September prediction: ಸೆಪ್ಟೆಂಬರ್ ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಫಲಾಫಲಗಳು
September prediction: ಸೆಪ್ಟೆಂಬರ್ ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಫಲಾಫಲಗಳು
ಸೆಪ್ಟೆಂಬರ್ ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಫಲಾಫಲಗಳು
Follow us on
September prediction: ಸೆಪ್ಟೆಂಬರ್ ಮಾಸದಲ್ಲಿ ಜನಿಸಿದ ವ್ಯಕ್ತಿಗಳ ಫಲಾಫಲಗಳು
1) ಸೆಪ್ಟೆಂಬರ್ 1, 10, 19, 28 ಜನಿಸಿದವರ ಫಲಾಫಲಗಳು ನಿಮ್ಮ ಕಾರಕ ಗ್ರಹರು ಸೂರ್ಯ, ರಾಹು ಮತ್ತು ಬುಧರು. ಸೂರ್ಯ ಪ್ರಬಲನಾಗಿರುತ್ತಾನೆ. ನಿಮಗೆ ನೀವು ಯಾವ ಅದರಲ್ಲಿ ವಿಷಯವನ್ನೂ ಅಧ್ಯಯನ ಮಾಡಲು ಕೈಗೆತ್ತಿಕೊಳ್ಳುತ್ತೀರೋ ಬಹಳ ಪರಿಶ್ರಮಪಟ್ಟು ಅಭ್ಯಸಿಸುತ್ತೀರಿ. ನಿಮಗೆ ಭಾಷೆಯ ಮೇಲೆ ಒಳ್ಳೆಯ ಹಿಡಿತವಿರುತ್ತದೆ. ಯಾವುದೇ ಸೌಂದರ್ಯ ವಸ್ತುವಿರಲಿ ಇವರಿಗೆ ತುಂಬಾ ಇಷ್ಟ. ನೀವು ನಿಮಗೆ ತಕ್ಕಂತಹ ಕೆಲಸವನ್ನು ದಕ್ಕಿಸಿಕೊಳ್ಳುವುದು ಬಹಳ ಕಷ್ಟ. ನೀವು ಹಲವಾರು ದಿಕ್ಕುಗಳಲ್ಲಿ ಪ್ರಯತ್ನಪಡುವಿರಿ. ಯಾವ ದಿಕ್ಕಿನಲ್ಲಿ ಹೋಗಲು ಬಯಸುವಿರೋ ಆ ದಿಕ್ಕನ್ನು ಆರಿಸಿಕೊಂಡು ಹೋಗಲು ಮಧ್ಯ ವಯಸ್ಸು ದಾಟಿರುತ್ತದೆ. ನಿಮಗೆ ಹಣ ಮಾಡುವ ಆಸೆ ಇರುತ್ತದೆ. ಆದರೆ ಆ ಆಸೆ ಈಡೇರಲು ತುಂಬಾ ವರ್ಷಗಳೇ ಬೇಕಾಗುತ್ತದೆ.
ನೀವು ಬಹಳ ಸುಲಭವಾಗಿ ಉಬ್ಬಿಬಿಡುತ್ತೀರಿ. ಹಾಗೂ ಅಧಿಕ ಚಿಂತೆ ಮಾಡುವವರೂ ಆಗಿರುತ್ತೀರಿ. ನೀವು ಏಕಾಗ್ರಚಿತ್ತರಾಗಬೇಕು. ನಿಮ್ಮ ಗುರಿ ತಲುಪುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಗೆ ಮಾಡಬೇಕು. ಮಾಡಿ ಕಾರ್ಯ ನಿರ್ವಹಿಸಿದಲ್ಲಿ ಎಲ್ಲರಿಗಿಂತ ಸಫಲರಾಗುವಿರಿ. ಆರ್ಥಿಕ ಸ್ಥಿತಿ: ನಿಮ್ಮ ಆರ್ಥಿಕ ಸ್ತಿತಿ ಸಾಕಷ್ಟು ಅನುಕೂಲವಾಗಿರುವುದು. ನೀವು ಬೇರೆಯವರ ವಿಶ್ವಾಸವನ್ನು ಸುಲಭವಾಗಿ ಪಡೆಯುವಿರಿ. ನೀವು ಹಣವನ್ನು ವೃದ್ಧಿಸಿಕೊಳ್ಳಲು ವ್ಯಾಪಾರದಲ್ಲಿ ಹಣ ವಿನಿಯೋಗಿಸುವಿರಿ. ಸ್ವಾಸ್ಥ್ಯ: ನಿಮ್ಮ ಆರೋಗ್ಯ ಚೆನ್ನಾಗಿರುವುದು. ಅದಕ್ಕಾಗಿ ನೀವು ಒಳ್ಳೆಯ ಗಾಳಿಯಲ್ಲಿ ನಡಿಗೆ, ವ್ಯಾಯಾಮ ಮಾಡಿದರೆ ಅನುಕೂಲ. ವರ್ಣ ಹಾಗೂ ರತ್ನ: ತಿಳಿಹಳದಿ, ಸ್ವರ್ಣಬಣ್ಣ, ಕಿತ್ತಳೆವರ್ಣ, : ಹಾಗೂ ತಿಳಿನೀಲಿ ಶುಭಕರವಾಗಿದೆ. ವಜ್ರ, ಪುಷ್ಯರಾಗ, ನೀಲಿ ನಿಮಗೆ ಭಾಗ್ಯಶಾಲಿ ರತ್ನಗಳಾಗಿವೆ.
