ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2022 ಹಿನ್ನೆಲೆ ಇಂದು ದಸರಾ ಟಾಂಗಾ ಸವಾರಿಗೆ ಚಾಲನೆ ನೀಡಲಾಯಿತು. ದಂಪತಿಗಳಿಗೆ ಬಾಗಿನ ಕೊಟ್ಟು ಪುರಭವನದಿಂದ ಟಾಂಗಾ ಸವಾರಿ ಆರಂಭವಾಯಿತು. ಟಾಂಗಾ ಸವಾರಿಯಲ್ಲಿ 50 ದಂಪತಿಗಳು ಭಾಗಿಯಾಗಿದ್ದರು. ರೇಷ್ಮೆ ಸೀರೆ ತೊಟ್ಟ ಮಹಿಳೆಯರು, ಮೈಸೂರು ಪೇಟಾ ತೊಟ್ಟು ರೇಷ್ಮೆ ಶಲ್ಯ ಪಂಚೇ ಶರ್ಟ್ ಧರಸಿ ದಂಪತಿಗಳು ಕಂಗೋಳಿಸಿದರು. ಈ ಮೂಲಕ ಮೈಸೂರು ದಸರಾ ಗತವೈಭವವನ್ನ ಪುರುತತ್ವ ಇಲಾಖೆ ಮರುಕಳಿಸಿದೆ. 20 ದಿನ ಮದುವೆ ಆಗಿ ಟಾಂಗಾ ಸವಾರಿಗೆ ನವ ಜೋಡಿಗಳು ಆಗಮಿಸಿದ್ದರು. ಅತ್ತೆ ರಿಜಿಸ್ಟರ್ ಮಾಡಿಸಿ ಸರ್ಪೈಸ್ ಕೊಟ್ಟಿದ್ದಾರೆ, ಹಾಗಾಗಿ ಅವರಿಗೆ ಟಾಂಗಾ ಸವಾರಿ ಗಿಫ್ಟ್ ಎಂದು ಹುಡುಗ ಹೇಳಿದ್ದಾರೆ.
ಮೈಸೂರಿನಲ್ಲಿ ಗ್ರಾಮೀಣ ದಸರಾ
ನಿನ್ನೆ ಗ್ರಾಮೀಣ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಸುಮಾರು 2 ಕಿಲೋ ಮೀಟರ್ ಅದ್ಧೂರಿ ಮೆರವಣಿಗೆ ನಡೆಯಿತು. ಸರ್ಕಾರದ ಯೋಜನೆಗಳ ಸ್ತಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದವು. ಬೆಳಗ್ಗೆ 10 ಗಂಟೆಗೆ ಜಯಪುರದಲ್ಲಿ ಕಾರ್ಯಕ್ರಮ ಜರುಗಿತು. ಜೊತೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಸಂಸದ ಪ್ರತಾಪ್ ಸಿಂಹ, ಶಾಸಕ ಜಿ. ಟಿ ದೇವೇಗೌಡ ಸೇರಿ ಹಲವರು ಭಾಗಿಯಾಗಿದ್ದರು.
‘ದಸರಾ ದರ್ಶನ’ KSRTC ಬಸ್ಗಳಿಗೆ ಚಾಲನೆ
‘ದಸರಾ ದರ್ಶನ’ KSRTC ಬಸ್ಗಳಿಗೆ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ. 9.30ಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲನೆ ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಉಸ್ತುವಾರಿ ಸಚಿವರಿಗಾಗಿ ಕಾದು ಕಾದು ಶಾಸಕ ಹಾಗೂ ಅಧಿಕಾರಿಗಳು ಸುಸ್ತಾದರು. ವಿಶ್ವ ವಿಖ್ಯಾತ ದಸರಾ ನೋಡಲು ಜಿಲ್ಲಾಡಳಿತ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಸ್ಥಳೀಯ ಶಾಸಕ ರಾಮದಾಸ್ ಬಂದು ಒಂದು ಗಂಟೆಯಾದರು ಸಚಿವ ಸ್ಥಳಕ್ಕೆ ಬಂದಿರಲಿಲ್ಲ.
ಬೆಟ್ಟದ ಹೂವು ಸಿನಿಮಾ ಉದ್ಘಾಟನೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಬೆಟ್ಟದ ಹೂವು ಸಿನಿಮಾ ಉದ್ಘಾಟನೆ ಮಾಡಿದ ಮೂಲಕ ದಸರಾ ಚಲನ ಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ ಉದ್ಘಾಟನೆ ಮಾಡಿದರು. ಶಕ್ತಿಧಾಮ ಮಕ್ಕಳು ಕೂಡ ದಸರಾ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬರಲಿಲ್ಲ. ಬದಲಾಗಿ ಕಾಲೇಜ್ ಸ್ಟುಡೇಂಟ್ಸ್ ಜೊತೆ ಅಶ್ವಿನಿ ಸಿನಿಮಾ ನೋಡಿದರು. 5 ನಿಮಿಷ ಸಿನಿಮಾ ನೋಡಿ ಅಶ್ವಿನಿ ಹೊರಟರು. ಇಂದು ಸಂಜೆ 6.30ಕ್ಕೆ ಅಪ್ಪು ನಮನ ಹೆಸರಿನ ಕಾರ್ಯಕ್ರಮದೊಂದಿಗೆ ಯುವ ದಸರಾ ಉದ್ಘಾಟನೆಯಾಗಲಿದ್ದು, ಡಾ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್ ಗಾಯನವಿರಲಿದೆ. ಅಪ್ಪು ಸಿನಿಮಾದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ಈ ಬಾರಿಯ ಯುವ ದಸರಾ ಡಾ. ಪುನೀತ್ ರಾಜಕುಮಾರಗೆ ಅರ್ಪಣೆ ಆಗಲಿದೆ.
ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.