ಈ ದೇವಾಲಯಕ್ಕೆ ಹನುಮಾನ್ ಚಾಲೀಸ್ ಕೇಳಲು ವಿಶೇಷ ಭಕ್ತರು ಬರುತ್ತಾರೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 07, 2024 | 5:43 PM

ನಮ್ಮ ಭಾರತದಾದ್ಯಂತ ಸಾವಿರಾರು ಹನುಮನ ದೇವಾಲಯಗಳಿದ್ದು ಸಾಕಷ್ಟು ಇತಿಹಾಸವನ್ನು ಹೊಂದಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆಯಲು ಹನುಮಂತನ ದೇವಾಲಯಗಳಿಗೆ ಹೋಗುತ್ತಾರೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ನರ್ಮದಾ ನದಿಯ ದಡದಲ್ಲಿರುವ ಈ ಹನುಮಂತನ ದೇವಾಲಯವು ವಿಶೇಷ ಭಕ್ತರು ಬರುವುದಕ್ಕಾಗಿ ವಿಶ್ವವಿಖ್ಯಾತಿ ಪಡೆದಿದೆ. ಯಾರು ಆ ವಿಶಿಷ್ಟ ಭಕ್ತರು? ಈ ದೇವಸ್ಥಾನ ಯಾಕೆ ಪ್ರಸಿದ್ದಿ ಪಡೆಯಿತು? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ದೇವಾಲಯಕ್ಕೆ ಹನುಮಾನ್ ಚಾಲೀಸ್ ಕೇಳಲು ವಿಶೇಷ ಭಕ್ತರು ಬರುತ್ತಾರೆ
Follow us on

ಸಂಕಟವನ್ನು ವಿಮೋಚನೆ ಮಾಡುವ ಭಗವಾನ್ ಹನುಮಂತನನ್ನು ಕಲಿಯುಗದ ರಾಜ ಎಂದೇ ಬಣ್ಣಿಸಲಾಗುತ್ತದೆ. ಆತ ಯಾವಾಗಲೂ ತನ್ನ ಅಸ್ತಿತ್ವವನ್ನು ಒಂದಲ್ಲ ಒಂದು ರೂಪದಲ್ಲಿ ತೋರಿಸುತ್ತಲೇ ಇರುತ್ತಾನೆ. ಇನ್ನು ನಮ್ಮ ಭಾರತದಾದ್ಯಂತ ಸಾವಿರಾರು ಹನುಮನ ದೇವಾಲಯಗಳಿದ್ದು ಸಾಕಷ್ಟು ಇತಿಹಾಸವನ್ನು ಹೊಂದಿದೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆಯಲು ಹನುಮಂತನ ದೇವಾಲಯಗಳಿಗೆ ಹೋಗುತ್ತಾರೆ ಎಂಬುದು ನಿಮಗೆ ತಿಳಿದಿರಬಹುದು. ಆದರೆ ನರ್ಮದಾ ನದಿಯ ದಡದಲ್ಲಿರುವ ಈ ಹನುಮಂತನ ದೇವಾಲಯವು ವಿಶೇಷ ಭಕ್ತರು ಬರುವುದಕ್ಕಾಗಿ ವಿಶ್ವವಿಖ್ಯಾತಿ ಪಡೆದಿದೆ. ಯಾರು ಆ ವಿಶಿಷ್ಟ ಭಕ್ತರು? ಈ ದೇವಸ್ಥಾನ ಯಾಕೆ ಪ್ರಸಿದ್ದಿ ಪಡೆಯಿತು? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಧ್ಯ ಪ್ರದೇಶದ ಜಬಲ್ಪುರದ ತಿಲ್ವಾರಾ ಪ್ರದೇಶದಲ್ಲಿರುವ ಹನುಮಂತನ ದೇವಾಲಯವು ತುಂಬಾ ಹೆಸರುವಾಸಿಯಾಗಿದ್ದು. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ಬಂದು ಹನುಮಂತನ ದರ್ಶನ ಪಡೆಯುತ್ತಾರೆ. ಕೇವಲ ಜಬಲ್ಪುರದ ಜನರು ಮಾತ್ರವಲ್ಲದೆ ದೇಶದಾದ್ಯಂತ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಏಕೆಂದರೆ ಇಲ್ಲಿನ ದೇವಾಲಯ ಬಹಳ ಪ್ರಾಚೀನ ಮತ್ತು ಜನಪ್ರಿಯವಾಗಿದೆ. ಈ ಸ್ಥಳದ ಬಗ್ಗೆ ಕೆಲವು ವಿಶಿಷ್ಟ ವಿಷಯಗಳು ನಿಮ್ಮನ್ನು ಬೆರಗು ಗೊಳಿಸದೆಯೇ ಇರಲಾರದು.

ಹನುಮಾನ್ ಚಾಲೀಸ್, ರಾಮಾಯಣ ಕೇಳಲು ವಾನರ ಸೈನ್ಯ ಬರುತ್ತೆ!