2) ಸೆಪ್ಟೆಂಬರ್ 2, 11, 20, 29ರಂದು ಜನಿಸಿದ ವ್ಯಕ್ತಿಗಳ ಫಲಾಫಲಗಳು ನಿಮ್ಮ ಕಾರಕ ಗ್ರಹಗಳು ಚಂದ್ರ, ಕೇತು ಹಾಗೂ ಬುಧರು. ನೀವು ತುಂಬಾ ಓದುವ ಆಸೆ ಹೊಂದಿರುತ್ತೀರಿ. ನಿಮಗೆ ಆಡಂಬರ ಇಷ್ಟ ಇರುವುದಿಲ್ಲ. ತೋರ್ಪಡಿಕೆ ಇಲ್ಲದ ಸರಳ ಜೀವನ ನಿಮ್ಮದು. ಯಾವ ಕೆಲಸ ಮಾಡುವಿರೋ ಅದರಲ್ಲಿ ಪೂರ್ಣಶ್ರದ್ದೆ, ಪ್ರಾಮಾಣಿಕತೆಯಿಂದ ಮಾಡುವಿರಿ. ಆದರೆ ನಿಮಗೆ ಆತ್ಮವಿಶ್ವಾಸ ಮತ್ತು ನಿಮ್ಮಯೋಗ್ಯತೆಯ ಮೇಲೆ ನಂಬಿಕೆಯಿಲ್ಲದ ಕಾರಣ ಉತ್ಸಾಹ ಕಡಿಮೆ ಇರುತ್ತದೆ. ಪ್ರಯತ್ನಪಟ್ಟರೆ ನೀವು ಬಲು ಸುಲಭವಾಗಿ ಈ ದುರ್ಬಲತೆಯನ್ನು ದೂರಮಾಡಿಕೊಳ್ಳಬಹುದು. ನೀವು ಸಾಹಿತ್ಯದಲ್ಲಿ, ಕಲೆಯಲ್ಲಿ ಕೆಮಿಸ್ಟ್ ಆಗಿ ಯಾವುದಾದರೂ ವಿಜ್ಞಾನದ ವಿಷಯದಲ್ಲಿ ಸಫಲತೆಯನ್ನು ಹೊಂದುತ್ತೀರಿ. ನಿಮಗೆ ಹೂವು, ತೋಟಗಾರಿಕೆ, ಪ್ರಕೃತಿಗೆ ಸಂಬಂಧಿಸಿದ ವಿಷಯದಲ್ಲಿ ಪ್ರೀತಿ ಇರುತ್ತದೆ. ಆದರೆ ಅದರಲ್ಲಿ ಕೆಲಸ ಮಾಡುವ ಭಾವನೆಯಿಲ್ಲದ ಕಾರಣ ಧನಲಾಭವುಂಟಾಗುವುದಿಲ್ಲ.
ನೀವು ಸ್ನೇಹಿತರನ್ನು ಮಾಡಿಕೊಳ್ಳುವ ಗುಣ ಹೊಂದಿರುತ್ತೀರಿ. ನೀವು ದೊಡ್ಡವರಾದ ಮೇಲೆ ವಿವಾಹವಾಗುವುದು ಒಳ್ಳೆಯದು. ಮದುವೆಯಾದರೆ ಕ್ರಾಂತಿಕಾರಿ ವಿಚಾರಧಾರೆಯಿಂದ ಬೇಗ ತೊಂದರೆಯುಂಟಾಗುತ್ತದೆ. ಒಮ್ಮೊಮ್ಮೆ ನೀವು ಉದಾಸಿಗಳಾಗಿಬಿಡುತ್ತೀರಿ. ನಿಮಗೆ ಚಂದ್ರನ ಪ್ರಭಾವ ಅಧಿಕವಾಗಿರುತ್ತದೆ. ನಿಮಗೆ ಶುಕ್ಲ ಪಕ್ಷವು ಶುಭವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಿಕೊಳ್ಳಿ. ಕೃಷ್ಣಪಕ್ಷದಲ್ಲಿ ಸುಮ್ಮನಿದ್ದುಬಿಡಿ. ನಿರಾಸೆ ಹಾಗೂ ಉದಾಸಿ ಮನೋಭಾವದಿಂದ ದೂರವಿರಿ. ಇಲ್ಲದಿದ್ದರೆ ನಿಮ್ಮ ಜೀರ್ಣಾಂಗದ ಮೇಲೆ ಭಾರೀ ಪ್ರಭಾವ ಬೀರುವುದು. ನೀವು ಬೇರೆಯವರ ಮನಸ್ಸನ್ನು ಓದುವ ಗುಣವನ್ನು ಹೊಂದಿರುತ್ತೀರಿ ಅದನ್ನು ವೃದ್ಧಿಸಿಕೊಳ್ಳಿ. ಆರ್ಥಿಕ ಸ್ಥಿತಿ: ಹಣ ಸಂಪಾದಿಸುವ ಆಸೆ ಅಧಿಕವಾಗಿ ನಿಮಗಿರುವುದು. ನೀವು ವ್ಯಾಪಾರದ ಕಡೆ ಆಕರ್ಷಿತರಾಗುತ್ತೀರಿ. ಆದರೆ ನೀವು ಒಳ್ಳೆಯ ಹಣವನ್ನು ಯಾವುದಾದರೂ ಪ್ರತಿಷ್ಠಾನದ ಪ್ರಮುಖರಾಗಿ ಪಡೆದುಕೊಳ್ಳುತ್ತೀರಿ. ಸ್ವಾಸ್ಥ್ಯ: ನಿಮಗೆ ಜೀರ್ಣಾಂಗದ ತೊಂದರೆಯುಂಟಾಗುವುದು. ಹಾಗಾಗಿ ಪಠ್ಯದಲ್ಲಿರುವುದು ಒಳ್ಳೆಯದು. ವರ್ಣ ಹಾಗೂ ರತ್ನ: ಹಸಿರು, ಸ್ಟೇಟ್ ವರ್ಣ, ನೀಲಿಬಣ್ಣ ಅನುಕೂಲಕರ, ಚಂದ್ರಕಾಂತಮಣಿ ಹಾಗೂ ಮುತ್ತು ಶುಭಕರ.
