AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಈ ಪ್ರಾಣಿ ಕಾಣಿಸಿಕೊಂಡರೆ.. ಅದರ ಅರ್ಥ ವ್ಯಾಪ್ತಿ ಏನು ಗೊತ್ತಾ!?

ಚೇಳುಗಳು ನಿಜ ಜೀವನದಲ್ಲಿ ಮನುಷ್ಯ ಜೀವಿಗಳಿಗೆ ಸ್ನೇಹಪರವಲ್ಲ, ಎಂತಹ ಎಂಟೆದೆಯ ಭಂಟನಿಗೇ ಆಗಲೀ ಚೇಳು ಅಂದಾಕ್ಷಣ ಇಡೀ ದೇಹದಲ್ಲಿ ಚಳುಕೆದ್ದು ಮೈ ಥರಗುಟ್ಟುವುದು ಸಹಜ. ಕನಸಿನಲ್ಲಿ ಅವುಗಳನ್ನು ಎದುರಿಸುವುದು ಸಾಮಾನ್ಯವಾಗಿ ಚೇತೋಲಹರಿ ಆಗಿರುವುದಿಲ್ಲ. ಆದರೆ ಚೇಳುಗಳು ಆಧ್ಯಾತ್ಮಿಕ ಮತ್ತು ಸುಪ್ತ ಪ್ರಜ್ಞೆಯ ಅರ್ಥಗಳಿಂದ ತುಂಬಿರುತ್ತವೆ. ಇಂತಹ ಚೇಳುಗಳೊಂದಿಗೆ ನಿಮ್ಮ ರಾತ್ರಿಗಳ ಮುಖಾಮುಖಿಗಳು ನಿಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳನ್ನು ಮತ್ತು ಪರಿಹಾರಗಳನ್ನು ಪ್ರತಿನಿಧಿಸಬಹುದು. ಚೇಳಿನ ಕನಸುಗಳ ಕುರಿತು ಒಂದಷ್ಟು ಉಪಯುಕ್ತ ಸಲಹೆಯನ್ನು ನೀಡುತ್ತೇವೆ. ಒಂದಷ್ಟು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅರ್ಥಗಳ ಚುಚ್ಚುಮದ್ದನ್ನು ಸಹ ನಿಮಗಿಲ್ಲಿ ನೀಡುತ್ತೇವೆ... ಇಲ್ಲಿ ಓದಿ.

ಕನಸಿನಲ್ಲಿ ಈ ಪ್ರಾಣಿ ಕಾಣಿಸಿಕೊಂಡರೆ.. ಅದರ ಅರ್ಥ ವ್ಯಾಪ್ತಿ ಏನು ಗೊತ್ತಾ!?
ಕನಸಿನಲ್ಲಿ ಚೇಳು ಕಾಣಿಸಿಕೊಂಡರೆ ಏನು ಅರ್ಥ
Follow us
ಆಯೇಷಾ ಬಾನು
|

