್ಲಿ ಅಜಿತ್ ಕಾರು ರೇಸಿಂಟ್ ಟ್ರ್ಯಾಕ್​ನಲ್ಲಿ ಟೆಸ್ಟ್ ರನ್ ಮಾಡುವ ಸಮಯದಲ್ಲಿ ಅವರ ಕಾರು ಭಾರಿ ವೇಗದಲ್ಲಿದ್ದಾಗ ಅಪಘಾತಕ್ಕೆ ಈಡಾಯಿತು. ಅಜಿತ್ ಚಲಾಯಿಸುತ್ತಿದ್ದ ಕಾರು ತೀವ್ರವಾಗಿ ಹಾನಿಯಾಯಿತು, ಆದರೆ ಅಜಿತ್​ಗೆ ಯಾವುದೇ ಗಾಯಗಳಾಗಿರಲಿಲ್ಲ. ಈಗ ಮತ್ತೊಮ್ಮೆ ಸ್ಪೇನ್​ನಲ್ಲಿ ಅಜಿತ್​ ಕಾರು ಅಪಘಾತಕ್ಕೆ ಈಡಾಗಿದೆ.

ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಅಜಿತ್ ನಟನೆಯ ‘ವಿದುಮಯಾರ್ಚಿ’ ಸಿನಿಮಾ ಫೆಬ್ರವರಿ 06 ರಂದು ಬಿಡುಗಡೆ ಆಗಿದೆ. ಹೆಚ್ಚಿನ ಅಬ್ಬರ ಇಲ್ಲದೆ ಬಿಡುಗಡೆ ಆದ ಈ ಸಿನಿಮಾ ಸಾಧಾರಣ ಕಲೆಕ್ಷನ್ ಅನ್ನಷ್ಟೆ ಕಾಣುತ್ತಿದೆ. ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿಲ್ಲ. ಇದೀಗ ಅಜಿತ್ ‘ಗುಡ್ ಬ್ಯಾಡ್ ಅಂಡ್ ಅಗ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ತ್ರಿಷಾ ನಾಯಕಿ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