ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?

| Updated By: ಸಾಧು ಶ್ರೀನಾಥ್​

Updated on: Sep 04, 2021 | 6:22 AM

Radha Ashtami 2021 Date: ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ? ಗೋಕುಲಾಷ್ಟಮಿ ಬಳಿಕ ರಾಧಾ ಅಷ್ಟಮಿ ಆಚರಿಸಿದರೆ ಕೃಷ್ಣ ಜನ್ಮಾಷ್ಟಮಿಯ ಪೂರ್ಣ ಫಲ ಸಿಗುತ್ತದೆ; ರಾಧಾ ಅಷ್ಟಮಿ ಸಿದ್ಧತೆ ಹೇಗೆ? ಶುಭ ಮುಹೂರ್ತ ಯಾವಾಗ? ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಳಿಕ ಶ್ರೀಕೃಷ್ಣನ ಆಪ್ತ ಸಖಿ ರಾಧಾ ಅಷ್ಟಮಿ ಆಚರಿಸುವ ಸಂಪ್ರದಾಯವಿದೆ.

ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?
ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?
Follow us on

ಗೋಕುಲಾಷ್ಟಮಿ ಬಳಿಕ ರಾಧಾ ಅಷ್ಟಮಿ ಆಚರಿಸಿದರೆ ಕೃಷ್ಣ ಜನ್ಮಾಷ್ಟಮಿಯ ಪೂರ್ಣ ಫಲ ಸಿಗುತ್ತದೆ; ರಾಧಾ ಅಷ್ಟಮಿ ಸಿದ್ಧತೆ ಹೇಗೆ? ಶುಭ ಮುಹೂರ್ತ ಯಾವಾಗ? ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಳಿಕ ಶ್ರೀಕೃಷ್ಣನ ಆಪ್ತ ಸಖಿ ರಾಧಾ ಅಷ್ಟಮಿ ಆಚರಿಸುವ ಸಂಪ್ರದಾಯವಿದೆ. ಹಾಗಾದರೆ ಬನ್ನೀ ರಾಧಾ ಅಷ್ಟಮಿ ವ್ರತಾಚರಣೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಶುಭ ಮುಹೂರ್ತ ಯಾವಾಗ? ರಾಧಾ ಅಷ್ಟಮಿಯ ಮಹತ್ವ ಏನು? ತಿಳಿದುಕೊಳ್ಳೋಣ.

ಪ್ರತಿ ಸಂವತ್ಸರ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ರಾಧಾ ಅಷ್ಟಮಿ ಆಚರಿಸಲಾಗುತ್ತದೆ. ಗೋಕುಲಾಷ್ಟಮಿ ಬಳಿಕ ರಾಧಾ ಅಷ್ಟಮಿ ಆಚರಿಸಿದರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಫಲ ಹೆಚ್ಚಾಗುತ್ತದೆ. ರಾಧಾ ರಾಣಿ ಮತ್ತು ಶ್ರೀ ಕೃಷ್ಣ ಇಬ್ಬರ ಕೃಪಾಕಟಾಕ್ಷ ಭಕ್ತರಿಗೆ ಲಭಿಸುತ್ತದೆ. ವೇದ ಮತ್ತು ಪುರಾಣಗಳಲ್ಲಿ ರಾಧೆಯನ್ನು ಕೃಷ್ಣ ವಲ್ಲಭೆ ಎಂದು ಕರೆಯುತ್ತಾರೆ. ಕೃಷ್ಣ ಪ್ರಿಯೆ ಶ್ರೀ ಕೃಷ್ಣನ ಪ್ರಾಣಶಕ್ತಿ. ಈ ವರ್ಷ ರಾಧಾ ಅಷ್ಟಮಿ ಸೆಪ್ಟೆಂಬರ್​ 14 ಮಂಗಳವಾರ ಆಚರಿಸಲ್ಪಡುತ್ತದೆ.

ಜಗನ್ನಿಯಾಮಕ ಶ್ರೀ ಕೃಷ್ಣ ಭಕ್ತರಿಗೆ ರಾಧಾ ಅಷ್ಟಮಿ ಬಹಳ ಮಹತ್ವದ್ದಾಗಿರುತ್ತದೆ. ಏಕೆಂದರೆ ರಾಧೆ ಇಲ್ಲದೆ ಶ್ರೀ ಕೃಷ್ಣ ಅಪೂರ್ಣನಾಗುತ್ತಾನೆ, ಅಲ್ಲವಾ? ಅದೇ ಧಾಟಿಯಲ್ಲಿ ಹೇಳುವುದಾದರೆ ಶ್ರೀ ಕೃಷ್ಣನನ್ನು ರಾಧೆ ತನ್ನ ಶಕ್ತಿ ಎಂದು ಪರಿಭಾವಿಸುತ್ತಾಳೆ. ಹಾಗಾಗಿ ನೀವು ಸಮರ್ಪಣಾ ಭಾವದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದರೆ ರಾಧಾ ಅಷ್ಟಮಿ ಆಚರಿಸುವುದೂ ಸಹ ಮುಖ್ಯವಾಗುತ್ತದೆ.

ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಸರಿಯಾಗಿ 15 ದಿನಗಳ ಬಳಿಕ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನ ರಾಧಾಷ್ಟಮಿ ಆಚರಿಸಲಾಗುತ್ತದೆ. ರಾಧಾಷ್ಟಮಿಯ ದಿನ ಶ್ರೀ ಕೃಷ್ಣ ಮತ್ತು ರಾಧೆಯನ್ನು ಜೋಡಿಯಾಗಿ ಆರಾಧಿಸಬೇಕು. ದಿವ್ಯವಾದ, ಭವ್ಯವಾದ ರಾಧೆಯ ಉಪಾಸನೆ ಮಾಡಿದರೆ ಸರ್ವಶಕ್ತ ಶ್ರೀ ಕೃಷ್ಣನೂ ಸಂತೃಪ್ತನಾಗಿ ಆರಾಧಕರ ಶ್ರೇಯೋಭಿವೃದ್ಧಿಗೆ ಕಾರಣವಾಗುತ್ತದೆ. ಗೋಕುಲಾಷ್ಟಮಿ ಮತ್ತು ರಾಧಾಷ್ಟಮಿ ಎರಡನ್ನೂ ಆಚರಿಸುವವರ ಮನೆಯಲ್ಲಿ ಧನ ಧಾನ್ಯಕ್ಕೆ ಯಾವುದೇ ಕೊರತೆ ಬಾಧಿಸದು. ರಾಧಾ ಅಷ್ಟಮಿ ಆಚರಿಸುತ್ತಾ ಏನೇ ಮನೋಕಾಮನೆಗಳು ಇದ್ದರೂ ಜೋಡಿಗೆ ನಿವೇದಿಸಿಕೊಂಡರೆ ಅದು ಸಿದ್ಧಿರಸ್ತು ಆಗುತ್ತದೆ.

ವೇದ ಮತ್ತು ಪುರಾಣಗಳಲ್ಲಿ ರಾಧೆಯನ್ನು ಕೃಷ್ಣ ವಲ್ಲಭೆ ಎಂದು ಕರೆಯುತ್ತಾರೆ.  ಈ ವರ್ಷ ರಾಧಾ ಅಷ್ಟಮಿ ಸೆ. 14 ಮಂಗಳವಾರ

ಈ ವರ್ಷ ರಾಧಾ ಅಷ್ಟಮಿ ಸೆಪ್ಟೆಂಬರ್​ 14 ಮಂಗಳವಾರ ಆಚರಿಸಲ್ಪಡುತ್ತದೆ. ಶುಭ ಮುಹೂರ್ತ ಯಾವಾಗ?

ರಾಧಾ ಜನ್ಮಾಷ್ಟಮಿ ಶುಭ ಮುಹೂರ್ತ: 2021 ಸೆಪ್ಟೆಂಬರ್​ 14 ಮಂಗಳವಾರ

ಅಷ್ಟಮಿ ತಿಥಿ ಆರಂಭ – ಸೆಪ್ಟೆಂಬರ್​ 13 ಸೋಮವಾರ ಮಧ್ಯಾಹ್ನ 03:10 ಕ್ಕೆ
ಅಷ್ಟಮಿ ತಿಥಿ ಸಮಾಪ್ತಿ – ಸೆಪ್ಟೆಂಬರ್​ 14 ಮಂಗಳವಾರ ಮಧ್ಯಾಹ್ನ 01:09 ಕ್ಕೆ

ಪೂಜಾ ವಿಧಿ ಹೇಗೆ:
ರಾಧಾ ಜನ್ಮಾಷ್ಟಮಿ ಶುಭ ದಿನ ಪ್ರಾತಃಕಾಲದಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ತೊಡಬೇಕು. ರಾಧಾ ರಾಣಿ ಅಥವಾ ಶ್ರೀ ಕೃಷ್ಣನ ಸಮ್ಮುಖದಲ್ಲಿ ಸಂಕಲ್ಪ ಮಾಡಬೇಕು. ಅಥವಾ ಇಬ್ಬರೂ ಸಮ್ಮುಖದಲ್ಲಿ ಇಬ್ಬರನ್ನೂ ಅರಾಧಿಸಬೇಕು. ಗೋಕುಲಾಷ್ಠಮಿಯ ದಿನ ಪೂಜೆ ನೆರವೇರಿಸಿದಂತೆ ರಾಧಾ ಜನ್ಮಾಷ್ಟಮಿಯ ದಿನವೂ ವ್ರತಾಚರಣೆ ಮಾಡಬೇಕು.

(radha ashtami 2021 date after janmashtami auspicious time and importance vrat significance)