Masik Shivratri 2024: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ

 ಮಾಸಿಕ ಶಿವರಾತ್ರಿ ಉಪವಾಸವನ್ನು ಆಚರಿಸುವುದರಿಂದ ಶಿವನು ಸಂತೋಷಗೊಳ್ಳುತ್ತಾನೆ ಎಂದು ನಂಬಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮೀ, ಸರಸ್ವತಿ, ಇಂದ್ರಾಣಿ, ಗಾಯತ್ರಿ, ಸಾವಿತ್ರಿ ಮತ್ತು ತಾಯಿ ಪಾರ್ವತಿ ಕೂಡ ಈ ಉಪವಾಸವನ್ನು ಆಚರಿಸಿದ್ದರು ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಶಿವನು ಚತುರ್ದಶಿಯ ರಾತ್ರಿ ಪಾರ್ವತಿ ದೇವಿಯನ್ನು ವಿವಾಹವಾದನು. ಆದ್ದರಿಂದ, ಮಾಸಿಕ ಶಿವರಾತ್ರಿಯಂದು ರಾತ್ರಿ ಪೂಜೆ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇನ್ನು ಮಾಘ ಮಾಸದ ಮಾಸಿಕ ಶಿವರಾತ್ರಿ ಉಪವಾಸವನ್ನು ಫೆ. 8 ರಂದು (ಗುರುವಾರ) ಆಚರಿಸಲಾಗುತ್ತದೆ.

Masik Shivratri 2024: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 02, 2024 | 11:02 AM

ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿ ದಿನದಂದು ಮಾಸಿಕ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಮಾಸಿಕ ಶಿವರಾತ್ರಿ ಉಪವಾಸವನ್ನು ಆಚರಿಸುವುದರಿಂದ ಶಿವನು ಸಂತೋಷಗೊಳ್ಳುತ್ತಾನೆ ಎಂದು ನಂಬಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮೀ, ಸರಸ್ವತಿ, ಇಂದ್ರಾಣಿ, ಗಾಯತ್ರಿ, ಸಾವಿತ್ರಿ ಮತ್ತು ತಾಯಿ ಪಾರ್ವತಿ ಕೂಡ ಈ ಉಪವಾಸವನ್ನು ಆಚರಿಸಿದ್ದರು ಎನ್ನಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಶಿವನು ಚತುರ್ದಶಿಯ ರಾತ್ರಿ ಪಾರ್ವತಿ ದೇವಿಯನ್ನು ವಿವಾಹವಾದನು. ಆದ್ದರಿಂದ, ಮಾಸಿಕ ಶಿವರಾತ್ರಿಯಂದು ರಾತ್ರಿ ಪೂಜೆ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಇನ್ನು ಮಾಘ ಮಾಸದ ಮಾಸಿಕ ಶಿವರಾತ್ರಿ ಉಪವಾಸವನ್ನು ಫೆ. 8 ರಂದು (ಗುರುವಾರ) ಆಚರಿಸಲಾಗುತ್ತದೆ.

ಮಾಸಿಕ ಶಿವರಾತ್ರಿಯ ಮಹತ್ವ;

ಪುರಾಣ ಗ್ರಂಥಗಳ ಪ್ರಕಾರ, ಈ ದಿನವು ತುಂಬಾ ವಿಶೇಷವಾಗಿದೆ. ಏಕೆಂದರೆ ಮಾಸಿಕ ಶಿವರಾತ್ರಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ದಿನದಂದು ಬರುತ್ತದೆ. ಈ ದಿನಾಂಕದ ಅಧಿಪತಿ ಶಿವ. ಅದಲ್ಲದೆ ಮಾಸಿಕ ಶಿವರಾತ್ರಿಯಂದು ಶಿವನ ಆರಾಧನೆಯ ಜೊತೆಗೆ, ಶಿವ ಕುಟುಂಬದ ಎಲ್ಲಾ ಸದಸ್ಯರನ್ನು ಕೂಡ ಪೂಜಿಸಲಾಗುತ್ತದೆ. ಈ ದಿನ ಮನೆ ಬಳಿಯಿರುವ ದೇವಸ್ಥಾನಗಳಿಗೆ ತೆರಳುವ ಮೂಲಕ ಹೂವುಗಳನ್ನು ಅರ್ಪಿಸಿ, ಶಿವ ಮಂತ್ರಗಳನ್ನು ಪಠಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಅಲ್ಲದೆ ಇಷ್ಟಾರ್ಥ ಸಿದ್ದಿಸಲು ಈ ದಿನ ಉಪವಾಸ ಮಾಡಲಾಗುತ್ತದೆ. ಮಾಸಿಕ ಶಿವರಾತ್ರಿ ಉಪವಾಸದ ಪರಿಣಾಮದಿಂದಾಗಿ, ವ್ಯಕ್ತಿಯು ಕಾಮ, ಕೋಪ, ಲೋಭ ಇತ್ಯಾದಿ ಬಂಧನದಿಂದ ಮುಕ್ತನಾಗುತ್ತಾನೆ ಎಂಬ ನಂಬಿಕೆ ಇದೆ.

