ಹಿಂದೂ ಧರ್ಮದಲ್ಲಿ ಚಂದ್ರ ಗ್ರಹಣ ಮತ್ತು ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಈ ಬಾರಿ ವರ್ಷದ ಮೊದಲ ಚಂದ್ರ ಗ್ರಹಣ ಹೋಳಿ ಹಬ್ಬದಂದು ಬಂದಿದ್ದು, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ, ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹುವಿನ ಸಂಗಮ ಆಗಲಿದೆ. ಸೂರ್ಯ ಅಥವಾ ಚಂದ್ರನ ಜೊತೆಗೆ ಉಂಟಾಗುವ ರಾಹು ಸಂಯೋಗದಿಂದ ಗ್ರಹಣವು ಉಂಟಾಗುತ್ತದೆ. ಈ ಗ್ರಹಣವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಶುಭವೆಂದು ಕರೆಯಲಾಗುತ್ತದೆ. ಇದು ಖಂಡಿತವಾಗಿಯೂ 12 ರಾಶಿಚಕ್ರ ಚಿಹ್ನೆಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಈ ಸಮಯದಲ್ಲಿ ಗರ್ಭಿಣಿಯರು ಸ್ವಲ್ಪ ಜಾಗ್ರತೆ ವಹಿಸಬೇಕಾಗಿದೆ. ಏಕೆಂದರೆ ಗ್ರಹಣ ಸಮಯದಲ್ಲಿ, ಪರಿಸರದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುವುದರಿಂದ ಇದು ಗರ್ಭಿಣಿಯರು ಮತ್ತು ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಚಂದ್ರ ಗ್ರಹಣದ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಚಂದ್ರ ಗ್ರಹಣದ ಸಮಯದಲ್ಲಿ ಸಾಧ್ಯವಾದಷ್ಟು ಪೂಜೆ ಮತ್ತು ಸತ್ಕಾರ್ಯಗಳನ್ನು ಮಾಡಬೇಕು. ಈ ಬಾರಿ ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ 25 ರಂದು ಅಂದರೆ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಈ ಸಮಯದಲ್ಲಿ, ಗರ್ಭಿಣಿಯರು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 25, ರಂದು ಬೆಳಿಗ್ಗೆ 10:24 ರಿಂದ ಮಧ್ಯಾಹ್ನ 3:01 ರವರೆಗೆ ಚಂದ್ರ ಗ್ರಹಣದ ಅವಧಿ ಇರುತ್ತದೆ. ಅಂದರೆ ಒಟ್ಟು 4 ಗಂಟೆ 36 ನಿಮಿಷಗಳ ಕಾಲ ಇರುತ್ತದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಕೂಡ ಅದರ ಪರಿಣಾಮದಿಂದ ದೂರವಿರಲು, ಈ ಅವಧಿಯಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡುವುದು ಒಳ್ಳೆಯದು.
ಇದನ್ನೂ ಓದಿ: ಪ್ರದಕ್ಷಿಣೆ ಹಾಕುವಾಗ ಈ ವಿಷಯ ನೆನಪಿನಲ್ಲಿದ್ದರೆ ಜೀವನದಲ್ಲಿ ಯಾವುದೇ ಅಪಾಯ ಬರುವುದಿಲ್ಲ
-ಚಂದ್ರ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಆದಷ್ಟು ಮನೆಯೊಳಗೆ ಇರಲು ಸಲಹೆ ನೀಡಲಾಗುತ್ತದೆ, ಏಕೆಂದರೆ ಅದರ ನಕಾರಾತ್ಮಕ ಶಕ್ತಿಗಳು ಮಗುವಿನ ಮೇಲೆ ಪರಿಣಾಮ ಬೀರಬಹುದು.
-ಚಂದ್ರ ಗ್ರಹಣ ಸಮಯದಲ್ಲಿ ಕತ್ತರಿ, ಚಾಕು ಮುಂತಾದ ಯಾವುದೇ ಚೂಪಾದ ವಸ್ತುವಿನ ಬಳಕೆಯನ್ನು ತಪ್ಪಿಸಬೇಕು.
-ಈ ಸಮಯದಲ್ಲಿ ಗರ್ಭಿಣಿಯರು ಅಗತ್ಯಕ್ಕೆ ಅನುಗುಣವಾಗಿ ಹಣ್ಣು ಇತ್ಯಾದಿ ಆಹಾರಗಳ ಸೇವನೆ ಮಾಡಬಹುದು.
-ಗ್ರಹಣಕ್ಕೆ ಮುಂಚಿತವಾಗಿ ತಯಾರಿಸಿದ ಆಹಾರವನ್ನು ಸೇವಿಸಬೇಡಿ.
-ಗ್ರಹಣ ಸಮಯದಲ್ಲಿ ಮಲಗುವುದನ್ನು ತಪ್ಪಿಸಿ, ಈ ಅವಧಿಯಲ್ಲಿ, ಶಿವ ಮತ್ತು ವಿಷ್ಣುವನ್ನು ಧ್ಯಾನಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