3) ಸೆಪ್ಟೆಂಬರ್ 3, 12, 21, 30ನೇ ತಾರೀಖು ಜನಿಸಿದವರ ಫಲಾಫಲಗಳು ನಿಮಗೆ ಕಾರಕರು ಗುರು ಹಾಗೂ ಬುಧರು. ನೀವು ಬಹಳ ಮಹತ್ವಾಕಾಂಕ್ಷಿಗಳು, ಮೇಲೇರಬೇಕೆಂದು ಬಯಸುವರು. ನೀವು ಯಾವುದೇ ಪದವಿಗೆ ಏರಿದರೂ ಸಂತುಷ್ಟಿಗೊಳ್ಳಲಾರಿರಿ. ನಿಮಗೆ ನಿಮ್ಮ ಪಕ್ಕದವರ ಪ್ರಭುತ್ವ ಸಾಧಿಸುವುದು ಮೇಲೆ ಸ್ವಾಭಾವಿಕವಾಗಿರುತ್ತದೆ. ನಿಮ್ಮ ಯೋಜನೆಗಳನ್ನು ಪೂರ್ಣಮಾಡಲು ದೃಢ ಇಚ್ಛಾಶಕ್ತಿ ಮತ್ತು ಸಂಕಲ್ಪವಿರಬೇಕು. ಹಾಗೂ ಬೇರೆಯವರ ವಿರೋಧವನ್ನು ಮುಂದುವರಿಸಬಾರದು. ದುಡ್ಡು ಮಾಡುವ ಹುಮ್ಮಸ್ಸಿನಲ್ಲಿ ಸಾಂಸಾರಿಕ ಸುಖಕ್ಕೂ ಬೆಲೆಕೊಡಲಾರಿರಿ. ಆದರೆ ನಿಮ್ಮದೇ ಆದ ಶೈಲಿಯಲ್ಲಿ ಉದಾರಿಗಳೂ, ಉದಾತ್ತರೂ ಆಗಿರುತ್ತೀರಿ. ನಿಮ್ಮ ವ್ಯವಹಾರದಲ್ಲಿ ನೀವು ವಿವೇಕದಿಂದ ಕೆಲಸ ಮಾಡುತ್ತೀರಿ. ನಿಮ್ಮ ಬುದ್ದಿ ವ್ಯಾವಹಾರಿಕ ರೀತಿಯಲ್ಲಿರುತ್ತದೆ. ಎದುರಿಗೆ ಬರುವ ಯಾವ ವಿಷಯವನ್ನು ಬೇಗನೆ ಮುಗಿಸಿಬಿಡುತ್ತೀರಿ.
ನೀವು ಉಚ್ಚಶ್ರೇಣಿಯ ಬುದ್ದಿಜೀವಿಯಾಗಿರುವಿರಿ. ನಿಮ್ಮ ಜೀವನದಲ್ಲಿ ಕಾಲಕಾಲಕ್ಕೆ ಬರತಕ್ಕಂತಹ ಕಠಿಣತರ ಸಮಸ್ಯೆಗಳನ್ನು ಮನಸ್ಸಿನಿಂದ ಸ್ವೀಕರಿಸುತ್ತೀರಿ. ಮಿತ್ರರನ್ನು ಆರಿಸಿಕೊಳ್ಳುವಾಗ ಸಾವಧಾನದಿಂದಿರುವಿರಿ. ಕೆಲವರೇ ನಿಮಗೆ ಹತ್ತಿರಬರುವರು. ಮದುವೆಯಿಂದ ಒಂದು ವಿಚಿತ್ರ ಅನುಭವ ಆಗುವ ಸಾಧ್ಯತೆ ಇದೆ. ವಿವಾಹವು ನಿಮಗಿಂತ ಕೆಳಗೆ ಕೆಲಸ ಮಾಡುವವರೊಂದಿಗೆ ಆಗುವುದು. ನೀವು ಮನೆ ಅಥವಾ ನಿವೇಶನಗಳಿಗೆ ಬಂಡವಾಳ ಹಾಕುವುದರಿಂದ ಒಳ್ಳೆಯದಾಗುವುದು. ನೀವು ನಿಮ್ಮನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ನಿಮ್ಮ ಸ್ನೇಹಿತರಿಗಿಂತ ಬಹಳ ಎತ್ತರಕ್ಕೆ ಏರುತ್ತೀರಿ. ಆರ್ಥಿಕ ಸ್ಥಿತಿಗತಿ: ಹಣದ ವಿಷಯದಲ್ಲಿ ನೀವು ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ನಿಮ್ಮ ಬಲದಿಂದ ಒಂದೊಂದೇ ಹೆಜ್ಜೆ ಮುಂದೆ ಹೋಗುತ್ತೀರಿ. ಸ್ವಾಸ್ಥ್ಯ: ಪಿತ್ತಕೋಶದ ತೊಂದರೆಯುಂಟಾಗುವುದು. ಮಧುಮೇಹ ಬರುವ ಸಾಧ್ಯತೆ ಇದೆ. ಅಸಫಲತೆಯ ಹಿಂದೆ ಓಡುತ್ತಾ ಸ್ವತಃ ತಮ್ಮನ್ನು ತಾವು ಉಪೇಕ್ಷೆ ಮಾಡಿಕೊಳ್ಳುತ್ತಾರೆ. ವರ್ಣ ಹಾಗೂ ರತ್ನ: ಎಲ್ಲಾ ರೀತಿಯ ತಿಳಿವರ್ಣಗಳು ಅನುಕೂಲಕರ, ವಜ್ರ ಹಾಗೂ ಹೊಳೆಯುವ ರತ್ನಗಳು ನಿಮಗೆ ಆಗಿಬರುತ್ತವೆ.
