AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದಿನಗಳಲ್ಲಿ ಅಪ್ಪಿತಪ್ಪಿಯೂ ತುಳಸಿಯನ್ನು ಪೂಜಿಸಬೇಡಿ, ತುಳಸಿ ಎಲೆಗಳನ್ನು ಕೀಳಬೇಡಿ

When to pluck basil leaves: ತುಳಸಿಯನ್ನು ನಿತ್ಯ ಪೂಜಿಸಿ ನೀರು ಕೊಡಬೇಕೆಂಬ ನಿಯಮವಿದ್ದರೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮಂಗಳವಾರ, ಭಾನುವಾರ, ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಕೊಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಅಂದು ತಿಳಸಿಯನ್ನು ಪೂಜಿಸಬಾರದು.

ಈ ದಿನಗಳಲ್ಲಿ ಅಪ್ಪಿತಪ್ಪಿಯೂ ತುಳಸಿಯನ್ನು ಪೂಜಿಸಬೇಡಿ, ತುಳಸಿ ಎಲೆಗಳನ್ನು ಕೀಳಬೇಡಿ
ತುಳಸಿ ಪೂಜಾ ನಿಯಮ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jun 10, 2024 | 7:33 AM

Share

ಸನಾತನ ಧರ್ಮದಲ್ಲಿ ತುಳಸಿ ಗಿಡವನ್ನು (Tulsi plant) ಪವಿತ್ರ ಮತ್ತು ಪೂಜ್ಯವೆಂದು ಪರಿಗಣಿಸಲಾಗಿದೆ. ತುಳಸಿ ಪೂಜೆಗೆ (ತುಳಸಿ ಪೂಜಾ ನಿಯಮ) ಹಲವು ನಿಯಮಗಳಿವೆ. ಈ ನಿಯಮಗಳನ್ನು ಅನುಸರಿಸದಿರುವ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಪೂಜೆಗೆ (basil leaves) ಸಂಬಂಧಿಸಿದ ನಿಯಮಗಳ ಬಗ್ಗೆ ತಿಳಿಯೋಣ ( Spiritual).

ತುಳಸಿ ಪೂಜಾ ನಿಯಮ: ಸನಾತನ ಧರ್ಮದಲ್ಲಿ, ಅನೇಕ ಮರಗಳು ಮತ್ತು ಸಸ್ಯಗಳು ಯಾವುದಾರೂ ಒಂದು ದೇವತೆಗೆ ಸಂಬಂಧಿಸಿವೆ. ಅಂತೆಯೇ, ತುಳಸಿ ಸಸ್ಯವು ಪ್ರಪಂಚದ ಸೃಷ್ಟಿಕರ್ತನಾದ ಭಗವಾನ್ ವಿಷ್ಣುವಿಗೆ ಪ್ರಿಯವಾಗಿದೆ ಮತ್ತು ಲಕ್ಷ್ಮಿ ದೇವಿಯು ಅದರಲ್ಲಿ ನೆಲೆಸಿದ್ದಾಳೆ ಎಂದು ಪರಿಗಣಿಸಲಾಗಿದೆ. ತುಳಸಿಯನ್ನು ಪೂಜಿಸಿ, ದೀಪವನ್ನು ಹಚ್ಚಿದರೆ ಸಂಪತ್ತು, ಮನೆಗೆ ಸುಖ-ಸಂತೋಷ ಬರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಜೊತೆಗೆ ಧನಾತ್ಮಕ ಶಕ್ತಿಯೂ ಅಲ್ಲಿ ನೆಲೆಸಿರುತ್ತದೆ.

Tulsi plant Puja Niyama: ಈ ದಿನಗಳಲ್ಲಿ ತುಳಸಿ ಪೂಜೆ ಮಾಡಬೇಡಿ:

ತುಳಸಿಯನ್ನು ನಿತ್ಯ ಪೂಜಿಸಿ ನೀರು ಕೊಡಬೇಕೆಂಬ ನಿಯಮವಿದ್ದರೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮಂಗಳವಾರ, ಭಾನುವಾರ, ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಕೊಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಅಂದು ತಿಳಸಿಯನ್ನು ಪೂಜಿಸಬಾರದು. ಪೌರಾಣಿಕ ನಂಬಿಕೆಗಳ ಪ್ರಕಾರ, ತಾಯಿ ಲಕ್ಷ್ಮಿ ಭಾನುವಾರ ಮತ್ತು ಏಕಾದಶಿಯಂದು ಶ್ರೀ ಹರಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾರೆ.

Also read: ಸಂತಾನ ಮತ್ತು ಸಂತೋಷಕ್ಕಾಗಿ ಸ್ಕಂದ ಷಷ್ಟಿ ಪೂಜೆಯನ್ನು ಹೀಗೆ ಮಾಡಿ.. ಒಳ್ಳೆಯ ಫಲಿತ ನಿಮ್ಮದಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ಕೊಟ್ಟು ವ್ರತ ಭಂಗವಾಗುತ್ತದೆ. ಈ ಕಾರಣದಿಂದ ಈ ಎರಡೂ ದಿನ ತುಳಸಿ ಗಿಡಕ್ಕೆ ನೀರು ಹಾಕಬಾರದು. ಹೀಗೆ ಮಾಡುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿಗಳು ಬರುತ್ತವೆ. ಇದಲ್ಲದೇ ಮಂಗಳವಾರ ತುಳಸಿಗೆ ನೀರನ್ನು ಅರ್ಪಿಸುವುದರಿಂದ ಶಿವನಿಗೆ ಕೋಪ ಬರಬಹುದು.

Tulsi plant Puja Niyama: ಈ ದಿನ ತುಳಸಿ ಗಿಡ ನೆಡಿ:

ಧಾರ್ಮಿಕ ನಂಬಿಕೆಗಳ ಪ್ರಕಾರ ಗುರುವಾರ ಮತ್ತು ಶುಕ್ರವಾರ ಮನೆಯಲ್ಲಿ ತುಳಸಿ ಗಿಡವನ್ನು ನೆಡಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ತುಳಸಿಯನ್ನು ನೆಡುವುದರಿಂದ, ವ್ಯಕ್ತಿಯು ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ.

ಇದನ್ನೂ ಓದಿ: ಪೂಜಾ ಕೋಣೆಯ ನಿರ್ಮಾಣದಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ -ವಾಸ್ತು ತಜ್ಞರ ಸಲಹೆಗಳನ್ನು ಪಾಲಿಸಿ

Tulsi plant Puja Niyama: ಈ ದಿನ ತುಳಸಿ ಎಲೆಗಳನ್ನು ಕೀಳಬೇಡಿ:

ದ್ವಾದಶಿ, ಚಂದ್ರಗ್ರಹಣ, ಸೂರ್ಯಗ್ರಹಣ ಮತ್ತು ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಬಾರದು, ಏಕೆಂದರೆ ಈ ದಿನಾಂಕಗಳಲ್ಲಿ ತುಳಸಿಯು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಆದ್ದರಿಂದ, ಈ ದಿನಾಂಕಗಳಲ್ಲಿ ತುಳಸಿ ದಳಗಳನ್ನು ಕೀಳಬಾರದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