AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು ಕೋಟಿ?

Ajith Kumar: ತಮಿಳಿನ ಸ್ಟಾರ್ ನಟ ಅಜಿತ್​ಕುಮಾರ್​ಗೆ ಬೈಕ್ ಹಾಗೂ ಕಾರುಗಳ ಮೇಲೆ ವಿಪರೀತ ವ್ಯಾಮೋಹ. ಇದೀಗ ತಮ್ಮ ಬೃಹತ್ ಕಾರು ಸಂಗ್ರಹಕ್ಕೆ ಹೊಸ ಕಾರೊಂದನ್ನು ಸೇರಿಸಿಕೊಂಡಿದ್ದಾರೆ. ದುಬಾರಿ ಫೆರಾರಿ ಕಾರನ್ನು ಅಜಿತ್ ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಎಷ್ಟು ಕೋಟಿ?

ಹೊಸ ಕಾರು ಖರೀದಿಸಿದ ನಟ ಅಜಿತ್ ಕುಮಾರ್, ಬೆಲೆ ಎಷ್ಟು ಕೋಟಿ?
ಅಜಿತ್ ಕುಮಾರ್ ಕಾರು
ಮಂಜುನಾಥ ಸಿ.
|

Updated on: Jul 25, 2024 | 10:48 AM

Share

ತಮಿಳಿನ ಸ್ಟಾರ್ ನಟರಲ್ಲಿ ಅಜಿತ್ ಕುಮಾರ್ ಸಹ ಪ್ರಮುಖರು. ದಳಪತಿ ವಿಜಯ್​ ಹಾಗೂ ಅಜಿತ್ ಕುಮಾರ್​ ಅವರುಗಳಿಗೆ ಸಮಾನ ಸಂಖ್ಯೆಯ ಅಭಿಮಾನಿಗಳಿದ್ದಾರೆ ಎನ್ನಲಾಗುತ್ತದೆ. ರಜನೀಕಾಂತ್-ಕಮಲ್ ಹಾಸನ್ ಬಳಿಕ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಮಿಳು ಚಿತ್ರರಂಗದ ಎರಡನೇ ತಲೆಮಾರಿನ ಸ್ಟಾರ್ ನಟರಲ್ಲಿ ಅಜಿತ್ ಪ್ರಮುಖರು. ಆದರೆ ಸಹನಟರಿಗಿಂತಲೂ ಅಜಿತ್ ಬಹಳ ಭಿನ್ನ. ಸಿನಿಮಾದ ಶೂಟಿಂಗ್ ಹೊರತಾಗಿ ಚಿತ್ರರಂಗದೊಂದಿಗೆ ಸಂಬಂಧವನ್ನೇ ಹೊಂದಿಲ್ಲ ಅವರು. ತಾವಾಯ್ತು, ತಮ್ಮ ಕುಟುಂಬವಾಯ್ತು ಹಾಗೂ ತಮ್ಮ ಡ್ರೈವಿಂಗ್ ಹವ್ಯಾಸವಾಯ್ತು ಎಂದು ಆರಾಮವಾಗಿರುತ್ತಾರೆ. ಬೈಕ್ ಹಾಗೂ ಕಾರುಗಳ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಅಜಿತ್ ಇದೀಗ ಹೊಸದೊಂದು ಕಾರು ಖರೀದಿ ಮಾಡಿದ್ದಾರೆ.

ಬೈಕ್​ ರೈಡಿಂಗ್​ ಬಗ್ಗೆ ಅತೀವ ಪ್ರೀತಿ ಉಳ್ಳ ಅಜಿತ್, ದೇಶ, ವಿದೇಶಗಳಲ್ಲಿ ಹಲವು ಬಾರಿ ಬೈಕ್ ರೈಡಿಂಗ್ ಮಾಡಿದ್ದಾರೆ. ಅವರ ಬಳಿ ವಿಶ್ವದ ಅತ್ಯುತ್ತಮ ಬೈಕ್​ಗಳ ಸಂಗ್ರಹವಿದೆ. ಇದರ ಜೊತೆಗೆ ಕಾರುಗಳ ಬಗ್ಗೆಯೂ ಅಜಿತ್​ಗೆ ವಿಶೇಷ ಪ್ರೀತಿ. ಹಲವು ಅತ್ಯುತ್ತಮ ಕಾರುಗಳನ್ನು ಅವರು ಹೊಂದಿದ್ದಾರೆ. ಇದೀಗ ಇನ್ನೊಂದು ಕಾರನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ ನಟ ಅಜಿತ್. ಅಂದಹಾಗೆ ಈ ಕಾರಿಗೆ ಕೆಲವು ಕೋಟಿಗಳನ್ನೇ ವ್ಯಯಿಸಿದ್ದಾರೆ.

