AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಶಾಪ ವಿಮೋಚನೆಗೆ ಮಾಡಿಕೊಳ್ಳುವುದು ಹೇಗೆ? ವಿಡಿಯೋ ನೋಡಿ

Daily Devotional: ಶಾಪ ವಿಮೋಚನೆಗೆ ಮಾಡಿಕೊಳ್ಳುವುದು ಹೇಗೆ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Mar 20, 2024 | 6:56 AM

ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಕರ್ಮ ಮತ್ತು ಶಾಪದ ಫಲದ ಕಾರಣ ಇನ್ನಿಲ್ಲದ ಕಷ್ಟಗಳು ಉಂಟಾಗುತ್ತವೆ ಎಂಬುದು ಪುರಾಣದ ಮಾತು. ಒಂದು ಜಾತಕ ಕುಂಡಲಿಯನ್ನು ಅವಲೋಕಿಸುವ ಮೂಲಕ ಜಾತಕನಿಗೆ ಯಾವ ತೆರನಾದ (ಸರ್ಪ, ಪಿತೃ, ಮಾತೃ, ಭ್ರಾತೃ, ಸೋದರಮಾವ, ಬ್ರಹ್ಮ, ಪತ್ನಿ, ಪ್ರೇತ ಶಾಪ) ಶಾಪವಿದೆ ಎಂದು ತಿಳಿದುಕೊಳ್ಳಬಹುದು.

ಹಿಂದೂ ಧರ್ಮದಲ್ಲಿ ಸ್ತ್ರೀ ಶಾಪ, ಋಷಿಮುನಿಗಳ ಶಾಪ, ಪಿತೃ ಶಾಪ, ಮಾತೃ ಶಾಪ ಹೀಗೆ ಹಿಂದೂ ಧರ್ಮದಲ್ಲಿ ವಿಧವಿಧವಾದ ಶಾಪಗಳಿವೆ. ಈ ಶಾಪಗಳ ವಿಮೋಚನೆಗೆ ನಾನಾ ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತದೆ. ಪೂರ್ವ ಜನ್ಮದಲ್ಲಿ ಮಾಡಿದ ಪಾಪ ಕರ್ಮ ಮತ್ತು ಶಾಪದ ಫಲದ ಕಾರಣ ಇನ್ನಿಲ್ಲದ ಕಷ್ಟಗಳು ಉಂಟಾಗುತ್ತವೆ ಎಂಬುದು ಪುರಾಣದ ಮಾತು. ದೋಷ ಅಥವಾ ಶಾಪಕ್ಕೆ ತಕ್ಕಂತೆ ಪರಿಹಾರ ಕ್ರಮವನ್ನು ಸೂಚಿಸಿದೆ ಜ್ಯೋತಿಷ ಶಾಸ್ತ್ರ. ಜ್ಯೋತಿಷ ಶಾಸ್ತ್ರಜ್ಞರ ಸೂಚನೆಗಳನ್ನು ದೃಢವಾದ ನಂಬಿಕೆಯಿಟ್ಟು ಪಾಲಿಸುವುದರಿಂದ ಸಮಸ್ಯೆಗಳು ತಾನಾಗೇ ಬಗೆಹರಿದ ಅದೆಷ್ಟೋ ಉದಾಹರಣೆಗಳನ್ನು ನೋಡಬಹುದು. ಒಂದು ಜಾತಕ ಕುಂಡಲಿಯನ್ನು ಅವಲೋಕಿಸುವ ಮೂಲಕ ಜಾತಕನಿಗೆ ಯಾವ ತೆರನಾದ (ಸರ್ಪ, ಪಿತೃ, ಮಾತೃ, ಭ್ರಾತೃ, ಸೋದರಮಾವ, ಬ್ರಹ್ಮ, ಪತ್ನಿ, ಪ್ರೇತ ಶಾಪ) ಶಾಪವಿದೆ ಎಂದು ತಿಳಿದುಕೊಳ್ಳಬಹುದು. ಹಾಕಿದ್ದರೆ ನಿಮಗೆ ಯಾವ ತೆರನಾದ ಶಾಪವಿದೆ? ಅದರಿಂದ ವಿಮೋಚನೆ ಹೊಂದುವುದು ಹೇಗೆ? ಬಸವರಾಜ ಗುರೂಜಿ ತಿಳಿಸಿದ್ದಾರೆ..