Sadhguru Tips: ವ್ಯಾಪಾರ ವ್ಯವಹಾರ ಉದ್ಯಮ ಪ್ರಾರಂಭ ಮಾಡುವವರಿಗೆ ಸದ್ಗುರು ನೀಡಿರುವ ಸಲಹೆಗಳು ಹೀಗಿವೆ

|

Updated on: Feb 17, 2023 | 10:59 AM

ಸಮಸ್ಯೆ ಒಂದೇ ಎಂದು ನೀವು ಭಾವಿಸಿದರೆ ಮಾತ್ರ ಸಮಸ್ಯೆಯಾಗುತ್ತದೆ. ಸಮಸ್ಯೆಗಳು ಅಸ್ತಿತ್ವದಲ್ಲಿಲ್ಲ, ಪರಿಹಾರಗಳು ಮಾತ್ರ ಇರುತ್ತವೆ ಎಂದು ಸದ್ಗುರು ಹೇಳುತ್ತಾರೆ. ನಮ್ಮಲ್ಲಿ ಕೆಲವರಿಗೆ ಅವುಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿದೆ. "ಒಬ್ಬ ವ್ಯಕ್ತಿಗೆ ಸಮಸ್ಯೆಯೆಂದರೆ ಇನ್ನೊಬ್ಬರಿಗೆ ಅವಕಾಶ" ಎಂದು ಸದ್ಗುರು ಹೇಳುತ್ತಾರೆ.

Sadhguru Tips: ವ್ಯಾಪಾರ ವ್ಯವಹಾರ ಉದ್ಯಮ ಪ್ರಾರಂಭ ಮಾಡುವವರಿಗೆ ಸದ್ಗುರು ನೀಡಿರುವ ಸಲಹೆಗಳು ಹೀಗಿವೆ
ಸದ್ಗುರು
Image Credit source: Isha Foundation
Follow us on

ಸದ್ಗುರು(Sadhguru) ಗಳ ಸಲಹೆಗಳು ಜನರ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನವನ್ನು ಉತ್ತಮವಾಗಿ ಮುನ್ನಡೆಸಲು ಸಹಾಯ ಮಾಡಿದೆ. ಇಶಾ ಫೌಂಡೇಶನ್‌(Isha Foundation) ನ ಸಂಸ್ಥಾಪಕರಾದ ಸದ್ಗುರು ಅವರು ಉದ್ಯಮಶೀಲತೆ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ದೂರದೃಷ್ಟಿಯ ಆಲೋಚನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಸದ್ಗುರುಗಳ ಬೋಧನೆಗಳಲ್ಲಿ ಉದ್ಯಮಶೀಲತೆಯ ಪ್ರಯಾಣದಲ್ಲಿ ಬೆಳೆಯಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.

1. ಶಾಂತತೆಯ ಭಾವನೆ:

ನಿಮ್ಮ ವೃತ್ತಿಪರ ಜೀವನದಲ್ಲಿ ಸೋಲು ಗೆಲುವುಗಳು ಸಹಜ. ಆದರೆ ಪ್ರತಿ ಸಂದರ್ಭದಲ್ಲಿಯೂ ಅಂದರೆ ಗೆಲುವಿನ ಸಮಯದಲ್ಲಿ ಹಿಗ್ಗದೆ, ಸೋಲಿನ ಸಮಯದಲ್ಲಿ ಕುಗ್ಗದೆ ಸಮಚಿತ್ತದಿಂದ ಇರುವುದು ಮುಖ್ಯ ಎಂದು ಸಲಹೆ ನೀಡುತ್ತಾರೆ. ಕಷ್ಟದ ಸಮಯವನ್ನು ಯಾರೂ ಅನುಭವಿಸಿರುತ್ತಾನೋ, ಆತ ಖಂಡಿತಾವಾಗಿಯೂ ಗೆಲುವು ಪಡೆಯುತ್ತಾನೆ ಎಂದು ಅವರು ಹೇಳುತ್ತಾರೆ.