4) ಸೆಪ್ಟೆಂಬರ್ 4, 13, 22ನೇ ದಿನದಂದು ಜನಿಸಿದ ವ್ಯಕ್ತಿಗಳ ಫಲಾಫಲಗಳು ನಿಮ್ಮ ಕಾರಕ ಗ್ರಹರು ರಾಹು, ಸೂರ್ಯ ಹಾಗೂ ಬುಧರು. ರಾಹುವಿನ ಪ್ರಭಾವ ನಿಮಗೆ ಬಹಳಷ್ಟಿದೆ. ಇದರಿಂದ ನಿಮ್ಮ ಕೆಲಸಗಳಲ್ಲಿ ಮೌಲಿಕತೆ ಹಾಗೂ ಸ್ವತಂತ್ರತೆ ಇರುತ್ತದೆ ಎಂದರೆ ಬಹಳಷ್ಟು ಜನ ನಿಮ್ಮನ್ನು ವಿಚಿತ್ರವಾಗಿ ಕಾಣುತ್ತಾರೆ. ನೀವು ಸುಲಭವಾಗಿ ಮಿತ್ರರನ್ನು ಮಾಡಿಕೊಳ್ಳಲಾರಿರಿ. ಯಾವ ಯೋಜನೆಗಳಿಗೆ ಸಹಾಯ ಸ್ನೇಹಿತರಾಗಲೀ ನಿಮ್ಮ ಮಾಡುವವರಾಗುವುದಿಲ್ಲ. ನೀವು ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೀರಿ. ನಿಮಗೆ ಪ್ರಬಲ ಇಚ್ಛಾಶಕ್ತಿ ಹಾಗೂ ದೃಷ್ಟಿ ಸಂಕಲ್ಪ ಇರುತ್ತದೆ. ನೀವು ಹಠಮಾರಿಗಳೂ ಆಗಿರುತ್ತೀರಿ. ಹಣಕಾಸಿನ ವಿಷಯದಲ್ಲಿ ನೀವು ಬೇರೆಯವರಂತೆ ಸಫಲರಾಗಿರುವುದಿಲ್ಲ. ಈ ಗ್ರಹಯೋಗದಿಂದ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುವುದಿಲ್ಲ. ನಿಮ್ಮ ಸಂಗಾತಿ ನಿಮ್ಮ ಜೀವನಶೈಲಿಯನ್ನು ಒಪ್ಪಿಕೊಂಡಲ್ಲಿ ಮಾತ್ರ ವೈವಾಹಿಕ ಜೀವನ ಸಫಲವಾಗುತ್ತದೆ. ದರ್ಶನ ಶಾಸ್ತ್ರ, ವಿಜ್ಞಾನ, ರಸಾಯನ ಶಾಸ್ತ್ರ, ವಿದ್ಯುತ್, ದೂರದರ್ಶನ ಅಥವಾ ರೇಡಿಯೋ ವಿಭಾಗಗಳಲ್ಲಿ ನಿಮಗೆ ಸಫಲತೆ ಸಿಗುವುದು. ಆರ್ಥಿಕ ಸ್ಥಿತಿಗತಿ: ನಿಮಗೆ ಕಾನೂನು ಹೋರಾಟದಿಂದ ಧನಪ್ರಾಪ್ತಿಯಾಗುತ್ತದೆ. ನೀವು ಕಷ್ಟಪಟ್ಟರೆ ಮಾತ್ರ ಫಲ. ವ್ಯಾಪಾರದಲ್ಲಿ ನಿಮ್ಮ ಪರಿಶ್ರಮದ ಮೇಲೆ ಸಫಲತೆ ನಿಂತಿರುತ್ತದೆ.
ಸ್ವಾಸ್ಥ್ಯ: ಆರೋಗ್ಯದ ದೃಷ್ಟಿಯಿಂದ ನೀವು ವೈದ್ಯರುಗಳಿಗೇ ಒಗಟಾಗುವಿರಿ. ಇದ್ದಕ್ಕಿದ್ದ ಹಾಗೆ ಅಸಾಮಾನ್ಯ ಕಾಯಿಲೆಗೆ ಒಳಗಾಗುವಿರಿ. ಆದರೆ ಬೇಗನೇ ಗುಣಮುಖರಾಗುವಿರಿ. ವರ್ಣ ಹಾಗೂ ರತ್ನ: ನೀಲಿ, ಸುವರ್ಣವರ್ಣ, ಹಳದಿ, ತಾಮ್ರವರ್ಣ, ಕಂದುಬಣ್ಣ ನಿಮಗೆ ಲಾಭಪ್ರದವಾಗಿರುತ್ತದೆ. ನೀಲಿ, ಪುಷ್ಯರಾಗ, ವಜ್ರ ಮುಂತಾದ ಹೊಳಪು ರತ್ನಗಳು ಭಾಗ್ಯಪ್ರದ.
