AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Peepal Trees: ರಾತ್ರಿಯಲ್ಲಿ ಅರಳಿ ಮರದಲ್ಲಿ ಪ್ರೇತಾತ್ಮಗಳು ವಾಸಿಸುತ್ತವೆಯೇ? ಸತ್ಯವೇನು?

ರಾತ್ರಿ ಸಮಯದಲ್ಲಿಅರಳಿ ಮರದ ಮೇಲೆ ದುಷ್ಟ ಶಕ್ತಿಗಳು ವಾಸ ಮಾಡುತ್ತವೆ ಹಾಗಾಗಿ ಆ ಮರವನ್ನು ಮುಟ್ಟಬಾರದು ಎಂಬಂತಹ ಮಾತನ್ನು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದು ನಿಜವೇ? ಇದಕ್ಕಿರುವ ಆಧಾರವೇನು? ಈ ರೀತಿ ಹೇಳಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Peepal Trees: ರಾತ್ರಿಯಲ್ಲಿ ಅರಳಿ ಮರದಲ್ಲಿ ಪ್ರೇತಾತ್ಮಗಳು ವಾಸಿಸುತ್ತವೆಯೇ? ಸತ್ಯವೇನು?
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 24, 2024 | 5:55 PM

Share

ಧರ್ಮಗ್ರಂಥಗಳಲ್ಲಿ, ಅರಳಿ ಮರವನ್ನು ವಿಷ್ಣುವಿನ ರೂಪವೆಂದು ನಂಬಲಾಗಿದೆ. ಆದ್ದರಿಂದ, ಅರಳಿ ಮರದ ಪೂಜೆಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಗಾಗಿಯೇ ಈ ಮರದ ಕೆಳಗೆ ಪೂಜಾ ಆಚರಣೆಗಳನ್ನು ನಡೆಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಪ್ರತಿ ಶನಿವಾರ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿದಲ್ಲಿ, ಜೀವನದಲ್ಲಿ ಸಂತೋಷ, ಶಾಂತಿ ಸದಾಕಾಲ ಇರುತ್ತದೆ ಎಂದು ನಂಬಲಾಗಿದೆ. ಆದರೆ ರಾತ್ರಿ ಸಮಯದಲ್ಲಿಅರಳಿ ಮರದ ಮೇಲೆ ದುಷ್ಟ ಶಕ್ತಿಗಳು ವಾಸ ಮಾಡುತ್ತವೆ ಹಾಗಾಗಿ ಆ ಮರವನ್ನು ಮುಟ್ಟಬಾರದು ಎಂಬಂತಹ ಮಾತನ್ನು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದು ನಿಜವೇ? ಇದಕ್ಕಿರುವ ಆಧಾರವೇನು? ಈ ರೀತಿ ಹೇಳಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ವೈಜ್ಞಾನಿಕ ಕಾರಣವೇನು?

ರಾತ್ರಿಯಲ್ಲಿ ಮರಗಳು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುವುದರಿಂದ ರಾತ್ರಿಯಲ್ಲಿ ಅರಳಿ ಮರ ಅಥವಾ ಇತರ ಮರಗಳ ಕೆಳಗೆ ಮಲಗಬಾರದು ಎನ್ನಲಾಗುತ್ತದೆ. ಇದು ಮಾನವ ದೇಹಕ್ಕೆ ಒಳ್ಳೆಯದಲ್ಲ, ದೀರ್ಘಕಾಲದವರೆಗೆ ಇಂಗಾಲದ ಡೈಆಕ್ಸೈಡ್ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ಅದಕ್ಕಾಗಿಯೇ ರಾತ್ರಿಯಲ್ಲಿ ಅರಳಿ ಮರದ ಬಳಿ ಹೋಗಬಾರದು ಎಂದು ಹೇಳಲಾಗುತ್ತದೆ.

ಧರ್ಮಗ್ರಂಥಗಳು ಹೇಳುವುದೇನು?

ಅರಳಿ ಮರವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರ ವೃಕ್ಷವೆಂದು ಪರಿಗಣಿಸಲಾಗಿದೆ. ನಂಬಿಕೆಯ ಪ್ರಕಾರ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಅರಳಿ ಮರದ ಒಳಗೆ ವಾಸಿಸುತ್ತಾರೆ. ಅರಳಿ ಮರದ ಬೇರುಗಳಲ್ಲಿ ವಿಷ್ಣು, ಕಾಂಡದಲ್ಲಿ ಬ್ರಹ್ಮ ಮತ್ತು ಎಲೆಗಳಲ್ಲಿ ಎಲ್ಲಾ ದೇವರುಗಳು ವಾಸಿಸುತ್ತಿದ್ದಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಆದ್ದರಿಂದ, ರಾತ್ರಿಯಲ್ಲಿ ಅರಳಿ ಮರದ ಕೆಳಗೆ ಹೋಗುವುದು ಅಥವಾ ಮಲಗುವುದು ಧರ್ಮಗ್ರಂಥಗಳ ಪ್ರಕಾರ ಶುಭವಲ್ಲ ಎನ್ನಲಾಗುತ್ತದೆ.

ಇದನ್ನೂ ಓದಿ: ವೈಶಾಖ ಮಾಸದಲ್ಲಿ ಈ ವಿಷಯಗಳನ್ನು ಮರೆಯಬೇಡಿ!

ಅರಳಿ ಮರದಲ್ಲಿ ಪ್ರೇತಾತ್ಮಗಳು ವಾಸಿಸುತ್ತವೆಯೇ? ಇದು ನಿಜವೇ?

ಮರದ ಮೇಲೆ ಪ್ರೇತಾತ್ಮ ವಾಸಿಸುತ್ತವೆ ಎಂಬುದು ಕಾಲ್ಪನಿಕ ಸಂಗತಿಯಾಗಿದೆ. ಧರ್ಮಗ್ರಂಥಗಳಲ್ಲಿ, ಅರಳಿ ಮರವನ್ನು ದೈವಿಕ ಶಕ್ತಿಯನ್ನು ಹೊಂದಿರುವ ಮರವೆಂದು ಹೇಳಲಾಗುತ್ತದೆ. ಆದ್ದರಿಂದ, ಆತ್ಮವು ಅರಳಿ ಮರದಲ್ಲಿ ವಾಸಿಸುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೆ ವೈಜ್ಞಾನಿಕ ದೃಷ್ಟಿಕೋನದ ಪ್ರಕಾರ, ರಾತ್ರಿಯಲ್ಲಿ ಅರಳಿ ಮರದ ಬಳಿ ಹೋಗದಿರುವುದು ಒಳ್ಳೆಯದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?