
ನವರಾತ್ರಿ ಎಂದ ತಕ್ಷಣ ಎಲ್ಲರ ನೆನಪಿಗೆ ಬರುವುದು ಸಂಗೀತ, ಉಪವಾಸ ಮತ್ತು ಸಂಭ್ರಮಾಚರಣೆ. ಆದರೆ ಇಶಾ ಫೌಂಡೇಶನ್‌ನ ಸದ್ಗುರು ಅವರ ಪ್ರಕಾರ, ನವರಾತ್ರಿ ಎನ್ನುವುದು ಕೇವಲ ಆಚರಣೆಗಷ್ಟೇ ಸೀಮಿತವಾಗಿರದೆ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆಂತರಿಕ ಬೆಳವಣಿಗೆ ಮತ್ತು ಬದಲಾವಣೆಯನ್ನು (Transformation) ಕಂಡುಕೊಳ್ಳಲು ಸಿಗುವ ಉತ್ತಮ ಅವಕಾಶವಾಗಿದೆ. ಸದ್ಗುರು ಅವರು ನವರಾತ್ರಿಯ ಒಂಬತ್ತು ರಾತ್ರಿಗಳನ್ನು ಮಾನವ ಸ್ವಭಾವದ ಮೂರು ಮುಖ್ಯ ಗುಣಗಳಾದ ತಾಮಸಗುಣ, ರಜೋಗುಣ ಮತ್ತು ಸತ್ತ್ವ ಗುಣಗಳಿಗೆ ವಿಂಗಡಿಸಿ ವಿವರಿಸುತ್ತಾರೆ.
ಈ ದಿನಗಳು ಪೃಥ್ವಿ (ಭೂಮಿ), ಜನನ ಮತ್ತು ಮೌನಕ್ಕೆ ಸಂಬಂಧಿಸಿದ್ದು. ನಮ್ಮ ದೇಹವು ತಾತ್ಕಾಲಿಕ ಎಂಬ ಸತ್ಯವನ್ನು ಅರಿತು, ಆಧ್ಯಾತ್ಮಿಕ ಚಿಂತನೆಯತ್ತ ಗಮನ ಹರಿಸಲು ಈ ದಿನಗಳು ಸೂಕ್ತ.
ರಜೋಗುಣವು ಮನುಷ್ಯನನ್ನು ಕರ್ಮ ಅಥವಾ ಕ್ರಿಯೆಯತ್ತ ಪ್ರೇರೇಪಿಸುತ್ತದೆ. ನಾವು ಮಾಡುವ ಕೆಲಸಗಳನ್ನು ಎಷ್ಟು ಅರಿವಿನಿಂದ (Consciousness) ಮಾಡುತ್ತಿದ್ದೇವೆ ಎಂಬುದನ್ನು ಪರಿಶೀಲಿಸಲು ಈ ದಿನಗಳು ನೆರವಾಗುತ್ತವೆ.
ಈ ಅವಧಿಯು ಜ್ಞಾನ, ಬೆಳಕು ಮತ್ತು ಜಾಗೃತಿಯ ಸಂಕೇತ. ಸತ್ವಗುಣವು ವ್ಯಕ್ತಿಯನ್ನು ಉನ್ನತ ಜ್ಞಾನದತ್ತ ಕೊಂಡೊಯ್ಯುತ್ತದೆ.
ಇದನ್ನೂ ಓದಿ: ಪಿತೃಪಕ್ಷದಲ್ಲಿ ಮರಣ ಸಂಭವಿದರೆ ಶುಭವೋ ಅಶುಭವೋ? ಗರುಡ ಪುರಾಣ ಹೇಳುವುದೇನು?
ಒಂಬತ್ತು ರಾತ್ರಿಗಳ ನಂತರ ಬರುವ 10ನೇ ದಿನವೇ ವಿಜಯದಶಮಿ. ಸದ್ಗುರು ಅವರ ಪ್ರಕಾರ, ವಿಜಯದಶಮಿ ಎಂದರೆ ಕೇವಲ ಸಂಪತ್ತು, ಅಧಿಕಾರ ಅಥವಾ ಜ್ಞಾನವನ್ನು ಗಳಿಸುವುದಷ್ಟೇ ಅಲ್ಲ, ಬದಲಿಗೆ ಈ ಮೂರೂ ಗುಣಗಳನ್ನು ದಾಟಿ (Transcending Limitations) ಮುನ್ನಡೆಯುವುದು ಮತ್ತು ಜೀವನದಲ್ಲಿ ಸಫಲತೆಯನ್ನು ಸಾಧಿಸುವುದು. ನವರಾತ್ರಿಯು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನವನ್ನು ಎಷ್ಟು ಜಾಗರೂಕತೆಯಿಂದ ಮತ್ತು ಶ್ರದ್ಧೆಯಿಂದ ಅನುಭವಿಸುತ್ತಿದ್ದಾರೆ ಎಂಬುದನ್ನು ನೆನಪಿಸುವ ಸುಂದರ ಪಯಣವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Sat, 3 October 26