
ಮುಂದಿನ 30 ವರ್ಷಗಳಲ್ಲಿ ಭಾರತವು ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಖ್ಯಾತ ಜ್ಯೋತಿಷ್ಯ ವಿದ್ವಾಂಸೆ ಹಾಗೂ ಆಧ್ಯಾತ್ಮಿಕ ವಿಶ್ಲೇಷಕಿಯಾದ ಶರ್ಮಿಷ್ಠಾ ಅವರು ಭವಿಷ್ಯ ನುಡಿದಿದ್ದಾರೆ. ಚೀನಾ, ಅಮೆರಿಕಾದ ಬಳಿಕ ಇನ್ನು ಮುಂದಿನ ಮೂವತ್ತು ವರ್ಷಗಳಲ್ಲಿ ಭಾರತವು ವಿಶ್ವದ ಆರ್ಥಿಕ, ರಾಜಕೀಯ, ಅಥವಾ ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮುವ ರಾಷ್ಟ್ರವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆ ಶರ್ಮಿಷ್ಠಾ ಅವರು ಬರೆದುಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಜ್ಯೋತಿಷಿ ಶರ್ಮಿಷ್ಠಾ ಅವರ ಹೇಳುವಂತೆ, ಪ್ರತಿ 30 ವರ್ಷಗಳಿಗೊಮ್ಮೆ ಶನಿ ಗ್ರಹವು ಮೀನ ರಾಶಿಯಿಂದ ಮೇಷ ರಾಶಿಗೆ ಸಾಗುವ ಸಂದರ್ಭದಲ್ಲಿ, ಜಗತ್ತಿನ ಶಕ್ತಿಕೇಂದ್ರದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ. ಕೊನೆಯ ಬಾರಿ 1994–96ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ತೆರಿಗೆ ಸುಧಾರಣೆ ಹಾಗೂ ಕರೆನ್ಸಿ ಸುಧಾರಣೆಯ ಮೂಲಕ ಚೀನಾವು ವಿಶ್ವದ ಉತ್ಪಾದನಾ ಕೇಂದ್ರವಾಗಿ ಬೆಳೆಯಲು ಆರಂಭಿಸಿತು. ಅದಕ್ಕೂ ಮೊದಲು 1964–67ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ಅಮೇರಿಕಾ ಸಂಯುಕ್ತ ಸಂಸ್ಥಾನವು (USA) ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿತ್ತು. ಇದೀಗ 2025–27ರಲ್ಲಿ ಶನಿ ಮೀನ ರಾಶಿಯಲ್ಲಿ ಸಾಗುತ್ತಿರುವುದರಿಂದ, ಈ ಶಕ್ತಿ ಚೀನಾದಿಂದ ಭಾರತಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಮುಂದಿನ 30 ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Next 30years belongs to Bharat. Every 30years when Saturn starts moving from Pisces to Aries, the power shift happens. Last time Saturn was in Pisces sign in 1994-96, China started growing as the manufacturing hub of the world by tax reform and currency reform. Prior to that USA…
— Astro Sharmistha (@AstroSharmistha) December 9, 2025
1994–96ರ ಅವಧಿ ಚೀನಾದ ಇತಿಹಾಸದಲ್ಲಿ ನಿರ್ಣಾಯಕ ತಿರುವು. ಈ ಮೂರು ವರ್ಷಗಳಲ್ಲಿ ತೆಗೆದುಕೊಂಡ ಆರ್ಥಿಕ–ನೀತಿಗತ ನಿರ್ಧಾರಗಳೇ ಚೀನಾವನ್ನು ಮುಂದಿನ ಎರಡು ದಶಕಗಳಲ್ಲಿ ವಿಶ್ವದ ಉತ್ಪಾದನಾ ಮಹಾಶಕ್ತಿಯಾಗುವಂತೆ ಮಾಡಿತು. ಈ ಅವಧಿಯನ್ನು ಜ್ಯೋತಿಷ್ಯ ಶನಿ ಮೀನ ರಾಶಿಯಲ್ಲಿ ಸಂಚರಿಸಿದ ಕಾಲ ಎಂದು ಗುರುತಿಸುತ್ತಾರೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇದನ್ನು ಜಾಗತಿಕ ಶಕ್ತಿ ವರ್ಗಾವಣೆಯ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ.
