ಏಷ್ಯಾ ಮೂಲ ನಿವಾಸಿಗಳಾದ ಬೌದ್ಧ ಪಂತೀಯ ಟಿಬೆಟ್ಟಿಯನ್ನರು ಹಿಮಾಲಯದ ತಪ್ಪಲು ಪ್ರದೇಶಗಳಲ್ಲಿ ಶತಶತಮಾನಗಳಿಂದಲೂ ಮಂಜುಗಡ್ಡೆಯಷ್ಟು ಶಾಂತ ಜೀವನ ನಡೆಸುತ್ತಿದ್ದಾರೆ. ಜೀವನದ ಮುಕ್ತಿ ಪಥದಲ್ಲಿ ತಮ್ಮನ್ನು ತಾವು ಔನತ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಮತ್ತು ಇಡೀ ಜಗತ್ತಿಗೆ ಶಾಂತಿ ಮಂತ್ರ ಪಠಿಸುತ್ತಿದ್ದಾರೆ.
ಅವ್ಯವಸ್ಥಿತ ಮತ್ತು ಭೌತಿಕವಾದ ವಾದದಲ್ಲಿ ಮುಳಿಗೇಳುವ ಜಗತ್ತಿನಲ್ಲಿ ಟಿಬೆಟಿಯನ್ನರು ನಮ್ಮನ್ನು ಜೀವನ ಪಥದಲ್ಲಿ ತಾಮಸಗೊಳಿಸಲು ಮತ್ತು ಆಂತರ್ಯದಲ್ಲೇ ನಿಜವಾದ ಸಂತೋಷವನ್ನು ಅನುಭವಿಸಲು ಸದಾ ನೆನಪಿಸುತ್ತಾರೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಸಂಪತ್ತನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಾ, ನಿರ್ಭೀತಿಯಿಂದ ಜೀವನ ನಡೆಸುವ ಮತ್ತು ಆತಂಕವನ್ನು ನಾಶಪಡಿಸುವ ಮಾರ್ಗವನ್ನು ತೋರಿಸಿದ್ದಾರೆ. ಜೀವನದ ಯಶಸ್ಸಿಗಾಗಿ ಜನರು ಮಾನಸಿಕ ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಟಿಬೆಟ್ಟಿಯನ್ನರ (Tibetan people) ಈ ಜೀವನ ಮಾರ್ಗ ನಮಗೆ ಸಹಾಯ ಮಾಡುತ್ತದೆ. ಟಿಬೆಟ್ಟಿಯನ್ನರ ಜೀವನ ಬದುಕನ್ನು (Buddhism) ಆಧರಿಸಿ ಮನಶ್ಶಾಸ್ತ್ರಜ್ಞರು ನೀಡುವ ಈ ಕಾಲಾತೀತ ಜ್ಞಾನ ಸಂಪತ್ತಿನ ಬಗ್ಗೆ ಒಂದಷ್ಟು ಬೆಳಕು ಚೆಲ್ಲಿದಾಗ….
ಜೀವನ ಕುರಿತಾದ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಟಿಬೆಟ್ಟಿಯನ್ನರ ಅನಂತ ಜ್ಞಾನ ಸಂಪತ್ತು ಹೀಗಿದೆ:
1. Tibetan people ಕ್ಷಣಿಕ ಜೀವನದಲ್ಲಿ ಅಸಂತೋಷವು ಹೆಚ್ಚಾಗಲು ಇವು ಕಾರಣವಾಗುತ್ತವೆ:
• Fear of missing out (FOMO) ಕಳೆದುಕೊಳ್ಳುವ ಆತಂಕ ಭಯ
• ಭೌತಿಕ ಆಸೆ ಭೌತಿಕ ವಾದ ಭೌತಿಕ ತೃಪ್ತಿ
• ಸಾಮಾಜಿಕ ಹೋಲಿಕೆ
• ಕ್ಷಿಪ್ರ ತೃಪ್ತಿ
ಆದರೆ ಗಮನಿಸಿ, ಈ ಸಮಸ್ಯೆಗಳು ಟಿಬೆಟಿಯನ್ನರಲ್ಲಿ ಅಪರೂಪವಾಗಿ ಕಾಣಿಸುತ್ತವೆ. ಜೀವನದಲ್ಲಿ ಸಂತೋಷ ಸಾಧನೆಗಾಗಿ ಅವರ ಸಂಸ್ಕೃತಿಯನ್ನು ಅಧ್ಯಯನ ಮಾಡಬಹುದು.
