ಈದ್ ಉಲ್-ಫಿತರ್ 2022 ಅನ್ನು ಮೇ 2 ರಂದು ಆಚರಿಸಲಾಗುತ್ತಿದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಶ್ರದ್ಧೆ, ಭಕ್ತಿಯಿಂದ 30 ದಿನಗಳ ಉಪವಾಸವನ್ನು ಆಚರಿಸಿ ಕೊನೆಯ ದಿನದಂದು ಹಬ್ಬವನ್ನು ಆಚರಿಸುತ್ತಾರೆ. ಈ ದಿನದಂದು ಪ್ರತಿಯೊಬ್ಬ ಮುಸ್ಲಿಮರು ತಮ್ಮ ಮನೆಯನ್ನು ಅತ್ಯುತ್ತಮ ರೀತಿಯಲ್ಲಿ ಅಲಂಕರಿಸಬೇಕೆಂದು ತಯಾರಿ ನಡೆಸುತ್ತಿರುತ್ತಾರೆ. ಹೀಗಾಗಿ ನಾವಿಂದು ಈ ಆರ್ಟಿಕಲ್ನಲ್ಲಿ ಈ ಹಬ್ಬದ ದಿನದಂದು ನಿಮ್ಮ ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ನಾವು ಕೆಲವು ಅದ್ಭುತ ಐಡಿಯಾಗಳನ್ನು ನೀಡುತ್ತಿದ್ದೇವೆ. ಅಲ್ಲದೆ, ಈದ್‌ನ ಈ ಶುಭ ಸಂದರ್ಭದಲ್ಲಿ, ನಿಮ್ಮ ಮನೆಯನ್ನು ಸುಂದರ ಹಾಗೂ ಆಕರ್ಶಕವಾಗಿಟ್ಟುಕೊಳ್ಳಿ. ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.
ರಂಜಾನ್ ಹಬ್ಬದ ದಿನದಂದು ನಿಮ್ಮ ಮನೆಯನ್ನು ಅಲಂಕರಿಸಲು ವಿವಿಧ ಐಡಿಯಾಗಳು ಇಲ್ಲಿವೆ.
ಮನೆಗೆ ದೀಪಾಲಂಕಾರ
ಮನೆಗೆ ದೀಪಾಲಂಕಾರ ಮಾಡದೆ ಈದ್ ಅಲಂಕಾರ ಅಪೂರ್ಣ. ಈ ಹಬ್ಬಕ್ಕೆ ಹೊಳಪನ್ನು ತರಲು, ದೀಪಗಳ ಸರಮಾಲೆಯೊಂದಿಗೆ ಹೊರಾಂಗಣವನ್ನು ಬೆರಗುಗೊಳಿಸಿ. ನೀವು ಯಾವುದೇ ಎಲ್ಇಡಿ ಲೈಟ್, ತಿರುಗುವ ಬಲ್ಬ್ ಅಥವಾ ನಿಮ್ಮ ಮನೆಗೆ ಸೂಕ್ತವಾದ ಯಾವುದೇ ಬೆಳಕನ್ನು ಚೆಲ್ಲುವ ದೀಪವನ್ನು ಆಯ್ಕೆ ಮಾಡಬಹುದು. ದೀಪಾಲಂಕಾರವು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ.
