Parikrama: ಪ್ರದಕ್ಷಿಣೆ ಹಾಕುವಾಗ ಈ ವಿಷಯ ನೆನಪಿನಲ್ಲಿದ್ದರೆ ಜೀವನದಲ್ಲಿ ಯಾವುದೇ ಅಪಾಯ ಬರುವುದಿಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2024 | 5:18 PM

ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಭಕ್ತಿಯಿಂದ ಪೂಜಿಸುವುದು ಜನರ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಅಲ್ಲದೆ ಮರಗಳಿಗೆ ಪ್ರದಕ್ಷಿಣೆ ಹಾಕಿ ಪೂಜೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಜನರು ದೇವಾಲಯದ ಸುತ್ತಲೂ ಏಕೆ ಪ್ರದಕ್ಷಿಣೆ ಹಾಕುತ್ತಾರೆ? ಈ ಸಂಪ್ರದಾಯ ಹೇಗೆ ಆಚರಣೆಗೆ ಬಂದಿತು ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Parikrama: ಪ್ರದಕ್ಷಿಣೆ ಹಾಕುವಾಗ ಈ ವಿಷಯ ನೆನಪಿನಲ್ಲಿದ್ದರೆ ಜೀವನದಲ್ಲಿ ಯಾವುದೇ ಅಪಾಯ ಬರುವುದಿಲ್ಲ
Follow us on

ಪ್ರತಿಯೊಬ್ಬರೂ ದೇವಾಲಯಕ್ಕೆ ಹೋದಾಗ ಪೂಜೆ ಮಾಡಿಸಿ ದೇವರಿಗೆ ತಪ್ಪದೆ ಪ್ರದಕ್ಷಿಣೆ ಹಾಕಿ ಬರುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ದೇವಾಲಯ ಮಾತ್ರವಲ್ಲದೆ ಇತರ ಪವಿತ್ರ ಸ್ಥಳಗಳಲ್ಲಿಯೂ ಪ್ರದಕ್ಷಿಣೆ ಹಾಕಬಹುದು. ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಭಕ್ತಿಯಿಂದ ಪೂಜಿಸುವುದು ಜನರ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ ಅಲ್ಲದೆ ಮರಗಳಿಗೆ ಪ್ರದಕ್ಷಿಣೆ ಹಾಕಿ ಪೂಜೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ಜನರು ದೇವಾಲಯದ ಸುತ್ತಲೂ ಏಕೆ ಪ್ರದಕ್ಷಿಣೆ ಹಾಕುತ್ತಾರೆ? ಈ ಸಂಪ್ರದಾಯ ಹೇಗೆ ಆಚರಣೆಗೆ ಬಂದಿತು ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರದಕ್ಷಿಣೆ ಹಾಕುವ ಉದ್ದೇಶವೇನು?

ಧಾರ್ಮಿಕ ಗ್ರಂಥಗಳ ಪ್ರಕಾರ, ಒಮ್ಮೆ ಗಣೇಶ ಮತ್ತು ಕಾರ್ತಿಕೇಯನ ನಡುವೆ ಪ್ರಪಂಚವನ್ನು ಯಾರು ಬೇಗ ಸುತ್ತಿ ಬರುತ್ತಾರೆ ಎಂಬ ಸ್ಪರ್ಧೆ ನಡೆಯುತು. ಇದರಲ್ಲಿ ಗಣೇಶ ತನ್ನ ಬುದ್ದಿವಂತಿಕೆಯಿಂದ ತಂದೆ ಶಿವ ಮತ್ತು ತಾಯಿ ಪಾರ್ವತಿಯರ ಸುತ್ತ 3 ಪರಿಕ್ರಮವನ್ನು ಪೂರ್ಣಗೊಳಿಸಿದನು. ಅಂದಿನಿಂದ ಈ ಆಚರಣೆಗೆ ರೂಢಿಗೆ ಬಂದಿತು ಅಲ್ಲದೆ ನಮ್ಮ ನೆಚ್ಚಿನ ದೇವರೇ ನಮ್ಮ ಜಗತ್ತು ಎನ್ನಲಾಗುತ್ತದೆ. ಅಲ್ಲದೆ ಪೂಜೆ ಮಾಡಿಸಿದಷ್ಟೇ ಫಲ ಪ್ರದಕ್ಷಿಣೆ ಹಾಕುವುದರಿಂದಲೂ ಸಿಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಅದಕ್ಕಾಗಿಯೇ ಜನರು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಹೀಗೆ ಮಾಡುವುದರಿಂದ ಜನರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಜೀವನದಲ್ಲಿ ಸಂತೋಷ ಸಿಗುತ್ತದೆ.

ಅಲ್ಲದೆ ಸ್ಕಂದ ಪುರಾಣದಲ್ಲಿ ತಿಳಿಸಿರುವ ಪ್ರಕಾರ ಪರಿಕ್ರಮವು (ಪ್ರದಕ್ಷಿಣೆ) ಮನಸ್ಸಿನಿಂದ ಮಾಡಿದ ಪಾಪಗಳನ್ನು ಮೊದಲ ಹೆಜ್ಜೆಯಿಂದ, ಮಾತಿನಲ್ಲಿ ಮಾಡಿದ ಪಾಪಗಳನ್ನು ಎರಡನೇ ಹೆಜ್ಜೆಯಿಂದ ಮತ್ತು ದೇಹದಿಂದ ಮಾಡಿದ ಪಾಪಗಳು ಮೂರನೇ ಹೆಜ್ಜೆಯಿಂದ ನಾಶ ಮಾಡುತ್ತದೆ ಎಂಬ ಉಲ್ಲೇಖವಿದೆ. ಹಾಗಾಗಿ ಜನರು ನಾವು ಮಾಡಿದ ಪಾಪಗಳನ್ನು ಪರಿಹರಿಸಿಕೊಳ್ಳಲು ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಸದಾಕಾಲ ಪಡೆಯುವ ಉದ್ದೇಶದಿಂದ ದೇವರಿಗೆ ಪ್ರದಕ್ಷಿಣೆ ಹಾಕುತ್ತಾರೆ.

