Vaishakh Month 2024: ವೈಶಾಖ ಮಾಸದಲ್ಲಿ ಈ ವಿಷಯಗಳನ್ನು ಮರೆಯಬೇಡಿ!
ವೈಶಾಖದಲ್ಲಿ ನೀರನ್ನು ದಾನ ಮಾಡುವುದರಿಂದ, ವ್ಯಕ್ತಿಯ ಪ್ರತಿಯೊಂದು ಸಮಸ್ಯೆ ಮತ್ತು ದೋಷವು ದೂರವಾಗುತ್ತದೆ, ಜೀವನದ ಸದಾಕಾಲ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ವೈಶಾಖ ಮಾಸದಲ್ಲಿ ಮಾಡುವ ದಾನವು ವರ್ಷವಿಡೀ ಮಾಡಿದ ದಾನಕ್ಕೆ ಸಮನಾಗಿದೆ ಎಂದು ಹೇಳಲಾಗುತ್ತದೆ. ಹಾಗಾದರೆ ವೈಶಾಖ ಮಾಸದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂದು ತಿಳಿದುಕೊಳ್ಳಿ.
ವೈಶಾಖ ಮಾಸದಲ್ಲಿ ಶಾಖ ಉತ್ತುಂಗದಲ್ಲಿರುತ್ತದೆ. ಇದು ಎ. 24 ರಿಂದ ಮೇ 23 ರವರೆಗೆ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ದಾರಿಹೋಕರಿಗೆ ನೀರನ್ನು ಒದಗಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಮತ್ತು ರಸಭರಿತ ಹಣ್ಣುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ವೈಶಾಖದಲ್ಲಿ ನೀರನ್ನು ದಾನ ಮಾಡುವುದರಿಂದ, ವ್ಯಕ್ತಿಯ ಪ್ರತಿಯೊಂದು ಸಮಸ್ಯೆ ಮತ್ತು ದೋಷವು ದೂರವಾಗುತ್ತದೆ, ಜೀವನದ ಸದಾಕಾಲ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ವೈಶಾಖ ಮಾಸದಲ್ಲಿ ಮಾಡುವ ದಾನವು ವರ್ಷವಿಡೀ ಮಾಡಿದ ದಾನಕ್ಕೆ ಸಮನಾಗಿದೆ ಎಂದು ಹೇಳಲಾಗುತ್ತದೆ. ಹಾಗಾದರೆ ವೈಶಾಖ ಮಾಸದಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂದು ತಿಳಿದುಕೊಳ್ಳಿ.
ಯಾವ ರೀತಿಯ ವಸ್ತುಗಳನ್ನು ದಾನ ಮಾಡಬೇಕು?
ಈ ತಿಂಗಳು, ಸಾಧ್ಯವಾದಷ್ಟು ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿ, ಮರ ಗಿಡಗಳಿಗೆ ನೀರು ಹಾಕುವುದನ್ನು ಕಡಿಮೆ ಮಾಡಬೇಡಿ. ಇನ್ನು ಅಗತ್ಯ ಇರುವವರಿಗೆ ಛತ್ರಿ, ಬೂಟು, ಚಪ್ಪಲಿ, ತಂಪಾದ ಪಾನೀಯಗಳನ್ನು ದಾನ ಮಾಡಿ. ಇದರಿಂದ ದೇವರ ಆಶೀರ್ವಾದ ಲಭಿಸುವುದಲ್ಲದೆ ನಿಮ್ಮಿಂದ ಕೆಲವರಿಗೆ ಸಹಾಯವಾಗುತ್ತದೆ. ಇದೆಲ್ಲದರಿಂದಾಗಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಕೂಡ ಒಳ್ಳೆಯ ಫಲಗಳು ಸಿಗುತ್ತದೆ.
ಈ ಕ್ರಮಗಳನ್ನು ಪಾಲನೆ ಮಾಡಿ
ವೈಶಾಖ ಮಾಸದಲ್ಲಿ ಕರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಆದಷ್ಟು ತಪ್ಪಿಸಿ, ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ದಿನದ ಒಂದು ಸಮಯ ಆಹಾರವನ್ನು ಸೇವನೆ ಮಾಡಿ. ಆಗದವರು ಹಣ್ಣು, ಆರೋಗ್ಯಕರ ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡಿ. ದೇಹಕ್ಕೆ ಹೊಸ ಎಣ್ಣೆ ಅಥವಾ ಕ್ರಿಮ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ. ನೆಲದ ಮೇಲೆ ಅಥವಾ ಚಾಪೆಯ ಮೇಲೆ ಮಲಗಿ.
ಈ ತಿಂಗಳು ವಿಷ್ಣುವಿಗೆ ವಿಶೇಷ ಪೂಜೆ ಮಾಡಬೇಕು. ಪ್ರತಿದಿನ ಸ್ನಾನ ಮಾಡಿದ ನಂತರ ತುಳಸಿ ಮತ್ತು ಕಿಚಡಿಯನ್ನು ದೇವರಿಗೆ ಅರ್ಪಿಸಿ ಎಳ್ಳಿನ ಪಂಚಕಜ್ಜಾಯ ಅಥವಾ ಎಳ್ಳು ಬೆರೆಸಿದ ಸಿಹಿ ತಿಂಡಿಗಳನ್ನು ದೇವರಿಗೆ ನೈವೇದ್ಯ ಮಾಡಿ ಬಳಿಕ ಪ್ರಸಾದವಾಗಿ ಸೇವನೆ ಮಾಡಿ. ಈ ಮಾಸದಲ್ಲಿ ಎಳ್ಳಿನ ಬೀಜಗಳ ಉಪಯೋಗ ಮಾಡಬೇಕು ಇದು ನಿಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ: ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಯಾವ ದಿಕ್ಕಿನಲ್ಲಿರಬೇಕು
ಇನ್ನು ವೈಶಾಖ ಮಾಸದಲ್ಲಿ ಬರುವ ಅಕ್ಷಯ ತೃತೀಯವು ಶುಭ ದಿನವಾಗಿದೆ. ಈ ದಿನ, ಶುಭ ಕಾರ್ಯಗಳನ್ನು ಮಾಡುವುದು, ಹೊಸ ಕೆಲಸವನ್ನು ಪ್ರಾರಂಭಿಸುವುದು, ಚಿನ್ನ-ಬೆಳ್ಳಿ, ವಾಹನ ಮುಂತಾದ ವಸ್ತುಗಳನ್ನು ಖರೀದಿಸುವುದರಿಂದ ಲಕ್ಷ್ಮೀ ದೇವಿಯು ಕೃಪಾಕಟಾಕ್ಷ ವರ್ಷಪೂರ್ತಿ ಇರುತ್ತದೆ ಎಂದು ನಂಬಲಾಗಿದೆ. ಜೊತೆಗೆ ವೈಶಾಖದಲ್ಲಿ ವಿಷ್ಣುವಿನ ಆರಾಧನೆಯ ಸಮಯದಲ್ಲಿ ಪ್ರತಿದಿನ “ಓಂ ಮಾಧವಾಯ ನಮಃ” ಎಂಬ ಮಂತ್ರವನ್ನು ಪಠಿಸಿ.
ಈ ತಿಂಗಳು, ಕಂಚಿನ ಪಾತ್ರೆಗಳಲ್ಲಿ ಆಹಾರ ಸೇವನೆ ಮಾಡಬೇಡಿ. ಬಿಸಿ ನೀರಿನಿಂದ ಸ್ನಾನ ಮಾಡಬಾರದು ಎಂಬುದನ್ನು ಮರೆಯಬೇಡಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