ನಕ್ಷತ್ರಗಳು ಮತ್ತು ಚಂದ್ರನ ಡೋರ್ ಹ್ಯಾಂಗಿಂಗ್ ಬಳಸಿ
ಇಸ್ಲಾಮಿಕ್ ಸಮುದಾಯಗಳಲ್ಲಿ ಚಂದ್ರ ಮತ್ತು ನಕ್ಷತ್ರಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಚಂದ್ರ ಮತ್ತು ನಕ್ಷತ್ರಗಳನ್ನು ಸಂಕೇತಿಸುವ ವಿವಿಧ ಅಲಂಕಾರಗಳು ಈದ್ ಅಲಂಕಾರದ ಭಾಗವಾಗಿರಬೇಕು. ನೀವು ಕೆಲವು ಪ್ರಕಾಶಮಾನವಾದ ಬಣ್ಣದ ನಕ್ಷತ್ರ ತಂತಿಗಳನ್ನು ಖರೀದಿಸಬಹುದು ಅಥವಾ ನೀವೆ ತಯಾರಿಸಬಹುದು. ಆದ್ದರಿಂದ ನೀವು ನಕ್ಷತ್ರದ ತಂತಿಗಳಿಂದ ನಿಮ್ಮ ಕಿಟಕಿಯನ್ನು ಅಲಂಕರಿಸಿದಾಗ, ಅದು ನಿಮ್ಮ ಮನೆಗೆ ಉತ್ತಮ ಬದಲಾವಣೆಯನ್ನು ತರುತ್ತದೆ. ಈ ಅಲಂಕಾರವು ಬ್ರಹ್ಮಾಂಡದ ಎಲ್ಲಾ ನಕ್ಷತ್ರಗಳು ಮತ್ತು ಚಂದ್ರನು ನಿಮ್ಮ ಮನೆಯಲ್ಲಿದೆ ಎಂಬ ಭಾವನೆಯನ್ನು ನೀಡುತ್ತದೆ. ಮತ್ತು ಹಬ್ಬದ ಸಂದೇಶ ಸಾರುವ ಒಂದು ಅದ್ಭುತ ಅಲಂಕಾರವಾಗಲಿದ್ದು ನಿಮ್ಮ ಮನೆಗೆ ಬಂದವರಿಗೆ ಸಂತೋಷ ನೀಡಲಿದೆ.
“ಈದ್ ಮುಬಾರಕ್” ಮಾಲೆಯನ್ನು ಬಳಸಿ
ಹುಟ್ಟುಹಬ್ಬದಂತಹ ವಿಶೇಷ ದಿನಗಳಲ್ಲಿ ನಾವು ಬಳಸುವ ಮಾಲೆಯಂತೆಯೇ ನಿಮ್ಮ ಮನೆಗೆಯ ಗೋಡೆ ಅಥವಾ ಮನೆಯ ಮುಂಭಾಗದ ಬಾಗಿಲಿಗೆ ಈದ್ ಮುಬಾರಕ್ ಎಂದು ಬರೆಯಲಾದ ಮಾಲೆಯನ್ನು ಬಳಸಬಹುದು. ಅಲ್ಲದೆ ಹೂವುಗಳು, ಎಲೆಗಳು, ಹಣ್ಣುಗಳು, ಕೊಂಬೆಗಳು ಅಥವಾ ಉಂಗುರವನ್ನು ಹೋಲುವ ವಸ್ತುಗಳನ್ನು ವಿಂಗಡಿಸಿ ಅವುಗಳಿಂದ ಮನೆಯ ಅಂದವನ್ನು ಹೆಚ್ಚಿಸಿ ಸಂಭ್ರಮವನ್ನು ದುಪ್ಪಟ್ಟು ಮಾಡಬಹುದು.