5) ಸೆಪ್ಟೆಂಬರ್ 5, 14, 23ರಂದು ಜನಿಸಿದ ವ್ಯಕ್ತಿಗಳ ಫಲಾಫಲಗಳು ನಿಮ್ಮ ಕಾರಕ ಗ್ರಹರು ಬುಧರು. ಐದರ ಪ್ರಭಾವವು ನಿಮ್ಮ ಮೇಲೆ ಅಧಿಕವಾಗಿ ಆಗುತ್ತದೆ. ಇವರು ಐದರ ಸಂಖ್ಯೆಯ ವ್ಯಕ್ತಿಗಳೊಂದಿಗೇನೇ ಹೆಚ್ಚಾಗಿ ಸಂಪರ್ಕ ಹೊಂದಿರುತ್ತಾರೆ. 21 ಆಗಸ್ಟ್‌ನಿಂದ 23 ಸೆಪ್ಟೆಂಬರ್‌ವರೆಗೆ ಜನಿಸಿದ ವ್ಯಕ್ತಿಗಳ ಮೇಲೆ ಬೇರೆ ವರ್ಗಗಳಿಗಿಂತ ಕಡಿಮೆ ಭಾಗ್ಯಶಾಲಿಗಳಾಗಿರುತ್ತಾರೆ. ನೀವು ಕೆಲಸಕ್ಕೆ ಹೋಗುವವರಾಗಿರುತ್ತೀರಿ. ಸುಮ್ಮನೆ ಮನೆಯಲ್ಲಿ ಕೂರಲಾರಿರಿ. ನೀವು ಬುದ್ದಿ ಮತ್ತು ಮನಸ್ಸಿನ ಯೋಗ್ಯತೆಯ ಮೇಲೆ ಮಾಡುವ ಕೆಲಸದಲ್ಲಿ ಸಾಫಲ್ಯವನ್ನು ಪಡೆಯುತ್ತೀರಿ. ನೀವು ದುಃಖಿಗಳಾಗಿಬಿಡುತ್ತೀರಿ. ಬಹಳ ದೋಣಿಗಳ ಮೇಲೆ ಕಾಲಿಡುತ್ತೀರಿ. ಎಷ್ಟೋ ಸಲ ದಾರಿ ಬದಲಿಸಿಬಿಡುತ್ತೀರಿ.
ನೀವು ಎಲ್ಲೇ ಹೋದರೂ ಬಹಳ ಸುಲಭವಾಗಿ ಮಿತ್ರರನ್ನು ಮಾಡಿಕೊಳ್ಳುತ್ತೀರಿ. ನೀವು ಭಾಷೆಯನ್ನು ಕಲಿಯುವ ಬದಲು ಅದನ್ನು ಮಾತನಾಡುತ್ತೀರಿ. ನೀವು ಅನೇಕ ಮನೆಗಳನ್ನು ಕಟ್ಟುತ್ತೀರಿ. ಆದರೆ ಯಾವುದಾದರಲ್ಲೂ ಸರಿಯಾಗಿ ಇರಲಾರಿರಿ. ನಿಮ್ಮಲ್ಲಿ ಚೆನ್ನಾಗಿ ವ್ಯವಹಾರ ಕುಶಲತೆ ಇರುತ್ತದೆ. ಎಲ್ಲಿ ಹೋಗುತ್ತೀರೋ ಅಲ್ಲಿ ಜನರು ನಿಮ್ಮನ್ನು ಮುತ್ತುತ್ತಾರೆ. ಆದರೆ ನೀವು ಸಾವಧಾನಿಗಳಾಗಿರಬೇಕು. ಇಲ್ಲದಿದ್ದರೆ ನಿಮ್ಮಪತನಕ್ಕೆ ನೀವೇ ಕಾರಣರಾಗುತ್ತೀರಿ. ನಿಮ್ಮ ಸೇರುವ ಸ್ವಭಾವ ಎಲ್ಲರಿಗೂ ಹಿತವಾಗಿರುತ್ತದೆ. ನಿಮಗೆ ಬೇಗನೆ ಹಣ ಮಾಡುವ ಭಾವನೆ ಇರುತ್ತದೆ. ಆರ್ಥಿಕ ಸ್ಥಿತಿ: ಹಣಕಾಸಿನ ದೃಷ್ಟಿಯಿಂದ ನಿಮಗೆ ಯಾವುದೇ ಹಾನಿಯಾಗುವುದಿಲ್ಲ. ಅಥವಾ ಹಣ ಸಂಪಾದಿಸುವುದರಲ್ಲಿ ಯಾವ ತಡೆಯೂ ಇರುವುದಿಲ್ಲ. ಆದರೆ ಹಣದ ಉಳಿತಾಯ ಭವಿಷ್ಯಕ್ಕಾಗಿ ಮಾಡುವುದಿಲ್ಲ. ಸ್ವಾಸ್ಥ್ಯ: ಸ್ನಾಯು ನೋವು ನಿಮಗೆ ಆಗಾಗ್ಗೆ ಬರುತ್ತಿರುತ್ತದೆ. ವರ್ಣ ಹಾಗೂ ರತ್ನ: ಎಲ್ಲ ತಿಳಿ ವರ್ಣಗಳೂ ಅನುಕೂಲಕರ. ನಿಮ್ಮ ಭಾಗ್ಯಶಾಲಿ ರತ್ನ ವಜ್ರ ಹಾಗೂ ಎಲ್ಲಾ ರೀತಿಯ ಹೊಳಪಿನ ರತ್ನಗಳು.