2. ಸಮಯ ಮತ್ತು ಶಕ್ತಿಯನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ:

ಒಬ್ಬ ಉದ್ಯಮಿಯಾದವನು ಯಾವ ಕ್ಷೇತ್ರಗಳಲ್ಲಿ ಸಮಯ ಮತ್ತು ಶಕ್ತಿಯನ್ನು ವ್ಯಯಿಸಲು ಯೋಗ್ಯವಾಗಿದೆ ಎಂಬುದನ್ನು ಲೆಕ್ಕ ಹಾಕುವುದು ಮುಖ್ಯ ಎಂದು ಹೇಳುತ್ತಾರೆ. ಸಮಯವು ಹಣಕ್ಕಿಂತ ಹೆಚ್ಚು ದುಬಾರಿಯಾಗಿದೆ, ಹೀಗಾಗಿ, ಬುದ್ಧಿವಂತಿಕೆಯಿಂದ ಖರ್ಚು ಮಾಡಿ ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಮೊದಲ ಬಾರಿ ಅದ್ದೂರಿ ಶಿವರಾತ್ರಿ ಆಚರಣೆ! ಪೂಜೆ, ಪ್ರವಚನ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ

3. ಕಷ್ಟದ ದಿನಗಳಿಂದ ಹೊರಬರಲು ಧೈರ್ಯದಿಂದ ಹೋರಾಡಿ:

ಕೆಲವೊಮ್ಮೆ ನಿಮ್ಮ ಸಾಮರ್ಥ್ಯಗಳನ್ನು ಪರೀಕ್ಷಿಸಲು ನೀವು ನಿಜವಾಗಿಯೂ ಚಂಡಮಾರುತದ ಮೂಲಕ ನೌಕಾಯಾನ ಮಾಡಬೇಕು ಎಂದು ಹೇಳುತ್ತಾರೆ. ನೀವು ಚಂಡಮಾರುತದ ಮೇಲೆ ಸವಾರಿ ಮಾಡಿದರೆ, ನೀವು ಬಲವಾಗಿ ಹೊರಹೊಮ್ಮುತ್ತೀರಿ. ಆದ್ದರಿಂದ ಯಾವುದೇ ಕಷ್ಟದ ಸಂದರ್ಭಗಳಲ್ಲಿ ಹಿಗ್ಗದೇ ದೈರ್ಯದಿಂದ ಮುನ್ನುಗ್ಗಿ ಎಂದು ಹೇಳುತ್ತಾರೆ.

ಇದನ್ನೂ ಓದಿ:

4. ಸಮಸ್ಯೆಗಳು ಶಾಶ್ವತವಲ್ಲ:

ಸಮಸ್ಯೆ ಒಂದೇ ಎಂದು ನೀವು ಭಾವಿಸಿದರೆ ಮಾತ್ರ ಸಮಸ್ಯೆಯಾಗುತ್ತದೆ. ಸಮಸ್ಯೆಗಳು ಅಸ್ತಿತ್ವದಲ್ಲಿಲ್ಲ, ಪರಿಹಾರಗಳು ಮಾತ್ರ ಇರುತ್ತವೆ ಎಂದು ಸದ್ಗುರು ಹೇಳುತ್ತಾರೆ. ನಮ್ಮಲ್ಲಿ ಕೆಲವರಿಗೆ ಅವುಗಳನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿದೆ. “ಒಬ್ಬ ವ್ಯಕ್ತಿಗೆ ಸಮಸ್ಯೆಯೆಂದರೆ ಇನ್ನೊಬ್ಬರಿಗೆ ಅವಕಾಶ” ಎಂದು ಸದ್ಗುರು ಹೇಳುತ್ತಾರೆ.

5. ಸಮಯ ವ್ಯರ್ಥ ಮಾಡದಿರಿ:

ನೀವು ಯಾರೆಂಬುದನ್ನು ನೀವು ಅಪ್‌ಗ್ರೇಡ್ ಮಾಡಬೇಕಾಗಿದೆ. ಒಂದೊಂದು ಸೆಕೆಂಡುಗಳಲ್ಲಿ ವ್ಯಕ್ತಿಯಲ್ಲಿ ಸಾವಿರ ಯೋಚನೆಗಳು ಬರಬಹುದು. ಆದ್ದರಿಂದ ನಾಳೆಯೂ ಇದೆ, ಈ ಕೆಲಸವನ್ನು ನಾಳೆ ಮಾಡಬಹುದು ಎಂದು ಸಮಯ ವ್ಯರ್ಥ ಮಾಡದಿರಿ.

ಅಧ್ಯಾತ್ಮಕ್ಕೆ  ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:59 am, Fri, 17 February 23