Saturday Rituals: ಏನಿದು “ಛಾಯಾ ದಾನ”? ಶನಿ ದೋಷವಿದ್ದವರು ತಿಳಿಯಲೇ ಬೇಕಾದ ವಿಷಯವಿದು

ಶನಿವಾರ ಶನಿ ದೇವರಿಗೆ ಅತ್ಯಂತ ಪವಿತ್ರ ದಿನ. ಶನಿ ದೋಷ ನಿವಾರಣೆಗೆ ಸಾಸಿವೆ ಎಣ್ಣೆಯ ಛಾಯಾ ದಾನ ಒಂದು ಪ್ರಮುಖ ಪರಿಹಾರ. ಇದಲ್ಲದೆ, ಶನಿವಾರ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುವುದು, ಕಪ್ಪು ವಸ್ತುಗಳ ದಾನ ಮಾಡುವುದು ಸಹ ಶುಭಕರ. ಇದಲ್ಲದೇ ಹನುಮಂತನನ್ನು ಪೂಜಿಸುವುದರಿಂದ ಶನಿ ಪ್ರಭಾವದಿಂದ ನೀವು ಮುಕ್ತಿ ಪಡೆಯಬಹುದು.

Saturday Rituals: ಏನಿದು ಛಾಯಾ ದಾನ? ಶನಿ ದೋಷವಿದ್ದವರು ತಿಳಿಯಲೇ ಬೇಕಾದ ವಿಷಯವಿದು
Chhaya Daan

Updated on: Jun 14, 2025 | 10:40 AM

ಶನಿವಾರ ಶನಿ ದೇವರಿಗೆ ಸಮರ್ಪಿತವಾಗಿದೆ. ಶನಿ ದೇವರನ್ನು ನ್ಯಾಯ ಮತ್ತು ಕರ್ಮದ ದೇವರು ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶನಿವಾರ ಸ್ನಾನ ಮಾಡಿ ಶನಿ ದೇವರ ದೇವಸ್ಥಾನಕ್ಕೆ ಹೋಗಿ, ಸಾಸಿವೆ ಎಣ್ಣೆಯನ್ನು ಅರ್ಪಿಸುವುದು ಶುಭ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ, ಶನಿಯ ಮಹಾದಶದಿಂದ ಹಾಗೂ ಶನಿ ಧೈಯದಿಂದ ಪರಿಹಾರ ಸಿಗುತ್ತದೆ. ಆದರೆ ಜನಪ್ರಿಯ ಜ್ಯೋತಿಷ್ಯ ಪರಿಹಾರಗಳೊಂದು ಛಾಯಾ ದಾನ. ಏನಿದು ಛಾಯಾ ದಾನ? ಮಾಡುವುದೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಏನಿದು ಛಾಯಾ ದಾನ?

ಶನಿ ದೇವನು ಸೂರ್ಯ ಮತ್ತು ಛಾಯಾ ದೇವಿಯ ಮಗ. ಸೂರ್ಯನ ಪತ್ನಿ ಸಂಜ್ಞಾ ಸೂರ್ಯನ ತಾಪವನ್ನು ಸಹಿಸದೇ ತನ್ನದೇ ನೆರಳಿನ ರೂಪವಾದ ಛಾಯೆಯನ್ನು ಸೃಷ್ಟಿಸುತ್ತಾಳೆ. ಛಾಯಾ ಮತ್ತು ಸೂರ್ಯನಿಗೆ ಜನಿಸಿದ ಮಗುವೇ ಶನಿ ಎಂದು ಹೇಳಲಾಗುತ್ತದೆ. ಆದ್ದರಿಂದ ಛಾಯಾ ದಾನ ಅತ್ಯಂತ ಪರಿಣಾಮಕಾರಿಯಾಗಿದೆ. ಛಾಯಾ ಅಂದರೆ ನೆರಳು, ನಿಮ್ಮ ನೆರಳನ್ನು ದಾನ ಮಾಡುವುದು ಎಂಬ ಅರ್ಥವನ್ನು ಸೂಚಿಸುತ್ತದೆ. ಆದರೆ ನೆರಳು ದಾನ ಮಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಈ ಪರಿಹಾರವನ್ನು ಮಾಡುವುದು ಹೇಗೆ?

ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಸಾಸಿವೆ ಎಣ್ಣೆ ಶನಿ ದೇವರಿಗೆ ತುಂಬಾ ಪ್ರಿಯ. ಅಂತಹ ಪರಿಸ್ಥಿತಿಯಲ್ಲಿ, ಶನಿವಾರ ಸಾಸಿವೆ ಎಣ್ಣೆಯನ್ನು ಪಾತ್ರೆಯಲ್ಲಿ ಹಾಕಿ, ಅದರಲ್ಲಿ ನಿಮ್ಮ ಮುಖವನ್ನು ನೋಡಿ ಅಂದರೆ ನಿಮ್ಮ ನೆರಳನ್ನು ಅದರಲ್ಲಿ ನೋಡಿ. ನಂತರ ಆ ಎಣ್ಣೆಯನ್ನು ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ ಮಾಡಿ. ಈ ದಾನವನ್ನು ಛಾಯಾ ದಾನ ಎಂದು ಕರೆಯಲಾಗುತ್ತದೆ. ದಾನ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು. ಈ ಪರಿಹಾರವು ಶನಿ ದೇವರನ್ನು ಸಂತೋಷಪಡಿಸುತ್ತದೆ ಮತ್ತು ನಕಾರಾತ್ಮಕ ಪರಿಣಾಮಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಛಾಯಾ ದಾನ ಮಾಡುವುದರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎಂದು ನಂಬಿಕೆಯಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಶನಿವಾರ ಈ ಪರಿಹಾರವನ್ನು ಮಾಡುವುದರಿಂದ ವಿಶೇಷ ಪ್ರಯೋಜನಗಳು ದೊರೆಯುತ್ತವೆ. ಶನಿ ದೇವರ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರುತ್ತದೆ.

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ಇದಲ್ಲದೆ, ಶನಿ ದೋಷದಿಂದ ಮುಕ್ತಿ ಪಡೆಯಲು, ನೀವು ಪ್ರತಿ ಶನಿವಾರ ಶನಿ ದೇವರ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಭಕ್ತಿಯಿಂದ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಇದರೊಂದಿಗೆ, ಶನಿ ಚಾಲೀಸಾ ಅಥವಾ ಹನುಮಾನ್​​ ಚಾಲೀಸಾ ಪಠಿಸಿ. ಶನಿವಾರ ಕಪ್ಪು ವಸ್ತುಗಳನ್ನು ದಾನ ಮಾಡಿ. ಇದಲ್ಲದೇ ಹನುಮಂತನನ್ನು ಪೂಜಿಸುವುದರಿಂದ ಶನಿ ಪ್ರಭಾವದಿಂದ ನೀವು ಮುಕ್ತಿ ಪಡೆಯಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sat, 14 June 25