ಈ ವರ್ಷಗಳಲ್ಲಿಯೇ ಚೀನಾ ಎರಡು ವಿಭಿನ್ನ ವಿನಿಮಯ ದರಗಳನ್ನು ಒಗ್ಗೂಡಿಸಿ ಯುವಾನ್ ಮೌಲ್ಯವನ್ನು ಇಳಿಕೆ (Devaluation) ಮಾಡಲಾಯಿತು. ಪರಿಣಾಮ ಚೀನಾದ ರಫ್ತು ಸರಕುಗಳು ಜಗತ್ತಿನ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸ್ಪರ್ಧಾತ್ಮಕವಾದವು. ಜೊತೆಗೆ ಮೇಡ್ ಇನ್ ಇಂಡಿಯಾ ವೇಗವಾಗಿ ಹರಡತೊಡಗಿತು. ಜೊತೆಗೆ ಜಪಾನ್, ಅಮೇರಿಕಾ, ಯುರೋಪಿನ ಕಂಪನಿಗಳು ಉತ್ಪಾದನೆಯನ್ನು ಚೀನಾಕ್ಕೆ ಸ್ಥಳಾಂತರಿಸಿದವು. ಇದಲ್ಲದೇ 1994–96ರಲ್ಲಿ ಚೀನಾ ಅತಿ ಹೆಚ್ಚು FDI ಸೆಳೆಯುವ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿತು. ತಂತ್ರಜ್ಞಾನ, ನಿರ್ವಹಣಾ ಕೌಶಲ್ಯ ಮತ್ತು ಜಾಗತಿಕ ಸರಪಳಿಗಳ ಪ್ರವೇಶ ದೊರೆಯಿತು.
1994–96ರ ಅವಧಿಯಲ್ಲಿ ಚೀನಾ ಉತ್ಪಾದನಾ ಶಕ್ತಿ ಹಾಗೂ ಕಡಿಮೆ ವೆಚ್ಚದ ಕೈಗಾರಿಕಾ ಕ್ಷೇತ್ರವಾಗಿ ಜಾಗತಿಕವಾಗಿ ಬೆಳೆಯುತ್ತಿತ್ತು. ಈ ಅವಧಿಯಲ್ಲಿ ಭಾರತ ಆರ್ಥಿಕ ಸುಧಾರಣೆಯ ಆರಂಭಿಕ ಹಂತದಲ್ಲಿ ಇದ್ದುದರಿಂದ, ಸ್ಪರ್ಧಾತ್ಮಕ ಒತ್ತಡ ತೀವ್ರವಾಗಿ ಅನುಭವಿಸಬೇಕಾಯಿತು. ಚೀನಾದ ಸರಕುಗಳ ಪ್ರವೇಶ, ಮಾರುಕಟ್ಟೆಯಲ್ಲಿ ಸ್ಪರ್ಧೆ, ಮತ್ತು ದೇಶೀಯ ಉತ್ಪಾದನೆಯ ಮೇಲೆ ಪ್ರಭಾವಗಳು ಭಾರತಕ್ಕೆ ವಾಣಿಜ್ಯ ಕ್ಷೇತ್ರದಲ್ಲಿ ಒತ್ತಡವನ್ನುಂಟು ಮಾಡಿತು. ಇದಲ್ಲದೇ 1990ರ ದಶಕದಲ್ಲಿ ಭಾರತ–ಚೀನಾ ಗಡಿ ವಿಷಯದಲ್ಲಿ ಗಂಭೀರ ನೇರ ಘರ್ಷಣೆಗಳು ಕಡಿಮೆಯಾಗಿದ್ದರೂ, LAC (Line of Actual Control) ನಲ್ಲಿ ನಿಯಮಿತ ಪಟ್ರೋಲ್ ಮತ್ತು ಸೈನಿಕ ಕಾರ್ಯಾಚರಣೆಗಳು ಇದ್ದವು.
