September Festival List 2025: ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಭಾರತದಲ್ಲಿ ವರ್ಷ ಪೂರ್ತಿ ವಿವಿಧ ಹಬ್ಬಗಳು, ವ್ರತ ಹಾಗೂ ಆಚರಣೆಗಳು ಇದ್ದೆ ಇರುತ್ತದೆ. ಒಂದೊಂದು ತಿಂಗಳಲ್ಲಿ ಒಂದೊಂದು ವಿಶೇಷ ಹಬ್ಬಗಳು. ಆದರೆ ಈ ಭಾರತೀಯರು ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಹಾಗಾದ್ರೆ ವರ್ಷದ ಒಂಬತ್ತನೇ ತಿಂಗಳಾದ ಸೆಪ್ಟೆಂಬರ್‌ನಲ್ಲಿ ಆಚರಿಸಲಾಗುವ ಹಬ್ಬಗಳಾವುವು? ಈ ಕುರಿತಾದ ಮಾಹಿತಿ ಇಲ್ಲಿದೆ.

September Festival List 2025: ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
September Festival List 2025
Image Credit source: Pinterest

Updated on: Aug 31, 2025 | 5:40 PM

2025 ರ ಈ ವರ್ಷದ ಮೊದಲ ತಿಂಗಳು ನಿನ್ನೆ ಮೊನ್ನೆಯಷ್ಟೇ ಬಂದಂತಿದ್ದು, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ತಿಂಗಳುಗಳು ಉರುಳಿಯೇ ಬಿಟ್ಟವು. ಇದೀಗ ಒಂಬತ್ತನೇ ತಿಂಗಳಾದ ಸೆಪ್ಟೆಂಬರ್‌ಗೆ ಕಾಲಿಡಲು ಒಂದೇ ಒಂದು ದಿನವಷ್ಟೇ ಬಾಕಿಯಿದೆ. ಈ ತಿಂಗಳಲ್ಲಿ ನವರಾತ್ರಿ (Navaratri) ಸೇರಿದಂತೆ ವಿವಿಧ ಹಬ್ಬಗಳು, ವೃತಾಚರಣೆಗಳಿವೆ. ಭಾರತೀಯರು ಪ್ರತಿ ತಿಂಗಳಲ್ಲಿ ಬರುವ ಹಬ್ಬಗಳನ್ನು ಅತಂತ್ಯ ಶ್ರದ್ಧಾ, ಭಕ್ತಿ ಹಾಗೂ ನಂಬಿಕೆಯಿಂದ ಆಚರಿಸುತ್ತಾರೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲಾ ಹಬ್ಬಗಳು ಹಾಗೂ ವೃತಾಚರಣೆಗಳಿವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ

  • ಸೆಪ್ಟೆಂಬರ್ 03 – ಸರ್ವೈಕಾದಶಿ ಪರಿವರ್ತಿನಿ
  • ಸೆಪ್ಟೆಂಬರ್ 04 – ವಾಮನ ಜಯಂತಿ
  • ಸೆಪ್ಟೆಂಬರ್ 04 – ಈದ್ ಮಿಲಾದ್
  • ಸೆಪ್ಟೆಂಬರ್ 05 – ಪ್ರದೋಷ ವ್ರತ
  • ಸೆಪ್ಟೆಂಬರ್ 05- ತಿರುಓಣಂ
  • ಸೆಪ್ಟೆಂಬರ್ 06- ಅನಂತ ಚತುರ್ದಶಿ
  • ಸೆಪ್ಟೆಂಬರ್ 07- ನಾರಾಯಣಗುರು ಜನ್ಮದಿನ
  • ಸೆಪ್ಟೆಂಬರ್ 08- ಪಿತೃ ಪಕ್ಷ ಆರಂಭ
  • ಸೆಪ್ಟೆಂಬರ್ 08- ಭಾದ್ರಪದ ಕೃಷ್ಣ ಪಕ್ಷ
  • ಸೆಪ್ಟೆಂಬರ್ 10- ಸಂಕಷ್ಟಹರ ಚತುರ್ಥಿ
  • ಸೆಪ್ಟೆಂಬರ್ 12- ಚಂದನ ಷಷ್ಠಿ ವ್ರತ
  • ಸೆಪ್ಟೆಂಬರ್ 15- ಅವಿಧವಾ ನವಮಿ
  • ಸೆಪ್ಟೆಂಬರ್ 16 – ಕನ್ಯಾ ಸಂಕ್ರಮಣ
  • ಸೆಪ್ಟೆಂಬರ್ 17 -ವಿಶ್ವಕರ್ಮ ಪೂಜಾ
  • ಸೆಪ್ಟೆಂಬರ್ 17 – ಸರ್ವೈಕಾದಶಿ ಇಂದಿರಾ
  • ಸೆಪ್ಟೆಂಬರ್ 19- ಪ್ರದೋಷ
  • ಸೆಪ್ಟೆಂಬರ್ 20- ಮಾಸ ಶಿವರಾತ್ರಿ
  • ಸೆಪ್ಟೆಂಬರ್ 21- ಮಹಾಲಯ ಅಮಾವಾಸ್ಯಾ
  • ಸೆಪ್ಟೆಂಬರ್ 22- ಆಶ್ವಯುಜ ಶುಕ್ಲಪಕ್ಷ
  • ಸೆಪ್ಟೆಂಬರ್ 22 – ನವರಾತ್ರಿ ಆರಂಭ
  • ಸೆಪ್ಟೆಂಬರ್ 25- ವಿನಾಯಕಿ
  • ಸೆಪ್ಟೆಂಬರ್ 26- ಉಪಾಂಗ ಲಲಿತಾ ವ್ರತ
  • ಸೆಪ್ಟೆಂಬರ್ 27- ಲಲಿತಾ ಪಂಚಮಿ
  • ಸೆಪ್ಟೆಂಬರ್ 29- ಶಾರದಾ ಪ್ರತಿಷ್ಠಾ
  • ಸೆಪ್ಟೆಂಬರ್ 30- ದುರ್ಗಾಷ್ಟಮಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Sun, 31 August 25