ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ವ್ರತವು ಭಗವಾನ್ ಶಿವ ಮತ್ತು ಆತನ ಪತ್ನಿ ಪಾರ್ವತಿ ದೇವಿಯ ಆರಾಧನೆಗೆ ಪ್ರಶಸ್ತವಾಗಿದೆ. ಪ್ರದೋಷ ವ್ರತವನ್ನು ತ್ರಯೋದಶಿ ವ್ರತ ಎಂದೂ ಕರೆಯುತ್ತಾರೆ. ಪಂಚಾಂಗದ ಪ್ರಕಾರ, ಪ್ರತಿ ತಿಂಗಳು ಎರಡು ಪ್ರದೋಷ ಉಪವಾಸವನ್ನು ಆಚರಿಸಲಾಗುತ್ತದೆ. ಫೆಬ್ರವರಿ ತಿಂಗಳ ಮೊದಲ ಪ್ರದೋಷ ವ್ರತವನ್ನು ಫೆ. 7 ರಂದು ಮತ್ತು ಫೆ. 21 ರಂದು ಬುಧವಾರ ಆಚರಣೆ ಮಾಡಲಾಗುತ್ತದೆ. ಬುಧವಾರ ಪ್ರದೋಷ ವ್ರತ ಬಂದಿರುವುದರಿಂದ ಇದನ್ನು ಆಚರಣೆ ಮಾಡುವವರ ಎಲ್ಲಾ ರೀತಿಯ ಇಷ್ಟಾರ್ಥಗಳು ಸಿದ್ದಿಸುತ್ತವೆ ಎನ್ನುವ ನಂಬಿಕೆ ಇದೆ. ಫೆಬ್ರವರಿ ತಿಂಗಳ ಮೊದಲ ಪ್ರದೋಷ ಉಪವಾಸ ಬಂದಿರುವ ದಿನದ ಮಹತ್ವವೇನು? ಪೂಜೆಗೆ ಶುಭ ಸಮಯ ಯಾವುದು? ಇಲ್ಲಿದೆ ಮಾಹಿತಿ.
ಬುಧವಾರ ಪ್ರದೋಷ ವ್ರತ ಬಂದಿರುವುದರಿಂದ ಇದನ್ನು ಬುದ್ಧ ಪ್ರದೋಷ ವ್ರತ ಎಂದೂ ಕರೆಯುತ್ತಾರೆ. ಈ ದಿನ ಮಹಾದೇವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಬಹುದಾಗಿದೆ. ಈ ವರ್ಷ, ಮಾಘ ಮಾಸದಲ್ಲಿ ಬುದ್ಧ ಪ್ರದೋಷ ಬಂದಿರುವುದು ಕಾಕತಾಳೀಯವೇ ಸರಿ. ಹಾಗಾಗಿ ಈ ದಿನವನ್ನು ಇನ್ನಷ್ಟು ಶುಭವೆಂದು ಪರಿಗಣಿಸಲಾಗಿದೆ. ಈ ದಿನ ನೀವು ಶಿವನ ದೇವಸ್ಥಾನಗಳಲ್ಲಿ ರುದ್ರಾಭಿಷೇಕ ಮಾಡಿಸಿದರೆ ಆತನ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.
ಮಾಘ ತಿಂಗಳು ಮತ್ತು ಫೆಬ್ರವರಿಯ ಮೊದಲ ಪ್ರದೋಷ ಉಪವಾಸವು ಫೆಬ್ರವರಿ 7 ರ ಬುಧವಾರದಂದು ಬರುತ್ತದೆ. ಆದ್ದರಿಂದ ಇದನ್ನು ಬುದ್ಧ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ತ್ರಯೋದಶಿ ದಿನವನ್ನು ಶಿವನಿಗೆ ಅರ್ಪಿಸಿರುವುದರಿಂದ ಈ ದಿನ ಉಪವಾಸವನ್ನು ಆಚರಿಸುವ ಮೂಲಕ ಮತ್ತು ಶಿವನನ್ನು ಪೂಜಿಸುವ ಮೂಲಕ, ವಿವಾಹಿತ ದಂಪತಿಗಳು ಮಕ್ಕಳ ಭಾಗ್ಯವನ್ನು ಪಡೆಯಬಹುದು ಮತ್ತು ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳಿಂದ ಪರಿಹಾರ ಪಡೆಯಬಹುದು.
