ಶನಿ ದೇವನ ಕೃಪೆ ಇದ್ದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಒಂದೊಮ್ಮೆ ಇಲ್ಲವಾದಲ್ಲಿ ಬದುಕಿನಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಶನಿ ದೇವನು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಹಾಗಾಗಿ ಶನಿ ದೇವರನ್ನು ಎಲ್ಲರೂ ಭಕ್ತಿ ಭಾವದಿಂದ ಪೂಜಿಸುತ್ತಾರೆ. ಆದರೆ ಶನಿ ದೇವನಿಗೆ ಕೆಲವು ರಾಶಿಗಳು ಎಂದರೆ ಬಲು ಪ್ರೀತಿ. ಆ ರಾಶಿಗಳ ಮೇಲೆ ಅವನ ಆಶೀರ್ವಾದ ಸದಾಕಾಲ ಇರುತ್ತದೆ ಎನ್ನುವ ನಂಬಿಕೆ ಇದೆ ಹಾಗಾದರೆ ಶನಿ ದೇವರ ನೆಚ್ಚಿನ ರಾಶಿಗಳು ಯಾವವು? ಇಲ್ಲಿದೆ ಮಾಹಿತಿ.
ಶುಕ್ರನು ವೃಷಭ ರಾಶಿಯ ಅಧಿಪತಿ. ಶುಕ್ರ ಮತ್ತು ಶನಿಯ ನಡುವಿನ ಸಂಬಂಧವು ಉತ್ತಮವಾಗಿದೆ. ಹಾಗಾಗಿ ವೃಷಭ ರಾಶಿಯವರ ಮೇಲೆ ಶನಿ ದೇವನ ಆಶೀರ್ವಾದ ಸದಾಕಾಲ ಇರುತ್ತದೆ. ಈ ರಾಶಿಯವರು ರಾಜಕೀಯದಲ್ಲಿ ಬಹು ಬೇಗನೆ ಯಶಸ್ಸನ್ನು ಪಡೆಯುತ್ತಾರೆ.
ಶನಿ ದೇವರ ನೆಚ್ಚಿನ ರಾಶಿಚಕ್ರದಲ್ಲಿ ತುಲಾ ರಾಶಿಯು ಒಂದಾಗಿದೆ. ಶನಿ ದೇವನ ಆಶೀರ್ವಾದ ಈ ರಾಶಿಯವರ ಮೇಲೆ ಯಾವಾಗಲೂ ಇರುತ್ತದೆ. ಯಾವುದೇ ಕಷ್ಟ ಬಂದರೂ ಕೂಡ ಶನಿ ದೇವ ಅವರನ್ನು ಕೈ ಬಿಡದೇ ಸಹಾಯ ಮಾಡುತ್ತಾನೆ.
ಈ ರಾಶಿಯ ಅಧಿಪತಿ ಸ್ವತಃ ಶನಿದೇವ. ಈ ರಾಶಿಯ ಜನರು ತುಂಬಾ ಶ್ರಮಜೀವಿಗಳು ಮತ್ತು ಬಲಶಾಲಿಗಳಾಗಿರುತ್ತಾರೆ, ಅವರು ಮಾಡಲು ಹೊರಟ ಕೆಲಸವನ್ನು ಎಂದಿಗೂ ಅರ್ಧಕ್ಕೆ ಬಿಡುವುದಿಲ್ಲ ಅದನ್ನು ಪೂರ್ಣಗೊಳಿಸುತ್ತಾರೆ. ಅದಕ್ಕಾಗಿಯೇ ಶನಿ ದೇವ ಅಂತವರ ಕೈ ಎಂದಿಗೂ ಬಿಡುವುದಿಲ್ಲ.
ಈ ರಾಶಿಯ ಅಧಿಪತಿ ಕೂಡ ಶನಿ ದೇವರು. ಕುಂಭ ರಾಶಿಯವರ ಮೇಲೆ ಶನಿ ದೇವರ ವಿಶೇಷ ಆಶೀರ್ವಾದ ಇದ್ದೇ ಇರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಕಡಿಮೆ ಕೆಲಸ ಮಾಡಿ ಹೆಚ್ಚಿನ ಲಾಭ ಪಡೆಯುತ್ತಾರೆ.
ಇದನ್ನೂ ಓದಿ: 400 ವರ್ಷಗಳ ಹಿಂದೆ 2 ಅಡಿ ಇದ್ದ ಹನುಮಂತನ ವಿಗ್ರಹ ಈಗ 12 ಅಡಿ ಏರಿದೆ, ಏನಿದರ ರಹಸ್ಯ?
ಈ ರಾಶಿಯ ಅಧಿಪತಿ ಗುರು. ಶನಿ ಮತ್ತು ಗುರು ದೇವನ ನಡುವೆ ಸ್ನೇಹ ಭಾವವಿದೆ. ಹಾಗಾಗಿ ಶನಿ ದೇವರು ಯಾವಾಗಲೂ ಈ ರಾಶಿಯವರಿಗೆ ಹೆಚ್ಚಿನ ಕರುಣೆ ತೋರಿಸುತ್ತಾನೆ. ಅದಕ್ಕಾಗಿಯೇ ಈ ರಾಶಿಯವರಿಗೆ ಯಾವಾಗಲೂ ಶನಿ ದೇವನ ಅನುಗ್ರಹವಿರುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