ಹೋಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿವೆ. ಈ ವರ್ಷ ಬಣ್ಣಗಳ ಹಬ್ಬ ಹೋಳಿಯನ್ನು ಮಾ. 25 ರಂದು ಸೋಮವಾರ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಹೋಳಿ ಆಚರಿಸುವ ಮೊದಲು, ಕೆಲವು ಪ್ರಮುಖ ವಿಷಯಗಳನ್ನು ಪಾಲಿಸುವುದು ಅವಶ್ಯಕ ಎಂದು ನಂಬಲಾಗಿದೆ. ಅದು ಅಲ್ಲದೆ ಹಿಂದೂ ಧರ್ಮದಲ್ಲಿ ಈ ಹಬ್ಬವನ್ನು ಆಚರಿಸುವ ಮೊದಲು, ಮನೆಯನ್ನು ಸ್ವಚ್ಛಗೊಳಿಸಬೇಕು ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಯಾವಾಗಲೂ ಇರುತ್ತದೆ ಎನ್ನುವ ನಂಬಿಕೆ ಇದೆ. ಇದಕ್ಕಾಗಿ, ಹೋಳಿ ಹಬ್ಬಕ್ಕೆ ಮುಂಚಿತವಾಗಿ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಎಸೆಯುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಏಕೆಂದರೆ ಇದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು. ಹಾಗಾದರೆ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಹೋಳಿ ಹಬ್ಬದ ಸಂದರ್ಭದಲ್ಲಿ ವಾಸ್ತುವಿಗೆ ಸಂಬಂಧ ಪಟ್ಟ ಕೆಲವು ವಿಷಯಗಳ ಬಗ್ಗೆ ತಿಳಿದುಕೊಂಡು ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸಂತೋಷ, ಸಮೃದ್ಧಿ ಯಾವಾಗಲೂ ಇರಲು ಹೋಳಿ ಹಬ್ಬದ ಮುಂಚಿತವಾಗಿ ಮನೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದ, ಮನೆಯಲ್ಲಿ ಬಹಳ ಸಮಯದಿಂದ ಬಳಸದೆಯೇ ಇಟ್ಟಿರುವ ಹಳೆಯ ಬೂಟು ಮತ್ತು ಚಪ್ಪಲಿಗಳನ್ನು ಎಸೆಯಿರಿ. ಮುರಿದ ಬೂಟು ಮತ್ತು ಚಪ್ಪಲಿಗಳನ್ನು ಮನೆಯಲ್ಲಿ ಇಡುವುದು ಶುಭವಲ್ಲ. ಈ ಕಾರಣದಿಂದಾಗಿ ಕುಟುಂಬ ಸದಸ್ಯರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನಿಮ್ಮ ಮನೆಯಲ್ಲಿ ತುಳಸಿ ಗಿಡವು ಒಣಗಿದ್ದರೆ, ಓಕುಳಿ ಅಥವಾ ಹೋಳಿ ಹಬ್ಬದ ಮೊದಲು ಅದನ್ನು ತೆಗೆದು ಮನೆಯಲ್ಲಿ ಹೊಸ ಸಸ್ಯವನ್ನು ನೆಡಿ. ಇದು ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಆರ್ಥಿಕ ನಷ್ಟವನ್ನು ತಪ್ಪಿಸುತ್ತದೆ.
ವಾಸ್ತು ಪ್ರಕಾರ, ಹೋಳಿ ಹಬ್ಬದ ಮೊದಲು ಮನೆಯಲ್ಲಿ ಬಳಸದೆಯೇ ಇಟ್ಟ ಹಳೆಯ ಬಟ್ಟೆಗಳನ್ನು ಅಗತ್ಯವಿರುವವರಿಗೆ ಅಥವಾ ಬಡವರಿಗೆ ನೀಡಿ. ಜೊತೆಗೆ ಅನೇಕ ಬಾರಿ ಜನರು ತಿಳಿದೋ ತಿಳಿಯದೆಯೋ ಕಳೆದ ವರ್ಷ ಹೋಳಿ ಆಡಿದ ಬಟ್ಟೆಯಲ್ಲಿ ಈ ವರ್ಷವೂ ಓಕುಳಿ ಆಡುತ್ತಾರೆ. ಆದರೆ ಇದನ್ನು ಮಾಡಬೇಡಿ.
ಇದನ್ನೂ ಓದಿ: ಹೋಳಿ ದಿನ ಬಿಳಿ ಬಟ್ಟೆಗಳನ್ನು ಏಕೆ ಧರಿಸಬೇಕು? ಇಲ್ಲಿದೆ ಸೂಕ್ತ ಕಾರಣ
ವಾಸ್ತು ಪ್ರಕಾರ, ಮುರಿದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಶುಭವಲ್ಲ. ಆದ್ದರಿಂದ, ಹೋಳಿ ಹಬ್ಬದ ಮೊದಲು ಮನೆಯನ್ನು ಸ್ವಚ್ಛ ಗೊಳಿಸಿ ಬಿರುಕು ಬಂದ ಗಾಜಿನ ಬಾಟಲಿ ಮತ್ತು ಗ್ಲಾಸ್ ಗಳನ್ನು ಮನೆಯಲ್ಲಿ ಇಟ್ಟು ಕೊಳ್ಳಬೇಡಿ. ಮುರಿದ ವರ್ಣಚಿತ್ರಗಳು ಮತ್ತು ದೇವರ ಮುರಿದ ವಿಗ್ರಹವನ್ನು ಹರಿಯುವ ನೀರಿನಲ್ಲಿ ಬಿಡಿ. ಇದಲ್ಲದೆ, ಮುರಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಇಡುವುದು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ವಸ್ತುಗಳನ್ನು ಕೂಡ ಮನೆಯಲ್ಲಿ ಇಟ್ಟುಕೊಳ್ಳಬೇಡಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