2. Tibetan people ಸಾಂಕ್ರಾಮಿಕವಾದ ನಮ್ಮ ಅತೃಪ್ತಿಗೆ ಪರಿಹಾರ ಮಾರ್ಗವು ಟಿಬೆಟಿಯನ್ನರ ಜೀವನ ವಿಧಾನದಲ್ಲಿ ಕಾಣಬಹುದು:
• ವಾಸ್ತವಕ್ಕೆ ಹತ್ತಿರವಾದ ಗುರಿಗಳನ್ನು ಹೊಂದಿರಿ
• ಕೃತಜ್ಞತೆ ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ
• ಅನಿಶ್ಚಿತತೆ ಎಂಬುದು ನಿಶ್ಚಿತ! ಅದನ್ನು ಒಪ್ಪಿಕೊಳ್ಳಿ
• ಸದಾ ಜಾಗ್ರತೆಯಾಗಿರುವುದನ್ನು ಬೆಳೆಸಿಕೊಳ್ಳಿ
• ಆಸೆಗಳನ್ನು ಹೊಂದಿರಿ ಆದರೆ ಅದನ್ನು ಮೌಲ್ಯಗಳೊಂದಿಗೆ ಜೋಡಿಸಿರಿ
ಇದನ್ನೂ ಓದಿ: ಪೂಜಾ ಕೋಣೆಯ ನಿರ್ಮಾಣದಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ -ವಾಸ್ತು ತಜ್ಞರ ಸಲಹೆಗಳನ್ನು ಪಾಲಿಸಿ
ಟಿಬೆಟಿಯನ್ ಸಂಸ್ಕೃತಿಯು ಸಹಾನುಭೂತಿ, ಸಾವಧಾನ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದಿಂದ ಸಮೃದ್ಧವಾಗಿದೆ.
3. Tibetan people ಸಂತೋಷ ಎಂಬುದು ಸಂಕೀರ್ಣವಾಗಿರಬೇಕಾಗಿಲ್ಲ. ಟಿಬೆಟಿಯನ್ನರು ಈ ಕೆಳಗಿನ ಮಾರ್ಗಗಳಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ:
• ಸರಳವಾದ ಜೀವನಶೈಲಿ
• ಬಲವಾದ ಸಮುದಾಯ ಬಂಧಗಳು
• ಪ್ರಕೃತಿಯೊಂದಿಗೆ ಆಳವಾದ ಸಂಪರ್ಕ
ಈ ಟಿಬೆಟಿಯನ್ನರ ಸಾಮಾನ್ಯ ಕುಟುಂಬ ಹಿಮಾಲಯ ಪರ್ವತಗಳಲ್ಲಿ ಹೇಗೆ ವಾಸಿಸುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ:
3. Tibetans find joy in:
• A simpler lifestyle
• Strong community bonds
• A deep connection to natureHappiness does not have to be complex.
Watch how this Tibetan family lives in the Himalayan mountains: pic.twitter.com/kgWr37ooHL
— Lorwen C Nagle, PhD (@LORWEN108) June 8, 2024
4. Tibetan people ದೈನಂದಿನ ದೇಹ ಕಸರತ್ತಿಗಾಗಿ ಜಿಮ್‌ಗೆ ಹೋಗುವಂತೆ, ನಾವು ನಮ್ಮ ಮಾನಸಿಕ ಸ್ನಾಯುಗಳನ್ನು ಸದಾ ಜಾಗೃತಗೊಳಿಸುವ ಕೆಲಸ ಮಾಡಬೇಕು.
• ವಾಸ್ತವಿಕ ಗುರಿಗಳಿಗೆ ಹತ್ತಿರವಾಗಿರುವುದು
• ಅನಿಶ್ಚಿತತೆಗೆ ಸಹಿಷ್ಣುತೆ ತೋರುವುದು
• ಧ್ಯಾನವನ್ನು ದೈನಿಕ ಅಭ್ಯಾಸವನ್ನಾಗಿ ಮಾಡಿಕೊಳ್ಳುವುದು
ಟಿಬೆಟಿಯನ್ನರೊಂದಿಗೆ ಸಮಯ ಕಳೆಯುವುದು ಎಂದರೆ ದೃಢ ಜೀವನವನ್ನು ಅನುಸರಿಸುವುದರಲ್ಲಿ ನಿಜವಾದ ತೃಪ್ತಿ ಕಾಣುವುದು ಎಂಬುದಾಗಿದೆ.
4. Like going to the gym, we must consistently work on our mental muscles.
• Gratitude
• Realistic goals
• Tolerance for uncertainty
• Meditation with daily practiceMy time with the Tibetans taught me that true contentment lies in pursuing a life of purpose and… pic.twitter.com/wmMdPq4hph
— Lorwen C Nagle, PhD (@LORWEN108) June 8, 2024
5. Tibetan people ಟಿಬೆಟಿಯನ್ನರು ಎಲ್ಲಕ್ಕಿಂತ ಹೆಚ್ಚಾಗಿ ಜ್ಞಾನ ಸಂಪತ್ತು ಮತ್ತು ತಮ್ಮ ಸಮುದಾಯದತ್ತ ಕೇಂದ್ರೀಕರಿಸುತ್ತಾರೆ.
ಜಗತ್ತಿನ ನಾನಾ ಸಂಸ್ಕೃತಿಗಳು ಆಧುನಿಕ ವಾದಕ್ಕೆ ಜೋತುಬಿದ್ದು ಯಾವುದೋ ಕಾಲವಾಗಿದೆ. ಆದರೆ ಈ ಪರಿಕಲ್ಪನೆಯು ಟಿಬೆಟಿಯನ್ ಜನರಿಗೆ ಹೊಸದು. ಸ್ವಯಂ-ಅರಿವಿನ ಕಡೆಗೆ ಜಾಗೃತವಾಗುತ್ತಾ ಅವರು ಸಾಮೂಹಿಕ ಗೌರವವನ್ನೂ ಮನ್ನಿಸುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)
Published On - 11:37 am, Mon, 10 June 24