6) ಸೆಪ್ಟೆಂಬರ್ 6, 15, 24ರಂದು ಜನಿಸಿದ ವ್ಯಕ್ತಿಯ ಫಲಾಫಲಗಳು ನಿಮಗೆ ಬುಧ ಹಾಗೂ ಶುಕ್ರರು ಕಾರಕರು, ಶುಕ್ರನ ಗುಣ ನಿಮಗೆ ಪೂರ್ಣರೂಪದಲ್ಲಿ ಆಗಿ ನಿಮ್ಮ ಸ್ವಭಾವ ಅತ್ಯಧಿಕವಾಗಿ ಸಹಾನುಭೂತಿಯುತವಾಗಿರುತ್ತದೆ. ಆದರೆ ಪ್ರೇಮಪ್ರಸಂಗಗಳಲ್ಲಿ ಸಾಕಷ್ಟು ಕಷ್ಟಗಳು ಬರುವ ಸಂಭವವಿರುತ್ತದೆ. ಸಾಮಾನ್ಯವಾಗಿ ಎರಡು ಪ್ರೇಮ ಪ್ರಸಂಗಗಳು ಕಂಡುಬರುತ್ತವೆ. ಪ್ರಾರಂಭದಲ್ಲಿ ನೀವು ನಿಮಗೆ ವಿರೋಧವಾದ ವ್ಯಕ್ತಿಯೊಂದಿಗೆ ಸಂಪರ್ಕವಿಟ್ಟು ಕೊಂಡಿರುತ್ತೀರಿ. ನಂತರ ನಿಮಗೆ ಸರಿಹೊಂದುವ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಳ್ಳುತ್ತೀರಿ. ನೀವು ಬೇಗನೆ ವಯಸ್ಸಾದವರಂತೆ ಜವಾಬ್ದಾರಿ ತೆಗೆದುಕೊಳ್ಳುತ್ತೀರಿ. ಪ್ರಾರಂಭದಿಂದಲೇ ನಿಮಗೆ ಎರಡು ದಾರಿ ತೆಗೆದುಕೊಂಡಿರುತ್ತದೆ. ಒಂದು ಶುದ್ಧ ಸಾಂಸಾರಿಕ ಜೀವನ ಮತ್ತೊಂದು ಆಧ್ಯಾತ್ಮಿಕ ಜೀವನ, ನೀವು ಯಾವುದಾದರೊಂದು ಜೀವನವನ್ನು ಆರಿಸಿಕೊಳ್ಳುವಿರಿ. ನೀವು ತೆರೆದ ವ್ಯಕ್ತಿತ್ವದವರು. ಕ್ರೀಡಾಪ್ರಿಯರು ಆಗಿರುತ್ತೀರಿ. ವ್ಯವಸಾಯದಲ್ಲಿ ನಿಮಗೆ ಸಾಫಲ್ಯವಿದೆ. ಬುಧ ಶುಕ್ರರ ಗ್ರಹಯೋಗದಲ್ಲಿ ಜನಿಸಿದ ಕಾರಣ ಸಂಗೀತ, ಚಿತ್ರಕಲೆ, ನಾಟಕ ಮುಂತಾದ ಲಲಿತಕಲೆಗಳಲ್ಲಿ ಸಫಲತೆಯನ್ನು ಕಾಣುವಿರಿ. ಏನೇ ಆಗಲಿ ಯಾವ ವೃತ್ತಿಯನ್ನೇ ಅವಲಂಬಿಸಿದರೂ ಅದರಲ್ಲಿ ನೀವು ಉನ್ನತ ಪದವಿಯನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ: ಬಹಳ ಕಷ್ಟದಿಂದ ಮಿತ್ರರ ಸಹಾಯ ಸಿಗುವುದು. ಉಡುಗೊರೆ ಅಥವಾ ಪಿತೃ ಧನದಿಂದ ಧನ ಪ್ರಾಪ್ತಿಯುಂಟಾಗುತ್ತದೆ. ಆರೋಗ್ಯ: ನೀವು ಆರೋಗ್ಯರಂತರು. ಗಂಟಲು, ಶ್ವಾಸಕೋಶಗಳಿಗೆ ತೊಂದರೆಯಾಗುವ ಸಂಭವವಿದೆ. ವರ್ಣ ಮತ್ತು ರತ್ನ: ನೀಲಿಬಣ್ಣದ ಎಲ್ಲಾ ಶೇಡುಗಳೂ, ಬಿಳಿ, ಕ್ರೀಂ ಹಾಗೂ ಹಸಿರುಬಣ್ಣ ಅನುಕೂಲಕರ, ನೀಲಮಣಿ
7) ಸೆಪ್ಟೆಂಬರ್ 7, 16, 25 ರಂದು ಜನಿಸಿದ ವ್ಯಕ್ತಿಗಳ ಫಲಾಫಲಗಳು ನಿಮ್ಮ ಕಾರಕ ಗ್ರಹರು ಚಂದ್ರ, ಬುಧ ಹಾಗೂ ಕೇತು. ಜೂನ್ ಮಾಹೆಯ ಈ ದಿನಗಳಂದು ಜನಿಸಿದ ವ್ಯಕ್ತಿಗಳ ಸ್ವಭಾವ ನಿಮ್ಮ ಸ್ವಭಾವ ಹೆಚ್ಚು ಕಮ್ಮಿ ಒಂದೇ ಆಗಿರುತ್ತದೆ. ಆದರೆ ನೀವು ಅವರಷ್ಟು ಓಜಸ್ವಿಗಳಾಗಿರುವುದಿಲ್ಲ. ನಿಮ್ಮಲ್ಲಿ ಅವರಂತೆಯೇ ಆದರ್ಶ ವಿಚಾರಗಳು ಇರುತ್ತವೆ. ಆದರೆ ನೀವು ಅವರಿಗಿಂತ ಹೆಚ್ಚು ಭೌತಿಕವಾದಿಗಳಾಗಿರುವಿರಿ. ನೀವೂ ಕೂಡ ರಹಸ್ಯವಾದ ಹಾಗೂ ಗುಪ್ತ ವಿದ್ಯೆಗಳ ಕಡೆಗೆ ಸಾಕಷ್ಟು ಆಕರ್ಷಿತರಾಗುತ್ತೀರಿ. ಆದರೆ ಹೆಚ್ಚು ಯೋಚನೆ ಮಾಡುವವರೂ, ಅನುಮಾನ ಪಡುವವರೂ ಆಗಿರುತ್ತೀರಿ. ಪ್ರತಿಯೊಂದು ವಿಷಯವನ್ನೂ ತರ್ಕಮಾಡಿ ತಿಳಿದುಕೊಳ್ಳುವಿರಿ. ಒಮ್ಮೆ ನಿಮ್ಮ ಮನಸ್ಸಿಗೆ ತೃಪ್ತಿಯಾದರೆ ನಿಮ್ಮ ನಂಬಿಕೆ ಪ್ರಾಮಾಣಿಕವಾಗಿರುತ್ತದೆ. ಆದರೆ ನಿಮ್ಮ ವಿಚಾರವನ್ನು ಬೇರೆಯವರ ಮೇಲೆ ಹೊರಿಸುವುದಿಲ್ಲ.