ಈ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್ ಅಥವಾ ರಾಮಾಯಣವನ್ನು ಪಠಿಸಿದಾಗಲೆಲ್ಲಾ, ಶ್ರೀ ರಾಮನ ವಾನರ ಸೈನ್ಯವು ಇಲ್ಲಿಗೆ ಬಂದು ದೇವಾಲಯದಲ್ಲಿ ಕುಳಿತು ಶ್ಲೋಕ ಪಠಣವನ್ನು ಪೂರ್ಣ ಭಕ್ತಿಯಿಂದ ಕೇಳುತ್ತವೆ. ಇಲ್ಲಿ ಕೋತಿಗಳು ಆ ಪಠಣದ ಸಮಯದಲ್ಲಿ ಮಾತ್ರ ಕಾಣಿಸಿಕೊಂಡು ಆ ಬಳಿಕ ಅಲ್ಲಿಂದ ಹೋಗುತ್ತವೆ. ದೇವಾಲಯದಲ್ಲಿ ಯಾವುದೇ ಭಕ್ತರಿಗೆ ಕೀಟಲೆ, ಕಿರಿಕಿರಿ ಮಾಡುವುದಿಲ್ಲ. ಇದು ಇಲ್ಲಿನ ಪವಾಡ. ಹಾಗಾಗಿ ಸಾಕ್ಷಾತ್ ರಾಮನ ಭಕ್ತರೇ ಇಲ್ಲಿಗೆ ಬರುತ್ತಾರೆ ಎಂಬುದು ಅಲ್ಲಿನ ಜನರ ನಂಬಿಕೆ.

ತಾಯಿ ನರ್ಮದಾ ಕೂಡ ದರ್ಶನಕ್ಕಾಗಿ ಬರುತ್ತಾಳೆ!

ಈ ದೇವಾಲಯದ ಅರ್ಚಕ ದಾಮೋದರ್ ದಾಸ್ ಅವರು ಹೇಳುವ ಪ್ರಕಾರ “ತಾಯಿ ನರ್ಮದಾ ದಡದಲ್ಲಿರುವ ಈ ದೇವಾಲಯವನ್ನು ಇಲ್ಲಿ ಎಲ್ಲರೂ ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೆ ಇಲ್ಲಿನ ಮತ್ತೊಂದು ವಿಶೇಷವೆಂದರೆ ತಾಯಿ ನರ್ಮದಾ ಸ್ವತಃ ಹನುಮಂತನ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾಳೆ. ಇದಕ್ಕೆ ಸಾಕ್ಷಿಯಾಗಿ ಪ್ರತಿದಿನ ಬೆಳಿಗ್ಗೆ ಎಲ್ಲರಿಗಿಂತ ಮೊದಲು ಯಾರಾದರೂ ಒಬ್ಬರು ಹೆಂಗಸರು ಈ ದೇವಾಲಯಕ್ಕೆ ಬಂದು ದರ್ಶನ ಪಡೆದ ನಂತರ ಹೋಗುತ್ತಾರೆ” ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಇನ್ನು ಹನುಮಂತ ಬ್ರಹ್ಮಚಾರಿಯಾಗಿರುವುದರಿಂದ ಈ ದೇವಾಲಯದಲ್ಲಿ ಮಹಿಳೆಯರು ವಿಗ್ರಹ ಮುಟ್ಟಿ ನಮಸ್ಕರಿಸಲು ಅವಕಾಶ ಕೊಡುವುದಿಲ್ಲ.

ಇದನ್ನೂ ಓದಿ: ಮಾಘ ಪೂರ್ಣಿಮೆಯಂದು ಈ ಆಚರಣೆಗಳನ್ನು ಪಾಲನೆ ಮಾಡಿದರೆ ಸಿಗುತ್ತೆ ಪುಣ್ಯ ಫಲ

ಹನುಮಂತನನ್ನು ಯಾಕಾಗಿ ಪೂಜಿಸಲಾಗುತ್ತದೆ?

ಹಿಂದೂ ಧರ್ಮದಲ್ಲಿ, ಮಂಗಳವಾರ ಮತ್ತು ಶನಿವಾರ ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಪರಮ ಭಕ್ತನಾದ ಹನುಮಂತನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿರುವ ದೋಷವನ್ನು ಪರಿಹರಿಸಲು ಹನುಮಂತನನ್ನು ಪೂಜಿಸುವ ಸಂಪ್ರದಾಯವಿದೆ. ಜೊತೆಗೆ ಜೀವನದ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತವೆ ಇನ್ನು ವೃತ್ತಿಜೀವನ ಮತ್ತು ಕಾರ್ಯನಿರತತೆಯಲ್ಲಿ ಪ್ರಗತಿ ಪಡೆಯುತ್ತಾರೆ ಎಂಬ ಧಾರ್ಮಿಕ ನಂಬಿಕೆ ಇದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಹನುಮಂತನಿಗೆ ಕುಂಕುಮ ಎಂದರೆ ಬಲು ಪ್ರೀತಿ. ಹಾಗಾಗಿ ಭಕ್ತಿಯಿಂದ ಹನುಮಂತನಿಗೆ ಕುಂಕುಮ ಹಚ್ಚುವುದರಿಂದ, ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