ಪಂಚಾಂಗದ ಪ್ರಕಾರ, ಮಾಘ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕವು ಫೆಬ್ರವರಿ 7 ರಂದು ಮಧ್ಯಾಹ್ನ 02: 02 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 8 ರಂದು ಬೆಳಿಗ್ಗೆ 11:17 ಕ್ಕೆ ಕೊನೆಗೊಳ್ಳುತ್ತದೆ. ಪ್ರದೋಷ ಕಾಲ ಪೂಜೆಯ ಸಮಯವು ಫೆಬ್ರವರಿ 7 ರಂದು ಸಂಜೆ 6:05 ರಿಂದ ರಾತ್ರಿ 8:41 ರವರೆಗೆ ಇರುತ್ತದೆ.
ಇದನ್ನೂ ಓದಿ: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ
ಪ್ರದೋಷ ಉಪವಾಸವನ್ನು ಆಚರಿಸುವ ಮೂಲಕ ಮತ್ತು ಶಿವನನ್ನು ಪೂಜಿಸುವ ಮೂಲಕ, ವ್ಯಕ್ತಿಯು ಎಲ್ಲಾ ತೊಂದರೆಗಳು, ಪಾಪಗಳು, ರೋಗಗಳು ಮತ್ತು ದೋಷಗಳಿಂದ ಮುಕ್ತಿ ಹೊಂದುತ್ತಾನೆ. ಇನ್ನು ಶಿವ ಮತ್ತು ಪಾರ್ವತಿ ದೇವಿಯ ಅನುಗ್ರಹದಿಂದ ಮಕ್ಕಳು, ಸಂತೋಷ, ಸಮೃದ್ಧಿ, ಯಶಸ್ಸು ಮತ್ತು ಸಂಪತ್ತನ್ನು ಪಡೆಯುತ್ತಾರೆ. ಪ್ರದೋಷ ವ್ರತವು ಆಚರಣೆ ಮಾಡುವ ವ್ಯಕ್ತಿಯ ಜೀವನದಲ್ಲಿ ಸಂತೋಷ ತರುತ್ತದೆ. ಹಾಗಾಗಿ ಆ ದಿನ ತಪ್ಪದೆ ಶಿವ ಚಾಲೀಸ್ ನನ್ನು ಪಠಿಸಿ.
ನಿಮ್ಮ ಮಕ್ಕಳ ಜ್ಞಾನ ವೃದ್ಧಿಗಾಗಿ ಬುದ್ಧ ಪ್ರದೋಷ ಉಪವಾಸದಂದು ಬೆಳಿಗ್ಗೆ ಮತ್ತು ಸಂಜೆ ಗಣೇಶನ ಮುಂದೆ ಹಸಿರು ಏಲಕ್ಕಿಯನ್ನು ಅರ್ಪಿಸಿ, “ಓಂ ಬುದ್ಧಿಪ್ರದಾಯೆ ನಮಃ” ಎಂಬ ಮಂತ್ರವನ್ನು 27 ಬಾರಿ ಪಠಿಸಿ. ನಂತರ ಏಲಕ್ಕಿಯನ್ನು ಪ್ರಸಾದವಾಗಿ ಸೇವಿಸಿ. ಇದರ ಜೊತೆಗೆ ಈ ದಿನ ಶಿವ ಮಂತ್ರಗಳನ್ನು ಪಠಿಸುವುದರಿಂದ ಭಗವಾನ್ ಶಿವನ ಆಶೀರ್ವಾದ ದೊರೆಯುತ್ತದೆ.
ಓಂ ಪಾರ್ವತಿಪತಾಯ ನಮಃ
ಓಂ ನಮೋ ನೀಲಕಂಠಾಯ ನಮಃ
ಓಂ ನಮಃ ಶಿವಾಯ
ಶ್ರೀ ರುದ್ರಾಯ ನಮಃ
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:39 pm, Mon, 5 February 24