ನೀವು ಮನೋವಿಜ್ಞಾನ ಮತ್ತು ಲೇಖಕ, ಸಂಗೀತಗಾರ, ರಸಾಯನಶಾಸ್ತ್ರ ಉದ್ಯೋಗಕೊಡಿಸುವುದರ ರೂಪದಲ್ಲಿ ಸಫಲರಾಗುತ್ತೀರಿ. ಭೌತಿಕ ದೃಷ್ಟಿಯಿಂದ ಜೀವನದ ಪ್ರಾರಂಭದಲ್ಲಿ ನೀವು ಸುಖವಾಗಿರಲು ಸಾಧ್ಯವಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ನಿಮ್ಮ ವೃತ್ತಿಯಿಂದ ಹಣ, ಪದವಿ, ಸಫಲತೆ ಉಂಟಾಗುವುದು. ನೀವು ವೃದ್ದರಿಗೆ ಪ್ರಿಯರು. ಅರ್ಥಿಕ ಸ್ಥಿತಿ: ಹಣಕಾಸಿನ ಸ್ಥಿತಿಯಿಂದ ಅತ್ಯಧಿಕ ಲಾಭದಾಯಕವಾಗಿರುವುದು. ಬೇರೆಯವರಿಗೆ ನಿಮ್ಮಿಂದ ಬಹಳ ಉಪಯೋಗವಿರುವುದು. ಆರೋಗ್ಯ: ನಿಮ್ಮ ಆರೋಗ್ಯ ಉತ್ತಮವಾಗಿರುವುದು. ವರ್ಣ ಹಾಗೂ ರತ್ನ: ಸ್ಲೇಟ್ ಬಣ್ಣ, ಹಸಿರು, ಬಿಳಿ, ಕ್ರೀಂ ವರ್ಣ ಅನುಕೂಲಕರ. ಮುತ್ತು, ಚಂದ್ರಕಾಂತ ಮಣಿ ಭಾಗ್ಯಶಾಲಿ ರತ್ನಗಳಾಗಿರುತ್ತವೆ.
8) ಸೆಪ್ಟೆಂಬರ್ 8,17, 26ರಲ್ಲಿ ಜನಿಸಿದ ವ್ಯಕ್ತಿಗಳ ಫಲಾಫಲಗಳು ನಿಮ್ಮ ಕಾರಕ ಗ್ರಹರು ಶನಿ, ಬುಧ. ನಿಮ್ಮ ಸ್ವಭಾವದಲ್ಲಿ ಬಹಳಷ್ಟು ಸಾಮ್ಯತೆ ಜೂನ್ ತಿಂಗಳು ಇದೇ ತಾರೀಖಿನಲ್ಲಿ ಹುಟ್ಟಿದವರೊಂದಿಗೆ ಇರುತ್ತದೆ. ನೀವು ಅವರಂತೆ ಓಜಸ್ವಿ ಹಾಗೂ ಉಗ್ರರೂ ಆಗಿರುವುದಿಲ್ಲ. ನಿಮ್ಮ 25 ಅನೇಕ ವರ್ಷದ ಒಳಗೆ ಅದಾದನಂತರ ಕಷ್ಟಗಳೆನ್ನೆದುರಿಸಬೇಕಾಗುತ್ತದೆ. ಪ್ರತಿಕೂಲ ವಾತಾವರಣದಿಂದ ಮುಕ್ತರಾಗುವಿರಿ ಮತ್ತು ನಿಮ್ಮ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ. ನೀವು ಗಂಭೀರರಾಗುವಿರಿ. ನಿಮ್ಮ ಪಾಡಿಗೆ ನೀವಿರುವಿರಿ. ಸಾಮಾನ್ಯ ಜನರೊಂದಿಗೆ ನಿಮ್ಮ ಧೋರಣೆ ಸರಿಯಿರುವುದಿಲ್ಲ. ನಿಮ್ಮ ಕೆಲಸದಲ್ಲಿ ಕೆಲಸದಲ್ಲಿ ನೀವು ಪ್ರಾಮಾಣಿಕರಾಗುವಿರಿ. ಆದರೆ ಅದಕ್ಕೆ ತಕ್ಕ ಪ್ರತಿಫಲ ನಿಮಗೆ ಪೂರ್ತಿ ಸಿಗುವುದಿಲ್ಲ.
