Financial astrology: ಸಾಲದ ಸುಳಿಗೆ ಸಿಲುಕಲು ಕಾರಣವೇನು? ಅದರಿಂದ ಪಾರಾಗಲು ಜ್ಯೋತಿಷ್ಯ ಸಲಹೆ ಇಲ್ಲಿದೆ
ಸಾಲದ ಸುಳಿಯಲ್ಲಿ ಸಿಲುಕಿದ್ದೀರಾ? ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿನ ಗ್ರಹಗಳ ಸ್ಥಾನಗಳು ಮತ್ತು ದೋಷಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಜಾತಕದಲ್ಲಿ ಮಂಗಳ ಮತ್ತು ಗುರು ಗ್ರಹಗಳ ದುರ್ಬಲ ಸ್ಥಾನವು ನಿಮ್ಮನ್ನು ಸಾಲದ ಸುಳಿಯಲ್ಲಿ ತಾವಾಗಿಯೇ ಸಿಲುಕಿಕೊಳ್ಳುವಂತೆ ಮಾಡಬಹುದು. ಆದ್ದರಿಂದ ಇದರಿಂದ ಹೊರಬರಲು ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೆಲವರು ಸಾಲದ ಸುಳಿಯಲ್ಲಿ ತಾವಾಗಿಯೇ ಸಿಲುಕುತ್ತ ಹೋಗುತ್ತಾರೆ. ನಂತರ ಅದರಿಂದ ಹೊರಬರಲಾಗದೆ ಒದ್ದಾಡಲಾರಂಭಿಸುತ್ತಾರೆ. ಸಾಲದಲ್ಲಿ ಸಿಲುಕಿರುವ ವ್ಯಕ್ತಿಯು ಭವಿಷ್ಯದ ಬಗ್ಗೆ ಯೋಚಿಸಲು ಸಾಧ್ಯವಿಲ್ಲಅಥವಾ ವರ್ತಮಾನದ ಜೀವನವನ್ನು ಆನಂದಿಸಲು ಸಾಧ್ಯವಿಲ್ಲ. ಸಾಲಕ್ಕೆ ಕಾರಣ ಆರ್ಥಿಕ ಪರಿಸ್ಥಿತಿ. ಆದರೆ ಜ್ಯೋತಿಷಿ ಅನೀಶ್ ವ್ಯಾಸ್ ಅವರ ಪ್ರಕಾರ, ಕೆಲವೊಮ್ಮೆ ಸಾಲಗಳು ಜಾತಕದಲ್ಲಿನ ದೋಷಗಳಿಂದ ಆಗಿರಬಹುದು ಎಂದು ಎಚ್ಚರಿಸುತ್ತಾರೆ.
ಸಾಲಗಳು ಮತ್ತು ಆರ್ಥಿಕ ಬಿಕ್ಕಟ್ಟು ಕೆಲವು ಗ್ರಹಗಳ ಸ್ಥಾನಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಜಾತಕದಲ್ಲಿ ಕೆಲವು ಗ್ರಹಗಳು ದುರ್ಬಲವಾಗಿದ್ದರೆ, ದುಷ್ಟ ಪ್ರಭಾವದಿಂದ ಅಥವಾ ಕೆಟ್ಟ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಪದೇ ಪದೇ ಸಾಲ ತೆಗೆದುಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹಲವು ಬಾರಿ ಅನಗತ್ಯ ವೆಚ್ಚಗಳು ಸಾಲದ ಒತ್ತಡವನ್ನು ಹೆಚ್ಚಿಸುತ್ತವೆ.
ಜಾತಕದ ವಿವಿಧ ಸ್ಥಾನಗಳಲ್ಲಿ, ಆರನೇ, ಎಂಟನೇ ಮತ್ತು ಹನ್ನೆರಡನೇ ಸ್ಥಾನಗಳು ಸಾಲಕ್ಕೆ ಸಂಬಂಧಿಸಿವೆ. ಈ ಸ್ಥಾನಗಳು ಹೆಚ್ಚುತ್ತಿರುವ ಸಾಲ, ಆರ್ಥಿಕ ತೊಂದರೆಗಳು ಮತ್ತು ಒತ್ತಡವನ್ನು ಸೂಚಿಸುತ್ತವೆ. ಇದಲ್ಲದೇ ಮಂಗಳ ಗ್ರಹವನ್ನು ಸಾಲದ ಅಂಶವೆಂದು ಪರಿಗಣಿಸಲಾಗುತ್ತದೆ, ಅದರ ದುಷ್ಟ ಅಂಶವು ವ್ಯಕ್ತಿಯನ್ನು ಸಾಲ ಅಥವಾ ಆರ್ಥಿಕ ಬಿಕ್ಕಟ್ಟಿಗೆ ತಳ್ಳಬಹುದು. ಮಂಗಳ ಜಾತಕದಲ್ಲಿ ಅಥವಾ ಎಂಟನೇ, ಹನ್ನೆರಡನೇ ಅಥವಾ ಆರನೇ ಮನೆಗಳಲ್ಲಿ ದುಷ್ಟ ಸ್ಥಾನದಲ್ಲಿದ್ದಾಗ, ಸಾಲ ಹೆಚ್ಚಾಗುತ್ತದೆ.
ಗುರುವು ಸಂಪತ್ತಿಗೆ ಕಾರಣ. ನಿಮ್ಮ ಜಾತಕದಲ್ಲಿ ಗುರುವು ಅಶುಭ ಸ್ಥಾನದಲ್ಲಿದ್ದರೆ ಭಾರಿ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಆದಾಯದ ಮೂಲಗಳು ಕಡಿಮೆಯಾಗುತ್ತವೆ ಮತ್ತು ಸೀಮಿತ ಆದಾಯದೊಂದಿಗೆ ಖರ್ಚುಗಳನ್ನು ನಿರ್ವಹಿಸುವುದು ವ್ಯಕ್ತಿಗೆ ಕಷ್ಟಕರವಾಗಿರುತ್ತದೆ ಎಂದು ಜ್ಯೋತಿಷಿ ಹೇಳುತ್ತಾರೆ.
ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ
ಪರಿಹಾರಗಳು:
ಪ್ರತಿನಿತ್ಯ ಸೂರ್ಯ ದೇವ, ಹನುಮಂತನನ್ನುಆರಾಧಿಸುವುದರಿಂದ ಈ ಸಾಲದ ಹೊರೆಯಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಇದಲ್ಲದೇ ದುರ್ಬಲ ಗ್ರಹಗತಿಯ ಕಾರಣದಿಂದ ಸಹ ಸಾಲದ ಹೊರೆ ಹೆಚ್ಚಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಜ್ಯೋತಿಷ್ಯ ಸಲಹೆಯ ಮೇರೆಗೆ ನಿಮಗೆ ಸೂಕ್ತವಾದ ರತ್ನವನ್ನು ಧರಿಸಬಹುದು. ಬಡವರಿಗೆ ದಾನ ಹಾಗೂ ಪಶು ಹಾಗೂ ಇತರ ಮೂಕ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ನಿಮ್ಮ ಜಾತಕದಲ್ಲಿ ಗುರುಬಲವನ್ನು ಹೆಚ್ಚಿಸಿ, ಸಾಲದ ಹೊರೆಯಿಂದ ಹೊರಬಹುದಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Thu, 11 December 25