1964–67ರಲ್ಲಿ ಶನಿ ಮೀನ ರಾಶಿಯಲ್ಲಿ ಇದ್ದಾಗ, ಅಮೇರಿಕಾ ಸಂಯುಕ್ತ ಸಂಸ್ಥಾನವು (USA) ವಿಶ್ವದ ಉತ್ಪಾದನಾ ಹಾಗೂ ಆರ್ಥಿಕ ಶಕ್ತಿಕೇಂದ್ರವಾಗಿತ್ತು ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಅಂದರಂತೆಯೇ 1940–1970ರ ಅವಧಿಯನ್ನು ಅಮೇರಿಕಾದ Golden Era of Manufacturing ಎಂದು ಕರೆಯಲಾಗುತ್ತದೆ. ಕಾರು ಉದ್ಯಮ, ಉಕ್ಕು, ಯಂತ್ರೋಪಕರಣ, ವಿಮಾನೋದ್ಯಮ, ವಿದ್ಯುತ್ ಸಾಧನಗಳಲ್ಲಿ ಅಮೇರಿಕಾ ಮುಂಚೂಣಿಯನ್ನು ಪಡೆಯಿತು. ದ್ವಿತೀಯ ಮಹಾಯುದ್ಧದ ನಂತರ ಜಗತ್ತಿನ ಬಹುತೇಕ ಕೈಗಾರಿಕೆಗಳು ಅಮೇರಿಕಾ ಕೇಂದ್ರೀಕೃತವಾಗಿದ್ದವು.
1964–67ರ ಅವಧಿಯಲ್ಲಿಯೇ ಡಾಲರ್ (USD) ವಿಶ್ವದ ಪ್ರಮುಖ ಕರೆನ್ಸಿಯಾಗಿ ಹೊರಹೊಮ್ಮಿತು. ವಿಶ್ವ ಬ್ಯಾಂಕ್, IMF ಮೊದಲಾದ ಸಂಸ್ಥೆಗಳು ಅಮೇರಿಕಾ ಪ್ರಭಾವದಲ್ಲಿ ರೂಪಗೊಂಡವು. ಜಗತ್ತಿನ ವ್ಯಾಪಾರ ಮತ್ತು ಹೂಡಿಕೆಗಳ ಕೇಂದ್ರವಾಗಿ ನ್ಯೂಯಾರ್ಕ್ – ವಾಲ್ ಸ್ಟ್ರೀಟ್ ಬೆಳೆದಿತು. ಈ ಅವಧಿಯನ್ನು ಜ್ಯೋತಿಷ್ಯ ಶನಿ ಮೀನ ರಾಶಿಯಲ್ಲಿ ಸಂಚರಿಸಿದ ಕಾಲ ಎಂದು ಗುರುತಿಸುತ್ತಾರೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇದನ್ನು ಜಾಗತಿಕ ಶಕ್ತಿ ವರ್ಗಾವಣೆಯ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ.
ಇದನ್ನೂ ಓದಿ: ಉತ್ತರ ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ
1964–67ರ ಅವಧಿಯಲ್ಲಿ ಆರ್ಥಿಕ ಸುಧಾರಣೆಯ ಪ್ರಾರಂಭಿಕ ಹಂತದಲ್ಲಿದ್ದ ಭಾರತ, ಅಮೆರಿಕಾದ ಸಹಾಯಕ್ಕೆ ಹೆಚ್ಚು ಅವಲಂಬಿತವಾಗಿತ್ತು. ಈ ಸಂದರ್ಭದಲ್ಲಿ ಅಮೆರಿಕಾ ಭಾರತವನ್ನು ಆರ್ಥಿಕ ಮತ್ತು ವ್ಯಾಪಾರ-ನಿಯಂತ್ರಣಗಳ ಮೂಲಕ ತನ್ನ ರಾಜಕೀಯ ಪ್ರಭಾವಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿತ್ತು. ಅಮೆರಿಕಾ ಒತ್ತಡವು ಪ್ರಮುಖವಾಗಿ ಆರ್ಥಿಕ ಮತ್ತು ರಾಜಕೀಯ ಸ್ವರೂಪದಲ್ಲಿ ಇದ್ದು, ಭಾರತದ ಸ್ವತಂತ್ರ ನಿರ್ಧಾರಗಳಿಗೆ ಪ್ರಭಾವ ಬೀರುತ್ತಿತ್ತು.
ಇದೀಗ 2025–27ರಲ್ಲಿ ಶನಿ ಮೀನ ರಾಶಿಯಲ್ಲಿ ಸಾಗುತ್ತಿರುವುದರಿಂದ, ಅಮೆರಿಕಾ, ಚೀನಾದ ಬಳಿಕ ಈ ಶಕ್ತಿ ಭಾರತಕ್ಕೆ ವರ್ಗಾವಣೆಯಾಗಲಿದೆ. ಈ ಮೂಲಕ ಮುಂದಿನ 30 ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯಲಿದೆ ಎಂದು ಜ್ಯೋತಿಷಿ ಶರ್ಮಿಷ್ಠಾ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂಬ ಭವಿಷ್ಯ ಹೊರಬಿದ್ದಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Wed, 10 December 25