ನೀವು ಹಳೆಯ ಪುಸ್ತಕಗಳು, ಪುಸ್ತಕಾಲಯ ಮತ್ತು ಸಂಗ್ರಹಾಲಯಗಳನ್ನು ಇಷ್ಟಪಡುತ್ತೀರಿ ಮತ್ತು ಪುಸ್ತಕ ಬರೆಯಲು ಇಷ್ಟಪಡುತ್ತೀರಿ. ಆರ್ಥಿಕ ಸ್ಥಿತಿ: ನಿಮಗೆ ಹಣ ಕೈಯಿಂದ ಆಗಾಗ್ಗೆ ಹೋಗುತ್ತಿರುತ್ತದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಕಲ್ಲಿದ್ದಲಿನ ವ್ಯಾಪಾರದಿಂದ ಲಾಭವಿರುತ್ತದೆ. ಆರೋಗ್ಯ: ಸಾಧಾರಣ ಆರೋಗ್ಯ ಆದರೂ ಉತ್ಸಾಹಿಗಳಾಗಿರುತ್ತೀರಿ. ವರ್ಣ ಹಾಗೂ ರತ್ನ: ಎಲ್ಲಾ ತಿಳಿವರ್ಣದ ಶೇಡುಗಳು ನಿಮಗೆ ಆಗಿಬರುತ್ತದೆ. ನೀಲಮಣಿ ನಿಮಗೆ ಅನುಕೂಲಕರ.
9) ಸೆಪ್ಟೆಂಬರ್ 9, 18, 27 ರಂದು ಜನಿಸಿದ ವ್ಯಕ್ತಿಗಳ ಫಲಾಫಲಗಳು 9 ಹಾಗೂ 18 ಸೆಪ್ಟೆಂಬರ್‌ರಂದು ಜನಿಸಿದ ವ್ಯಕ್ತಿಗಳಿಗೆ ಕುಜ : ಹಾಗೂ ಬುಧರ ಪ್ರಭಾವ ಅಧಿಕವಾಗಿರುತ್ತದೆ. ನಿಮ್ಮದು ಜೂನ್‌ನಲ್ಲಿ ಈ ತಾರೀಖಿನಂದು ಹುಟ್ಟಿದವರದು ಒಂದೇ ಗುಣವಾಗಿರುತ್ತದೆ. ವ್ಯತ್ಯಾಸವೆಂದರೆ ನೀವು ನಿಮ್ಮ ವಿಚಾರಗಳಲ್ಲಿ, ಯೋಜನೆಗಳನ್ನು ಪೂರೈಸಲು ಮೋಸ ಮಾಡುವವರಾಗಿರುತ್ತೀರಿ. ಕುಜ ಹಾಗೂ ಬುಧರ ಯೋಗ ನಿಮ್ಮನ್ನು ಸಕ್ರಿಯರನ್ನಾಗಿ ಮಾಡುತ್ತದೆ. ನಿಮ್ಮ ಬಾಯಿಯಿಂದ ಎಲ್ಲರನ್ನು ಶತ್ರುಗಳಾಗಿ ಮಾಡಿಕೊಳ್ಳುತ್ತೀರಿ. ನೀವು ವ್ಯಂಗ್ಯವಾಗಿ ಮಾತನಾಡುತ್ತೀರಿ.
ಸಣ್ಣ ಸಣ್ಣ ವಿಷಯಗಳಿಗೂ ಸಿಡಿಮಿಡಿಗೊಳ್ಳುತ್ತೀರಿ. ಕೆಲಸ, ಇಂಜಿನಿಯರ್, ಕಾರ್ಖಾನೆಗಳ ನಿರ್ಮಾಣದಲ್ಲಿ ನೀವು ಎತ್ತಿದ ಕೈ.
ಶಸ್ತ್ರ ಚಿಕಿತ್ಸಕ, ದಂತ ಚಿಕಿತ್ಸಕರ ರೂಪದಲ್ಲಿ ನೀವು ಸಫಲರಾಗಿರುತ್ತೀರಿ. ಕೃಷಿ, ಭೂಮಿಯ ಅಭಿವೃದ್ಧಿಗಾಗಿ ಹೋರಾಡಿ ಅಪಘಾತಕ್ಕೂ ಈಡಾಗುವಿರಿ. 27ನೇ ಸೆಪ್ಟೆಂಬರ್‌ನಲ್ಲಿ ಜನಿಸಿದವರಿಗೆ ಅಪಘಾತಗಳು ಮತ್ತಷ್ಟು ಹೆಚ್ಚಾಗಿ ಆಗುತ್ತದೆ. ಬೆಂಕಿಯಿಂದ ಅಪಾಯವಿದೆ. ಆರ್ಥಿಕ ಸ್ಥಿತಿ: ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಾಕಷ್ಟು ಹಣ ಸಂಪಾದಿಸುತ್ತೀರಿ. ಆರೋಗ್ಯ: ಆರೋಗ್ಯವಂತರು ನೀವು. ದುರ್ಘಟನೆಯಿಂದ ಪೆಟ್ಟಾಗುವ ಸಂಭವ ಹೆಚ್ಚು. ವರ್ಣ ಹಾಗೂ ರತ್ನ: ಕೆಂಪು, ಗುಲಾಬಿ ಅನುಕೂಲಕರ, ರೂಬಿ ಅಂದರೆ ಮಾಣಿಕ್ಯ ನಿಮಗೆ ಭಾಗ್ಯಶಾಲಿ ರತ್ನವಾಗಿರುತ್ತದೆ. (ಡಾ. ಅನಸೂಯ ರಾಜೀವ್)