ಅಜಿತ್ ಕುಮಾರ್ ಗಾಡ ಕೆಂಪು ಬಣ್ಣದ ಅತ್ಯಾಧುನಿಕ ಫೆರಾರಿ ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 9 ಕೋಟಿ ರೂಪಾಯಿಗಳು. ಕಾರಿನ ಬದಿಯಲ್ಲಿ ಕೂತು ಅಜಿತ್ ಫೋಟೊಗೆ ಫೋಸು ನೀಡಿದ್ದಾರೆ. ಅಜಿತ್​ರ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.

ಅಜಿತ್ ಈಗ ಖರೀದಿ ಮಾಡಿರುವುದು ಫೆರಾರಿಯ ಎಸ್​ಎಫ್ 90 ಮಾಡೆಲ್ ಕಾರು. ಇದರ ಒಟ್ಟು ಬೆಲೆ ಭಾರತದಲ್ಲಿ 9 ಕೋಟಿ ಆಗಲಿದೆ. 3990 ಸಿಸಿಯ ಅತ್ಯಂತ ಶಕ್ತಿಶಾಲಿ ಕಾರು ಇದು. ಕೆಲವೇ ಸೆಕೆಂಡ್​ಗಳಲ್ಲಿ ಕಾರು 100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದೆ. ಹಲವು ಅತ್ಯಾಧುನಿಕ ತಂತ್ರಜ್ಞಾನವನ್ನು ಸಹ ಈ ಕಾರು ಒಳಗೊಂಡಿದೆ. ಅತ್ಯುತ್ತಮ ಸುರಕ್ಷಾ ತಂತ್ರಜ್ಞಾನ ಸಹ ಎಸ್​ಎಫ್ 90 ಕಾರಿನಲ್ಲಿ ಇದೆ.

ಇದನ್ನೂ ಓದಿ:ಅಜಿತ್​ ಪವಾರ್​ ಪಕ್ಷ ತೊರೆದ ನಾಲ್ವರು ಪ್ರಮುಖ ನಾಯಕರು, ಶರದ್​ ಪವಾರ್​ ಬಣಕ್ಕೆ ಮತ್ತೆ ಸೇರ್ಪಡೆ ಸಾಧ್ಯತೆ

ನಟ ಅಜಿತ್ ಕುಮಾರ್ ಬಳಿ ಹಲವು ದುಬಾರಿ ಕಾರುಗಳಿವೆ. 34 ಕೋಟಿ ಬೆಲೆಯ ಲ್ಯಾಂಬೊರ್ಗಿನಿ ಕಾರು ಸಹ ಅಜಿತ್ ಕುಮಾರ್ ಬಳಿ ಇದೆ. ಇದನ್ನು ಹೊರತುಪಡಿಸಿದರೆ ಲ್ಯಾಂಡ್ ರೋವರ್ ಡಿಸ್ಕವರಿ, ಮೆರ್ಸಿಡಿಜ್ ಮೇಬ್ಯಾಕ್, ಬಿಎಂಡಬ್ಲು ಇನ್ನೂ ಕೆಲವು ಅತ್ಯುತ್ತಮ ಕಾರುಗಳನ್ನು ಅಜಿತ್ ಕುಮಾರ್ ಹೊಂದಿದ್ದಾರೆ. ಜೊತೆಗೆ 24 ಲಕ್ಷ ಬೆಲೆಯ ಬಿಎಂಡಬ್ಲು 1000RR ಬೈಕು, 20 ಲಕ್ಷ ಬೆಲೆಯ ಅಪ್ರಿಲಿಯಾ ಕ್ಯಾಪನಾರ್ಡ್ ಬೈಕ್, 21 ಲಕ್ಷ ಬೆಲೆಯ ಬಿಎಂಡಬ್ಲು ಕೆ1300, 19 ಲಕ್ಷ ಬೆಲೆಯ ಕವಾಸಕಿ ನಿಂಜಾ ಬೈಕುಗಳಿವೆ.

ಅಜಿತ್ ಕುಮಾರ್ ಪ್ರಸ್ತುತ ‘ವಿಡ ಮಯುರ್ಚಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಬಳಿಕ ‘ಗುಡ್ ಬ್ಯಾಡ್ ಆಂಡ್ ಅಗ್ಲಿ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ‘ಕೆಜಿಎಫ್ 3’ ಸಿನಿಮಾದಲ್ಲಿ ನಟ ಯಶ್ ಜೊತೆಗೆ ಅಜಿತ್ ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