Updated on:Sep 04, 2024 | 11:24 AM

ಸ್ಕಾರ್ಪಿಯನ್ ಕನಸಿನ ರೂಪಾಂತರ: ಚೇಳುಗಳು ಆಧ್ಯಾತ್ಮಿಕವಾಗಿ, ಸಾಮಾನ್ಯವಾಗಿ ಬದಲಾವಣೆ, ಪರಿವರ್ತನೆಯ ನಿಯಮಗಳೊಂದಿಗೆ ಸಂಬಂಧ ಹೊಂದಿವೆ. ಇದಕ್ಕೆ ಒಂದೆರಡು ಕಾರಣಗಳಿವೆ. ಮೊದಲನೆಯದಾಗಿ, ಚೇಳುಗಳು ಸಾಮಾನ್ಯವಾಗಿ ಮಾರಣಾಂತಿಕವಾಗಿರುವುದರಿಂದ, ಜನರು ತಮ್ಮ ಜೀವನದಲ್ಲಿ ಸಾವಿನ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲಿ ಚೇಳಿನ ಕನಸು ಸಾಂಕೇತಿಕವಾಗಿರುತ್ತದೆ. ಹಾಗಾಗಿ ಅದನ್ನು ನೀವು ದಾರ್ಶನಿಕವಾಗಿ ಅಂದರೆ ಜೀವನದಲ್ಲಿ ಫಿಲಾಸಫಿಕಲಿ ತಗೋಬಹುದು. ಭಯ ಅಥವಾ ಅಪಾಯ: ಬಹುಶಃ ಅತ್ಯಂತ ಗಮನಾರ್ಹವಾಗಿ, ಚೇಳುಗಳನ್ನು ದೊಡ್ಡ ಅಪಾಯದ ಮೂಲಗಳು ಅಥವಾ ಸಂಕೇತಗಳಾಗಿ ನೋಡಲಾಗುತ್ತದೆ. ಅದರ ಸಿಗ್ನೇಚರ್ ಸ್ಟಿಂಗ್​​​ಗಳು ಸಾಮಾನ್ಯವಾಗಿ ಮಾರಣಾಂತಿಕ ವಿಷವನ್ನು ಹೊರಹಾಕುತ್ತವೆ. ಜಾನಪದ ಕಥೆಗಳು, ಚಲನಚಿತ್ರಗಳು, ಕಾದಂಬರಿಗಳು ಮತ್ತು ಮುಂತಾದವುಗಳಲ್ಲಿ ಅವುಗಳನ್ನು ಅಂತಹ ಅಸಾಧಾರಣ ಜೀವಿಗಳಾಗಿ ಚಿತ್ರಿಸಿರುವುದು ಆಶ್ಚರ್ಯವೇನಿಲ್ಲ. ಚೇಳಿನ ಚಿತ್ರಣ, ಚೇಳಿನ ಕನಸು ಸಾಮಾನ್ಯವಾಗಿ ಕೆಲವು ರೀತಿಯ ಅಪಾಯ ಅಥವಾ ಭೀತಿಯನ್ನು ಮುನ್ಸೂಚಿಸುತ್ತದೆ. ಗುಪ್ತ ಭಾವನೆಗಳು: ಚೇಳುಗಳು ಕೈಗೆಟುಕದ, ಒಂಟಿಯಾಗಿರುವ ಜೀವಿಗಳು. ಬಿರುಕುಗಳಲ್ಲಿ ಮತ್ತು ಮೂಲೆಗಳಲ್ಲಿ ಸಲೀಸಾಗಿ ಅಡಗಿಕೊಳ್ಳುತ್ತವೆ. ಬೇಟೆ ಸಿಕ್ಕಿದರೆ ಕಚ್ಚಲು ಕಾಯುತ್ತವೆ. ಈ ಕಾರಣಕ್ಕಾಗಿ ಚೇಳುಗಳು ಸಾಮಾನ್ಯವಾಗಿ ಗುಪ್ತವಾಗಿರುತ್ತವೆ. ಆದರೆ ಕನಸಿನ ವಿಚಾರದಲ್ಲಿ ಶಕ್ತಿಯುತ ಭಾವನೆಗಳನ್ನು ಸಂಕೇತಿಸುತ್ತವೆ. ನೀವು ಮೊದಲು ಅದನ್ನು ಗಮನಿಸದೇ ಇರಬಹುದು, ಆದರೆ ಅದು ಸುಪ್ತವಾಗಿದ್ದು, ಸಮಯ ಬಂದಾಗ ಅರಿವಿಗೆ ಬರುತ್ತದೆ. ಲೈಂಗಿಕ ಸುಖ: ಕೆಲವು ಸಮಾಜ, ಸಂಸ್ಕೃತಿಗಳಲ್ಲಿ ಚೇಳುಗಳನ್ನು ದೈಹಿಕ ಆಸೆ ಮತ್ತು ಯುವೋತ್ಸಾಹಕ್ಕೆ ರೂಪಕಗಳಾಗಿ ಬಳಸಲಾಗುತ್ತದೆ. ಮತ್ತು ಇದು ಅರ್ಥಪೂರ್ಣವಾಗಿರುತ್ತದೆ. ಅವು ಶಕ್ತಿಯುತ ಆಕರ್ಷಣೆ, ಬಯಕೆ ಅಥವಾ ನಿಗ್ರಹಿಸದ ಭಾವನೆಗಳನ್ನು ಹೊರಹಾಕುತ್ತವೆ. ರಕ್ಷಣೆ: ನಾವು ಚೇಳುಗಳನ್ನು ಅಪಾಯಕಾರಿ ಬೆದರಿಕೆಗಳಾಗಿ ಕಾಣಬಹುದು, ಆದರೆ ಚೇಳಿನ ದೃಷ್ಟಿಕೋನದಿಂದ ನೋಡಿದರೆ ಅವು ಕೇವಲ ತಮ್ಮಲ್ಲಿರುವ (ಮುಳ್ಳಿನ) ಸಾಧನಗಳೊಂದಿಗೆ ಜೈವಿಕವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು...

Published On - 3:02 pm, Tue, 3 September 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