ನಾವು ಯಾವ ದಿಕ್ಕಿನಲ್ಲಿ ಪ್ರದಕ್ಷಿಣೆ ಹಾಕಬೇಕು?

ನೀವು ದೇವಾಲಯವನ್ನು ಪ್ರದಕ್ಷಿಣೆ ಹಾಕುವಾಗ ಗಡಿಯಾರದ ದಿಕ್ಕಿನಲ್ಲಿ ಅಂದರೆ ನಾವು ನಮ್ಮ ಎಡಭಾಗದಿಂದ ಬಲಭಾಗಕ್ಕೆ ಸುತ್ತು ಬರಬೇಕು. ಅನೇಕ ಭಕ್ತರು ಒದ್ದೆ ಬಟ್ಟೆಯಲ್ಲಿ ದೇವಾಲಯವನ್ನು ಪ್ರದಕ್ಷಿಣೆ ಹಾಕುತ್ತಾರೆ. ಈ ರೀತಿ ಪರಿಕ್ರಮ ಮಾಡುವುದರಿಂದ, ಪವಿತ್ರ ಸ್ಥಳಗಳಲ್ಲಿರುವ ಸಕಾರಾತ್ಮಕ ಶಕ್ತಿ ನಮ್ಮಲ್ಲಿಯೂ ಸೇರಿಕೊಳ್ಳುತ್ತವೆ. ಆದ್ದರಿಂದ, ಒದ್ದೆ ಬಟ್ಟೆಗಳನ್ನು ಧರಿಸಿ ದೇವಾಲಯವನ್ನು ಪ್ರದಕ್ಷಿಣೆ ಹಾಕುವುದು ಶುಭವೆಂದು ಪರಿಗಣಿಸಲಾಗುತ್ತದೆ.

ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು?

ಹಿಂದೂ ಧರ್ಮದಲ್ಲಿ ತಾಯಿ ದೇವಿಯ ದೇವಾಲಯವನ್ನು ಒಮ್ಮೆ ಮಾತ್ರ ಪ್ರದಕ್ಷಿಣೆ ಹಾಕಬೇಕು. ವಿಷ್ಣು ಮತ್ತು ಅವನ ಅವತಾರಕ್ಕೆ ಸಂಬಂಧಿಸಿದ ದೇವಾಲಯಗಳಲ್ಲಿ ನಾಲ್ಕು ಬಾರಿ ಪ್ರದಕ್ಷಿಣೆ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಇನ್ನು ಗಣೇಶನ ದೇವಾಲಯದಲ್ಲಿ 3 ಸುತ್ತು, ಶಿವನ ಸಾನಿಧ್ಯದಲ್ಲಿ ಅರ್ಧ ಪರಿಕ್ರಮ ಮಾಡಲಾಗುತ್ತದೆ. ಪವಿತ್ರ ಮರಗಳಿಗೆ 11 ಅಥವಾ 21 ಬಾರಿ ಪ್ರದಕ್ಷಿಣೆ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಮುಂಚಿತವಾಗಿಯೇ ಈ ವಸ್ತುಗಳನ್ನು ಮನೆಯಿಂದ ಎಸೆಯಿರಿ!

ದೇವಾಲಯವನ್ನು ಈ ರೀತಿ ಪ್ರದಕ್ಷಿಣೆ ಹಾಕಿ!

ದೇವಾಲಯದಲ್ಲಿ ಪೂಜೆ ಮುಗಿದ ಬಳಿಕ ಅಥವಾ ಪೂಜೆಗೆ ಸಾಕಷ್ಟು ಸಮಯ ಇರುವಾಗ ನೀವು ಪ್ರದಕ್ಷಿಣೆ ಹಾಕಬಹುದು. ಮೊದಲು ಸುತ್ತು ದೇವರ ನಾಮಗಳನ್ನು, ಮಂತ್ರಗಳನ್ನು ಜಪಿಸುವ ಮೂಲಕ ಪರಿಕ್ರಮವನ್ನು ಪ್ರಾರಂಭಿಸಬೇಕು. ಒಂದು ಪರಿಕ್ರಮದ ಬಳಿಕ ದೇವರಿಗೆ ನಮಸ್ಕರಿಸಿ ಆ ನಂತರವೇ ಮುಂದಿನ ಪರಿಕ್ರಮವನ್ನು ಪ್ರಾರಂಭಿಸಿ. ದೇವಾಲಯವನ್ನು ಪ್ರದಕ್ಷಿಣೆ ಹಾಕುವಾಗ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳಿಗೆ ಜಾಗ ಇಟ್ಟುಕೊಳ್ಳದೆಯೇ ಶುದ್ಧ ಮನಸ್ಸಿನಿಂದ ದೇವರಿಗೆ ಸುತ್ತು ಬನ್ನಿ. ನಿಮ್ಮ ಇಷ್ಟಾರ್ಥ ನೆರವೇರುತ್ತದೆ ಪೂಜೆಯೂ ಪರಿಪೂರ್ಣವಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