ಮಾಸಿಕ ಶಿವರಾತ್ರಿಯಂದು ಉಪವಾಸ ಮಾಡುವುದರಿಂದ ಸಿಗುವ ಪ್ರಯೋಜನಗಳೇನು?

-ಶಿವಾಲಯದಲ್ಲಿ ಅಥವಾ ಮನೆಯ ಪೂರ್ವ ಭಾಗದಲ್ಲಿ ಕುಳಿತು ಶಿವ ಮಂತ್ರಗಳನ್ನು ಪಠಿಸುವುದರಿಂದ ಹೆಚ್ಚಿನ ಫಲಿತಾಂಶ ಸಿಗುತ್ತದೆ ಎಂದು ನಂಬಲಾಗಿದೆ.

-ಮಾಸಿಕ ಶಿವರಾತ್ರಿಯ ಪೂಜೆಯ ನಂತರ, ಬ್ರಾಹ್ಮಣರಿಗೆ ಆಹಾರ ನೀಡಬೇಕು.

-ಮಾಸಿಕ ಉಪವಾಸವನ್ನು ಪೂರ್ಣ ಭಕ್ತಿಯಿಂದ ಆಚರಿಸುವ ಯಾವುದೇ ಭಕ್ತನ ಪಾಪಗಳು ಕೂಡ ನಾಶವಾಗುತ್ತವೆ ಎಂಬ ನಂಬಿಕೆ ಇದೆ.

-ಈ ದಿನವನ್ನು ಆಚರಣೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಸಂತೋಷ ಪ್ರಾಪ್ತಿಯಾಗುತ್ತದೆ.

-ಮಾಸಿಕ ಶಿವರಾತ್ರಿ ಉಪವಾಸ ಮಾಡುವುದರಿಂದ, ದೀರ್ಘಾಯುಷ್ಯ, ಸಂಪತ್ತು, ಆರೋಗ್ಯ ಮತ್ತು ಮಕ್ಕಳಾಗದವರು ಮಕ್ಕಳನ್ನು ಪಡೆಯಬಹುದಾಗಿದೆ. ಅದಲ್ಲದೆ ಈ ಉಪವಾಸವನ್ನು ಮಾಡುವ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಹನುಮಂತನ ತಾಯಿ ಅಂಜನಾದೇವಿ ಕೋತಿಯಾಗಿದ್ದು ಹೇಗೆ ಗೊತ್ತಾ?

ಮಾಸಿಕ ಶಿವರಾತ್ರಿ ಪೂಜೆ ಮಾಡುವುದು ಹೇಗೆ?

ಶಿವ ಚತುರ್ದಶಿಯ ದಿನ ಶಿವ, ತಾಯಿ ಪಾರ್ವತಿ, ಗಣೇಶ, ಕಾರ್ತಿಕೇಯ ಮತ್ತು ಶಿವಗಣಗಳನ್ನು ಪೂಜಿಸಲಾಗುತ್ತದೆ. ಹಾಲು, ಮೊಸರು, ಜೇನುತುಪ್ಪ, ಸಕ್ಕರೆ, ಗಂಗಾ ನೀರು ಮತ್ತು ಕಬ್ಬಿನ ರಸ ಇತ್ಯಾದಿಗಳಿಂದ ಅಭಿಷೇಕ ಮಾಡಲಾಗುತ್ತದೆ. ತೆಂಗಿನಕಾಯಿಯಿಂದ ತಯಾರಿಸಿದ ತಿನಿಸುಗಳನ್ನು ಶಿವನಿಗೆ ಭೋಗವಾಗಿ ಅರ್ಪಿಸಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