ಹಬ್ಬದಂದು ಊಟದ ಟೇಬಲ್ ಕೂಡ ಅಲಂಕರಿಸಿ
ಈದ್ ದಿನದಂದು ಊಟದ ಟೇಬಲ್ ಅನ್ನು ಅಲಂಕರಿಸಲು ಸಲಹೆ ನೀಡಲಾಗುತ್ತದೆ ಏಕೆಂದರೆ ಬಿರಿಯಾನಿ, ಶೀರ್ ಖುರ್ಮಾ, ಕಬಾಬ್, ಇತ್ಯಾದಿಗಳನ್ನು ಈ ದಿನದಂದು ತಯಾರಿಸಲಾಗುತ್ತದೆ. ಇದು ಈ ಹಬ್ಬದ ದಿನಕ್ಕೆ ನಿಮ್ಮ ಮನೆಯಲ್ಲಿ ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತದೆ. ನಿಮ್ಮ ಅತಿಥಿಗಳಿಗೆ ರುಚಿಕರವಾದ ಆಹಾರವನ್ನು ನೀಡಲು ಇದು ನಿಮ್ಮ ದಿನವಾಗಿದೆ. ಈ ಹಬ್ಬದಂದು ಸಾಂಪ್ರದಾಯಿಕ ಲೋಹದ ಪಾತ್ರೆಗಳು ಮತ್ತು ಹಳೆಯ ಶೈಲಿಯ ಟೇಬಲ್ ಉಡುಗೆಗಳನ್ನು ಬಳಸಿ. ನಿಮ್ಮ ಡೈನಿಂಗ್ ಟೇಬಲ್ ಅಲಂಕಾರವನ್ನು ಹೆಚ್ಚಿಸಲು ನೀವು ಕೆಲವು ಮೇಣದಬತ್ತಿಗಳು ಮತ್ತು ಹೂವುಗಳನ್ನು ಕೂಡ ಬಳಸಬಹುದು. ಇದರಿಂದ ನಿಮ್ಮ ಮನೆಯಲ್ಲಿ ವಿಶೇಷ ಭೋಜನ ಮತ್ತು ಹಬ್ಬದ ಸಂಭ್ರಮ ಎದ್ದು ಕಾಣುತ್ತದೆ. ಊಟಕ್ಕೆ ಬಂದವರು ಕೂಡ ಸಂತೋಷದಿಂದ ಭೋಜನ ಸವಿಯುತ್ತಾರೆ.
ಅಲಂಕಾರಕ್ಕಾಗಿ ತಾಜಾ ಹೂವುಗಳನ್ನು ಬಳಸಿ
ಈದ್ ಅಲಂಕಾರದಲ್ಲಿ ಹೂವುಗಳು ಪ್ರಮುಖ ಪಾತ್ರವಹಿಸುತ್ತವೆ. ಯಾವುದೇ ಅಲಂಕಾರಕ್ಕೆ ಬಳಸುವ ಪರಿಮಳಯುಕ್ತ ಮತ್ತು ಸೌಂದರ್ಯಯುಕ್ತ ಹೂವುಗಳನ್ನು ಹೋಲಿಸಲಾಗದು. ಪ್ರತಿ ಹಬ್ಬ, ಶುಭ ದಿನಗಳಲ್ಲಿ ಹೂವಿನ ಅಲಂಕಾರ ಅತಿ ಮುಖ್ಯ. ಹೀಗಾಗಿ ಈ ಹಬ್ಬದಂದು ಹೂವುಗಳನ್ನು ಪ್ರದರ್ಶಿಸಲು ಅಲಂಕಾರಿಕ ಹೂದಾನಿಗಳನ್ನು ಬಳಸಿ. ನಿಮ್ಮ ಬಾಲ್ಕನಿಯನ್ನು ಹೂಮಾಲೆಗಳಿಂದ ಅಲಂಕರಿಸಿ ಮತ್ತು ಕಾಲ್ಪನಿಕ ದೀಪಗಳ ಜೊತೆ ಹೂಗಳ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಇತ್ತರ್ ಹಾಕಿ. ಆಗ ಹೂಗಳ ಸುವಾಸನೆಯ ಜೊತೆ ಇತ್ತರ್ ಪರಿಮಳ ಕೂಡ ನಿಮ್ಮ ಮನೆಯನ್ನು ಆವರಿಸಿ ಹಬ್ಬದ ಸೊಬಗನ್ನು ಮೆರೆಯುತ್ತದೆ.
ಇನ್ನು ಇದರ ಜೊತೆ ಚಿಕ್ಕ ಸಲಹೆ ಎಂದರೆ ರಂಜಾನ್ ಹಬ್ಬದಂದು ಹಿರಿಯರು ಚಿಕ್ಕವರಿಗೆ, ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಹೀಗಾಗಿ ಈ ದಿನದಂದು ಅವರ ಹೆಸರಲ್ಲಿ ಇನ್ಶೂರೆನ್ಸ್ ಮಾಡಿಸುವುದು ಅಥವಾ ಉತ್ತಮ ರೀತಿಯ ಮಹತ್ವದ ಉಡುಗೊರೆಯನ್ನು ನೀಡಿ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿ.